Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಂದು ಲೆಕ್ಕ ಇಲ್ಲದಷ್ಟು ಪ್ರೀತಿಯ
ಸಾಲ ನನ್ನಿಂದ ಪಡೆದೆ ನೀನು!!
ಇಂದು ಬಡ್ಡಿ ನೀಡುವುದು ಬೇಡ
ಅಸಲನ್ನಾದರೂ ಹಿಂತಿರುಗಿಸು!!
ಅಂದು ನನ್ನಲ್ಲಿರುವ ಎಲ್ಲ
ಪ್ರೀತಿಯನ್ನು ನಿನಗೆ ಧಾರೆ ಎರೆದೆ!!
ಇಂದು ಚೂರು ಪ್ರೀತಿಗಾಗಿ
ಹಂಬಲಿಸಿ ನಾ ಬಿಕಾರಿ ಆಗಿರುವೆ!!
ಅಂದು ಕ್ಷಣ ಕ್ಷಣವೂ ನಾನು
ನಿನ್ನ ಏಳಿಗೆ ಬಯಸುತ್ತಿದ್ದೆ!!
ಇಂದು ಏಳಲು ಆಗದ ಕಂದಕದಲ್ಲಿ
ಬಿದ್ದು ನೊಂದು ಒದ್ದಾಡುತ್ತಿರುವೆ!!
ಅಂದು ನಾನು ನಿನಗೆ ನೀಡಿದ
ಪ್ರೀತಿಯ ಸಾಲವೂ ಇಲ್ಲ!!
ಇಂದು ಅದನ್ನು ಹಿಂತಿರುಗಿಸಲು
ನೀನು ಜೊತೆಯಲ್ಲಿ ಇಲ್ಲ!!
- ಪಿ.ಜಿ.ಜ್ಯೋತಿ
26 Jul 2017, 09:48 am
ಅವಳ ಆ ಮುಂಗುರುಳ ಭಾಷೆಗೆ
ನನ್ನಲಿ ಹೊಸ ಒಲವು ಶುರುವಾಗಿದೆ!!
ಅವಳ ಆ ಕುಡಿನೋಟದ ಚಲುವಿಗೆ
ನನ್ನ ಈ ಹೃದಯವು ಮಿಡಿದಿದೆ!!
ಅವಳನೇ ಮತ್ತೆ ಮತ್ತೆ ನೋಡಲು
ಹಂಬಲಿಸಿ ಕಾಯುತಿವೆ ನನ್ನ ಕಂಗಳು!!
ಅವಳದೇ ಕನಸು ರಾತ್ರಿ ನಿದ್ದೆಯಲ್ಲಿ
ಸದ್ದಿಲ್ಲದೇ ಬಂದು ನನ್ನ ಕಾಡುತ್ತಿವೆ!!
ಅವಳದೇ ನೆನಪಿನಲ್ಲಿ ದಿನವಿಡೀ
ಅಲೆದಾಡುತ ಸಾಗಿದೆ ನಾ ಅರಿಯದ!!
ಅವಳನೇ ವರಿಸಲು ನನ್ನ ಮನದಲಿ
ಹೋಸ ಆಸೆಯೊಂದು ಆವರಿಸಿದೆ!!
- ಪಿ.ಜಿ.ಜ್ಯೋತಿ
26 Jul 2017, 09:04 am
ಬೆಚ್ಚನೆಯ ಮನೆಯಲ್ಲಿ
ಅಚ್ಚುಮೆಚ್ಚಿನ ಪ್ರೀತಿಯಲ್ಲಿ
ರಚ್ಚೆಮಾಡುವ ಇಚ್ಚೆಗಳು
ಅರಿದಾಡಿದಾಗ ಉಕ್ಕುವುದು ಪ್ರೇಮಾ..
ಹಂಚಿನ ಕೆಳಗಡೆ ಹೊಂಚಾಕಿದ
ಮನಗಳು ಇಂಚಿನ ಲೆಕ್ಕಾಚಾರ
ಕಂಚಿನ ಬಿಂದಿಗೆಯ ನೀರು
ಸವಿದಾಗ ಉಕ್ಕವುದು ಪ್ರೇಮಾ..
ರವಿಯ ಕಿರಣಗಳು ಕಿಟಕಿ ಒಳಗಡೆ
ಹರಿದಾಡಲು ಜಾಗವಿತ್ತ
ಒಡೆಯ ಓಡಾಡಲು
ಹೊಮ್ಮಿತ್ತು ಪ್ರೇಮಾ..
ಮನಸ್ಸಿನ ಮಾತ್ತಿಗೆ
ಮುತ್ತಿಡುವ ಮನಸುಗಳು
ಸಂಚಾರದ ಕಾಲುಗಳು
ಬೆರಳ ಸ್ಪರ್ಶದಿ ಪ್ರೇಮಾ...
ಈಶ,ಎಂ.ಸಿ.ಹಳ್ಳಿ
- ಈಶ,ಎಂ.ಸಿ.ಹಳ್ಳಿ
25 Jul 2017, 10:41 pm
ತಾಯಿಯಿಲ್ಲದ ತವರಲ್ಲಿ
ತಬ್ಬಳಿಯಂತೆ ಬೆಳೆದಳು
ಮಲತಾಯಿಯ ಕಾಲುತೊಳೆಯಲು
ಕಣ್ಣೀರ ಅಭಿಷೇಕ ಗೈದವಳು........
ಹೆಸರಿಗೊಂದು ತಂದೆ ಇರುವನು
ಹೊಸ ಹೆಂಡತಿಯನ್ನು ಕರೆತಂದು
ಕ್ಷಣದಲ್ಲೇ ತಾನೆತ್ತ ಮಗಳೆಂದು ಮರೆತು
ಹೊದೆನು.............
ಮುದ್ದಾದ ಗೊಂಬೆ ಇವಳು
ಮಲ್ಲಿಗೆಗಿಂತ ಮೃದುವಾದ
ಮನಸುಳ್ಳವಳು ಕಷ್ಟವೆಂದವರಿಗೆ
ತಾನಿರುವೆನೆಂದು ಸಹಾಯಸ್ಥ
ನೀಡುವವಳು.........
ಕಾಣದ ದೇವರಿಗೆ ತಾಯಿ ನೀನೆಂದು
ಕೈಮುಗಿದು ಬೇಡುವವಳು ವಿದ್ಯೆಯ
ಕೈಯಿಡಿದು ವೈದ್ಯಕೀಯ ವೃತ್ತಿಯನ್ನು
ಆಯ್ದುಕೊoಡವಳು.............
ತನ್ನ ತಾಯಿಯ ಸಾವಿನಂತೆ ಯಾವ ತಾಯಿಯು ಮತ್ತೊಂದು ಮಗಳ ಕೈಬಿಟ್ಟು ಹೋಗಬಾರದೆಂದು ಹಗಲಿರುಳು ಶ್ರಮಿಸಿ ಡಾಕ್ಟರಾದಳು ನಮ್ಮೂರ ಹೆಣ್ಣುಮಗಳು ಕರುಣೆಯುಳ್ಳ ಕಾರುನ್ಯೆಯವಳು...
- ಚುಕ್ಕಿ
25 Jul 2017, 10:00 pm
ಮರವೇರಿದರು ಹಲವರು
ಬುಡದ ಆಧಾರದಲಿ
ಬುಡವನ್ನೇ ಮರೆತರು
ರೆಂಬೆ-ಕೊಂಬೆಯಲ್ಲಿ ನೇತಾಡುತಿಹರು
ಪಾಪ ಅವರಿಗೇನು ಗೊತ್ತು....
ರೆಂಬೆ-ಕೊಂಬೆಗೂ ಆಧಾರ
ಅವರತ್ತಿದ ಬುಡವೇ ಎಂದು....
- ಎಸ್.ಬಿ
25 Jul 2017, 08:55 pm
ಅಮವಾಸೆಯ ಆ ಕತ್ತಲ ವೇಳೆ,
ಗೆಳತಿಯ ಶುಭರಾತ್ರಿ ಸಂದೇಶ ಇನ್ನೂ ಬಾರದ ವೇಳೆ,
ಗೆಳೆಯನ ಕೈಯಿಂದ ಬಂತೊಂದು ಸಂದೇಶದ ಕರೆಯೋಲೆ,
ಸಂತಸದಿ ತೆಗೆದರೆ ಬರೀ ಖಾಲಿ ಹಾಳೆ.
ನೊಂದು ಬೇಸರದಿ ಮಲಗಿದ ವೇಳೆ,
ನಿದ್ರೆಯಲ್ಲಿ ಕೆಟ್ಟ ಸ್ವಪ್ನಗಳ ಸುರಿಮಳೆ,
ಕಣ್ಣುಬಿಟ್ಟು ನೋಡಿದರೆ ಇನ್ನೂ ರಾತ್ರಿ ವೇಳೆ,
ಕಿಟಕಿಯಲ್ಲಿ ಪಟಪಟ ಸದ್ದಿನ ಸುರಿವಮಳೆ.
ಮನದಲ್ಲಿ ಪ್ರೀತಿಯ ತುಸು ನೆನಪುಗಳ ಜಾತ್ರೆ,
ತುಂಬುವಷ್ಟರಲ್ಲಿ ನನ್ನ ಪ್ರೀತಿಯೆಂಬ ಅಕ್ಷಯಪಾತ್ರೆ,
ಬೆಳಗ್ಗೆದ್ದು ನೋಡಿದರೆ ಊರಲ್ಲಿ ಜನರ ಗುಂಪುಗಳ ಜಾತ್ರೆ,
ಮೂರ್ಖ ನಾ ತಿಳಿದೆ ನನ್ನ ಮನದಲಿ ಹೊರಟಿತೆನೊ ದೇವತೆಯ ಯಾತ್ರೆ...
ಕೇಳುತ್ತಿತ್ತು ವಾಧ್ಯದ ಸದ್ದಿನ ಹಾಡು,
ದೂರದಲ್ಲಿ ಯಾರೋ ಅಳುವ ಗೋಳು,
ನೋಡುವ ತವಕವು ಮನದ ಗೀಳು,
ಅಷ್ಟರಲ್ಲಿ ಸಂಜೆವೇಳೆಯ ಗೋಧೂಳು,
ಅಲ್ಲಿ ಅವಳ ಕಂಡೊಡೆ,
ಕಣ್ಣೀರು ಬಾರದೆ ಸುಮ್ಮನೆ ನಿಂತ ಆ ನನ್ನ ಕಣ್ಣುಗಳು,
ಅರಿವಾಗದೆ ಒಮ್ಮೆಲೇ ನನ್ನ ಆವರಿಸಿದವು ಮೂಕ ವೇದನೆಗಳು,
ನನ್ನ ಉಸಿರು ಬಿಗಿಯಾಗಿಸಿದ ಅವಳ ಆ ಯಾತ್ರೆ,
ಚಿರನಿದ್ರೆಗೆ ಜಾರಿದ್ದ ನನ್ನ ಪ್ರೀತಿ ದೇವತೆಯ
"ಮೌನಯಾತ್ರೆ"...
Spb..@#
- Spb...@#
25 Jul 2017, 07:25 pm
ಹಂಚಿನ ಮನೆಗೋಂದು
ಕಂಚಿನ ಕದವಂತೆ
ಅಂಚಿನ ಸೆಲೆಯಲ್ಲಿ
ಮಿಂಚಿನ ಕಣ್ಣೋಟ!!
ಕುದುರೆಯ ನಾ ಏರಿ
ಎದುರಿಗೆ ಬಂದಾಗ
ಒಳಗಿನ ಧನಿಯೊಂದು
ನನ್ನನು ಕರೆದಂತೆ!!
ಒಳಗಡೆ ನಡೆದಾಗ
ಗೆಜ್ಜೆಯ ಧನಿಯೊಂದು
ಸದ್ದನು ಮಾಡುತ್ತ
ಎಲ್ಲಿಯೋ ಜಿಗಿದಂತೆ!!
ಯಾರದೋ ಮನೆಯಲ್ಲಿ
ಏತಕೆ ನಾ ನಿಂದೆ
ಯಾರನು ಹುಡುಕುತಲಿದ್ದೆನೋ
ಅವರೇ ನನ್ನ ಕಣ್ಣ ಮುಂದೆ!!
- ಪಿ.ಜಿ.ಜ್ಯೋತಿ
25 Jul 2017, 10:24 am
ನೀನು ನಾನಿಲ್ಲದೇ ನಾನು ನೀನಿಲ್ಲದೇ
ಏನೋ ಆದಂತ ಈ ಬದುಕು ನಮಗಲ್ಲದೇ!! ಸ್ವಾರ್ಥ ಮನ ತುಂಬಿದೆ ಬದುಕು ಕಹಿ ನೀಡಿದೆ
ವಿರಹದಾ ಸಿರಿಯು ವರದಂತೆ ಬಿಗಿದಪ್ಪಿದೆ!!
ನಿನ್ನನು ಕಾಣದೇ ಕಣ್ಣು ಮಂಜಾಗಿದೆ
ಕಂಬನಿ ಮಿಡಿಯುತ ನೋವನು ನುಂಗಿದೆ!!
ನೀನು ಬರಲಾರದೇ ನಾನು ನಗಲಾರದೇ
ಬದುಕಬೇಕೆಂಬ ಆಸೆ ನನ್ನಿಂದ ದೂರಾಗಿದೆ!!
ಏಕೆ ಹೀಗಾಯಿತು ಎಂಬ ಪ್ರಶ್ನೆಯೊಂದು ಇದೆ
ಉತ್ತರವನ್ನು ಹುಡುಕಿ ಸುತ್ತೆಲ್ಲ ಅಲೆದಾಡಿದೆ!!
ನಿನ್ನೆ ಈಗಿಲ್ಲದೇ ನಾಳೆ ಬರಲಾರದೇ
ಇಂದು ಈ ಕ್ಷಣವು ಮನವೇಕೋ ತೊಳಲಾಡಿದೆ!!
- ಪಿ.ಜಿ.ಜ್ಯೋತಿ
25 Jul 2017, 09:09 am
ಚಿಕ್ಕಂದಿನಲ್ಲಿ ನಾ ದ್ವೇಷಿಸುತ್ತಿದ್ದ ಅಪ್ಪ,
ಕೋಪದಿ ಏಟು ಕೊಟ್ಟ ಅಪ್ಪ,
ಪೇಟೆಯಿಂದ ನನಗಾಗಿ ತಿನಿಸು ತರುತ್ತಿದ್ದ ಅಪ್ಪ,ಹಣೆಗೆ ಮುತ್ತಿಟ್ಟ ಅಪ್ಪ,
ದಿನಾ ಐದು ಪೈಸೆ ಕೈಗಿಡುತ್ತಿದ್ದ ಅಪ್ಪ.
ಓದು-ಆಟದಲ್ಲಿ ಬೆನ್ನು ತಟ್ಟಿದ ಅಪ್ಪ,
ಪೆನ್ನಿನ ಕಡ್ಡಿ ಕೊಡಿಸಿದ ಅಪ್ಪ,
ಸಾಲದಿ ನನಗಾಗಿ ಸೈಕಲ್ ಕೊಂಡ ಅಪ್ಪ,
ಮುನಿಸಿಕೊಂಡಾಗ ಅನ್ನ ತಿನ್ನಿಸಿದ ಅಪ್ಪ.
ಅಕ್ಕ ಬಡಿವಾಗ ಬಿಡಿಸಿದ ಅಪ್ಪ,
ಕಣ್ಣ ನೀರ ಒರೆಸಿದ ಅಪ್ಪ,
ನನಗಾಗಿ ಹದಿನಾಲ್ಕು ವರ್ಷ ಜೀತ ಮಾಡಿದ ಅಪ್ಪ,
ಸಂಸಾರ ನೌಕೆಗೆ ಜೀವತೇದ ಅಪ್ಪ,
ಬಿತ್ತಿ ಬೇಸಾಯ ಮಾಡಿ ದುಡಿದ ಅಪ್ಪ,
ತಾನು ಹಸಿದು ನನಗೆ ಅನ್ನವಿಟ್ಟ ಅಪ್ಪ.
ಕತ್ತಲಲ್ಲಿ ಬೆಳಕಾಗಿ ಹೆಗಲ ಮೇಲೆ ಒತ್ತು ನಡೆದ ಅಪ್ಪ,
ಸುರಿವ ಮಳೆಯಲಿ ಬಾಚಿತಬ್ಬಿದ ಅಪ್ಪ,
ನಮ್ಮ ಮನೆಯ ನಂದಾದೀಪ ಅಪ್ಪ,
ನನ್ನ ಬಾಳಿನ ಬೆಳಕು ನೀನಪ್ಪ,
ಧನ್ಯನಾದೆ ನಿನ್ನ ಮಗನಾಗಿ ಅಪ್ಪ,
ನಾ "ತೀರಿಸಲಾರೆ ನಿನ್ನ ಋಣ" ಎಂದಿಗೂ ಅಪ್ಪ..
Spb..@#
- Spb...@#
25 Jul 2017, 12:13 am
ಒಂದಾಕರ್ಷಣೆ ಮೋಡಿ ಮಾಡಿದೆ
ಬಿಟ್ಟಿರಲಾರದಂತ ಸೇಳೆಥ ಹೂಡಿದೆ
ತಾಳಲಾರದಂತ ನೋವು ನೀಡಿದೆ
ಸಮಾಧಾನ ಇಲ್ಲದಂತೆ ಕಾಡಿದೆ
ಚಿತ್ತದಲ್ಲಿ ಚಿತ್ರವೋಂದು ಮೂಡಿಸಿದೆ
ಅದು ಕ್ಷಣಕೊಂದು ಪಾತ್ರ ನಡೆಸಿದೆ
ಭಾವನೆಗಳ ಸಂದೇಶ ಹೊರಡಿಸಿದೆ
ಪ್ರತಿ ಜೀವಕೋಶಕ್ಕೆ ದಾಹ ಹೆಚ್ಚಿಸಿದೆ
ಅಸ್ಪರ್ಶ ಶಕ್ತಿಯಿಂದ ಮಾಯೆ ಮೆಟ್ಟಿಸಿದೆ
ಕಳೆದು ಹೋದಂತೆ ಭ್ರಮೆ ಹಿಡಿಸಿದೆ
ಎಂದು ಆಡದ ಹೊಸತನದ ಆಟವಾಡಿಸಿದೆ
ಜೀವನದ ಹಂತಗಳನ್ನು ಕಲಿಸುತ್ತಿದೆ
ಬೇಕಾದಾಗ ತುಂಬಾ ನೆನೆಯುತ್ತದೆ
ಬ್ಯಾಡಾದಾಗ ದೂರವಾಗಲು ನೇವ ಒಡ್ಡೂತ್ತದೆ
ಬೇಕು ಬೇಡಗಳ ಮಧ್ಯೆ ವ್ಯಕ್ತಿಯನ್ನು ಮೌನವಾಗಿಸುತ್ತದೆ
ಹಿರೇಉಳ್ಳಿಗೇರಿ ಕರೆಮ್ಮಳ ಹತ್ರ ಪರಿಪರಿಯಾಗಿ ಬೇಡಲು ಹಚ್ಚುತ್ತದೆ !
- MB
25 Jul 2017, 12:12 am