Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಸೋಲನ್ನೆಂದಿಗೂ ನಿ ದೂಷಿಸಬೇಡ
ಅದೇ ನಿನ್ನ ಗೆಲುವಿಗೆ ಪ್ರೇರೇಪಿಸುವ ಅಸ್ತ್ರ
ಕೊನೆಗೆ... ಅದೇ ನೀಡುವುದು ನಿನಗೆ
ಗೆಲುವಿನ ಉಡುಗೊರೆಯ
ಓದು ನೀ ಸೋತು ಗೆದ್ದವರ ನೀತಿ ಕಥೆಗಳ
ತಿಳಿಯುವುದು ನಿನಗೆ ಸೋಲಿನ ಕಾರಣಗಳ
ಅವರ ಸೋಲಿನ ಕಾರಣಗಳ ತೆಗೆದುಕೊ
ನಿ......................ಸ್ಫೂರ್ತಿಯಾಗಿ
ಎಂದಿಗೂ ನೀ ಗೆದ್ದು ಸೋಲವಂತಗಾಗ ಬೇಡ
ಅದೆಂದಿಗೂ ನಿನಗೆ ಉಚಿತವಲ್ಲ
ಗೆದ್ದು ಸೋತ ಆ ನೋವು ಮತ್ತೆ ಗೆಲ್ಲುವವರೆಗೆ
ಬಾದಿಸುವುದು... ಬೆನ್ನತ್ತಿದ ಬೇತಾಳದಂತೆ
ಎಲ್ಲಾ ಸಾಧಕರು ಸೋಲುಂಡು ಗೆದ್ದವರೆ
ಸೋಲೆ....... ಕೊನೆಯಲ್ಲ
ಸೋಲು ಕತ್ತಲಾದರೆ ಗೆಲುವು ಹಗಲು
ಕತ್ತಲೋದ ಮೇಲೆ ಗೆಲುವೆನ್ನ ಹಗಲು
ಬರಲೇಬೇಕು
ಸೋಲೆ.........ಗೆಲುವಿನ ಸ್ಫೂರ್ತಿ
:--- ಮಂಜು
- ಮಂಜು
23 Sep 2017, 09:30 pm
ಸುರಿಯುವ ಮಳೆಹನಿಗಳಲ್ಲಿ
ಬೀಸುವ ತಂಗಾಳಿಯಲ್ಲಿ
ಸಾಗರದ ಅಲೆಗಳಲ್ಲಿ
ನಿನ್ನ ಪ್ರೀತಿಯ ಮಾತುಗಳು
ತೇಲಿಹೋಗಿವೆ ನಿನ್ನ ನೆನಪಿನಲ್ಲಿ!
ಪ್ರಿಯಾಂಕ✍
- ಪ್ರಿಯಾಂಕ
23 Sep 2017, 06:41 pm
ಕನಸು ಕಾಣುತಲಿರುವೆ ಒಲವೇ..
ಕನಸಲ್ಲಿ ನೀನೊಮ್ಮೆ ಬರಬಾರದೆ...
ಸನಿಹ ನೀನಿರದೆ ಕಣ್ಣೀರು ಜಿನುಗಿದೆ..
ಮೌನ ಮನಸು ಹಠವ ಮಾಡುತ್ತಿದೆ..
ಬಳಿ ಬಂದು ನೀನೊಮ್ಮೆ ನಿಲ್ಲಬಾರದೆ...
ಪ್ರಿಯಾಂಕ✍
- ಪ್ರಿಯಾಂಕ
23 Sep 2017, 11:30 am
ಹಗಲು ರಾತ್ರಿಗಳು
ದೇಶದ ಪ್ರೀತಿಗೆ..
ಮನಸು ಮುರಿಯುವುದು
ವೈರಿಗಳ ಅಟ್ಟಹಾಸಕೆ!
ಬಿಸಿಲು-ಮಳೆ, ಚಳಿ-ಗಾಳಿಯಲ್ಲೂ
ವೀರಯೋಧರ ಸೆಣಸಾಟ..
ಸಾವಲ್ಲೂ ನೋವಲ್ಲೂ
ಎಚ್ಚರ ತಪ್ಪದ ಹೋರಾಟ!
ಪ್ರತಿ ದೇಹದ ಉಸಿರಿನಲ್ಲಿ
ಬೆರೆತುಹೋಗಿದೆ ಕನ್ನಡಭಿಮಾನ..
ದುಷ್ಟ ವೈರಿಗಳ ಮೋಸದಿಂದ
ಮಣ್ಣಾದ ಹೆಮ್ಮೆಯ ಕನ್ನಡಿಗ!
ಪ್ರತಿ ಜೀವದ ಎದೆಬಡಿತ
ದೇಶದ ಮೇಲಿನ ಅಭಿಮಾನ..
ದೇಶ ಕಾಯೋ ಸೈನಿಕ
ನಿಮಗಿದೋ ನಮ್ಮ ನಮನ!
ಪ್ರಿಯಾಂಕ✍.
- ಪ್ರಿಯಾಂಕ
22 Sep 2017, 07:13 pm
ಚುನಾವಣೆಗೆ ನಿಂತಾಗ
ಎಲ್ಲ ಅಭ್ಯರ್ಥಿಗಳಿಗೂ ಇರುತ್ತದೆ
ನಿರ್ದಿಷ್ಟ ಚಿಹ್ನೆ , ಗುರುತು
ಗೆದ್ದ ನಂತರ ಇರುವುದಿಲ್ಲ
ಗೆಲ್ಲಿಸಿದವರ ಗುರುತು!
(ಎಸ್.ಡುಂಡಿ)
- ಶಾಫಿ
22 Sep 2017, 05:05 pm
ಬಲ್ಲವರೇ ಬಲ್ಲರು ಬೆಲ್ಲದ ರುಚಿಯ
ನಾನೇನು ಬಲ್ಲೆ ಸಿಹಿ ಕಹಿಯಾ
ತಿಂದರೆ ಕರಾರಾಗಿ ಹೇಳುವೆನಯ್ಯ
ತಿನ್ನದೆ ಕೆತ್ತಿರುವೆ ಸಿಹಿ ಕಲ್ಪಿಕೆಯ
ಅನುಭವಿಸಿರುವೆ ವಾಸನೆ ಸವಿಯ
ಆದ್ರೂ ರುಚಿಸಲಾಗಲಿಲ್ಲ ನೋಡಯ್ಯ
ದೂರದ ಬೆಟ್ಟ ಚಂದಯ್ಯ
ಅದರ ತುಂಬ ಮುಳ್ಳಯ್ಯ
ಕಹಿಯೇ ಇದರ ತಾತ್ಪರ್ಯವಯ್ಯ
ಹೇಳಲು ಕೇಳಲು ಹಿತಯ್ಯ
ನೋಡಲು ಮಾಡಲು ಕಷ್ಟಯ್ಯ
ಇದಕ್ಕೆ ನೀತಿ ನಿಯಮ ಕನಯ್ಯ
ಮೋಹ ಪ್ರಕೃತಿ ಸಹಜವಯ್ಯ
ಭೋಗ ಯೋಗವಯ್ಯ
ಯೋಗ ಉಂಡವರೆ ದೊಡ್ಡವರಯ್ಯ
ಪ್ರಾರ್ಥನೆ ಭಕ್ತಿ ನೆಮ್ಮದಿದಾಯಕವಯ್ಯ
ಅದರ ದಾರಿಯೇ ಮುಕ್ತಿದಾಯಕವಯ್ಯ
ನಮ್ಮ ಹಿರೇಉಳ್ಳಿಗೇರಿ ಕರೆಮ್ಮಳ ಭಕ್ತರು ಇದನ್ನು ತಿಳಿದಿರಲಯ್ಯ
- MB
21 Sep 2017, 08:13 pm
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ …
ಮರೆಯದೆ ತರುವೆ!ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!
- ವಿನೋಬ ಕೋಟೆ
21 Sep 2017, 06:57 pm
ಅಂತರಂಗದ ಪುಟಗಳು ಹಾಗೆಯೇ..!!
-ತೆರೆದುಕೊಳ್ಳುವುದಿಲ್ಲ..
ಕಟ್ಟಿ ಕೂಡಿ ಕಳೆಯುವುದಕ್ಕೆ ಬರುವುದಿಲ್ಲ
ನೂಕು ನುಗ್ಗಲು ದೂಕಿ ಹೊರಡುವುದಿಲ್ಲ
ಪ್ರಶ್ನೆಗಳಿಗೆ ಉತ್ತರ ಬೇಡುವುದಿಲ್ಲ.
ನೆನಪುಗಳ ನಾವೆಯಲ್ಲಿ ಒಂಟಿ ಪಯಣ
ಉಬ್ಬಿದ ಕೊರಳ ಸೆರೆಗೆ ಉಸಿರ ಸಾಂತ್ವನ
ಅಂತರಂಗದ ಪುಟಗಳು ಹಾಗೆಯೇ...!
-ತೆರೆದುಕೊಳ್ಳುವುದಿಲ್ಲ...
ಬೇಕು ಬೇಡಗಳ ಪ್ರಶ್ನೆಯೇ ಇಲ್ಲಾ
ಮೌನದ ಪರಿಧಿಯೊಳಗೆ ಮುಚ್ಚಿಕ್ಕೊಳ್ಳುತ್ತದೆ
ಭಾವದ ಅಲೆಗಳಲ್ಲಿ ತನ್ನ ತಾನು ಬಡಿದುಕೊಳ್ಳುತ್ತದೆ
ಹಿರಿದು ಕಿರಿದುಗಳ ಬರಿದಾಗಿಸುತ್ತದೆ
ಹೃದಯದ ತುಮುಲಕ್ಕೆ ಅಟಮಟಿಸುತ್ತದೆ.
ಅಂತರಂಗದ ಪುಟಗಳು ಹಾಗೆಯೇ..!!
-ತೆರೆದುಕೊಳ್ಳುವುದಿಲ್ಲ..
- ವಿನೋಬ ಕೋಟೆ
21 Sep 2017, 06:54 pm
ನೀನೊಲಿದ ಆ ಕ್ಷಣ...
ಮನದೊಳಗಿನ ಮಾತೊಂದು ಹೊರ ಬರುವುದರಲಿತ್ತು,
ನಿನ್ನ ಬಿಸಿಯುಸಿರ ಅಧರವು ನನ್ನ ತುಟಿಯನ್ನು ಮುಚ್ಚಿತ್ತು,
ಭಾವನೆಗಳಿಗೆ ಬಾಗಿಲು ಹಾಕಿ, ಬಯಕೆಯ ಬೇಲಿಯೊಳಗೆ ಬಂಧಿಯಾಗಿರಲು,
ಶರವೇಗದಿ ಕಂಪಿಸಿದ ನಿನ್ನೆದೆ ಮಿಡಿತಕೆ,
ಮೊದಲ ಸಲ ನಿಂತಿತು ನನ್ನೆದೆ ಬಡಿತ ಒಂದು ಕ್ಷಣ,
ಅದೇ ...
ನೀನೊಲಿದ ಆ ಕ್ಷಣ...
ಇಂತಿ ನಿನ್ನ ಪ್ರೀತಿಯ...
- ವಿನೋಬ ಕೋಟೆ
21 Sep 2017, 06:53 pm
ಸುತ್ತ ಸಮಾಜ ಕೊಂಕಾಡುತಿರಲು
ಮನಸು ಮುದುಡಿ ಮಂಕಾಗಿದೆ
ಆಸೆ ಹತಾಶೆಯ ಹಾದಿ ಹಿಡಿದಿರಲು
ಜೀವ ಬಸವಳಿದು ಬೆಂಡಾಗಿದೆ
ಸೋಲ ಸುಳಿಯಲ್ಲಿ ಕನಸುಗಳು ಮುಳುಗಿ
ಬಾಳೆಂಬ ದೋಣಿ ಬಿರುಗಾಳಿಗೆ ಸಿಲುಕಿ
ನೀರಾಚೆ ಬಿದ್ದ ಮೀನಂತಾಗಿದೆ ಬದುಕು
ಕಣ್ಣಂಚಲಿ ಹನಿಯಾಗಿ ನಿಂತಿದೆ ಕೊರಗು
- ವಿನೋಬ ಕೋಟೆ
21 Sep 2017, 06:52 pm