ನನ್ನೀ ಜೀವನದಲ್ಲಿ ಸಿಗದ ಒಂದು ಕಾರಣ
ನಿನ್ನ ಏಕೆ ಪ್ರೀತಿಸಿದೆ ನಾ
ಇಷ್ಟು ದಿನ ಅದೆಲ್ಲಿ ಅಡಗಿಸಿದ್ದೆ ಇಷ್ಟೊಂದು ಪ್ರೀತಿಯನ್ನ
ಅದು ಹೇಗೆ ಹೊರಹೊಮ್ಮಿತು ನಿನ್ನ ಕಂಡ ತಕ್ಷಣ
ಇದಕ್ಕೆ ನೀನೆ ನೀಡಬೇಕು ಉತ್ತರವನ್ನ.
ಮಿಂಚಿನಂಥ ನಿನ್ನ ಕಣ್ಣ ನೋಟಕೆ
ಬಾಗಿತು ಹೃದಯ ಹೀಗೇಕೆ
ಹುಣ್ಣಿಮೆಯ ಚಂದ್ರನಂಥ ನಿನ್ನ ಚಂದಕೆ
ಕೊಡಲೆ ಕಾಮನಬಿಲ್ಲನೇ ಕಾಣಿಕೆ
ನಿನಗೆ ಸಮವಾಗಲಾರರು ರಂಬೆ,ಊರ್ವಶಿ,ಮೇನಕೆ
ನಿನ್ನ ಎದುರು ನಿಲ್ಲಲು ದೇವ ಕನ್ಯೆಯರಿಗೂ ಕಾಡುವುದು ಅಂಜಿಕೆ
ಬಿಸಿಗಾಳಿಯೂ ತಂಗಾಳಿಯಾಗಿಬಿಡುವುದು ನಿನ್ನ ಸ್ಪರ್ಶಕೆ.
ಹೃದಯ ಹೊತ್ತ ಪ್ರೀತಿ
ಪಯಣಿಸಿದ್ದು ಆಕಾಶದ ಹಾದಿಯಲ್ಲಿ
ನಿನ್ನ ಸೇರಲು ನಿಂತಿದೆ
ನಿನ್ನೆದೆಯ ಬಾಗಿಲಲ್ಲಿ.
ನೆನಪ ಹೊತ್ತ ಕನಸು
ಮೂಡಿದ್ದು ರಾತ್ರಿಯ ವೇಳೆಯಲ್ಲಿ
ಈ ಕನಸ ತಲುಪಿಸಲು
ಬಂದಿರುವನು ಚಂದಿರನಲ್ಲಿ.
ಹಕ್ಕಿಗಳು ಕೂಗುತಿದೆ ನೋಡು
ನಿನ್ನ ಹೆಸರನ್ನು ಅದರದೇ ಭಾಷೆಯಲ್ಲಿ
ಆ ಹಕ್ಕಿಗಳಿಗೆ ನಿನ್ನ ಹೆಸರ ಕಲಿಸಿದ್ದು
ನಾನೆಂಬ ಹೆಮ್ಮೆಯಲ್ಲಿ
ಕಾಯುತಿರುವೆ ಆ ಹಕ್ಕಿಗಳಿಗೆ
ನೀ ಏನು ಹೇಳುವೆ ಎಂಬ ಕುತೂಹಲದಲ್ಲಿ
ನಂಬಿರುವೆ ನಾನಿರುವೆನೆಂದು
ನೀ ಹಕ್ಕಿಗೆ ಹೇಳುವ ಪ್ರತೀ ಮಾತಲಿ.
ಎಂಥಾ ಮೋಸಗಾರ ಪ್ರೀತಿ
ಯಾರ ಮುಂದೆನು ತೋರದೆ
ಒಬ್ಬಬ್ಬೊರೆ ಇದ್ದಾಗ ಮಾತಾಡುತ್ತದೆ
ಅದು ಕಣ್ಣಿರ ಹಾಕಿಸುತ್ತ ಈ ಪ್ರೀತಿ
ಎದುರಿಗೆ ಅಳಲಾಗದೆ ಬರಿ ನಗೆಯ
ಬಗೆ ಬಗೆಯಾಗಿ ಬೀರುತ್ತಲೆ ತನ್ನ
ನೋವಿನ ಸಾಲುಗಳ ಮುಚ್ಚಿಟ್ಟು
ಒಬ್ಬರೊಬ್ಬರನ್ನೆ ಕಂಬಿನೆ ಇಲ್ಲದಿರೊ
ಕಾರಾಗೃಹದಿ ಶಿಕ್ಷೆಗೆ ಗುರಿ ಮಾಡುತ್ತೆ,
ನೆನಪುಗಳು ನೆಪ ಹೇಳುತ್ತಲೆ
ಕಾಲು ಮುರಿದು ಮೂಲೆಗೆ ತಳ್ಳಿ
ಕನಸುಗಳ ರೆಕ್ಕೆಗೆ ಹೊಲಿಗೆ ಹಾಕುತ್ತವೆ
ಹಾರುವ ಶಕ್ತಿಯನ್ನು ಕಳೆದುಕೊಂಡು
ಹಳೆ ನೆನಪುಗಳ ಒಡೆದ ಪರದೆಯಲ್ಲಿ
ತನ್ನದೆ ಆದ ನಿರ್ದೇಶನದಿ ಪ್ರದರ್ಶಿಸುತ್ತ
ಜೀವನವ ಸಾಗಿಸುತ್ತಿರುತ್ತೆವೆ...
ವಿರಾಮ ಎಂಬುದು ಇಲ್ಲಿ
ಮಧ್ಯೆ ಎಲ್ಲೂ ಬರಲ್ಲ ಯಾಕೆಂದರೆ
ನಮ್ಮ ನಮ್ಮ ಸಿನಿಮಾಗೆ ಜಾಹಿರಾತು
ನೀಡುವ ಹುಚ್ಚರು ಯಾರ್ ಆಗುವರು
ನೀವೇ ಹೇಳಿ ಏನಿದ್ದರೂ ವಿರಾಮ
ಬರುವುದು ಕೊನೆಗೆ ಅದೇ ಶುಭಂ..
ಎಲ್ಲಿ ಹುಡಕಲಿ
ಎಷ್ಟು ಹುಡಕಲಿ
ಎಲ್ಲಿ ಅಡಗಿದ್ದಿಯಾ
ಆಳದಿಂದ ಅಗೆದು ತಂದೆ
ಸಾಕಷ್ಟು ಪ್ರೀತಿ ಹೊತ್ತ ಕನಸುಗಳ
ಕಣ್ಮುಂದೆ ಬಂದು ಇಳಿಸಬಾರದೆ
ಕಣ್ಣಿಗೆ ಕಾಣದ ಲೆಕ್ಕಸಿಗದ ತೂಕದಿ
ನಾ ಹೊತ್ತು ತಂದಿರುವ ಪ್ರೀತಿಯ
ಸುರಿಯಲು ನೀರಲ್ಲ
ತಿನ್ನಿಸಲು ಸಿಹಿಯಲ್ಲ
ಅಲಂಕರಿಸಲು ಓಡವೆಯು ಅಲ್ಲ
ಮನದಾಳದಲ್ಲೆ ಉಣಬಡಿಸುವೆ
ನಿನಗಾಗಿ ಹುಡುಕಾಟ ನೆಡೆಸುತ್ತಿರುವೆ
ಬರಬಾರದೆ ಬಳಿಗೆ ಒಮ್ಮೆಯಾದರೂ..
ಬದುಕೆನ್ನುವ ಭೂಮಿ ಯಲ್ಲಿ
ಪ್ರೀತಿ ಎನ್ನುವ ಸಾಗರದಲ್ಲಿ
ನಂಬಿಕೆ ಎನ್ನುವ ದೋಣಿಯಲ್ಲಿ
ಸಾಗುತಿರುವ ಅಂಬಿಗ ನಾನು
ಈ ಸಾಗರದ ಅಲೆಗೆ ಸಿಲುಕಿ
ದಾರಿ ತಪ್ಪಿಸದೆ ಈ ದೋಣಿ
ಒಡೆದು ಮುಳುಗುವ ಮುನ್ನ
ದಡ ಸೆರಿಸು ನನ್ನ.....
ಇಷ್ಟು ದೊಡ್ಡ ಸಾಗರದಲ್ಲಿ
ನಾನು ಸಾಗಿ ನನ್ನ ದಾರಿಯಲ್ಲಿ
ಹೂಗಿ ದಡವಸೆರುವೆನೆ ನಾನು
ನನ್ನ ಜೀವನದ ದಡ ಸೇರುವೇನೆ
ಈ ದೂಣಿ ಮುಳುಗುವ ಮುನ್ನ
ದಡ ಸೆರಿಸಿಯೆ ಬಿಡು ಅಲೆಯೆ ನನ್ನ
ಬದುಕಿ ಬಿಡುವೇನು ಹೇಗೂ...
ನಿನ್ನ ನಂಬಿ ನಿನೋಂದಿಗೆ ನನ್ನ
ಪಯಣ ಮುಳುಗಿಸಬೇಡ ನನ್ನ
ಜೊತೆಯಾಗಿ ಕರೆದೂಗಿ ದಡ ಸೇರಿಸು ನನ್ನ
ಎ ನಂಬಿಕೆಯ ದೂಣಿಯೆ ನೀ ಮುಳುಗದೆ
ನನ್ನ ಮುಳುಗಿಸದೆ ದಡವ
ಸೆರಿಸಿ ಬಿಡು.........
ಮುಳುಗುವ ಹೆದರಿಕೆ
ಏಕೋ ಕಾಡಿದೆ ನನ್ನ ದಡ ಸೆರಿಸು.....
ನಂಬಿಕೆಯ ದೋಣಿ.......