Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚೆಲುವು-ಒಲವು

ಬಲು ಚೆಲುವು ನಿನ್ನ ಒಲವು
ಮಾಡಿದೆ ನನ್ನ ಮನಸನೇ ಕಳವು
ಖಾಲಿ ಹೃದಯದ ದೂರುದಾರನು ನಾನೀಗ
ದೂರು ಸ್ವೀಕರಿಸಿ‌ ಕೊಡುವೆಯಾ ನಿನ್ನೊಲವ ನೀನೀಗ

ನನ್ನೊಳಗೆ ನಾನೆ ಇಲ್ಲದಂತಾಗಿದೆ
ನನ್ನೊಳಗೆ ನನ್ನನೆ ಹುಡುಕುವಂತಾಗಿದೆ
ನನ್ನಲಿ ನಿನ್ನದೆ ಕನವರಿಕೆ ಶುರುವಾಗಿದೆ
ನಿನಗೆ ಅದರ ಪರಿವೆಯೇ ಇಲ್ಲದಾಗಿದೆ

ಏನಿದು ಈ ಪ್ರೀತಿಯ ಮೋಜಿನಾಟ
ತೆರೆಸಿದೆ ನನ್ನೊಳಗೆ ಕನಸಿನ ಹೂದೋಟ
ಮಕರಂದ ಹೀರೊ ಜೇನಿರದೆ ಬಾಡುತಿದೆ ತೋಟ
ಬಾರೆ ಗೆಳತಿ ಅರಿತು ನೀನಿರದ ನೋವು ಕೊಡುವ ಕಾಟ

ಪ್ರೀತಿಯ ಸೌಧ ಕಟ್ಟಿ ಕಾಯುತಿರುವೆ ನಿನಗಾಗೆ
ತಾಳಲಾರೆ ಮನಸ ಸುಡುತ್ತಿರುವ ನೋವಿನ ಬೇಗೆ
ಬಂದು ಬಿಡು ನನ್ನೆಡೆಗೆ ತಂಪೆರೆವ ತಂಗಾಳಿಯ ಹಾಗೆ
ಉಸಿರ‌ ಕೊನೆವರೆಗೆ ನಡೆವೆನು ನಾ ನಿನ್ನ ಜೊತೆಜೊತೆಗೆ

- ಶ್ರೀಕಾವ್ಯ

04 Nov 2017, 04:42 pm

ಸದ್ದಿಲ್ಲದೆ ಸತ್ತೆ

ಸುಮ್ಮನೆ ಕುಳಿತಿದ್ದ ಮನಸ್ಸು
ಅಂದೆಕೋ ನೆಡೆದಾಡಲು ಇಚ್ಚಿಸಿ
ಜನರೆ ಇಲ್ಲದ ರಸ್ತೆಯಲ್ಲಿ ತಂಗಾಳಿಯ
ಜೊತೆ ನೆಡೆದು ಸಾಗುತ್ತಿರಲು
ತಂಗಾಳಿಗೂ ಸೆಡ್ಡು ಹೊಡೆಯೊ
ತಂಪು ಗಾಳಿಯಾಗೆ ಅವಳ ನಗುವು
ದಾರಿಯ ಅಗಲಕ್ಕೂ ನಗೆಯ ಬೀರುತಾ
ಮನದ ದಿಕ್ಕಿನಡೆಗೆ ಜೋರಾಗಿ ಬಂದು
ದಡ್ಡನ ಹೃದಯ ಸ್ಪರ್ಶಿಸಿ ಮುಖೇನ
ಹಾದೂ ಹೋಗಿದೆ!
ಅಂದು ಶುರುವಾದ ಕನಸುಗಳು
ಅವಳ ರೂಪವನ್ನು ಬಿಟ್ಟು ಬೇರೆಯ
ರೂಪಗಳ ತೋರದಾಗಿವೆ
ಅಂದು ಕಂಡು ಮರೆಯಾದವಳು
ಹಿಂದಿಗೂ ಎಲ್ಲಿಯೂ ಕಾಣಳು
ಅವಳ ಜಪದಲ್ಲಿ ನಾ ಸದ್ದಿಲ್ಲದೆ ಸತ್ತಿರುವೆ.

ಮೈಸೂರ್ ಚೇತನ್

- ಮೈಸೂರ್ ಚೇತನ್

04 Nov 2017, 04:07 pm

ನೊಂದ ಹೃದಯ......

ಒಂಟಿ ಮರದ ಕೆಳಗೆ
ಮೌನ ಹೃದಯವೊಂದು ಅಳುತ್ತಲಿದೆ
ಕಣ್ಣ ರೆಪ್ಪೆಯಂತೆ ಕಾಪಾಡಿದ್ದ ಪ್ರೀತಿಯು
ಕಣ್ಣೀರಲ್ಲೇ ಕರಗಿ ನೀರಾಗುತ್ತಿದೆ!

ನೋವು-ನಲಿವು ಹಂಚಿಕೊಂಡ ಹೃದಯದಲ್ಲಿ
ಅಳಿಸಲಾಗದ ನೋವಿನ ಗುರುತುಗಳು.
ಮನಸಲ್ಲಿ ಅವಿತು ಕುಳಿತಿದೆ
ಬಿಟ್ಟುಹೋದ ಅವಳ ನೆನಪಿನ ಕ್ಷಣಗಳು!

ಬೆಳದಿಂಗಳ ರಾತ್ರಿಯು ಸುಡುತ್ತಿದೆ ನನ್ನೆದೆಯನು
ಕನಸಿನ ಕದ ಮುಚ್ಚಿದೆ ಇನ್ನೆಂದು ತೆರೆಯದಂತೆ
ಎಲ್ಲವನ್ನು ಬರಿದಾಗಿಸಿ ಕಾಣುತ್ತಿರುವನು ಅವನು
ನನ್ನೀ ಹಣೆಬರಹ ಎಂದೂ ಬದಲಾಗದಂತೆ!

ಮನಸ್ಸು ಹಾತೊರೆಯುತ್ತಿದೆ
ಸಮಧಾನದ ಮಾತುಗಳ ಕೇಳಲು,
ಚೂರಾದ ಹೃದಯ ಬಯಸುತ್ತಿದೆ
ನನ್ನವ್ವನ ಮಡಿಲಿನಲ್ಲಿ ಸಾಯಲು!

ನಿರಾಸೆಯ ಪಥದತ್ತ ಸಾಗಿದೆ ದಾರಿ
ಅಳಿಸಲಾಗದ ತಪ್ಪೊಂದನು ಮಾಡಿದಂತೆ,
ಪ್ರೀತಿಯು ಸಮಾಧಿಯಾದಂತೆ ಕೈಜಾರಿ
ಸಾವು ಕೂಡ ದೂರಿಸರಿಯುತ್ತಿದೆ ನನ್ನವಳಂತೆ!

ಪ್ರಿಯಾಂಕ✍

- ಪ್ರಿಯಾಂಕ

04 Nov 2017, 08:18 am

ನಗು

||ಮನದ ಅಂಕು ಡೊಂಕ ತಿದ್ದಿಬಿಡುವುದಂತೆ
ಮೊಗದ ಮೇಲಿನ ಸವಿಯಾದ ಓರೆಕೋರೆ
ಅದಕ್ಕೆ ಇರಬಹುದೇನೊ ಬುದ್ಧನು‌ ಒಪ್ಪಿಬಿಟ್ಟದ್ದು
ಮುಗುಳು ನಗೆಯ ಆಭರಣವ ತನ್ನ ಅಲಂಕಾರಕ್ಕೆ ‌||

||ಅವನ ಮುಗ್ಧವೆನಿಸಿದ ಮನವ ಕಂಡಾಗಲೆ
ಪ್ರೀತಿ ಸುನಾಮಿ ಶುರುವಾದದ್ದು ನನ್ನೊಳಗೆ
ನನ್ನೆದೆಯ ಭಾವಗಳ ಅಂತೆ ಕಂತೆಗಳೆಲ್ಲ
ಮುಳುಗಿ ಹೋಗಿ ನಗುವೇ ಮಾಯವಾಗಿ
ಮಣ್ಣಾಯಿತು ಅವನ ಪ್ರೀತಿ ಹೊಡೆತಕ್ಕೆ||

||ಅವಳ ಅರೆ ಬಿರಿದ ಹೂವ ನಗುವೇ
ದೀಪವೆನಿಸಿ ಬಿಟ್ಟಿತು ನನ್ನೆದೆ ಗೂಡಿಗೆ
ಕೂಗಿ ಕರೆದೆ ದೀಪದಂತವಳ ಬಂದೇ ಬಿಟ್ಟಳು
ಹೊತ್ತಿಸೇ ಬಿಟ್ಟಳು ಬೆಳಕು, ಕಳೆದು ನನ್ನೆಲ್ಲ ಕೊಳಕು||

- ಶ್ರೀಕಾವ್ಯ

04 Nov 2017, 07:59 am

ನಿನ್ನ ರೂಪ

ಕಣ್ಣ ಒಳಗೆ ಇರುವ
ಆ ನಿನ್ನ ರೂಪ
ಬೇರೆಲ್ಲೂ ಕಾಣಲಿಲ್ಲ!!
ನೀ ನನ್ನ ಮರೆತು
ದೂರಾದ ಮೇಲೆ
ನಾ ಒಂಟಿ ಆದೆನಲ್ಲ!!

ಬಿಸಿಲು ಇರದೇ ಬೇಗೆ
ಮನವನ್ನು ಸುಡಲು
ನಾ ತಾಳದಾದೆ ವಿರಹ!!
ಸಿಹಿಯಾದ ಬಯಕೆ
ಕಹಿಯಾದ ಬದುಕು
ತಂದೆರೆದು ನೋವ ನನಗೆ!!

ನೀ ಇರದ ಬದುಕು
ನನ್ನ ಒಳಗೆ ಇಣುಕಿ
ಕಣ್ಣೀರ ಹರಿಸಿತಲ್ಲ!!
ನಾ ಒಂಟಿ ಎಂಬ
ಬಿರುದೊಂದೇ ಕೊನೆಗೆ
ನನ್ನ ಒಳಗೆ ಉಳಿಯಿತಲ್ಲ!!

- ಪಿ.ಜಿ.ಜ್ಯೋತಿ

04 Nov 2017, 07:28 am

ನಿನಗೋಸ್ಕರ.....

ಮನಸ್ಸಿನಲ್ಲಿ ಒಂದು ಯುಧ್ಧ ಶುರುವಾಗಿದೆ
ನಿನಗೋಸ್ಕರ .....

ಆ ಯುಧ್ಧದಲ್ಲಿ ನಾ ಸೋಲುವೆನು
ನಿನಗೋಸ್ಕರ.....

ನನ್ನ ಮನಸ್ಸು ಚಿಕ್ಕ ಮಗುವನ ಹಾಗೆ ಅಳುತ್ತಿದೆ
ನಿನಗೋಸ್ಕರ....

ನಿನ್ನ ಪ್ರಶ್ನೆಗಳಿಗೆ ಉತ್ತರ ಕೋಡಲಾಗದೆ
ನನ್ನ ಮನಸ್ಸು ನೀರಿನಿಂದ ಹೋರ ಬಂದ
ಮೀನಿನ ಹಾಗೆ ಒದ್ದಾಡುತಿದೆ ....

ಆಕಾಶದಲ್ಲಿ ಮಿನುಗುವ ಚಂದ್ರನ
ಬಳಿ ನನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು
ಕೇಳಿದೆ ಅವನು ನನ್ನ ಪ್ರಶ್ನೆ ಉತ್ತರ ಕೋಡದೆ
ನಿನ್ನ ಮನಸ್ಸನೆ ಕೇಳು ಅಂತ ಹೇಳಿದ

ನನ್ನ ಪ್ರಶ್ನೆಗೆ ಕೋನೆ ಇಲ್ಲ ......
ನಿನ್ನ ಪ್ರೀತಿಗೆ ಸಾವಿಲ್ಲ ......

- Shilpa

04 Nov 2017, 07:25 am

ನೀಡು ಬಾರೇ ಒಲವ

ನಿನ್ನಯ ಹೃದಯದ
ಬಾಗಿಲ ಬಳಿಯಲಿ
ಸಮ್ಮತಿಗಾಗಿ ಕಾದಿರುವೆ!!

ಸಮ್ಮತಿ ನೀಡದೇ
ನನ್ನನು ಕಾಯಿಸಿ
ಏತಕೆ ಹೀಗೆ ಕಾಡಿಸುವೆ!!

ನನ್ನಯ ಪ್ರೇಮದ
ಮೆಲುದನಿ ಕೇಳಿಯೂ
ಕೇಳದ ಹಾಗೆ ನಿನ್ನ ನಟನೆ!!

ತಾಮಸ ಮಾಡದೇ
ನನ್ನನು ಕಾಡದೇ
ನೀ ನೀಡು ಬಾರೇ ನಿನ್ನ ಒಲವೇ!!

- ಪಿ.ಜಿ.ಜ್ಯೋತಿ

04 Nov 2017, 07:17 am

ಪ್ರೇಮ ವಿಚಾರ

ಈ ಪ್ರೇಮ ವಿಚಾರ
ಎಂತಹ ಕಠೋರ!!
ಪ್ರೇಮ ನಿವೇದನೆ
ಮನಕೆ ಬಲು ವೇದನೆ!!
ಏನು ಮಾಡಿ ಸಹಿಸಲಿ
ನಾ ಪ್ರೇಮದ ಮರ್ಮ!!

ಬೂದಿ ಮುಸುಕಿದ
ಕೆಂಡವು ಈ ಪ್ರೇಮ!!
ಹೊರಗೆ ಬರಿ ಹೊರಿಕೆಯು
ಒಳಗೆ ಸುಡೋ ಬೆಂಕಿಯು!!
ತಾಳದಾದೆ ನಾನು
ಪ್ರೇಮದ ಬಿಸಿ ಶಾಖವ!!

ಪ್ರೇಮ ಬಂದನ
ಈ ಬದುಕ ಬಂಧನ!!
ಬಂಧಿಯಾಗಿ ಬಿಟ್ಟೆ ನಾನು
ಪ್ರೇಮದ ಸೆರೆಯೊಳಗೆ!!
ಅಂದು ಬಂದು ದೂರವಾಗಿ
ಒಂಟಿ ನಾನು ಕೊನೆಗೆ!!

- ಪಿ.ಜಿ.ಜ್ಯೋತಿ

04 Nov 2017, 07:11 am

ಹಾಲು ಜೇನ ಪ್ರೀತಿ

ಬದುಕಿನ ಬಿಗುಮಾನ
ನೀ ಅರಿತಿರುವೆಯಾ ಜಾಣ!!
ಕಾನನದಿ ಕಾಮನ ಬಿಲ್ಲ
ಕಂಡವನು ನೀನೇನಾ!!

ಮುನಿಸೆಂಬ ಗಾಳಿಗೆ ಇಂದು
ಸಿಲುಕಿರಲು ಸಂಸಾರ ನೌಕೆ!!
ಹೆದರದೆಯೇ ಕೈ ಪಿಡಿದು ನೀ
ಜೊತೆಯಾಗೆ ಸುಂದರ ಬದುಕು!!

ಕ್ಷಣಕಾಲ ನೊಂದರೂ ಕೂಡ
ಮರು ಕ್ಷಣವೇ ನಲಿವಿದೆ ನೋಡ!!
ನಗುತಿರಲು ದಿನವೂ ಹೀಗೆ
ಬೇಕಿಲ್ಲ ಬೇರೆಯ ಸ್ವರ್ಗ!!

ಬದುಕಲ್ಲಿ ಹುಣ್ಣಿಮೆ ಕಾಂತಿ
ತಂದಿಹುದು ಸುಂದರ ಪ್ರೀತಿ!!
ಜೊತೆ ಇರಲು ನಾನು ನೀನು
ಬೆರೆತಂತೆ ಹಾಲು ಜೇನು!!

- ಪಿ.ಜಿ.ಜ್ಯೋತಿ

04 Nov 2017, 06:56 am

ಕನ್ನಡ

ಮಧುರತೆಯಲಿ ಮಿಂದೆದ್ದ
ಸರಳತೆಯ ಸ್ವರದಿಂದ
ಕಸ್ತೂರಿಯಿಂಪಿನಲಿ
ಪುಟ್ಟಿದಲ್ತೆ ದಿಟ್ಟ ನುಡಿ
ಕನ್ನಡವೀ ರಭಸವಿಡಿ

ತೆಂಕಣದಿ ಪಾದ ತೊಯ್ಯೆ
ಭಾರತಾಂಬೆ ನಮ್ಮ ತಾಯೆ
ಮಡಿಲ ಕುಡಿ
ಜಟಿಲ ಕಿಡಿ
ಪುತ್ರಿಯಾಗೆ ಇವ್ವ ಕನ್ನಡಾಂಬೆ
ಖಾತ್ರಿಯಾಗೆ ಅವ್ವ ಭಾರತಾಂಬೆ

ಸೋದರತೆಯ ಭಾವನೆ
ಮಿತ್ರತೆಯ ಶೋಧನೆ
ಪರಭಾಷಿಗಳ ದಾಳಿ
ಕನ್ನಡಿಗರ ರೋಧನೆ

ಪಿಟಿದೇಳು ಭೈರಾಗಿ
ಹಿತ ಬಯಸೋ ಕರ್ಮಯೋಗಿ

ನೆಲೆಯಾಗಿ
ಸೆಲೆಯಾಗಿ
ಕೊಲೆಯಾದೆಯಾ ಸೆರೆಯಾಗಿ?
ಎಚ್ಚರವೋ ಕಟ್ಟೆಚ್ಚರ
ಹೆಚ್ಚೆಚ್ಚು ಬಾಳು ನೀ ಕನ್ನಡಾ....ಕನ್ನಡ!

- Dev

04 Nov 2017, 06:02 am