ನಾಳೆಯ ನವ ಉದಯದ
ಆಸೆಯಿಲ್ಲ
ಇಂದಿನ ಸಹವಾಸದಲಿ
ಕಲಿಕೆಯ ತವಕವಿಲ್ಲ
ಇನ್ನೊಂದೆಡೆಯ ದಾರಿಯ
ನೋಡಿ ಕೊರಗುತ
ತನ್ ದಾರಿಯಲಿ ಸಾಗುವ
ಮುಂಚೆಯೇ
ತಾರತಮ್ಯದ ಪ್ರವಾಹದಲಿ
ಕೊಚ್ಚಿ ಹೋಗುತಿದೆ
ನವಪೀಳಿಗೆಯ ಕನಸುಗಳು...... ಸಹೃದಯಿ
ಘಮಘಮಿಸುವ ಮಲ್ಲಿಗೆ ಬಿರುತಿರುವುದು
ಸುಗಂಧ ಸುವಾಸನೆ ಎಲ್ಲೆಡೆಯೂ ಅದರ
ಖ್ಯಾತಿ ನಿಲ್ಲದ ನದಿಯಂತೆ ವ್ಯಾಪಿಸುತ್ತಿದೆ.
ನೂರು ಜನರ ಮನ ಗೆದ್ದರು ಒಂದು ದಿನವೇ
ಅದರ ಜೀವಮಾನ ಕಿತ್ತು ಮುಡಿಯುವ ಕೈಗಳಿಗೆ
ಚೆಲುವು ತುಂಬಿ ಸಾಯುವುದೇ ತಾನು ಕಂಡ
ಜೀವನದ ಬಿಗುಮಾನ.
ವಿವಿಧ ಹೆಸರು ಹತ್ತಾರು ಆಕೃತಿ ನಾನಾ ರೀತಿಯ ಪರಿಮಳ ಒಬ್ಬೊಬ್ಬರಿಗೆ ಒಂದೊಂತರ ಅಲಂಕಾರ ಪ್ರಿಯೆ ನೀನು ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ,ಸೂಜಿ ಮಲ್ಲಿಗೆ,ಕಾಡು ಮಲ್ಲಿಗೆ,ಮೈಸೂರ ಮಲ್ಲಿಗೆ.
ಸದಾ ಮಿಡಿಯುತ್ತಿದೆ
ತಡೆ ಇಲ್ಲದೇ
ಎಡ ಬಿಡದೇ
ತಡಕಾಡುವ
ಈ ಹೃದಯದ ಬಡಿತದ
ರೂವಾರಿ ನೀನಲ್ಲವೇ ?
ಲಘು ಮಾತು
ಬಿಗುವಾಯ್ತು
ಆಸರೆ ಎಂಬ
ಆಸೆ ಮಡಿದೊಯ್ತು
ಬಾಳ ನಂದನದ
ಆನಂದ ಕಮರಿ ಹೋಯಿತು
ಕಲ್ಪನೆಯ ಕನಸ್ಸು ಮನಸ್ಸಲ್ಲೇ
ಉಳಿಯಿತು...
- ಎಸ್ಕೆ
ಬದುಕು ಮೂರು ದಿನ ಓಡೋ ಬಂಡಿ
ಏತಕ್ಕೆ ಬಾಳಲಿ ಇಲ್ಲಸಲ್ಲದ ಗಂಡಾಗುಂಡಿ
ಬದುಕಬೇಕು ಅಳು ನಗು ಎರಡು ಉಂಡಿ
ಜೀವನ ಆಟವಲ್ಲ ಬೇಡವೆಂದು ಹಿಡಿದರೆ ಚಂಡಿ
ತಪ್ಪಾಗಿಗಾಗಿ ಯಾರು ಬೆರಳು ತೋರದಂತೆ ಬದುಕು
ಬೆರಳು ತೋರಿದರೂ ಅದಾಗಿರಲಿ ಹೆಮ್ಮೆಯ ಮೆಲುಕು
ಸತ್ತಾಗ ಹೋಗುವುದು ಖಾಲಿ ಕೈಯ ದೂರ ಪ್ರಯಾಣ
ಸಿಗುವ ಪ್ರೇಮವ ಬಿಟ್ಟು ಓಡವುದೇಕೆ ಹುಡುಕಿ ಕಾಂಚಾಣ
ನಗಿಸಿ ನಗುತ ಬಾಳುವುದೇ ಅಂತೇ ನಿಜ ಪರಮಧರ್ಮ
ನೋವು ಕಣ್ಣೀರ ಕೊಟ್ಟು ಉಣ್ಣವುದು ಬೇಡ ಪಾಪಕರ್ಮ
ಕಷ್ಟಕಂಡಾಗ ಜೊತೆಯಾಗಬೇಕು ಕೊಂಚ ಕೈಯ ಚಾಚಿ
ಕಳೆದುಕೊಳ್ಳಲೇನಿಲ್ಲ ನೋವಿಗೆ ಹೆಗಲಾದರೆ ತನುವ ಬಾಚಿ
ಮನಸಲಿರದಿರಲಿ ಮದ ಮತ್ಸರ ಕಾಮ ಕ್ರೋಧ ಮೋಹ ಲೋಭ
ನಗುತಲಿ ಮಾತಾಡಿದರೆ ಸಿಗುವುದು ಮನಸ ಗೆದ್ದ ಲಾಭ
ಸಾಗಲೇಬೇಕು ಬದುಕಬಂಡಿ ಹಿಡಿದು ಏಳುಬೀಳುಗಳಾದಿ
ಅದರ ಮಧ್ಯೆ ಏತಕಸೂಯೆ ದ್ವೇಷಕಾಗುವುದು ಪರರಿಗೆ ದಾಯಾದಿ
ಸಿಗದಕ್ಕೆ ಹಂಬಲಿಸಿ ಕೊರಗದೆ ನಕ್ಕು ಬಾಳಲಾಗಬೇಕು ಬದ್ಧ
ತೃಪ್ತಿ ಸಂತಸದಿ ನಗುತ ಬದುಕುವುದೆ ಜೀವನವೆಂದ ಬುದ್ಧ
ಇದ್ದರೂ ಜಗದಲಿ ಇಲ್ಲದಂತೆ ಬದುಕಿದರೆ ಜೀವನ ನಿರರ್ಥಕ
ಸತ್ತ ಮೇಲು ಸವಿ ಕಥೆಯಾಗುವಂತೆ ಬದುಕಿದರೆ ಸಾರ್ಥಕ