ಊರುಗೋಲು
--------------------------------------
ನಾನು ಬರೆಯಲು ಹೋದಾಗಲೊಮ್ಮೆ
ಅವಳದ್ದೇ ಹೆಸರು ಹಾಳೆಯ ಮೇಲೆ
ಪ್ರೀತಿ,
ತುಂಬಿದ ಪಾತ್ರೆಯಲ್ಲಿ
ಬಿದ್ದ ನೊನದಂತೆ ನಾನಾದೆ
ಮನವ ಕದ್ದಳು, ಬರೆಯುವ ಮೊದಲೇ.
ಕನಸು ಅವಳೋ? ಕನಸಲ್ಲಿ ಅವಳೋ ?
ನಾ ತಿಳಿಯೇ? ಆದರೂ
ನಾನಾಗಿದ್ದೇನೆ ಅವಳಿಗೆ
ಪ್ರೀತಿಯ ಊರುಗೋಲು.
ಹೇಳಲು ಹೋದಾಗಲೊಮ್ಮೆ
ಕಾಡುವವು,ಮನ ಕಲಕುವವು
ಕಣ್ಣು ನೋಟದಲ್ಲಿ ಬಚ್ಚಿಟ್ಟ
ಸಾವಿರಾರು ಕಥೆಗಳು.
ಅವಳಿಗೆ ಇನ್ನೂ ತಿಳಿದಿಲ್ಲ
ಕದ್ದ ನಿಜವಾದ ಕಳ್ಳ ನಾನೆಂದು
ಕದ್ದ ಮಾಲು ಮನಸ್ಸು
ಇನ್ನೂ ಹಾಯಾಗಿ ನಿದ್ರಿಸುತ್ತಿದೆ
ಬೆಳಗಿನಜಾವದ ನಿದ್ರೆಯಲ್ಲಿ .
---- ಸುರೇಶ. ಜಕಾತಿ.ಜಮಖಂಡಿ.
8746086658
ಮಾತು ಮೌನವಾಗಿದೆ
ನೀ.... ಮನ ಸೇರಿದ ಕ್ಷಣದಿಂದ....||
ಮುಗುಳ್ನಗೆಯೇ ಮಾತಾಗಿದೆ
ನೀ ಎದುರು ಬಂದ ಗಳಿಗೆಯಿಂದ||
ನೋಡಿದಷ್ಟು ನೋಡಬೇಕೆನಿಸುತಿದೆ
ಆ ನಿನ್ನ ನಗೆಯನ್ನ ....ನನ್ನೀ ಈ ನಯನದಿಂದ||
ಕಟ್ಟೀರುವರು...ಕಪ್ಪು ಬಟ್ಟೆಯ
ನ್ಯಾಯ... ದೇವತೆಯ ಕಣ್ಣಿಗೆ
ಮಾಡುವ ತಪ್ಪು ಕಾಣದಿರಲೆಂದೆ
ಹುಟ್ಟು ಹಾಕಿವರು. ಸುಳ್ಳು ಸಾಕ್ಷಿಗಳ
ತಪ್ಪೇ ಗೆಲ್ಲಲೆಂದು
ಸುಳ್ಳನ್ನೇ ಸತ್ಯವಾಗಿಸಲು ಮಾನವೀಯತೆಯನ್ನೇ.
...... ಬಲಿ ಕೊಡುತಿಹರು
ಕೆಟ್ಟ ಪುಂಡಾಟಿಕೆಯ ಜನರೇ ಗೆಲ್ಲುತಿಹರು
ಈ.... ಸಮಾಜದಲ್ಲಿ
ಸಾಮಾನ್ಯ ಪ್ರಜೆಯ ನೊಂದ ಕೂಗು
ಕೇಳಲು
ಯಾವ ವಿಷ್ಣು. ಶಿವರು ಅವತಾರವೆತ್ತಲಿಲ್ಲ
ಈ ಕಲಿಯುಗದಲ್ಲಿ
ನ್ಯಾಯ........... ಎಲ್ಲಿದೆ?
ಮನಸಾರೆ ಏಲ್ಲಾ ಸವಿನೆನಪಿನ ಮಾತುಗಳು
ಭಾವನೆಗಳ ಸಂಘರ್ಷ ಮರೆಯದ ನೆನಪುಗಳು
ನಿನ್ನನ್ನೆ ನೆನಪಿಸಿದೆ ಎಂದೂ ಮರೆಯದೆ
ಮತ್ತೇನು ಬಯಸದೆ ನಿನಗಾಗಿ ಕಾದಿರುವ
ನನ್ನ ಮನಸೆಲ್ಲ ನೀನೆ ಓ ನನ್ನ ನಲ್ಲೆ
ಮನದಲ್ಲಿ ಕರಗಿ ಹೋಗಿದ್ದ
ಕನಸುಗಳಿಗೆ ನಿನ್ನ ಪ್ರೀತಿಯ
ಸೋನೆ ಮಳೆ ಸುರಿಸಿ
ಬದುಕೇ ಹಸನಾಗಿಸಿದೆ
ಬರಡಾದ ಬಾಳಲಿ
ಪ್ರೇಮದ ಕಾರಂಜಿ
ಚಿಮ್ಮಿಸಿದೆ
ಮತ್ತೆ ಮರುಜನ್ಮ ಪಡೆದು
ನವ ಪಲ್ಲವದಿ ನಿನ್ನೊಲವಲಿ
ಕಂಗೊಳಿಸುತಿದೆ
ಪ್ರೀತಿಯು ಹೆಮ್ಮರವಾಗಿ