Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಂಬನಿಯ ಭಾಷೆ

ಬಿಕ್ಕಿ ಬಿಕ್ಕಿ ಅಳುತ್ತಿದೆ ಮನಸು ನೆಚ್ಚಿನ
ಜೀವ ಜೊತೆಗಿಲ್ಲವೆಂದು...!!
ಕಣ್ಣು ನೋಡಲು ಬಯಸದವರು ಕಣ್ಮರೆಯಾಗುತ್ತಿಲ್ಲವೆಂದು...!!

ಏನೆಂದು ಬರಿದಿರುವೆ ದೇವರೇ ನನ್ನ ಹಣೆಬರಹವನ್ನು...!!
ನನಗೆ ತಿಳಿಯದ ಕಂಬನಿಯ
ಭಾಷೆಯಲ್ಲಿ...!!

ನನ್ನ ನಗುವಿಗೆ ಮನಸೋತ ಕಂಬನಿ ಅದನ್ನು ಕದ್ದು ಅದರ ಜಾಗದಲ್ಲಿ ಬಂದು ಸೇರಿಕೊಂಡಿದೆ ನನ್ನ ಮಾತನ್ನು ಬಚ್ಚಿಟ್ಟು ಮೌನವನ್ನು ನನ್ನಲ್ಲಿ ತುಂಬಲೆಂದು.......!!!!!!!!

- ಚುಕ್ಕಿ

16 Sep 2017, 01:18 pm

ಚೆಂದುಟಿಯ ಅಂಚಿನಲಿ ನಗುವಿರಲಿ ಶಾಶ್ವತ

ನೊಂದಿರುವ ಜೀವವಿದು ನೀಡದಿರು ನೋವ
ನಿನ ಹೆಸರ ಜಪಿಸುತಿದೆ ಪ್ರತಿಕ್ಷಣವು ಜೀವ
ಮನವೆಂಬ ಮನೆಯಲಿ ಪ್ರೀತಿಯನು ಉಳಿಸು
ಮರುಭೂಮಿ ಹೃದಯಕೆ ಒಲವ ನೀರುಣಿಸು

ಮನೆಯ ಹಿಂಬಾಗಿಲಲಿ ಮುದುಡುತಿದೆ ತಾವರೆ
ಸೌರಭವ ಸೂಸಲು ಬಯಸುತಿದೆ ಅಕ್ಕರೆ
ಅರಿವೊಂದು ಪ್ರಶ್ನಿಸಿದೆ ಮನವನ್ನು ಪ್ರತಿದಿನ
ಉರಿವ ಗಾಯಕ್ಕೇಕೆ ಉಪ್ಪಿನೊಡೆ ಒಡತನ

ನೊಂದ ಮನ ಬೆಳೆಸಿದೆ ಏಕಾಂತದೊಡನೆ ಸ್ನೇಹ
ವಿರಹದಲಿ ಉರಿಯುತಿದೆ ಧೃಡವಾದ ದೇಹ
ಕಣ್ಣಂಚಿನಲಿ ತೊಟ್ಟಿಕ್ಕುತಿದೆ ಕಂಬನಿ
ಕಾಣದಂತೆ ಮುಚ್ಚಿಡಲಿ ಜಿನುಗುತಿಹ ಇಬ್ಬನಿ

ನೋವಿರಲಿ ನನಗೆ ನಲಿವಿರಲಿ ನಿನಗೆ
ಸಂಕ್ಷಿಪ್ತ ಜೀವನದ ಜಂಜಾಟದೊಳಗೆ
ದೇವನಿತ್ತ ಜೀವವಿದು ನಿನಗಾಗೆ ಅರ್ಪಿತ
ಚೆಂದುಟಿಯ ಅಂಚಿನಲಿ ನಗುವಿರಲಿ ಶಾಶ್ವತ..

- ಇಂತಿ ನಿನ್ನ ಬಂಗಾರ

- ನಾಗು

16 Sep 2017, 10:05 am

ಕಳಕೊಂಡು ದು:ಖಿಸಬಾರದು

ಕಳೆದದ್ದು ದುಃಖ ತರಿಸದೆ ಹೋಗದು
ಸಿಕ್ಕಿದ್ದು ಸಂತೋಷ ತರಿಸದೆ ಇರದು
ಸಿಕ್ಕಿದ್ದು ಕಳೆದಿದ್ದು ಯಾವಾಗಲೂ ನೆನಪಾಗಿರುವವು
ಒಮ್ಮಿಲ್ಲ ಒಮ್ಮೆ ಅವಲೋಕನಕ್ಕೆಹಚ್ಚದೆ ಇರಲಾರವು!

ಕಳೆದು ಕೊಂಡಿರುವ ಮೌಲ್ಯ ಕಣ್ಣೀರಾಗುವದು
ಸಿಕ್ಕಿದ್ದು ಪಾಲಿಗೆ ಬಂದ ಪಂಚಾಮೃತವಾಗುವದು
ಕಳೆದದ್ದು ಪಡೆಯಲು ಕಾಲಮೀರಿರುವದು
ಸಿಕ್ಕಿದ್ದು ಉಳಿಸಿಕೊಳ್ಳಲು ಮಾರ್ಗ ಕಂಡುಕೊಳ್ಳುವುದು

ಕಳೆದದ್ದು ಪಡೆಯಲು ಪ್ರಯತ್ನಿಸಿದರೆ ಜೀವನ ನರಕವಾಗುವದು
ಸಿಕ್ಕಿದ್ದು ಉಳಿಸಿಕೊಳ್ಳದೆ ಹೋದರೆ ಬದುಕ್ಕಿದ್ದು ವ್ಯರ್ಥವಾಗುವುದು
ಕಳೆದದ್ದು ಪರರಿಗೆ ಒಳ್ಳೆಯದನ್ನು ಮಾಡಿದರೆ ಅದಕ್ಕಿಂತ ಉತ್ತಮ ಯಾವುದು?
ಸಿಕ್ಕಿದ್ದು ಪರರಿಗೆ ಕೆಟ್ಟದ್ದುಮಾಡಿದರೆ ಅದಕ್ಕಿಂತ ಕೀಳಾದದ್ದು ಯಾವುದು?

ಕಳೆದದ್ದು ಮರೆಯಲು ದೂರ ಇರಬೇಕಾಗುವುದು
ಸಿಕ್ಕಿದ್ದು ಶಾಶ್ವತವಾಗಿರಿಸಲು ಪ್ರೀತಿಸಬೇಕಾಗುವುದು
ಕಳೆದದ್ದು ಸಿಕ್ಕಿದ್ದು ಒಂದೇ ಎಂಬಂತೆ ಇದ್ದರೆ ಅದ್ಯಾವ ಕೊಂಕು ಕಾಣದು ಹಿರೇಉಳ್ಳಿಗೇರಿ ಕರೆಮ್ಮದೇವಿ

- MB

15 Sep 2017, 08:35 pm

ನಮ್ಮವರು

ನಮ್ಮವರು ನಮ್ಮವರು
ಕಷ್ಟ ಬಂದಾಗ ನಗುವರಿವರು
ಸುಖ ಬಂದಾಗ ಕುಣಿವರಿವರು
ಎದುರಿಗೆ ಕಂಡು
ಕದ ಹಾಕಿದವರು
ಸಿಹಿ ತಿಂಡಿ ಬಡಿಸಿ
ಕಹಿಯನ್ನು ಅರೆದವರಿವರು.
ನೋಡಲು ಏನು ಅರಿಯದವರು
ಬಹಳ ಬೇಗ ಬಡ್ಡಿ ಕೊಡೆಂದರು.
ಯಾರಿವರು ನಮ್ಮ ವರು
ಹುಷಾರ್ ಹಾಸ್ಯವೇ
ನಮ್ಮವರು , ನಮಗೆ ಅರಿಯದವರು

ಆದಿತ್ಯ

- Aditya Hegde

15 Sep 2017, 03:13 pm

ಪ್ರೀತಿಯ ಚಿಗುರು

( ಪ್ರೀತಿಯ ಚಿಗುರು)

ದೇಹವೆಂಬ ಭೂಮಿಯಲ್ಲಿ
ಮನಸ್ಸು ಎಂಬ ಉಳುಮೆ ಮಾಡಿ
ಕನಸು ಎಂಬ‌ ಬೀಜವನ್ನು ಬಿತ್ತಿ.
ಹ್ರುದಯವೆಂಬ ಮೊಳಕೆ ಯೊಡೆಯಲು
ಉಸಿರು ಎಂಬ ಮಳೆಹನಿಯನ್ನು
ಸುರಿಸು ನೀನು.

ಗಿಡವಾಗಿ ಬೇಳೆದ ಪ್ರೀತಿ.
ಮರವಾಗಿ.
ಜೀವ ಜೆಂತುಗಳಿಗೆ ಉಸಿರನ್ನು ಧಾರೆಯಾಗಿ .
ಪ್ರೀತಿಯ ನೆಲೆಯನ್ನು ಶಾಶ್ವತವಾಗಿ. ಹರಡುವೆ ನೀ ಇನ್ನು .

ನಿನಗಾಗಿ‌ ನಾನು ಧರೆಯಲ್ಲಿ ಇನ್ನು
ಪ್ರಕ್ರುತಿಯಾಗಿ ಜನಿಸಿ .
ನಿನ್ನ ಉಸಿರಲ್ಲಿ ಲೀನವಾಗಿರುವ ಪ್ರೀತಿಯೆಂಬ ಜಗತ್ತನ್ನು ನನ್ನೊಳಗೆ
ಲೀನ ವಾಗಿಸಿ ಮನದೊಳಗೆ ಅದಕ್ಕೆ ಅರಮನೆಯನ್ನು ನಿರ್ಮಿಸಿ
ಪ್ರೀತಿಯೆಂಬ ಲೊಕದಲ್ಲಿ ಓಟ್ಟಾಗಿ ಜೀವಿಸುವೆವು ನಾವು
ಸದಾ ...ಸದಾ....ಹಸಿರು ಇದೆ ನಮ್ಮೆಲ್ಲರ ಉಸಿರು......

(ನೆನಪಿನ ನಾವಿಕ ಸಂತೋಷ್)

- ಸಂತೋಷ್//ಜೀತು

15 Sep 2017, 01:34 pm

ಹೊಳ..... [ಮನಸ್ಸು]

ಅಂದು ನಾ ಬಡತನದ ಸುಳಿಯಲ್ಲಿ......
ಸಿಲುಕಿ ನಲುಗುವಾಗ ಆ ಸುಳಿಯಿಂದ......
ಬಿಡಿಸಿ ಅದರಿಂದ ಹೊರಗೆ ತಂದಾಗ
ನಾ... ಮೆಚ್ಚಿದ್ದೆ ಅವನ ಮನಸ್ಸಿನ
ಹೃದಯವಂತಿಕೆಯ.............

ಸಂಸಾರದ ದೋಣಿ ಸಾಗಿಸಲು.........
ನಾ .... ಹೆಣಗುತ್ತಿರುವಾಗ ಅಂದು ಅವನು
ಕೈಗೆ ಭಲ ನೀಡಿ ಸಹಕರಿಸಿದಾಗ.....
ನಾ..... ಒಪ್ಪಿಕೊಂಡಿದ್ದೆ ಅವನ ಮನಸ್ಸಿನ
ಗುಣವಂತಿಕೆಯ.................

ನನಗೆ ಗೊತ್ತಿಲ್ಲದೆ ಮನಸ್ಸು ಸಾಗುತ್ತಿತ್ತು
ಅವನ....... ಮನಸ್ಸಿನೆಡೆಗೆ.........
ಅದರ ವೇಗ ......ತಡೆಯಲಾರದೆ. ನೀಡಿದ್ದೆ
ನನ್ನ............... ಮನಸ್ಸ ಅವನಿಗೆ

ಜೋಡಿ ಹಕ್ಕಿಯ..ಹಾಗೆ ಅಲ್ಲಿಂದ ಇಲ್ಲಿಗೆ
ಇಲ್ಲಿಂದ ಅಲ್ಲಿಗೆ ಹಾರುತ್ತಿತ್ತು..... ಮನಸ್ಸು
ಆ ದ್ಯಾವ......ದುರುಳ ಮುನ್ಸೂಚನೆಗೊ
........ ತಿಳಿಯದು

ಅವನ ಮನಸ್ಸಿನ ನಂಬಿಕೆಗೆ .........
ಕುರುಡಗಿತ್ತೇನೋ ಅಂದು ನನ್ನ ಮನಸ್ಸು
ಅವನಿಗೆ ಬೇಕಾದ್ದನ್ನ ಪಡೆದುಕೊಂಡು.......
ಕೈ ಬಿಟ್ಟಿದ್ದ ನನ್ನ ಮನಸ್ಸನ್ನ..ನಡು ಬೀದಿಯಲ್ಲಿ

ಅಂದೆ ಅರಿವಾದದ್ದು...........ನನಗೆ
ನಾ ಕಂಡದ್ದು ಅವನ ಹೊರಮನಸ್ಸ..........ನ್ನ
ಹೊರತು ಅವನ ಹೊಳ ಮನಸ್ಸನ್ನಲ್ಲ......ವೆಂದು



ಮಂಜು

- ಮಂಜು

14 Sep 2017, 10:00 pm

ಯೌವನ

ಒಲವು ಗೆಲುವಿನ ಸಾಗರದಲಿ ತೆಲತಾ
ನಯನಗಳು ಒಂದನ್ನೊಂದು ಕೂಡತಾ
ಮನಸಿನ ಮೂಲಕವೇ ಮಾತಾಡತಾ
ಎದೆಗೂಡಿನ ಹಾಡು ಆಲಿಸುತಾ
ಪ್ರೇಮ ಪ್ರಪಂಚದಲಿ ತೆಲಾಡತಾ
ಕನಸಿನಲ್ಲಿ ಕಲ್ಪನೆಯ ಕೆತ್ತುತಾ
ಭಾವನೆಗಳಿಗೆ ಪುಷ್ಟಿ ನೀಡತಾ
ಮೌನದಲ್ಲೆ ಮಗ್ನವಾಗತಾ
ವಿರಹಗಳಿಗೆ ವೇದನೆ ಪಡುತಾ
ಅರೆ ಪ್ರಜ್ಞಾವ್ಯವಸ್ಥೆಯಲ್ಲಿರುತಾ
ತನುವಿಗೆ ಶಿಕ್ಷೆ ಕೊಡತಾ
ಕಣ್ಣಾಮುಚ್ಚಾಲೇ ಆಡತಾ
ಭಯ ಅಭಯ ಒಡಮೂಡಿಸಿಕೊಳ್ಳತಾ
ಸಂಶಯ ಸಲ್ಲಾಪದಲಿ ಕಾಲುಜಾರುತಾ
ಸಂಯಮ ತಾಳ್ಮೆ ಕಳೆದುಕೊಳ್ಳತಾ
ಮೋಹ ಮಾಯೆಗೆ ಬೀಳತಾ
ಆಲಸ್ಯತನದಿಂದಿರುತಾ
ಸ್ವಾರ್ಥತೆ ಮೈಗೂಡಿಸಿಕೊಳ್ಳುತಾ
ಹೊಸ ಹೊಸ ಅನುಭವ ಪಡೆಯುತಾ
ಕಿಶೋರ್ ಪಾಠ ಕಲೆಯುತಾ
ಬೇಕು ಬೇಡಗಳನ್ನು ಎದುರಿಸುತಾ
ಸ್ವಾಭಿಮಾನ ಬೆಳಸಿಕೊಳ್ಳುತಾ
ಸ್ವತಂತ್ರತೆಯಿಂದಿರಲು ಪ್ರಯತ್ನಿಸುತಾ
ತಪ್ಪು ಒಪ್ಪುಗಳಿಗೆ ಹಿರೇಉಳ್ಳಿಗೇರಿ ಕರೆಮ್ಮಳನ್ನು ನೆನೆಯುತಾ
ಗುರಿಕಡೆ ಸಾಗುವುದೇ ಯೌವನ

- MB

14 Sep 2017, 09:22 pm

ಎಸ್ ಎಸ್

ಕಣ್ಣಂಚಿನಲಿ ಕೊರೆಯುವ
ಕೋಲ್ಮಿಂಚಿನಂತ ಕುಡಿನೋಟ
ಕಣ್ಣುಬ್ಬಲಿ ಹೊಳೆಯುವ
ಕಾಡಿಗೆಯ ಕಿರುನೋಟ
ಕಣ್ಕುಕ್ಕಿ ಕಾಡುತ್ತಿದೆ ಎನ್ನ ಮನವಾ!

ಬೈತಲೆಯ ಬಯಲಲ್ಲಿ
ಭಿನ್ನಾಣದ ಬಿರುದಾವಳಿ
ಮಸ್ತಕದ ಮಧ್ಯೆದಲಿ
ಸಂಸ್ಕೃತಿಯ ಸಿಂಧೂರಾವಳಿ
ನನ್ನೊಕ್ಕು ಬೇಡುತ್ತಿದೆ ನಿನ್ನ ಮನವಾ!!

---- ಚೌಡಪ್ಪ.ಪಿ
ಗಂಗಮ್ಮನಹಳ್ಳಿ.

- Chowdappa P

14 Sep 2017, 08:27 pm

ನಿನಗಾಗಿ

ನಿನಗಾಗಿ ಬರೆದೆನು ಕವಿತೆ
ಅದರಲಿ ನನ್ನನೇ ಮರೆತೆ
ಹೃದಯದ ಪಟ್ಟದರಸಿ ನಾನು
ನನ್ನಾಸೆ ಅರೆಯಲಾರೆ ನೀನು

ಕುರುಡು ಕನಸಿಗೂ ನಿನ್ನದೇ
ನೆನಪಿನ ಚಟುವಟಿಕೆ
ನೀ ಬರಲು ಸನಿಹದಲಿ
ಎದೆಯಲಿ ನೂರಾರು ಬಯಕೆ

ಪ್ರೀತಿ ಬಯಸಿದ ಹೃದಯವೀಗ
ತಪ್ಪು ಮಾಡಿದೆ
ಅರಸಿ ಹೋದ ಮನಸಿಗೀಗ
ಕಳೆದುಹೋಗಿದೆ

ಭಾವತುಂಬಿ ಹೇಳಿದ
ಮಾತೀಗ ಮೌನವಾಗಿದೆ
ಇಷ್ಟಪಡುವ ಮನಸ್ಸು
ಹೇಳದೆ ದೂರವಾಗಿದೆ

ಕಂಗಳು ಕಂಬನಿಯ
ಮುಚ್ಚಿಡದೇ ಬೆದರಿವೆ
ಸದ್ದಿಲ್ಲದೆ ಕೆನ್ನೆ ಮೇಲೆ
ಕಣ್ಣೀರು ಜಾರೀ ಹೋಗಿವೆ

ಸಾಗುವ ದಾರಿಗೆ ನೆರಳು
ಕೂಡ ಮರೆತು ಹೋಗಿದೆ
ನೀನಿಲ್ಲದ ಕ್ಷಣ ಉಹಿಸಿಕೊಂಡು
ನೊಂದ ಬದುಕು ಶೂನ್ಯ ವಾಗಿದೆ

ಮಾನಸಾ ಎಪಿ..

- ಮಾನಸಾ ಎಪಿ

14 Sep 2017, 02:05 pm

ಸಾಕು ನಿಲ್ಲೆ

ಸಾಕು ನಿಲ್ಲೆ ಕಣ್ಣೀರೆ ಆಯಾಸವೆಂಬುದೇ
ಬರೆದಿಲ್ಲವೇ ಆ ಸೃಷ್ಟಿಕರ್ತ ನಿನ್ನ
ಹಣೆಬರಹದಲ್ಲಿ...........

ಸಾಕು ನಿಲ್ಲೆ ಕಣ್ಣೀರೆ ಎಷ್ಟು ಭಾರ ಹೊತ್ತಿರುವೆ
ನೀನು ನಿನ್ನಲ್ಲಿ ಇಳಿಸಿಕೊಳ್ಳಲು ನನ್ನ ಕಣ್ಣೆ
ಆಸೆರೆಯಾಯಿತೆ ನಿನಗೇ...............

ಕಾರವೊಂದು ಬೇಕಲ್ಲವೇ ನಿನಗೆ ನನ್ನ ದಿನನಿತ್ಯ
ನೋಡಲು ಬರುವೆ ಯಾರಿಲ್ಲವೆಂದು ನನಗೆ
ನಾನಿರುವೆಂದು ಬರುವೇ...............

ಹಿಂದೋದ ನೋವು ಮುಂದಿರುವ ನಲಿವು
ಈಗಿರುವ ಮೌನವ ನಿನ್ನಂತೆ ತಿಳಿದಿಲ್ಲ ನಾನು
ನಿನ್ನಂತೆ ನನ್ನ..............

ತಡವಾಗಿ ಬರಬಹುದು ನಗುವು
ಮಾತಿಲ್ಲದೆ ಮಲಗಿದೆ ಮನವು........

ಕೂಗುವಷ್ಟು ಶ್ರಮವಿಲ್ಲದೆ
ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ನನ್ನಲ್ಲೆ
ನೀನಿರುವೆಂದು ಕಾಣಿಸುವೆ ನನಗೆ
ಅಳುವೇ..................

- ಚುಕ್ಕಿ

13 Sep 2017, 09:11 pm