Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಂದು ನೋಡು ಕರುನಾಡ,
ಕಲಿತು ನೋಡು ಕನ್ನಡ.
ಸುತ್ತಿನೋಡು ಮಲೆನಾಡ,
ಆಗುವೆ ನೀ ಗಡಗಡ.
ಹುಲಿಯಂತೆ ಅಬ್ಬರಿಸುವ
ಕನ್ನಡಿಗರ ನಾಡಿದು.
ನಾಡಿಗಾಗಿ ಜೀವಕೊಟ್ಚ
ವೀರಜನರ ಬೀಡಿದು.
ಹಲವು ರೀತಿ ಸಂಸ್ಕ್ರತಿ
ಅದುವೆ ಇದರ ಕೀರುತಿ.
ಶಿಲ್ಪ ಕಲೆಯ ಗೂಡಿದು
ಇದುವೆ ನಮ್ಮ ನಾಡಿದು.
ಹಾವಿನಂತೆ ಹರಿದಾಡುವ
ಹಲವಾರು ನದಿಗಳು.
ಗಾಳಿಯಂತೆ ಹಬ್ಬಿರುವ
ನೊರಾರು ಕವಿಗಳು.
ಕಣ-ಕಣವು ಕರುಣಾಮಯ
ಕನ್ನಡಿಗನ ಮನವದು.
ಎಲ್ಲ ಜನರು ಓಂದೆ ಎಂಬ
ಏಕತೆಯ ಗೂಡದು.
- ಚಿರು
31 Oct 2017, 03:14 pm
೧. ನೋಟ
ತಿಳಿಗಾಳಿಯ ರಭಸಕ್ಕೆ
ನನ್ನವಳು ಮುಂಗುರುಳು
ಸರಿಸಿದಾಗ|
ಅವಳ ಆ ಕುಡಿ ನೋಟಕ್ಕೆ ನನ್ನ
ಹೃದಯ ಹಿತವಾಗಿ ಅವಳ ಪಾಲಾಯಿತು||
ಅನಿಲ್ ಕುಲಕರ್ಣಿ(ಎನ್ಆರ್ಕೆ)
- ಅನಿಲ್ ಕುಲಕರ್ಣಿ
31 Oct 2017, 03:00 pm
ನೀ ಬಂದೆ ನನ್ನ ಬಾಳಲ್ಲಿ
ಕಾರಣವೇ ತಿಳಿದಿಲ್ಲ,
ಇರಬಹುದೇನೋ ಕಾರಣ
ಹಾಗೇ ಸುಮ್ಮನೆ...
ನೀ ಕಾಣಲಿಲ್ಲ ಎಂದೂ
ನಿಜದ ಹೃದಯದ ಪ್ರೀತಿ,
ನನಗಾದೆ ನೀನೇ ಒಲವ
ಜೀವನ ಜ್ಯೋತಿ,
ಯಾಕೆಂದು ತಿಳಿದಿಲ್ಲ
ಹಾಗೇ ಸುಮ್ಮನೆ...
ನೋವುಂಡ ಬಳ್ಳಿಗೆ
ನಾನು ಆಸರೆಯಾದೆ,
ನೀ ಹಬ್ಬಿ ನನ್ನಲ್ಲಿ ಗೆಲುವ ಮಲ್ಲಿಗೆಯಾದೆ,
ಈ ಘಮವು ಮನವೆಲ್ಲ ತುಂಬಿರಲಿ ಎಂದೆಂದೂ
ಹಾಗೇ ಸುಮ್ಮನೆ...
ನೀನೊಂದು ಹೂವು
ನಾನೊಂದು ಒಲವು
ಸೇರಿರಲು ನಮ್ಮಲ್ಲಿ ಎಂದೆಂದೂ ಗೆಲುವು
ಬಾಳೋಣ ಹುಡುಗಿ ಎಂದೆಂದೂ ಹೀಗೆಯೇ
ಕಾರಣವೇ ಬೇಕಿಲ್ಲ,
ಹಾಗೇ ಸುಮ್ಮನೆ...
- ಶ್ರೀಗೋ.
31 Oct 2017, 11:12 am
ಭಾರತಾಂಬೆಯ ಮಡಿಲಲ್ಲಿ,
ಕನ್ನಡಾಂಬೆಯ ತೊಟ್ಟಿಲಲ್ಲಿ,
ಎದ್ದುಬಂದ ಕನ್ನಡಿಗನೇ...
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಕಂಗು-ತೆಂಗುಗಳ ನಾಡಲ್ಲಿ,
ಹಸಿರು ಹಾಸಿಗೆಯ ಮದ್ಯದಲಿ,
ಹರಿಯುತಿಹಳು ಕಾವೇರಿ ಇಲ್ಲಿ,
ಕನ್ನಡವೇ ಸತ್ಯ, ಕನ್ನಡವೇ ನಿತ್ಯ.
ಕಣ-ಕಣದಿ ತುಂಬಿರಲಿ ಸವಿಗನ್ನಡ,
ಎಲ್ಲೆಲ್ಲೊ ಹರಡು ನೀ ಈ ಕನ್ನಡ.
ಗರ್ಜಿಸುತ್ತಿರು ನಿನೊಬ್ಬ ಕನ್ನಡಿಗನೆಂದು,
ಮರೆಯದಿರು ಕನ್ನಡವ ನೀ ಇನ್ನೆಂದು.
- ಚಿರು
31 Oct 2017, 09:36 am
ಕಗ್ಗತ್ತಲಲಿ
ಕಣ್ಣ ಹೊಳಪಿಸುತ
ನನ್ನೆದುರು ನಿಂತೆಯಾ?
ಹ್ರದಯ ದೊಳಗೆ
ಬಿರುಗಾಳಿ ಎಬ್ಬಿಸುತ
ಕಣ್ಣೆದುರು
ಬಂದೆಯಾ?
ನಿನ್ನ ನೋಡಿದ ಕ್ಷಣ
ನಿಂತೆ ನಾ, ನಿಂತಲ್ಲೆ.
ನಿನ್ನ ನೋಡಿದ ಮೇಲೆ
ಹೇಳು ನಾನೇನ ಮಾಡಲಿ!!
ನಿನ್ನೆದುರು ಓಡುತ,
ನೀ ನನ್ನ ಹಿಂಬಾಲಿಸುವಂತೆ
ಮಾಡಲೇ??
ನಿನ್ನ ಬಯಕೆ
ಇಡೇರುವ ತನಕ
ನಿನ್ನೆದುರು ನಿಲ್ಲಲೇ??
ಹೇಳು ಹೇಳೆಲೆ!!
ನರಭಕ್ಷಕ ಹುಲಿಯೇ??!
- ಚಿರು
31 Oct 2017, 09:34 am
ಒಂಬತ್ತು ತಿಂಗಳು ಹೊಟ್ಟೆಯಲಿ ಹೊತ್ತೆ,
ನನ್ನಲಿ ಬೆಳಗಿಸಿದೆ ಪ್ರೀತಿಯ ಹಣತೆ,
ನನ್ನ ತಿದ್ದಿ ಸಲಹಿದಾತೆ,
ನೀನೆ ನನ್ನಯ ಪ್ರೀತಿಯ ದೇವತೆ.
ನಿನ್ನೀಂದ ನಾ ಕಂಡೆ ಈ ಜಗವ,
ನಿನ್ನೀಂದ ನಾ ಕಲಿತೆ ಆ ನಗುವ,
ನೀನೊಂದು ರೀತಿಯ ಕನ್ನಡಿ,
ನಿನ್ನ ಕುರಿತು ಬರೆಯಲು ಕಷ್ಟ ಮುನ್ನುಡಿ.
ನಾ ಜಾರಿದರೆ ನಿನ್ನ ಕಣ್ಣಲ್ಲಿ ನೀರಹನಿ,
ನಕ್ಕರೆ ನಾ ನಿನ್ನ ಬಾಯಲ್ಲಿ ಜೇನಹನಿ.
ನನ್ನ ನೋವಿನಲಿ ನಿನ್ನ ನೋವು ಅಡಗಿದೆ,
ನೀಡಿದೆ ಕಷ್ಟ ಅದ ನಾ ಅರಿಯದೆ.
ಅಂದು ನೀ ನೀಡದಿದ್ದರೆ ಜನನ,
ನಾ ಬರೆಯುತ್ತಿರಲಿಲ್ಲ,ಈ ಪುಟ್ಟ ಕವನ.
ನನ್ನ ಪ್ರತಿ ಹೆಜ್ಜೆಗು ನೀನೆ ದಾರಿ.
ನೀನಿದ್ದರೆ ಜೀವನ ಬಲು ದುಬಾರಿ.
- ಚಿರು
31 Oct 2017, 09:34 am
ಮಾಡೊಣ ಬನ್ನಿ ಎಲ್ಲರು ಸೇರಿ ಯುದ್ಧ,
ಜಾತಿ ಎಂಬ ಎರಡಕ್ಷರದ ವಿರುದ್ಧ.
ಪುಟ್ಟದಾದ ಹ್ರುದಯ ನೊಡಲು ಸುಂದರ,
ಜಾತಿಎಂಬ ಪದದಿಂದ ಇದಾಗಿದೆ ವಿಕಾರ.
ಎಲ್ಲರಲಿ ಹರಿಯುವುದು ಒಂದೆ ರಕ್ತ,
ಆಗೋಣ ಬನ್ನಿ ಜಾತಿಮತದಿಂದ ಮುಕ್ತ.
ಯಾಕಾಗಿ ನಮ್ಮಲ್ಲಿ ಆ ಜಾತಿ, ಈ ಜಾತಿ,
ಹರಡೋಣ ಎಲ್ಲ ಸೇರಿ ಮನುಜ ಪ್ರೀತಿ.
ಬೀಸುವ ತಂಗಾಳಿಗಿಲ್ಲ,
ಹರಿಯುವ ತಿಳಿನಿರೀನೊಳಿಲ್ಲ,
ತಿನ್ನುವ ಅನ್ನದೊಳಗಿಲ್ಲ,
ಇದ ಅರಿತವ ಎಲ್ಲೆಲ್ಲೂ ಪ್ರೀತಿಗಳಿಸಬಲ್ಲ.
ಮನೆಯೊಳಗೆ ಕಾಲನಿಕ್ಕಲು ಬಿಡದ!
ಕುಡಿವ ನೀರ ಮುಟ್ಟಲೂ ಬಿಡದ!!
ಪಕ್ಕದಲಿ ಕುಳಿತು ಮಾತನಾಡಲು ಬಿಡದ!
ಯಾವುದೀ ಜಾತಿ ಸಮಾನತೆಯೇ ಇಲ್ಲದ?
ಎಲ್ಲರು ಹುಟ್ಟುವುದು ತಾಯಹೊಟ್ಟೆಯಲಿ,
ಮಕ್ಕಳೆಲ್ಲ ಬೆಳೆಯುವುದು ಒಟ್ಟಾಗಿ ಆಡುತಲಿ,
ಎಲ್ಲ ಜನರು ಇರುವುದು ಒಂದೆ ಸಮಾಜದಲ್ಲಿ,
ಆದರು ಜಗಳ ಈ ಜಾತಿಎಂಬ ಪದದಲ್ಲಿ!?.
- ಚಿರು
31 Oct 2017, 09:32 am
ಹಕ್ಕಿಗಳ ಕಲರವದಿ
ಕನ್ನಡದ ಕಂಪು,
ಅದನೆನೆಯುತ್ತಲಿದ್ದೊಡೆ
ನನ್ನ ಮನವಾಗುವುದು ತಂಪು.
ಇಂಪು ಇಂಪಾಗಿರುವ ಕನ್ನಡ
ಅದ ಬಿಟ್ಚು ಏಕಯ್ಯ? ಎನ್ನಡ! ಎಕ್ಕಡ!
ನಾವಾಗಬೇಕು ಕನ್ನಡದ ಕಣ್ಮಣಿಗಳು
ನಾವು ತಾನೆ ಉಳಿಸಬೇಕು ಕನ್ನಡ ಪದಗಳು.
ತಂಪಾದ ಗಾಳಿಯಲಿ, ಇಂಪಾದ ಇರುಳಿನಲಿ,
ಕನ್ನಡಾಂಬೆಯ ಮುದ್ದು ಕಂದನೇ,
ನಮಿಸಿ ನಲಿ ನೀ ಭುವನೇಶ್ವರಿಗೆ,
ಕನ್ನಡ ತಾಯಿ ರಾಜರಾಜೆಶ್ವರಿಗೆ.
- ಚಿರು
31 Oct 2017, 09:31 am
ಶುರುವಾಯಿತು ನಿನ್ನ ಪ್ರೀತಿ ಹುಡುಕಾಟ
ಎದೆಯಲ್ಲಿ ಪ್ರತಿಕ್ಷಣ ಪರದಾಟ,
ಮನಸಿನ ಒಳಗೂ,ಕನಸಿನ ಒಳಗೂ
ಪ್ರತಿ ಕ್ಷಣವೂ ಸೆಳೆದಿದೆ ನಿನ್ನ ಕುಡಿನೋಟ...
ನನ್ನ ಮನಸ್ಸು ಬಯಸುತಿದೆ ಪ್ರತಿಕ್ಷಣ
ನಿನ್ನ ಸವಿ ಮಾತು ಕೇಳಲು ಅನುಕ್ಷಣ,
ಹೇ ಹುಡುಗ ನನ್ನ ಮನಸ್ಸು ಹೇಳುತ್ತಿದೆ ನಿನ್ನೇ ಪ್ರೀತಿಸುವೆನೆಂದು,
ನನ್ನ ಹೃದಯ ಹೇಳುತ್ತಿದೆ ನಿನ್ನೇ ಪ್ರೀತಿಸುವೆನೆಂದು.......!
*ಖುಷಿ*.......
- ಖುಷಿ...
31 Oct 2017, 08:58 am
ವಂದಿಪೆ ನಾ ಕನ್ನಡಾಂಬೆಗೆ
ಮೊದಲೊಂದಿಪೆ ನಾ ಭುವನೇಶ್ವರಿಗೆ
ಭಾರತಾಂಬೆಯ ವರಪುತ್ರಿಗೆ
ಚರಿತ್ರೆಯೊಳ್ ಮೆರೆದ ತಾಯ್ನಾಡಿಗೆ
ಶ್ರೇಷ್ಟರಂ ಪೊತ್ತ ಭವ್ಯ ಜನನಿಗೆ
ಧೀರರಂ ಪೆತ್ತ ವೀರಮಾತೆಗೆ
ಅನರ್ಘ್ಯ ರತ್ನಗಳೆನಿಸಿದ ಕವಿವಾಣಿಗೆ
ಶರಣರಂ ಪೊರೆದ ಜನ್ಮದಾತೆಗೆ
ವಂದಿಪೆ ನಾ ಜಗದಾಂಬೆಗೆ
ಮೊದಲೊಂದಿಪೆ ನಾ ಭಾರತಾಂಬೆಗೆ
ವಂದಿಪೆನು ನಾ ಭುವನೇಶ್ವರಿಗೆ
ಶ್ರೀ ಭಾರತಾಂಬೆಯ ವರಪುತ್ರಿಗೆ
ಚರಿತ್ರೆಯೊಳ್ ಮೆರೆದ ತಾಯ್ನಾಡಿಗೆ
ಚಕ್ರವರ್ತಿಗಳಾಳಿದ ಚೆಲುವ ನಾಡಿಗೆ
ಅನ್ಯರಂ ಪೊರೆದ ದಾತಾರರ ಬೀಡಿಗೆ
ಧೀರರಂ ಪೆತ್ತ ವೀರಮಾತೆಗೆ
ಶ್ರೇಷ್ಟರಂ ಪೊತ್ತ ಭವ್ಯ ಜನನಿಗೆ
ವೈಭವದಿ ಜಸಂ ಪಡೆದ ಮುದವೀಡಿಗೆ
ಮಹೋದಯರುದಿಸಿದ ಈ ಮಣ್ಣಿಗೆ
ಅನರ್ಘ್ಯ ಕಬ್ಬಿಗರ ಸೃಜಿಸಿದ ಸರಸತಿಗೆ
ಶರಣರಂ ಪೊರೆದ ಜನ್ಮದಾತೆಗೆ
ದಾಸರಂ ನುಡಿಯಿಸಿದ ಧರಿತ್ರಿಗೆ
ಸಿದ್ಧರವತರಿಸಿದ ಶಾಂತಿಧಾಮಕೆ
ಭವ್ಯ ಆಲಯಗಳ ತವರೂರಿಗೆ
ಸಹ್ಯಾದ್ರಿ ಗಿರಿಪಂಕ್ತಿಯ ಸೌಂದರ್ಯಕೆ
ಎಲ್ಲೆಲ್ಲಿಯೂ ತುಂಬಿರಲು ಸಿರಿಸಂಪಿಗೆ
ನದ-ನದಿಗಳೊಡಗೂಡಿದ ನಂದನವನಕೆ
ಬಸವನಂ ಕೊಟ್ಟ ಕ್ರಾಂತಿಭೂಮಿಗೆ
ಮಾತೆಯರ್ ಭವಿಸಿದ ಮಲೆನಾಡಿಗೆ
ಕರುನಾಡ ಕಾವೇರಿಗೆ ಅಡಿದಾವರೆಗೆ
ಶ್ರೀ ಚಾಮುಂಡಿಯ ಪಾದ ಕಮಲಕೆ
ವಂದಿಪೆ ವಂದಿಪೆ ವಂದಿಪೆ
- Kumara.C
30 Oct 2017, 10:18 pm