Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುದ್ದು ಹೃದಯ....

ಈ ನನ್ನ ಮುದ್ದು ಹೃದಯ
ಬಯಸುತ್ತಿದೆ
ನಿನ್ನ ಸನಿಹ ಇಂದು .....

ನೀ ದೂರ ಆದ ಕ್ಷಣ
ನಿಲ್ಲುವುದು ನನ್ನ
ಊಸಿರಾಟ ಅಂದು ......

ನೀ ನನ್ನ ಜೊತೆ ಇರುವ
ಅಷ್ಟು ಸಮಯ
ಸ್ವರ್ಗವೆ ನನ್ನ ಕೃಯಲ್ಲಿ ....

ಚಂದಿರನ ಮುಖದಲ್ಲಿ
ನಿನ್ನ ಬಿಂಬವ ಕಂಡು
ನವಿಲಿನಂತೆ ಕುಣಿದಿದೆ ನನ್ನ ಮನಸ್ಸು....

ನಿನ್ನನು ನೋಡುವ ಆ ಕ್ಷಣಗಳು
ನಿನ್ನ ಮಾತನ್ನ ಕೇಳುತ್ತಾ
ನನ್ನನೆ ಮರೆತು ನಿನ್ನ ಕಣ್ ಗಳನು ನೋಡುತ್ತಾ
ನಾ ಕುಳಿತೆ ....

- Shilpa

18 Oct 2017, 07:35 am

ಕನಸು...

ಒಂದೇ ಸಾರಿ ಹೇಳು
ನೀ ಕಂಡ ಕನಸೇನು
ನೆರವೇರಿಸುವ ಆಸೆ ಇಂದು
ಮತ್ತೂಂದು ಕನಸು ಬೀಳುವ ಮುನ್ನ !

-ಗಿರೀಶ್ ರಾಮಕೃಷ್ಣ

- girish r

17 Oct 2017, 11:01 pm

ಬಾಣಸಿಗಳು ನಾನು.........

ಆಸೆಗಳ ಮೂಟೆ ಹೊತ್ತು
ಬದುಕಿಹೆನು ಉಣ್ಣುತ್ತ ಮೂರೊತ್ತು
ಹೀಡೇರಿಸಿಕೊಳ್ಳಲು ಸಣ್ಣ- ಪುಟ್ಟ ಆಸೆ
ಬೇಡಿದಷ್ಟು ದೂರ ಇನಿಯನ ಒತ್ತಾಸೆ!

ಸ್ವಾ ಆಶ್ರಯವಿಲ್ಲದ
ಪರಾವಲಂಬಿ ನಾನು
ಸ್ವಂತಿಕೆಯ ಕೊಂದ
ಮನೆಯ ಬಾಣಸಿ ನಾನು!

ನಾ ಮಾಡಿದ ತ್ಯಾಗವ
ಗಣಿಸುವವರಾರು ಇಲ್ಲ
ನನ್ನಲ್ಲಿಯ ದೌರ್ಬಲ್ಯವ
ಹುಡುಕಿ ತಗೆವವರೆ ಎಲ್ಲ!

ದುಡಿದು ದಣಿದು ಬರುವ ಒಡೆಯನಿಗೆ
ಹಸಿವಿನಿಂದ ಅಳುವ ಕಂದನಿಗೆ
ಹಾಸಿಗೆಹಿಡಿದಿರುವ ಮಾವನಿಗೆ
ನಗುಮೊಗದಿ ಮಾಡಿ ಬಡಿಸುವೆ ಅಡಿಗೆ!

ಒಳಿತು- ಕೆಡುಕುಗಳ ಆಗರ ಭೂತಾಯಿ
ಪಾಪಾದಿಗಳ ತೊಡೆವಳು ಗಂಗಾಮಾಯಿ
ಸಕಲ ಸೃಷ್ಟಿಗು ಆಸರೆಯಾಗುವಳು ತಾಯಿ
ಮಗು,ಕನ್ಯೆ,ಮಡದಿ ತಾಯಿಯಾದ ಹೆಣ್ಣು ಧರಿತ್ರಿಯಂತೆ ಕರುಣಾಮಯಿ !



ಶಾರಧ

- ಶಕುಂತಲಾ

17 Oct 2017, 09:58 pm

ಕವನ.....

ಚಂದದ ಈ ಜನ್ಮಕ್ಕೆ
ನಗುವೆಂಬ ದೀಪವ ಹಚ್ಚಿ
ಅಂದದ ಈ ಹೃದಯಕ್ಕೆ
ಪ್ರೀತಿಯ ಎಂಬ ಬೇಳಕ ಬಿಟ್ಟು
ಮರೆಯದಿರು ಪ್ರೀತಿಯ
ಮರೆಯದಿರು ನನ್ನ ಕವನವ .....

- Shilpa

17 Oct 2017, 07:49 pm

ಗೆಳೆಯಾ.....

ಕಲ್ಪನೆಯೂ ಕಲ್ಲಿದಾಗ ಕನಸುಗಳು
ಚೂರು ಚೂರು ಆಗುತ್ತದೆ.......
ಕಲ್ಪಿಸುವ ಕಣ್ಣುಗಳು ನೀರಿನಲ್ಲಿ ತೇಲಿ
ಹೋಗುತ್ತದೆ......
ಕ್ಷಣಗಳನ್ನು ಕಳೆಯುವ ಮುನ್ನ ಜೀವನ
ಮುಗಿದು ಬಿಡುತ್ತದೆ ....
ಕನಸಾಗಿ ಬಂದು ನನಸಾಗದೆ ಹೋಗಬೇಡ
ಗೆಳೆಯ.......

- Shilpa

17 Oct 2017, 07:49 pm

ಪ್ರೀತಿ

ಕ್ಷಣಿಕ ಮೌನದ ನಂತರ
ಕಣ್ಣರೆಪ್ಪೆ ಏನೋ ಹೇಳಹೊರಟಿದೆ
ನೀ ನನ್ನನೇ ನೋಡುತ ನಿಂತಾಗ
ಎಲ್ಲವೂ ಮರೆತು ಹೋದಂತಿದೆ!

ಕೆನ್ನೆಯ ರಂಗಿಗೂ ಆಸೆಯಂತೆ
ತನ್ನಿಯನ ಪ್ರೀತಿಯಲಿ ಕರಗಬೇಕಂತೆ
ಮಾತಿನಲಿ ಹೇಳಲಾಗದ ಪ್ರೀತಿಯನು
ಹೃದಯದಲಿ ಬಚ್ಚಿಡಬೇಕಂತೆ!

ಕಣ್ಣತುಂಬ ನಿನ್ನದೇ ಬಿಂಬ
ನೀ ನನ್ನವನೆಂಬುದು ನನಗೆ ಜಂಬ
ನಿನ್ನೊಲವಿನಲಿ ನಾನಿರುವಾಗ
ನನಗಿಲ್ಲ ಯಾವುದೇ ಕೊರತೆ!

ಕಣ್ಣರೆಪ್ಪೆಯಲಿ ಜೋಪಾನ ಮಾಡಿರುವೆ
ನನ್ನೆಲ್ಲಾ ಕನಸುಗಳಿಗೆ ಜೊತೆಯಾಗಿರುವೆ
ಪ್ರೀತಿಯ ಮಳೆಯನ್ನು ಸುರಿಸಿರುವೆ
ಮತ್ತೇನು ಬೇಡಿಕೆ ಇಡಲಿ ಆ ದೇವರಲಿ!

ಪ್ರಿಯಾಂಕ✍

- ಪ್ರಿಯಾಂಕ

17 Oct 2017, 02:00 pm

ಮಧ್ಯಮ ವರ್ಗ !

ಬೆಳಗ್ಗೆ ಎದ್ದು ಅಂಗಳ ಗುಡಿಸಿ
ಗಂಡನ ಪ್ಯಾಂಟ್ ಜೇಬ್ ಎಲ್ಲ ಹುಡ್ಕಿ
ಮೆಂತೆ ಡಬ್ಬ ಎಲ್ಲಾ ತಡ್ಕಿ
ಹಾಲಿನ ಪಾಕೆಟ್, ಕೊತ್ತಂಬರಿ ಸೊಪ್ಪು
ಕೊಬ್ಬರಿ ಎಣ್ಣೆ, ಟಾಟಾ ಉಪ್ಪು,
ರೆಡ್ ರೋಸ್ ಟಿಪುಡಿ, ಕಾಲ್ ಕೆಜಿ ಸಕ್ರೆ,
ಅರ್ಧ ಗಂಟೆ ಅದು ಇದು ಮಾತು,
ಎದುರು ಮನೆಯೋಳು ಅಲ್ಲೇ ಸಿಕ್ರೆ.
ಕರಿಬೇವು ಇಲ್ಲ, ಪುಳಿವೋಗರೆ ಗೊಜ್ಜು
ಗಡಿಬಿಡಿಯಲ್ಲಿ ಕೆಲಸಕೆ ಸಜ್ಜು.
ಕೇಳೋರಿಲ್ಲ ಕರೆಂಟು ಬಿಲ್ಲು
ರೇಷನ್ ಅಂಗ್ಡಿಲಿ ಸಾಲಾಗಿ ನಿಲ್ಲು.
ಚೀಟಿ ದುಡ್ಡು ಹೊಂದಿಸಿ ಕಟ್ಟು
ಚಪ್ಪಲಿ ತಗೋಬೇಕು ಎರಡ್ ದಿನ ಬಿಟ್ಟು.
ಮಕ್ಕಳ ಸ್ಕೂಲ್ ಫೀಸ್ ಕಟ್ಲೇಬೇಕು
ಇದ್ದುದರಲ್ಲೇ ಜೀವನ ನೂಕು.
ಅನ್ನ ಸಾರು, ಒಣ ಮಿನ್ ದಿವಸ
ಹಬ್ಬ ಬಂದ್ರೆ ಮಾಡು ಪಾಯ್ಸ.

- ಶ್ರೀಗೋ.

17 Oct 2017, 12:43 pm

ಹೆಣ್ಣೆಂಬ 'ಪದಕೆ'

ಹೆಣ್ಣೆಂಬ 'ಪದಕೆ' ಅತೀ ಬೇಡಿಕೆ
ಅವಳ‌ ಬಗೆಗೆ ಭಾಷಣಗಳಲಿ ಭಾರಿ ಹೊಗಳಿಕೆ
ಅವಳೇ ಆಗ ಜಗದಲಿರುವ ದೇವ ಕನ್ನಿಕೆ
ಮನದಲಿ ಹುಟ್ಟುವ ಕಾವ್ಯಕ್ಕೆಲ್ಲ ಅವಳೇ ಮಾಲಿಕೆ

ನಿಜದಲ್ಲಿ ಅನಿಷ್ಟಕ್ಕೆಲ್ಲ ಅವಳೆ ಕಾರಣ ಎಂಬ ಹೇರಿಕೆ
ಸಿಕ್ಕ ಸಿಕ್ಕಲೆಲ್ಲ ಅವಳ ಮೇಲೆ ಕಂತೆ ಕಂತೆ ತೆಗಳಿಕೆ
ಏತಕೆ ಮಾತಿನಲಿ ಅವಳ ಮೇಲೆ ಕಾಳಜಿಯ ತೋರಿಕೆ
ಇಟ್ಟಿದ್ದವೇನು ನಮ್ಮನ್ನು ಮಾತಲ್ಲಿ ಉದ್ದರಿಸಿರೆಂದು ಬೇಡಿಕೆ

ಬೇಡಿಬಂದಿಲ್ಲ ನಾವು ನೀವು ಕೊಡುವ ದೆವ್ವ ದೇವರ ಪಟ್ಟಕ್ಕೆ
ಮೀರಿ ಹೋಗಬಲ್ಲೆವು ಹೆಣ್ಣೆಂದು ಎಳೆದಿರುವ ಅಂಕೆ ಶಂಕೆ
ನಮ್ಮೊಳಗೂ ನೋವುಂಟು, ಇಡೀ ಜಗಕ್ಕೇನೆ ಹಂಚುವುದಕ್ಕೆ
ಕನಸು,‌ಕಣ್ಣೀರ ಕೂಡಿಟ್ಟು ಬದುಕುವೆವು ಇನ್ಯಾರ ನಗುವ ನೋಡುವುದಕ್ಕೆ

ಹೆಣ್ಣ‌‌‌ ಮೇಲೆಯೇ ಎರಗುವರು ಯಾರುಯಾರದೊ‌ ದ್ವೇಷಕ್ಕೆ
ಹೆಣ್ಣಿನ ಮಾನ‌ಹರಣವೆ ಸರಕಾಯಿತಲ್ಲ ಹಲವು ಯುದ್ಧ‌ ‌ಗೆಲುವುದಕ್ಕೆ
ಕೊಡುವರು ಸುಖದುಃಖ, ಕಷ್ಟನಷ್ಟ, ಏಳುಬೀಳು‌ ಎಲ್ಲದಕ್ಕೆ ಮೂಲವೆಂಬಂತೆ ಹೋಲಿಕೆ
ಅವಳಾಗಿರುವಳು ಆಡಲು ಸಿಗುವ ಕಾಲ್ಚೆಂಡಿನಂತೆ ಏತಕೆ

ನಿಮ್ಮಲ್ಲಿ‌ ನಮ್ಮೆಲ್ಲರದ್ದು‌ ಒಂದು ಸಣ್ಣ ಕೋರಿಕೆ
ನಮಗಿಲ್ಲ ದೇವರು ದೇವತೆಯಂಬ‌ ಪಟ್ಟದ ಬಯಕೆ
ಬೆಳಕಿಲ್ಲದ ಕತ್ತಲೊಳಗೆ ಪೂಜಿಸದರೆ ಹೊಗಳಿದರೆ ಸಾಕೆ
ಸಾಕೆಮಗೆ ನೀವು ಹೆಣ್ಣಿಗೂ‌ ಮಾನವಳ‌ ಸ್ಥಾನ ನೀಡಿ ತೋರಿದರೆ ಹೆಗ್ಗಾರಿಕೆ

- ಶ್ರೀಕಾವ್ಯ

17 Oct 2017, 11:56 am

ಪ್ರೇಮ ಘಮ !

ಇದು ಹೊಸ ಪ್ರೇಮ ಪರ್ವವೇನೋ
ನಿಜ ಒಂದು ತಿಳಿಯೇ ನಾನು,
ಕಾರ್ಮೋಡ ಕವಿದ ಬಾನು
ಕೋಲ್ಮಿಂಚು ಸುಳಿದ ತನುವು.

ಆ ಬೆಟ್ಟದಲ್ಲಿ ನವಿಲೊಂದು ಕುಣಿದು
ಜೊತೆಗಾತಿ ಹುಡುಕಿದಂತೆ,
ಈ ನಿಟ್ಟಿನಲ್ಲಿ ನನ್ಮನವು ತಣಿದು
ಹಿತವಾಗಿ ನರಳಿತಂತೆ.

ನಿನ್ನ ಪ್ರೀತಿ ಒಲವು
ಆಳವರಿಯದ ಕೊಳವು,
ಬಿಡಿಸಿಕೊಳ್ಳಲಾಗದ ಸೆಳವು,
ದೂರ ಪ್ರೇಮದ ಹೊಳವು.

ಬರೆಯಲೇ ಪ್ರೇಮ ಕವನ
ತಣಿಯಲಾರದು ಬೆಂದ ಮನ
ನೀಡು ಇತ್ತ ಕೊಂಚ ಗಮನ
ಬೀಡು ಬಿಟ್ಟ ಲವಂಚದ ಘಮ !

- ಶ್ರೀಗೋ.

17 Oct 2017, 11:10 am

ಸಪ್ತಪದಿ

ಸಪ್ತಪದಿ
------------
ಒಂದು ಸಲ ಹೃದಯದ ಬಡಿತ ಕೇಳು
ಅದು ನಾಲಿಗೆಯಿಂದ ಜಾರಿದ ಶಬ್ದಗಳ ಹಿಂದಿನ ನೋವು.

ಒಂದು ಸಲ ಮನವ ಕದ್ದು ನೋಡು
ತನು ಓಲೈಸುವ ಝೇಂಕಾರದ ನಾದ ನಿನಾದ ಸದ್ದು.

ಒಂದು ಸಲ ಕಣ್ಣು ಮಿಟುಕಿಸಿ ನೋಡು
ಕಾಮನ ಎದೆಯೊಳಗೆ ತೂರಿಬಿಟ್ಟ ಶ್ರಮದಾನದ
ಬಿಂದುಗಳು.

ಒಂದು ಸಲವಾದರೂ ಹಿಂಬಾಲಿಸಿ ಬಿಡು
ಸಪ್ತಪದಿಯೊಳಗಿನ ಹಾಸುಹೊಕ್ಕಾದ ಆ
ಶ್ರೀಮಂತಿಕೆಯ ನೋಡು.

ಒಂದು ಸಲವಾದರೂ ಭುಜಕೆ ಭುಜವನ್ನಿಡು
ನಾನು ಹಾಕುವ ಹೆಜ್ಜೆಗಳಲ್ಲೂ ನಿನ್ನ ಗೆಜ್ಜೆನಾದ
ಕುಣಿಯುವುದು.

ಒಂದು ಸಲವಾದರೂ ಮೃದುವಾಗಿ ಅಪ್ಪಿಕೋ
ಅನ್ನವನ್ನಿಕ್ಕಿದ ನನ್ನಿನಿಯನೂ ನಿನ್ನ ನಾಮ
ಜಪಿಸುವನು.

- --ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

17 Oct 2017, 11:01 am