Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನಸು....

ಕದಡಿದ ಮನಸು
ನನ್ನಲಿ ಮುನಿಸು
ಪ್ರೀತಿಯ ಹೊಂಗನಸು
ಎಷ್ಟೊಂದು ಸೊಗಸು
ಎಲ್ಲಿದ್ದರೂ ನನ್ನನು ಮನ್ನಿಸು...
ಇಂತಿ ನಿನ್ನ ಪ್ರೀತಿಯ ಕನಸು.....

- ಪ್ರಿಯಾಂಕ

05 Sep 2017, 08:19 pm

ಸೇರದಂತೆ ಸೇರಿತೆ

ಕೋಗಿಲೆಯ ಇಂಚರ ರಾಗದಲ್ಲಿ
ಕರ್ಕಶವಾದ ಸ್ವರವೊಂದು ಸೇರಿತಾ
ಹಾಡಿಗೆ ಸ್ವರಗಳ ಕೊರತೆಯುಂಟು ಮಾಡಲೆಂದು ಇಂದು.................

ಮಳೆಯ ತಂಪಾದ ಮಂಜಲ್ಲಿ ತಿಳಿನೀರಿನ ಕಳೆಗಳು ರುದಿರದ ಕೆಂಪೊತ್ತು ಕಣ್ಣಲ್ಲಿ ಕರಗಿತಾ ನೋವೋತ್ತ ಮನಸ್ಸಿನೊಡನೆ ದುಃಖವಂಚಿಕೊಳ್ಳಲೆಂದು..............

ಸೇರದಂತೆ ಸೇರಿತೆ ನೋವು ನನ್ನಲ್ಲಿ ಕಾಣದಂತೆ ಕಾಡಿತೆ ಕೊರಗು ನನ್ನಲ್ಲಿ..............
ಮೂಡದಂತೆ ಮುಡಿತೆ ಕಂಬನಿಯು ಕಣ್ಣಲ್ಲಿ ಯಾರಿಲ್ಲದೆ ಎಲ್ಲರೊಂದಿಗೆ ಇರುವಂತೆ ತೋಚಿತೆ ಈ ಜಾಗವು ನನ್ನಲ್ಲಿ.................

- ಚುಕ್ಕಿ

05 Sep 2017, 08:15 pm

ಕಣ್ಮುಚ್ಚುವ ಮುನ್ನ

ಕ್ಷಣ ಕಾಲ ತೆರೆದಿಡುವೆ ನನ್ನಿ ಎಡೆಯನ್ನ
ನೋಡು ಬಾ ಗೆಳತಿ ನನ್ನೊಳಗೆ ನಿನ್ನ
ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಬಾಣ
ಕಾತ್ತೊಗಿದು ಅಪ್ಪಿಕೋ ಕಣ್ಮುಮುಚ್ಚುವ ಮುನ್ನ
ಇಂತಿ ನಿನ್ನ .....

- ಅಪ್ಪಟ ಕನ್ನಡಿಗ

05 Sep 2017, 08:13 pm

ಪ್ರೀತಿ

ನನ್ನೀ ಪುಟ್ಟ ಹೃದಯದಲ್ಲೀಗ
ನಿನ್ನ ಪ್ರೀತಿಯದೇ ಕಾರುಬಾರು
ನಿನ್ನ ನೆನಪಿನ ದೋಣಿಯಲಿ
ದಿನ ಕಳೆಯುವೆನು ನಾನು.
ನಿನ್ನ ಪ್ರೀತಿಯ ಮಾತುಗಳು
ನನ್ನೀ ಹೃದಯದಲ್ಲಿ
ಅಚ್ಚಳಿಯದೇ ಉಳಿದಿದೆ ಇಂದು.
ಕಾದಿರುವೆ ನಲ್ಲ,
ನೀನಿಟ್ಟ ಹೆಸರಿನಲಿ
ಮುದ್ದಾಗಿ ಕೂಗುವೆಯೆಂದು.
ಕಣ್ಣೆದುರು ಬಂದುಬಿಡು ಒಮ್ಮೆ
ಪ್ರೀತಿಯ ಅರಮನೆಯಲ್ಲಿ
ಸೆರೆಯಾಗಿಸುವೆ ನಿನ್ನನು!

ಪ್ರಿಯಾಂಕ✍

- ಪ್ರಿಯಾಂಕ

05 Sep 2017, 06:51 pm

ನೆನಪಿನ ಪುಟದಲಿ

ಅಪ್ಪನ ಹೆಗಲೇರಿ
ಕೂಸುಮರಿಯ ಮಾಡಿಸಿಕೊಂಡು
ಅಂಗಳದ ತುಂಬೆಲ್ಲ ಓಡಾಡಿದ ನೆನಪು
ಮನದಂಗಳದ ಮೂಲೆಯಲ್ಲಿ
ಅಡಗಿಕುಳಿತಿದೆ!
ಬೆಳದಿಂಗಳ ರಾತ್ರಿಯಲಿ
ಉಣಬಡಿಸುತ್ತಿದ್ದ ಅಮ್ಮನ
ಕೈತುತ್ತಿನ ಸವಿರುಚಿಯಲಿ
ಬೆಳೆದು ನಿಂತಿಹೆನು ನಾನಿಂದು
ಮನೆಯಂಗಳದಲಿ ಬಿಡಿಸಿದ್ದ
ರಂಗೋಲಿಯ ಮೇಲೆ ಕಾಲಿಟ್ಟು
ಬಣ್ಣ ಮೆತ್ತಿದ ಹೆಜ್ಜೆಯಲ್ಲಿ
ಮನೆಯ ತುಂಬೆಲ್ಲಾ ಓಡಾಡಿ
ಅಮ್ಮನ ಹುಸಿಕೋಪಕ್ಕೆ
ಹೆದರಿ ಅವಿತು
ಮುನಿಸಿಕೊಂಡಿರಲು,
ಅಜ್ಜಿಯ ಮುದ್ದುಮನಸಿನ
ಸಮಾಧಾನದ ನುಡಿಗಳು
ನೆನಪಿನಂಗಳದ ಪುಟದಲಿ
ಅಚ್ಚಳಿಯದೇ ಉಳಿದಿದೆ ಇಂದು!

- ಪ್ರಿಯಾಂಕ

05 Sep 2017, 06:40 pm

ಶಿಕ್ಷಕರು....

ಇನ್ನು ಅವರು ಅಲ್ಲೇ ಇದ್ದಾರೆ
ಅವರ ನಂತರ ಬಂದ ನಾವು ಇಂದು
ಎಲ್ಲೋ ಇದ್ದೆವೆ.
ಅವರಿಂದ ನಾವು ಸಾಧನೆಯ ಶಿಖರ ಏರಿದ್ದೇವೆ
ಅವರಿಂದ ನಾವು ಅನೇಕ ವಿಚಾರ ಕಲಿತ್ತಿದ್ದೆವೆ
ಅವರಿಂದು ಇದ್ದರೆ ನಾವು ಕಲಿತ ಶಾಲೆಯಲ್ಲೆ
ಶಿಕ್ಷಕರಾಗಿ, ವಿದ್ಯಾರ್ಥಿ ಭವಿಷ್ಯ ಬರೆಯುತ್ತಿದ್ದಾರೆ.

- ಎಸ್.ಬಿ

05 Sep 2017, 05:58 pm

ಮೂಡನಂಬಿಕೆಯ ಸುಳಿಯಲ್ಲಿ.

ನಂಬಿಕೆ ಇರ್ಬೇಕು ನಿಜ......
ಮೂಡನಂಬಿಕೆಯಲ್ಲ
ಅಂದೊಂದಿತ್ತು ಕಾಲ .....
ಏನು ಅರಿಯದ ಚಿಕ್ಕವಯಸ್ಸಿಗೆ ಕಂಕಣ
ಅಂದು ಹೆಣ್ಣು ಅನುಭವಿಸಿದ್ದಳು
ಚಿಕ್ಕ ವಯಸ್ಸಿಗೆ ತಾಯ್ತನದ.. ನೋವನ್ನ

ಪತಿ ಮರಣಿಸಿದರೆ ಪತ್ನಿಯು
ಅರ್ಪಿಸಬೇಕು ಅವನ ಚಿತೆಗೆ ತನ್ನ ಪ್ರಾಣವನ್ನ
ಸತಿಸಹಗಮನ ಅನ್ನೋ ಮೂಡನಂಬಿಕೆಗೆ
ಬಲಿ ಕೊಟ್ಟಿದ್ದರು ಅಲವಾರು ಹೆಣ್ಮೆಕ್ಳನ್ನ

ಹೆಣ್ಮಕ್ಕಳು ತಿಳಿಸಬೇಕು ಇದರ ನಿಷೇಧಕ್ಕೆ ನಿಂತ ಲಾರ್ಡ್ ವಿಲಿಯಮ್ ಬೆಂಟಿಂಗ್ ರಾಜ ರಾಮ್ ಮೋಹನ ರಾಯ... ನಂತವರಿಗೆ ಕೃತಜ್ಞತೆಗಳನ್ನ

ಅಂದು ಹೆಣ್ಮಕ್ಕಳು ಹೊಸಿಲು ದಾಟುವಂತಿರಲಿಲ್ಲ
ಇಂದು ಅವರೇ ಹೊರಗೆ ದುಡಿದು ಸಾಕುತ್ತಿದ್ದಾರೆ
ಗಂಡು ದಿಕ್ಕಿಲ್ಲದ ಸಂಸಾರವನ್ನ

ವಿವಾಹನಿಂತ ಪತಿ ಸತ್ತ ಮಹಿಳೆಯರನ್ನ
ದೇವದಾಶಿಯನ್ನಾಗಿಸಿ ತಳ್ಳುತ್ತಿದ್ದರು
ವೇಶ್ಯಾವಾಟಿಕೆ ಅನ್ನೋ ಆಳ ಪ್ರಪಾತಕ್ಕೆ
ಹಣ್ಣುಮಳನ್ನ

ಅರಸನಾದವನಿಗೆ ಅರವತ್ತು ಮಂದಿ ಹೆಂಡರು
ಎನ್ನುವ ಗಾದೆಯ ಹಾಗೆ ಈ ಸಮಾಜಮಾರ್ಪಟ್ಟಿದೆ
ಬಹು ಪತ್ನಿತ್ವ ಅನ್ನೋ ಮೂಢನಂಬಿಕೆಯಾಗಿ
ಇಂದಿಗೂ ಇದು ನಿಂತಿಲ್ಲ.....

ಇದನ್ನೆಲ್ಲ ಎದುರಿಸಿ ಮೆಟ್ಟಿ ನಿಂತವರೆಲ್ಲರಿಗೂ
ಸಿಗಬೇಕು .....ಒಂದು ಸನ್ಮಾನ




ಮಂಜು

- ಮಂಜು

05 Sep 2017, 12:12 pm

ಅಪ್ಸರೆ

( ಅಪ್ಸರೆ )

ನನ್ನವಳ ಹ್ರುದಯದ ಪಿಸು ಮಾತಿನ ಸ್ವರಗಳ ಶಬ್ದಕ್ಕೆ ಸ್ತಬ್ದವಾಗಿದೆ ನನ್ನ ಕಿವಿಗಳ ತಮಟೆಗಳು.
ನಿನ್ನ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು
ನನ್ನ ಕಣ್ಣಲ್ಲಿ‌ ಅಡಗಿರುವ‌ ಪಾಪೆಗಳು
ತನ್ನ ರೆಪ್ಪೆಗಳಲ್ಲಿ ಮ್ರುದಂಗದ ರಾಗ ಸಂಯೊಜನೆ ಗೊಳಿಸುತ ನಿನಗಾಗಿ‌ ಕಾದಿವೆ .

ನಿನ್ನ ಸೌಂದರ್ಯವನ್ನು ವರ್ಣಿಸಲು ನನ್ನ ನಾಲಿಗೆಯಲ್ಲಿ ಪದಗಳೆ ಹೊರಡದೆ‌
ನನ್ನ ತುಟಿಗಳು ಬರಡಾಗಿ ಬಂಜರು ಭೂಮಿಯಾಗಿ
ನಿನ್ನ ತುಟಿಯಲ್ಲಿ ಓಮ್ಮೆ ನನ್ನ ನೆನೆದರೆ ಸಾಕು
ಬರಡಾಗಿರುವ‌ ತುಟಿಯು ಚಿಗೊರೆಡೆದ ಗರಿಕೆಯ ಹಾಗೆ ಕಂಗೊಳಿಸುವುದು ಮನವೆ

( ನೆನಪಿನ ನಾವಿಕ ಸಂತೋಷ್ )

- ಸಂತೋಷ್//ಜೀತು

05 Sep 2017, 11:21 am

ಮಾಮೂಲಿ ಎಲ್ಲ ಮಾಮೂಲಿ

ನಿದಿರೆ ಬಂದ ಮೇಲೆ ಕನಸು ಮಾಮೂಲಿ
ಕೋಪ ಬಂದ ಮೇಲೆ ಮುನಿಸು ಮಾಮೂಲಿ!!
ಹರೆಯ ಬಂದ ಮೇಲೆ ಪ್ರೀತಿ ಮಾಮೂಲಿ
ಕೆರೆಯ ನೀರಿನಲ್ಲಿ ಕಮಲ ಮಾಮೂಲಿ!!

ಈ ಆಸೆಯು ರೆಕ್ಕೆಯ ಬಡಿಯುವ ಮೊದಲು
ಹೇಳು ಬಾ ನೀನೂ ಎಲ್ಲವೂ ಮಾಮೂಲಿ!!
ಈ ಕನಸಿಗೆ ಬಣ್ಣ ಬಡಿಯುವ ಮೊದಲು
ನೋಡು ಬಾ ನೀನೂ ಎಲ್ಲವೂ ಮಾಮೂಲಿ!!

ನೋಡುವ ಮೋದಲು ಇರುವ ಕಲ್ಪನೆಯು
ನೋಡಿದ ಮೇಲೆ ಆಯಿತು ಮಾಮೂಲಿ!!
ಬದುಕಿನ ಆಟದಿ ಸ್ಪರ್ಧಿಸಿದ ಮೇಲೆ
ಸೋಲೂ ಗೆಲುವೂ ಎರಡೂ ಮಾಮೂಲಿ!!

ಮಾಮೂಲಿ ಈ ಬದುಕು ಮಾಮೂಲಿ
ನಿನ್ನಲ್ಲಿನ ನನ್ನ ಇರುವಿಕೆಯು ಮಾಮೂಲಿ!!
ನಮ್ಮಲ್ಲಿನ ಈ ಪ್ರೀತಿಯ ಬಯಕೆಯ
ಅತಿ ಸುಂದರ ಭಾವವಿದು ಎಲ್ಲ ಮಾಮೂಲಿ!!

- ಪಿ.ಜಿ.ಜ್ಯೋತಿ

05 Sep 2017, 10:26 am

ಕಣ್ಣಗಸಿ

ಕಣ್ಣಗಸಿ
-------------
ನಾ ಕಣ್ಣು ಮುಚ್ಚಿದಾಗಲೊಮ್ಮೆ
ತಿರುಗಾಡುತ್ತಾನೆ ನನ್ನ ಒಡೆಯ
ನನ್ನ ಕಣ್ಣಗಸಿಯ ಮುಂದೆ.
ಕಣ್ಣು ಮುಚ್ಚಿ ಮನದಲ್ಲೇ ಬಚ್ಚಿಡುತ್ತೇನೆ
ಕಳೆದು ಹೋಗುತ್ತಾನೆಂಬ ದುಗುಡದಿಂದ.

ನೋವುಗಳು ಕತ್ತಲು ಕವಿಯುತ್ತವೆ
ರಾತ್ರಿ ಅತ್ತು ದಹಿಸುವ ಚುಕ್ಕೆಗಳಂತೆ
ಅವನು ಮಾತ್ರ ತಾಯಿಯಾಗುತ್ತಾನೆ
ನೋವ ನುಂಗಿ ಅತ್ತಾಗಲೊಮ್ಮೆ.

ನಾ ಅಂಜುವೆ ಎದೆಗುಂದುವೆ
ಪ್ರತಿ ದಿನ ಪ್ರತಿ ಕ್ಷಣ
ಭಿಕ್ಷೆ ಬೇಡಲು ತುಂಡು ರೊಟ್ಟಿಗೆ
ಅವನು ಹೂಮಳೆಗರೆಯುತ್ತಾನೆ
ಗಂಗೆಯಲ್ಲಿ ಚಿಮುಕಿಸುವ ನೀರಿನಂತೆ.

ಪ್ರಲೋಭನೆಗಳ ಬದಲಿಗೆ ದಹಿಸಲು
ನಾನು ಜ್ವಾಲೆಯನ್ನು ಬೇಡುತ್ತೇನೆ.
ಆಸ್ತಿ,ಅಂತಸ್ತು,ಕೊಟ್ಟು ಹೀಯಾಳಿಸುತ್ತಾನೆ
ಗಂಗೆಗೂ ನಾಚಿಕೆ ನೀರು ಬೇಡಿದಂತೆ.
---- ಸುರೇಶ ಜಕಾತಿ.ಜಮಖಂಡಿ
8746086658

- ಸುರೇಶ ಜಕಾತಿ.ಜಮಖಂಡಿ

05 Sep 2017, 09:23 am