Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನನ್ನಜ್ಜಿ.......

ತಾಯಿಗಿಂತ ಅಜ್ಜಿಯ ಮಮತೆ
ಹೆಚ್ಚೆನಿಸುತ್ತದೆ ........ನಂಗೆ
ಏಕೆಂದರೆ ಅವಳು ಮೊದಲು
ತಾಯಿಯಲ್ಲವೇ......

ಅವಳ ನೆರಳಲ್ಲಿ ಬೆಳೆದೆ ನಾನು
ಅವಳು ಕಟ್ಟಿದ ಕತೆಗಳು.ಪದಗಳು
ಇನ್ನು ನನ್ನೆದೆಯಲ್ಲಿ ಜೀವಂತವಾಗಿವೆ..

ಅವಳು ಮಾಡಿಸಿದ ಎಣ್ಣೆಸ್ನಾನ
ನನಗಾಗಿ ಅವಳಿಟ್ಟದ್ದ ಕಾಳಜಿ
ಅವಳ ಮುಪ್ಪಲ್ಲು ನನಗಾಗಿ
ಅಡುಗೆ ತಯಾರಿಸಲು.....
ಅವಳೊತ್ತ ...ಕಟ್ಟಿಗೆ ಹೊರೆ

ಯಾರಾದರೂ ತಿನಿಸು ಕೊಟ್ಟರೆ
ಸೆರಗಲ್ಲಿ .... ಬಚ್ಚಿಟ್ಟು ತರುತ್ತಿದ್ದಳು
....... ನನಗಾಗಿ
ಯಾರೇ ಬಡಿದರು ಅವಳೆಂದು
ಬಡಿಯಲಿಲ್ಲ..... ನನಗೆ

ಅವಳು ಎಲೆಅಡಿಕೆ ಜಜ್ಜುವ ಶಬ್ದ
ಇನ್ನು ನನ್ನ ಕಿವಿಯಲ್ಲಿ ಬಂದು ಕೂಗುತ್ತದೆ
ಅವಳ ಕೊನೆಗಾಲದಲ್ಲಿ ಬೆನ್ನೆಲುಬಾಗಲಿಲ್ಲ
ನಾನು..................
ಕ್ಷಮಿಸಿ ಬಿಡು ಜುಂಜಜ್ಜಿ..... ನನ್ನನ್ನ
ಇನೊಂದು ಜನ್ಮವಿದ್ದರೆ ನಾ ಹುಟ್ಟುವೆ
ನಿನ್ನ ....... ಸೇವಕನಾಗಿ




---ಮಂಜು

- ಮಂಜು

06 Sep 2017, 02:37 pm

ಅವನು ಭಯ ಪಟ್ಟರೆ .......

ತನ್ನವರೆಲ್ಲರನ್ನ ಬಿಟ್ಟು
ದೇಶಕ್ಕಾಗಿ ಗಡಿಯಲ್ಲಿ ನಿಂತು
ತನ್ನ ಸುಖದುಃಖಗಳನ್ನೆಲ್ಲ ಮರೆತು
ದೇಶದ ರಕ್ಷಣೆಗಾಗಿ ದುಡಿವನು
ಹಗಲಿರುಳು................
ಪ್ರಚಂಡ ಹಿಮದ ಚಳಿಗೆ ಭಯಪಡದೆ
ಸವಾಲೆಸೆದು.......
ಬಿಸಿಲು ಮಳೆಗೆ ಬಯಾರಿ ಬೆಂದು ಬಳಲಿ
ನಮ್ಮೆಲ್ಲರಿಗಾಗಿ.......
ಅವನು ನೆಮ್ಮದಿಯಿಂದ ನಿದ್ರಿಸದೆ
ನಮ್ಮನ್ನೆಲ್ಲ ನೆಮ್ಮದಿಂದ ನಿದ್ರಿಸುವಂತೆ ಮಾಡಿ

ಗುಂಡು ಸಿದಿಮದ್ದುಗಳಿಗೆ ಭಯಪಡದೆ
ಹೆದೆಯೊಡ್ಡಿ ನಿಂತು............
ಕೆಟ್ಟ ಶತ್ರುಗಳ ಕಪಟಕ್ಕೆ ಭಯಪಡದೆ
ಅವರನ್ನು ಸದೆ ಬಡಿಯುತ್ತಾ

ನಮ್ಮೆಲ್ಲರ ರಕ್ಷಣೆಗೆ ನಿಂತ ಯೋಧ
ಭಯಪಡುವುದುಂಟೆ.............



ಮಂಜು

- ಮಂಜು

06 Sep 2017, 12:22 pm

ಸೋಮಾರಿತನ

ಓ..ಓ...ಸೋಮಾರಿತನವೆ
ನೀನೆ ನನ್ನ ಏಳಿಗೆಗೆ ಶಾಪವೆ!


ಗೆದ್ದೇಗೆಲ್ಲುವೆನೆಂದು ಪಣತೊಡುವೆ
ಎಲ್ಲ ತಯಾರಿಯ ಕ್ಷಣದಲ್ಲೆ ಮಾಡುವೆ
ಹತ್ತು ಹೆಜ್ಜೆಯನ್ನಿಡುವೆ ಹುರುಪಿನಲಿ
ಮತ್ತೆ ಮರುದಿನ ಮಲಗುವೆ ಮುಸುಕಿನಲಿ!

ಸೋಲಿನಲು ಸಾಧಿಸಿದವರ
ಚರಿತ್ರೆಯ ಆಲಿಸುವಾಗ
ನಾ ಸೇರಲು ಅಂತಹವರ
ಸಾಲಿಗೆ ಆಸೆ ಚಿಗುರುವುದಾಗ!

ಪ್ರಯತ್ನವಿಲ್ಲದೆ ಫಲ ದೊರಡತೀತೆ
ಅಡಿಮುಂದಿಡದೆ ದಾರಿ ಸಾಗೀತೆ
ಕಲ್ಪನೆಯಿಂದ ಕನಸು ನನಸಾದೀತೆ
ಮಂತ್ರಕ್ಕೆ ಮಾವಿನಕಾಯಿ ಉದುರೀತೆ!

ಎಲ್ಲಬಲ್ಲೆನಾದರು
ಪ್ರಯತ್ನ ಮಾಡೆನು
ಮೂಕ ದೇವರ ಮುಂದೆ
ಕೂತು ವರವ ಬೇಡುವೆನು!




ಶಾರಧ

- ಶಕುಂತಲಾ

06 Sep 2017, 12:20 pm

ದೇವತೆ ನನ್ನಾಕೆ

ದೇವತೆ ನನ್ನಾಕೆ
ನನ್ನವಳು ಸದ್ದಿಲ್ಲದೆ ಬಂದವಳು..
ಹಂಬಲಿಸಿದ ಮನಕೆ ಪ್ರೀತಿಯ ಆಸರೆಯನಿಟ್ಟವಳು…
ಧಧಗನೆ ಉತಿಯುತ್ತಿದ ಮನಸಿನ ಬೆಂಕಿಗೆ
ತಣ್ಣನೆ ಪ್ರೀತಿಯ ನೀರ ಸುರಿದವಳು…..ನನ್ನಾಕೆ//

ನಲಿಯುವ ಕುಣಿಯುವ ಮನಸಲಿ
ಪ್ರೀತಿಯ ಕಚಗುಳಿಯನಿಟ್ಟವಳು…..
ಕಣ್ಣಲೇ ನಾಚಿಕೆಯ ಲಗ್ಗೇಯನಿಟ್ಟವಳು ….
ಕುಪ್ಪಳಿಸಿ ಕುಣಿಯುವ ಪ್ರಿತಿಯ
ತೋರಿಸಿದವಳು…ನನ್ನಾಕೆ,//

ನನ್ನ ಬಾಳಿನ ಪ್ರೇಮ ದೆವತೆ …
ನನ್ನಾಕೆ ….

- Abhishek C billava

06 Sep 2017, 11:15 am

ಉತ್ತರದ ನಿರೀಕ್ಷೆಯಲ್ಲಿ

ಪ್ರೀತಿಸುವೆನು ನಿನ್ನಾ…. ನೀ ನನಗೆಂದೇ ಚಿನ್ನಾ..

ಬರೆದೆ ನಾ ಪ್ರೇಮ ಪತ್ರವ ನಿನಗಾಗಿ ..
ಬರೆಯುವೆನೋ ಉತ್ತರವ ನನಗಾಗಿ..

ಕಾದಿಹೆನು ಗೆಳತಿ ವರ್ಷ ಪೂರ್ತಿ…
ನೊಂದ ಮನಕೆ ನಿನ್ನ ನಗುವೊಂದೇ ಸ್ಪೂರ್ತಿ…

ಭಾವನೆಗಳನ್ನು ಸಾಗರವನ್ನು ಪ್ರೀತಿಯೆಂಬ ಲೆಖನಕ್ಕೆ ಇಳಿಸಿ ..
ಪ್ರೇಮ ರಕ್ತದಲ್ಲಿ ನಿನ್ನ ಚಿತ್ರವ ಬಿಡಿಸಿ …
ತಿಳಿಸಿದೆನು ನಾನು ನನ್ನ ಪ್ರೇಮ ನೀವೆದನೆಯ …

ಕಾದಿಹೆನು ಗೆಳತಿ ನೀ ಬರೆಯುವೆಯೇನೋ ನನ್ನ ಪತ್ರಕ್ಕೆ ಉತ್ತರವ…

ಪತ್ರ ಬರೆದು ಕೊಡುವ ಸಡಗರದಲ್ಲಿ‌ ಬರೆಯಲು ಮರೆತಿರುವೆ ಗೆಳತಿ ನನ್ನ ಹೆಸರು…

ಮರೆಯದೆ ಉತ್ತರವ ಬರೆದು ಕಳುಹಿಸು
ಕಾಯುತ್ತದೆ ನಿನ್ನ ಉಸಿರು………

ನಿನ್ನುಸಿರು ..
ಅಭಿ

- Abhishek C billava

06 Sep 2017, 11:10 am

ನಗುವನ್ನು ಕಲಿಸಿಕೊಡೆ ಮನಸೇ.......

ನಗುವುದನ್ನು ಕಲಿಸಿಕೊಡೆ ಮನಸೇ ನಿನ್ನ ನೋವು ನೂರಿದ್ದರುನು..............

ನನ್ನ ನೋಡಿ ನಗುವು ಚೆಲ್ಲುವ ಒಬ್ಬರಿಗಾಗಿ ನಾನು ನಗುತ್ತಿರುವು ಹೇಳಿಕೊಡೆ ಮನಸೇ ಪ್ರತಿಕ್ಷಣವೂ...........

ಯಾರೊಂದಿಗೆ ಹಂಚಿಕೊಂಡರು ನಿನ್ನ ನೋವು ಕಡಿಮೆಯಾಗಲಾರದು ಆದರೆ ನನ್ನಿಂದ ಸಂತಸವ ಕಾಣುವವರು ಕೆಲವರಿದ್ದಾರೆ ಅವರಿಗಾಗಿ ಕಲಿಸಿಕೊಡೆ ಮನಸ್ಸೇ ನಿಸ್ವಾರ್ಥ ನಗೆಯನ್ನು ನನಗಿಂದು..............

ಹಲವಾರು ಬಗೆ ಇರುವೆ ನೀನು ಕಿರು ನಗೆ,ಮುಗುಳ್ನಗೆ, ಮುದ್ದಾದ ನಗೆ ಮನ ಸೋಲಿಸುವ ನಗೇ...........

ನಿನ್ನ ನೋಡುವವರಿಗೆ ನಿನ್ನ ನಗೆಯ ಚೆಲುವಾದ ಪ್ರತಿಬಿಂಬ ಅವರ ಮುದುಡಿದ ತುಟಿಯಲ್ಲಿ ತೋರುವೆ...........

ನನ್ನಲ್ಲಿ ನೀನಿರು ಮಂದಹಾಸವಾಗಿ ನಿನ್ನ ನೋಡುವವರಿಗೆ ಕಾಣಿಕೆಯಾಗಿ ಎಂದಿಗೂ ಅಚ್ಚಳಿಯದ ಸಂತೋಷವಾಗಿ..............

- ಚುಕ್ಕಿ

06 Sep 2017, 08:51 am

ಇವನೇ ನಮಣ್ಣ ಇವನೇ ಸುದೀಪಣ್ಣ

ಕವಲು ದಾರಿದಾಟಿ ಕರುನಾಡಿನ ಕನಿಕರ
ಸೊತ್ತ ಮನದಲಿ ಗೆಲುವ ಬರಿಸೋ ಮದಕರಿನಾಯಕ
ಕನ್ನಡನಾಡಿನ ಕುಲಕೋಟಿ ಕನ್ನಡಿರ ಕೊಟ್ಟಿಗೊಬ್ಬ
ಮಾತಿನಲಿ ಸ್ವಾತಿಮುತ್ತ ಉದರಿಸೋ ಮಾತಿನ ನಲ್ಲ

ಇವನೇ ನಮಣ್ಣ ಇವನೇ ಸುದೀಪಣ್ಣ

ಮುನಿದರು ಮುಗುಮುರಿಯದ ಮುನೇಶ್ವರಾ
ಮೊಗದ ಮರೆಯಲಿ ಮುಗುಳುನಗೆಯ ರಾಜಾ
ಕನ್ನಡ ಸಿನಿಧ್ವಜವ ಜಗದೊಳ ಹಾರಿಸಿದ ರನ್ನ
ಮನದ ಮಾತನು ಮುಸಂಜೆಮಾತಲಿ ಜರಿಸಿದ ಪ್ರದೀಪ

ಇವನೇ ನಮ್ಮಣ್ಣ ಇವನೇ ಕಿಚ್ಚಣ್ಣಾ

ಜವಾರಿ ಜನಕ್ಕೆಲ್ಲ ಹುಬ್ಬಳ್ಳಿಯ ಹೈದರ ಹೈದಾ
ಸ್ನೇಹದ ಕಡಲಿಗೆ ಆಪ್ತಮಿತ್ರನ್ ಸ್ವರುಪಾ
ಸೀನಿ ವೀರಪರಂಪರೆಯ ಮುನ್ನಡೆಸೋ ತೀರ್ಥಾ
ಕಾಣದ ಕನ್ನಡದ ಭೂಪಟವ ಶಿಕರವೇರಿಸಿದ 'ಕಾಶಿ'ಲಿಂಗ

ಇವನೇ ರಂಗ'ಣ್ಣ' ಇವನೇ ಸುದೀಪಣ್ಣ

ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
ಸುದೀಪಣ್ಣ

✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

06 Sep 2017, 04:38 am

ನಿಜವಾಗಿ ಬರಬಾರದೆ.....

ನನ್ನ ಕನಸಿನ ಮಹಾರಾಣಿ
ಅವಳು.........
ನಿಸರ್ಗವನ್ನೇ ನಿಬ್ಬೆರಗೊಳಿಸುವ
ಅವಳ ......ಸೌಂದರ್ಯ
ಹೆದೆ ಬಡಿತವನ್ನೇ ನಿಲ್ಲಿಸುವಂತಹ
ಅವಳ....... ಕಣ್ಣೋಟ
ನನನ್ನ ಮೂಕನನ್ನಾಗಿಸಿದೆ
ಅವಳ ಆ.......ಕಿರುನಗು
ಕಲ್ಲು ಗುಂಡಿಗೆಯನ್ನು ಕರಗಿಸುವ
ಅವಳ ಮಗುವಿನಂತ ಮನಸ್ಸು
ಹಿಮದ ಚಳಿಯಲ್ಲು ಬಿಸಿ ತರಿಸುವ
ಅವಳ......... ಮುನಿಸು
ಬೇಸಿಗೆಯಲ್ಲು ಮಳೆ ತರಿಸುವ
ಅವಳ........ ಗುಣ
ಶತ್ರುಗಳನ್ನು ಮಿತ್ರರನ್ನಾಗಿಸಬೇಕೆನ್ನುವ
............ ಹೃದಯ

ಕನಸ್ಸಿನಲ್ಲಿಲ್ಲದೆ ನಿಜ ಜೀವನದಲ್ಲಿ
ಅವಳು ......ಬರಬಾರದೆ



ಮಂಜು

- ಮಂಜು

05 Sep 2017, 10:26 pm

ಮಿನುಗು ತಾರೆ

ಮಿನುಗು ತಾರೆ ಬಳಿಗೆ ಬಾರೇ
ಮಿನುಗು ವೇಳೆ ಮರೆಯು ಏಕೆ
ಮಿನುಗುವ ಆಸೆ ನಿನ್ನಲಿ!!

ನಿನ್ನ ಮಿನುಗೋ
ಬೆಳಕೇ ನನ್ನ
ಬಾಳ ಜ್ಯೋತಿ ಆಗಲಿ!!

ಮಿನುಗು ತಾರೆ
ದೂರ ಸರಿಯೇ
ಪ್ರೀತಿ ಬಯಸೋ ಮನಸಲಿ!!

ಉಸಿರು ಸೇರಿ
ಹಾಡೋ ಹಾಡ
ಬೆಳಕ ಜ್ಯೋತಿ ಮನದಲಿ!!

ದೂರ ಮರೆಸಿ
ಬೆಳಗೆ ಬೆಳಕೆ
ಜೊತೆಗೆ ಸಾಗೋ ಬದುಕಲಿ!!

ನನ್ನ ಪ್ರೀತಿ
ಜ್ಯೋತಿ ನನ್ನ
ಬಾಳ ಬೆಳಕು ಆಗಲಿ!!

- ಹೆಚ್.ಜಿ.ದಿನೇಶ್

05 Sep 2017, 10:16 pm

ಕನಸು ಕಂಡೆ ನಾನು

ಕನಸು ಕಂಡೆ ನಾನು ಪ್ರೀತಿಸಿದಂತೆ
ಪ್ರೀತಿಸಿದ ನೀನು ಗುಣವಂತೆ!!

ಸೌಂದರ್ಯ ತುಂಬಿದ ಅಪ್ಸರೆಯಂತೆ
ಸ್ವರ್ಗವೇ ಕಣ್ಣ ಮುಂದೆ ಬಂದು ನಿಂತಂತೆ!!

ನಿನ್ನ ಕಂಡು ಆ ಶಶಿಯು ಕೈ ಚಾಚಿದಂತೆ
ಶಶಿ ಕರೆದಾಗ ನೀ ಎಲ್ಲೋ ಮರೆಯಾದಂತೆ!!

ಮೂಡಣದಿ ಸೂರ್ಯನು ಉದಿಸಿದಂತೆ
ಮುಂಜಾನೆ ಎದ್ದಾಗ ನನಗೆ ನಿನ್ನದೇ ಚಿಂತೆ!!

- ಹೆಚ್.ಜಿ.ದಿನೇಶ್

05 Sep 2017, 08:20 pm