Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನವಳ ನೆನಪು.

ಚಳಿಗಾಲದಲ್ಲಿ ಬೆಚ್ಚನೆ
ಮುದನೀಡುತ್ತವೆ.
ಬೆಸಿಗೆಯಲ್ಲಿ ತಂಗಾಳಿಯಾಗುತ್ತವೆ.
ಆದರೆ, ಮಳೆಗಾಲದಲ್ಲಿ ಮಾತ್ರ ತುಂತುರು ಹನಿಗಳಾಗುತ್ತವೆ..
✍ ರಾಮ್...

- ರಾಮ್

21 Oct 2017, 10:45 am

ಪ್ರೀತಿ..

ಕನಸು ಕಾವ್ಯ ಕುಸುಮವಾಗಿ
ಕೈಯಲ್ಲಿರುವ ಕುಂಚ ಮಾತನಾಡುವಾಗ
ಕನಸಿನ ಕನ್ಯೆ ಕಣ್ಣಂಚಿಗೆ ಸುಳಿದಂತಾಗುವುದು..
✍ ರಾಮ್...

- ರಾಮ್

21 Oct 2017, 10:22 am

ನೆನಪಿನ ಶಿಕ್ಷೆ !

ಎಂದು ನೋಡುವೆನು ಮರಳಿ ನಿನ್ನ
ನೊಂದು ಹೋಗಿಹುದು ಮನವು ಚಿನ್ನ
ದೂರದೂರಿನಲಿ ಇದ್ದರೂ ನಾನು
ಮುತ್ತುವುದು ನಿನ ನೆನಪು ಸಿಡಿದಂತೆ ಜೇನು.
ಚುಚ್ಚಿದರೂ, ಕಚ್ಚಿದರೂ ಹಿತವುಂಟು ನೋವಲ್ಲಿ
ಜೇನ ಹುಟ್ಟಿನ ಸಿಹಿಯ ಸವಿದಂತೆ ಬಾಯಲ್ಲಿ
ಒಂದು ಕ್ಷಣ ಬಿಡುವಿಲ್ಲ,
ನನ್ನೆದೆಯು ದಣಿದಿಲ್ಲ
ನಿನ್ನ ಸವಿ ನೆನಪುಗಳ ಬಾರವನು ಹೊತ್ತು,
ನಡೆಯುವೆನು ಎಲೆ ಹುಡುಗಿ ಆದಷ್ಟು ಹೊತ್ತು
ನಾನೇನೋ ತಾಳುವೆನು ಒತ್ತರಿಸಿ ಬರುವ
ನಿನ್ನೊಲವ ನೆನಪುಗಳ ಪ್ರೀತಿ ಒದೆತ,
ತಾಳುತ್ತಿಲ್ಲ ಹುಡುಗಿ ಕಣ್ಣೀರ ಹನಿಗಳು
ಒತ್ತರಿಸಿ ಜಿನುಗುತ್ತಿಹವು ಸತತ ಒರೆತ.
ಮರೆಯಲಾರೆನು ಚೆಲುವಿ
ನಾನೆಲ್ಲಿದ್ದರೂ ಕೂಡ ನಿನ್ನ ಪ್ರೀತಿಯ,
ನನ್ನ ಹೊಸ ಲೋಕಕೆ ದೂಡಿದ
ನಿನ್ನೊಲವ ಪ್ರೀತಿಯ ಮೋಡಿಯ.

- ಶ್ರೀಗೋ.

21 Oct 2017, 09:57 am

......

ಕಣ್ಣಿಗೆ ರೇಪ್ಪೆ ಮುಖ್ಯವಾದರೆ
ನನ್ನಗೆ ನಿನ್ನ ನಗು ಮುಖ್ಯ

ಹೃದಯ ನನಾದರೆ
ಆ ಹೃದಯದ ಬಡಿತ ನೀನು

ಕಣ್ಣು ನಿನಾದರೆ
ಆ ಕಣ್ಣ ಕಾಯೋ ರೇಪ್ಪೆ ನಾನು

ನನ್ನ ಹೃದಯದ ಬಡಿತದಲ್ಲಿ
ನಿನ್ನದೆ ಹೆಸರು ಕಣೊ.....

ಈ ಹೃದಯನ ಬಿಟ್ಟು ಹೋಗಬೇಡ ಕಣೊ
ನೀ ನನ್ನ ಬಿಟ್ಟು ಹೋದ ಕ್ಷಣ
ನಿಲ್ಲುವುದು ನನ್ನ ಹೃದಯ ಬಡಿತ ....

ನನ್ನ ಬಳಿ ಬಾ ಒಮ್ಮೆ
ನಿನ್ನ ನೋಡುವ ಬಯಕೆ
ನಿನ್ನ ಬಳಿ ಮಾತನಾಡುವ ಹಂಬಲ
ಬರುವೆಯ ......

- Shilpa

21 Oct 2017, 07:57 am

ಭಾವ ಬಂಧನ

ಭಾವ ಪತಂಗವವ
ಅಲೆದಾಡಲು ಬಿಟ್ಟೆ
ಕೂಡಿಹಾಕಿದ್ದೆ ಕತ್ತಲಲ್ಲಿ
ಕಣ್ಣೀರು ಬರುವುತನಕ
ಕೊನೆಗೆ ಕಾಡಿ ಬೇಡಿದಾಗ
ಮನ ಕರಗಿ ಬಿಟ್ಟು ಬಿಟ್ಟೆ

ಅಲೆದಾಟ ನಂಗಿಷ್ಟವೆಂದಲ್ಲ
ಆದರೆ ತೋರಿಕೆಯ ಜನರ
ನಡುವಿನ ಬಾಳು ಸಹ್ಯ ಎನಿಸುವುದಿಲ್ಲ
ಆಗೇ ನೋಡಿದರೆ ನಾನು ಅಲೆಮಾರಿಯೇ
ಇಲ್ಲಿಯವರೆಗೂ ಕಳೆದಿದ್ದೆ ನನ್ನ ಹುಡುಕುತಾ
ಮನದ ಉದ್ದಂಗಲಕು ಹುಚ್ಚನಂತೆ ಅಲೆದಾಡಿದ್ದೆ
ಅರಸುತ ಉತ್ತರವ,ಆದರೆ ದೊರೆತಿದ್ದಿಲ್ಲ

ವರ್ಷಗಳು ಉರುಳುತಿದ್ದರು
ನಿಂತಿದ್ದೆ ನಾನು ಕಲ್ಲು ಬಂಡೆಯಂತೆ
ಯಾವುದುಕು ಸ್ಪಂದಿಸದೆ,ಉತ್ತರಿಸದೆ
ಅಭ್ಯಾಸವಾಗಿತ್ತು ಆ ಒಂಟಿ ಸಹವಾಸ
ಭಾವ ಬಂಧವನ್ನು ಕಟ್ಟಿಹಾಕಿದ್ದೆ
ಅದು ಕಿರುಚಿ ಗದ್ದಲೆಬ್ಬಿಸಿದಾಗ
ಕೋಣೆಗೆ ಚಿಲಕ ಹಾಕಿ ಹೊರಬಂದಿದ್ದೆ

ವಿಕೃತನಾಗಿದ್ದೆ ಕಟುಕನಾಗಿದ್ದೆ
ಭಾವ ದುಃಖದಿಂದ ಅಳುತಿದಿದ್ದರೆ
ಗಹಗಹಸಿ ನಗುತಿದ್ದೆ ಕಾರಣವಿಲ್ಲದೆ
ಮರುಕ್ಷಣವೇ ಅಳುತಿದ್ದೆ ಏನು ಗೊತ್ತಾಗದೆ
ಖುಷಿಯೆಂಬ ಪದವು ನನ್ನ ಮರೆತಂತಿತ್ತು
ಅದಕೇನು ಗೊತ್ತು,ದುಃಖವೊಂದೇ ನನ್ನ ಸ್ವತ್ತು

ಕಣ್ಣೀರಿಗೂ ನನ್ನ ಕಂಡರೆ ಭಯವು
ಎಂಥ ಕಷ್ಟದಲ್ಲಿಯೂ ನನ್ನ ಬಳಿ ಸುಳಿದಿದ್ದಿಲ್ಲ
ಆದರೆ ಕತ್ತಲಲಿ ಕೊರಗಿ ಸೊರಗಿದ್ದ
ನನ್ನ ಭಾವವನು ನೋಡಿ ಸುರಿಯತೊಡಗಿತು
ಕಣ್ಣು ಆ ಕಣ್ಣೀರ ಮಳೆಯಲಿ ನೆನದು ನಗುತಿತ್ತು
ಕರಗಿಬಿಟ್ಟೆ ಕೊನೆಗೆ ಆ ದೃಶ್ಯ ವೈಭವಕೆ
ಅಲೆದಾಡಲು ಬಿಟ್ಟೆ, ಭಾವವೆಂಬ ಬಣ್ಣದ ಚಿಟ್ಟೆ ..
ಗಾದೆಪ್ಪ

- ಗಾದೆಪ್ಪ

20 Oct 2017, 09:24 pm

..

ಎಲ್ಲಕ್ಕೂ ಉಂಟು
ಇಲ್ಲಿ ಮೀಸಲಾತಿ
ಸತ್ತಮೇಲೆ ಸ್ವರ್ಗದಲ್ಲೂ
ದುಡ್ಡು ಕೊಟ್ಟರೆ
ಪಾಪಿಗಳಿಗು ಸಿಗಬಹುದೇ
ಪುಣ್ಯದ ವಿನಾಯಿತಿ

ಕೊನೆಗೂ ಶುರುವಾಯಿತು
ಬಿಗ್ಗ್ಬಾಸ್ ಸೀಸನ್ ಫೈವ್
17 ಕೋತಿಗಳ ಮಂಗಾಟ
ಅದ ನೋಡಲು
ಮನೆಯಲಿ ರಿಮೋಟ್ ಗಾಗಿ
ಬುದ್ದಿಜೀವಿಗಳ ಕಿತ್ತಾಟ



ಪ್ರಪಾತಕ್ಕೆ ಬಿದ್ದರು ಸಾಯಲಿಲ್ಲ
ಹಾವು ಕಡಿಯಲಿಲ್ಲ
ಹುಲಿಯು ತಿನ್ನಲ್ಲಿಲ್ಲ
ದೈವ ಮಾನವಳೇ
ನಮ್ಮ ಪುಟ್ಟಗೌರಿ
ಡೈರೆಕ್ಟರ್ರೇ ಸ್ವಲ್ಪ ಉತ್ತರ ಹೇಳಿ

ಕತ್ತಲು ನೀಗಿಸಿ
ಬದುಕನು ಬೆಳಗಿಸಿ
ಆಚರಿಸೋಣ ಈ ದೀಪಾವಳಿ
ಪಟಾಕಿಯೇ ಬೇಕೇ
ನಿಸರ್ಗವ ಕೆಡಿಸಿ
ಆಚರಿಸಲು ಬೆಳಕಿನ ರಂಗೋಲಿ ..



ಹುಟ್ಟಿಗೊಂದು ಜಾತಿ
ಗುಂಪಿಗೊಂದು ಪಾರ್ಟಿ
ನೋಟಿಗೊಂದು ಓಟು
ಇರುವವರೆಗೆ ಮೋದಿ ಅಲ್ಲ
ದೇವರೇ ಬಂದರು ಕೂಡ
ದೇಶವಾಗದು ಅಭಿವೃದ್ಧಿ

ಒಳ್ಳೆಯವರಾರು ಕೆಟ್ಟವರಾರು
ಯೋಚಿಸಲು ಸಮಯವಿಲ್ಲ
ನೋಟು ಕೊಡಿ ಓಟು ತಗೊಳ್ಳಿ
ನೀವು ಸತ್ತರೆಷ್ಟು ಇದ್ದರೆಷ್ಟು
ಇನ್ನು ಐದು ವರ್ಷ
ತೆಪ್ಪಗೆ ಇರೋದ್ ಕಲ್ತ್ಕೊಳ್ಳಿ..



ಸೀರೆ ತೊಟ್ಟ ಪ್ರತಿಬಾರಿಯೂ
ನನ್ನವಳದೊಂದು ಪ್ರಶ್ನೆ
ರೀ ನಾ ಹೇಗೆ ಕಾಣುವೆನೆಂದು ..
ಅಯ್ಯೋ ನಿನಗೇನು ಚಿನ್ನ
ಅಮವ್ಯಾಸೆಯ ಚಂದ್ರನ ಬಣ್ಣ
ಇನ್ನೆಗೆ ಹೇಳಲಿ ಅವಳ ಅಂದವನ್ನ..
ಗಾದೆಪ್ಪ

- ಗಾದೆಪ್ಪ

20 Oct 2017, 07:25 pm

..

ಪ್ರಶ್ನಿಸುವ ಹುಚ್ಚೇಕೆ ಮನಸೇ ?

ಪ್ರಶ್ನೆ ಕೇಳಿದ ಪ್ರತಿಬಾರಿಯೂ
ನನಗೆ ಉತ್ತರದ ಚಿಂತೆ
ಜೀವನವೇ ಪ್ರಶ್ನೆಯಾದರೆ
ಉತ್ತರ ಹುಡುಕಲೆಗೇ ಎನ್ನುವ ಭೀತಿ

ಕಂಡ ಕಂಡದೆಲ್ಲವು
ಪ್ರಶ್ನಿಸುವ ಚಟವು ಈ ಮನಕೆ
ತನಗೆ ಸಂಬಂಧವೇ ಇರದಿದ್ದರೂ
ಉತ್ತರ ಹುಡುಕಲು ಬಲವಂತವ ಮಾಡುವುದೇಕೆ

ಹರಿವ ನದಿಯ ಕಂಡು
ನಿನ್ನ ಮೂಲ ಏನೆಂದು ಕೇಳಿದರೆ
ಉತ್ತರಿಸಬಲ್ಲದೇ ಆ ನದಿ?
ಅದೇಕೆ ತಿಳಿಯುತ್ತಿಲ್ಲ ನನ್ನ ಮನಕೆ


ಅವಳ ಕಂಡಾಗಲು ಹೇಳಿದ್ದೆ
ಪ್ರಶ್ನಿಸದಿರು ನನ್ನ ಏನೊಂದು
ಆದರೆ ಬಿಡದೆ ಪ್ರಶ್ನಿಸಲು
ಶರಣಾಯಿತು ಹೃದಯ ಮರುಮಾತಾಡದೆ

ಪ್ರಶ್ನೆಯ ಹುಚ್ಚು ಅಷ್ಟಿಷ್ಟಲ್ಲ
ಕೆಲವೊಮ್ಮೆ ಕೇಳುವುದು ನನ್ನನ್ನೇ
ನಿನ್ನ ಹುಟ್ಟಿನ ಉದ್ದೇಶವೇನು ?
ನಿನ್ನೆಲ್ಲ ಪ್ರಶ್ನೆಗೆ ಉತ್ತರ ಹುಡುಕುವುದೇ?

ಅತಿರೇಕದ ನಡುವಳಿಕೆ
ಪ್ರಶ್ನಿಸುವ ಹುಚ್ಚು ಈ ಮನಕೆ
ಅದರ ಕೆಲವೊಂದು ಪ್ರಶ್ನೆಗೆ ಉತ್ತರ
ತಿಳಿಯುತ್ತಿಲ್ಲ,ಆದರೂ ನನ್ನ ಬಿಡುತ್ತಿಲ್ಲ


ಕತ್ತಲ ಕೋಣೆಯಲಿ ಕಣ್ಣೀರ
ಜೊತೆಗೂಡಿ ಬೇಡಿಕೊಂಡೆ
ಮತ್ತೆಂದೂ ಕೆಳದಿರು ಪ್ರಶ್ನೆಯನ್ನು
ಉತ್ತರ ಹೇಳಲಿಲ್ಲ,ಪ್ರಶ್ನೆ ನಿಲ್ಲಲಿಲ್ಲ

ಇನ್ನೆಷ್ಟು ಕಾಡುವೆ ನನ್ನ ಪ್ರಶ್ನೆಗಳಿಂದ
ಉತ್ತರಿಸಲು ನಾನೇನು ಮೇಧಾವಿ ಅಲ್ಲ
ಬಿಟ್ಟುಬಿಡು ನನ್ನನ್ನು ಶಾಶ್ವತವಾಗಿ
ಪ್ರಶ್ನೆಯ ಸುಳಿಯಲ್ಲೇ ಮುಳುಗಿಹೋದೇನೂ..

ಉತ್ತರವ ಬೆನ್ನಟ್ಟಿ ಹೋದ
ಪ್ರತಿಬಾರಿಯೂ ಪ್ರಶ್ನೆಗಳ ಸಾಲು
ಕೆಲವು ನನ್ನ ಕೆಣುಕುವವು
ಕೆಲವು ನನ್ನ ಸೋಲಿಸಿ ಸಾಯಿಸುವವು

ಒಂಟಿಗನ ಪ್ರಶ್ನೆಗಳಿಗೆ
ಉತ್ತರ ಹುಡುಕುವರಾರು
ನಿನ್ನ ಬಿಡನೆಂದರೆ ಬಿಡೆನು
ಉತ್ತರ ಹುಡುಕುವುದೇ ಮೋಕ್ಷವು ನಿನಗೆ

ಕೊನೆಗೆ ಅರಿವಾದ ಸತ್ಯ
ಪ್ರಶ್ನೆಗಳು ಬೇಕು ಮನುಜನಿಗೆ
ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು
ತಪ್ಪುಗಳ ತಿದ್ದಿ ಬದುಕು ರೂಪಿಸಿಕೊಳ್ಳಲು
ಗಾದೆಪ್ಪ

- ಗಾದೆಪ್ಪ

20 Oct 2017, 07:21 pm

ದೀಪಾವಳಿ

ಮನದ ಕತ್ತಲೆಯ ಕೊನೆಗಾಣಿಸಲು
ಇಡುವ ಪ್ರೀತಿಯ ಹಣತೆ
ಒಂದಿಷ್ಟು ಖುಷಿಯ ಎಣ್ಣೆ ಸುರಿದು
ಅದಕೆ ಬಾಂಧ್ಯವದ ಬತ್ತಿ ಇಟ್ಟು
ಬೆಳಗುವ ಬದುಕೆಂಬ ದೀಪವ
ದೀಪಾವಳಿ ಹಬ್ಬದ ಶುಭಾಶಯಗಳು

- ಗಾದೆಪ್ಪ

20 Oct 2017, 07:18 pm

*ಬೇಕಿದೆ ಗೆಲುವು*

ನನ್ನ ನಿನ್ನ ಪ್ರೀತಿಗೆ ಸಿಗಲಿ
ಮನೆಯವರ ಹಾರೈಕೆ
ಕನಸು ಮನಸಲೂ ಸದಾ
ನಿನ್ನದೇ ಕನವರಿಕೆ!

ತಂದೆ-ತಾಯಿಯರ ಆಸರೆಯಲಿ
ಬೆಳೆದುಬಂದಿಹೆನು ನಾನು
ನಿನ್ನೊಲವಿನ ಪ್ರೀತಿಗೆ
ಸೋತಿಹುವುದು ಮನವು!

ಒಮ್ಮೊಮ್ಮೆ ನೀ ಮುನಿಸಿಕೊಂಡರೆ
ಚಡಪಡಿಸುವುದು ಹೃದಯ
ನೀ ನನ್ನಿಂದ ದೂರಾದರೆ
ಈ ಜೀವಕೆ ಹೇಳುವೆನು ವಿದಾಯ!

ಪ್ರೀತಿಸುವ ಮನಸುಗಳಿಗೆ
ದೂರಾಗುವ ಭಯ
ಎಲ್ಲರ ಮನಸು ಒಂದಾದರೆ
ಪ್ರೀತಿಗೆ ಸಿಗುವುದು ಜಯ!

ಪ್ರಿಯಾಂಕ✍

- ಪ್ರಿಯಾಂಕ

20 Oct 2017, 06:41 pm

ದೀಪಾವಳಿ☄

ಕೋಟಿ ದೀಪಗಳು ಹಚ್ಚಿ ಹಾಡಿದೆವು
ದೀಪಾವಳಿ ಹಬ್ಬ ಇಂದೆಂದು ದೇವರ ಮುಂದೆ
ಕಾಣಲಿಲ್ಲ ನನಗೆ ದಲಿತರ ಕಣ್ಣಲ್ಲಿ ಸಂತಸದ ಕ್ಷಣವೊಂದು ಈ ದೀಪಗಳ ಕಾಂತಿಗಿಂದು.

ಮುಗಿಲೆತ್ತರಕ್ಕೆ ಹಾರಿ ನಗೆಚೆಲ್ಲಿ ಮಯಾವಾಗುವ ಪಾಟಕಿಯ ಸದ್ದನ್ನು ಕಿವಿಯೊಡೆದೋಗುವಷ್ಟು ರಭಸವಾಗಿ ಹೊಡೆದು ನಕ್ಕೆವು ಹಸಿವಿನಿಂದ ಬಳಲುತ್ತಿರುವ ಒಂದು ಜೀವಿಯ ಹೊಟ್ಟೆ ತುಂಬಿ ಮನಸು ನಗುವು ಕಾಣಲಿಲ್ಲ ನನಗಲ್ಲಿ.

ಕೋಟಿ ಕನಸುಗಳು ಹೊತ್ತು ಐಶ್ವರ್ಯವಿಲ್ಲದ ಕಾರಣಕ್ಕೆ ಮೂರೋತ್ತು ಕಣ್ಣೀರಲ್ಲಿ ಮುಳುಗೇಳುತ್ತಿರುವ ಒಂದು ಮುಗ್ದವಾದ ಮಗುವಿನ ನಗೆಯನ್ನು ನೋಡಬಯಸೋಣ.

- ಚುಕ್ಕಿ

20 Oct 2017, 06:18 pm