Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅನುದಿನವು- ಅನುಕ್ಷಣವು
ಅವಿಶ್ರಾಂತ ಜೀವಿಗಳು ನಾವು
ಗಳಿಕೆಯೆಡೆಗೆ ನಮ್ಮ ಗಮನವು
ಸಂಬಂಧಗಳ ಸವಿಯ ಮರೆತಿರುವೆವು
ಮುಂಜಾನೆ ರವಿ ರಶ್ಮಿಯ
ಸವಿಯಲು ಸಮಯವಿಲ್ಲ
ಸಾಲು-ಸಾಲು ಸಾಗುವ ಬಾನಾಡಿಯ
ಸುಮಧುರ ಗಾನವ ಆಲಿಸಿಲ್ಲ
ನಿಸರ್ಗದ ಅರಿವು ನಮಗಿಲ್ಲ
ತರು-ಲತೆಗಳ ಚುಂಬನದ ಸವಿಯಿಲ್ಲ
ಸಿದ್ದ ವಸ್ತುಗಳೆ ಬಾಳಲ್ಲೆಲ್ಲ
ಮಾತೃ ವಾತ್ಸಲ್ಯವು ಕನಸಾಯಿತಲ್ಲ
ವಿದೇಶಿಯರ ಮೋಡಿಗೆ
ಮರುಳಾದೆವು
ಮಾತೃಭಾಷೆಯ ಪಾಲಿಗೆ
ನಾವೆ ಉರುಳಾದೆವು
ಆಂಗ್ಲಭಾಷೆಗೆ ಅಡಿಯಾಳಾದೆವು
ಆತ್ಮಸಾಕ್ಷಿಯ ಹಂತಕರು ನಾವು
ಜಪಿಸುವರು ಉದ್ದಾರದ ಮಂತ್ರ
ಅದು ಆಂಗ್ಲ ಭಾಷೆಯಿಂದ ಮಾತ್ರ
ಕನ್ನಡಾಂಬೆಯ ಮಡಿಲಲ್ಲಿ
ಕನ್ನಡವು ಸೊರಗಿಹುದು
ಪರಕೀಯತೆಯು ಪೌರುಷದಲಿ
ಆಡಂಬರದಿ ಮೆರೆಯುತಿಹುದು
ಭಾರತಾಂಬೆಗೆ ಜೈಕಾರ
ಕನ್ನಡಾಂಬೆಗೆ ಜೈಕಾರ
ಪರಕೀಯತೆಗೆ ಇರಲಿ
ನಮ್ಮ ದಿಕ್ಕಾರ.........
- ಶಕುಂತಲಾ
20 Jul 2017, 01:03 pm
ಎದ್ದೇಳು ಭಾರತೀಯ
ಮುನ್ನುಗ್ಗು ನೀ ಮಹನೀಯ!!
ಅಂಜಿಕೆಯ ಬಿಟ್ಟು ಗಂಡೆದೆಯ ತಟ್ಟಿ
ಎಳೆದೊಯ್ಯಿ ನಮ್ಮ ತೇರ!!
ಸಿಡಿಲನ್ನು ಹಸ್ತದಲ್ಲಿ ಹಿಡಿದು
ರಣರಂಗದಲ್ಲಿ ಶತ್ರುಗಳ ಸದೆ ಬಡಿದು!!
ಮುಗಿಲೆತ್ತರಕ್ಕೆ ತಲೆಯೆತ್ತಿ
ಹಾರಬಿಡು ಈ ನಮ್ಮ ನಾಡ ಧ್ವಜವ!!
ಗುಂಡಿಗೆಯ ಒಳಗಿನ ಬಿಸಿ ನೆತ್ತರು
ಹೊರ ಚಿಮ್ಮಿ ನರ ನಾಡಿ ತಲುಪುವಂತೆ!!
ಈ ದೇಶ ಪ್ರೇಮ ನಿನ್ನ ಒಳಗಿನಿಂದ
ಹರಿ ಬಿಡು ಎಲ್ಲರೊರಳಗೂ!!
ಈ ಜಾತಿ ಭಾವವನ್ನು ಸರಿಸಿ ದೂರಕ್ಕೆ
ನೀನಾಗು ಭಾರತೀಯ!!
ಈ ನಮ್ಮ ಬಾವುಟದ ತ್ರಿವರ್ಣದಲ್ಲಿ
ಇಹುದು ಎಲ್ಲರಿಗೂ ಸಮ ಪಾಲು!!
- ಪಿ.ಜಿ.ಜ್ಯೋತಿ
20 Jul 2017, 11:59 am
ಶಿಲ್ಪಿಯೊಬ್ಬನು ಕಣ್ಣಲ್ಲೇ ಕೆತ್ತಿದ
ಪ್ರೇಮದ ಶಿಲ್ಪ ನೀನು!!
ಹೋಗು ನಡೆ ಎಲ್ಲರ ಕಣ್ಣಿನಲ್ಲೂ
ಪ್ರೇಮದ ಭಾವ ತುಂಬು!!
ಕವಿಯೊಬ್ಬನು ಬರಹದಲ್ಲಿ
ನಿನಗೆ ಜೀವ ತಂದ!!
ಹೋಗು ನಡೆ ಎಲ್ಲರ ಪ್ರೇಮದಲ್ಲೂ
ನೀನು ಜೀವ ತುಂಬು!!
ನಾಟ್ಯಕಾರನೊಬ್ಬ ಕಲಿಸಿದ
ಹಾವ ಭಾವ ನಿನ್ನಲ್ಲಿ!!
ಹೋಗು ನಡೆ ಎಲ್ಲರ ಜೀವನದಲ್ಲೂ
ಹಾವ ಭಾವ ತುಂಬು!!
ಸಂಗೀತಗಾರನ ಹಾಡಿನ ಮೋಡಿಯ
ರಸಿಕತೆ ನೀನು!!
ಹೋಗು ನಡೆ ಎಲ್ಲರ ಹಾವ ಭಾವದಲ್ಲೂ
ರಸಿಕತೆ ತುಂಬು!!
ಚಿತ್ರಕಲಾಕಾರನ ಕುಂಚದಲ್ಲಿ ಮೂಡಿದ
ಬಣ್ಣದ ಕಲೆ ನೀನು!!
ಹೋಗು ನಡೆ ಎಲ್ಲರ ರಸಿರತೆಯಲ್ಲೂ
ಬಣ್ಣವನ್ನು ತುಂಬು!!
- ಪಿ.ಜಿ.ಜ್ಯೋತಿ
20 Jul 2017, 11:29 am
ದೇವತೆಯ ಸ್ವರೂಪಿ
ನೀನು ತಾಯಿ!!
ಮರು ಜನ್ಮದಲ್ಲೂ
ನೀನೇ ನನ್ನ ತಾಯಿ!!
ಹೊತ್ತು ಹೆತ್ತ ಕಂದನ
ಅಪ್ಪಿ ಮುದ್ದಿಸಿದವಳು!!
ಮೊಲೆ ಹಾಲನು ಉಣಿಸಿ
ಹಸಿವ ನೀಗಿಸಿದವಳು!!
ಮಾತೆ ಎಂದರೇ
ಮಮತೆಗೆ ಹೆಸರು!!
ಮಾತೆಯ ಮಡಿಲಲ್ಲಿ
ಕಂದನ ಉಸಿರು!!
ಹೊತ್ತವಳು ಇವಳು
ನನ್ನ ಹೆತ್ತವಳು ಇವಳು!!
ಮರು ಜನ್ಮದಲ್ಲೂ ಆಗಬೇಕು
ನೀನೇ ನನ್ನ ತಾಯಿ!!
- ಪಿ.ಜಿ.ಜ್ಯೋತಿ
20 Jul 2017, 10:50 am
ಓ ಪ್ರೇಮದ ಮಾಯೆಯೇ
ಈ ದೇಹಕೆ ನೀ ಪ್ರಾಣವೇ!!
ನೀನಿಲ್ಲದ ಬದುಕಲ್ಲಿ ನಾ
ಕ್ಷಣ ಮಾತ್ರವೂ ಇರಲಾರೆನೇ!!
ಈ ಜನುಮಕೆ ನನ್ನ ಪಾಲಿಗೆ
ಓ ಪ್ರೇಮವೇ ನೀ ವರವಾದೆಯಾ!!
ನೀನೆಂಬುದು ಖುಷಿ ನೀಡಲು
ನನ್ನ ಒಳಗೆ ನನ್ನನ್ನು ನೀ ಮರೆಸಿದೆ!!
ನೀನಿಲ್ಲದ ಇರುವಿಕೆಯೇ ಇಲ್ಲ
ನೀನಾದೆ ಇಂದು ನನ್ನಯ ಬಂಧು!!
ಯಾಕಾಗಿ ಬಂದೆ ನೀ ಓ ಪ್ರೇಮವೇ
ನನ್ನಲಿ ನಿನ್ನಿಂದಾಗೇ ಈ ನಗುವೇ!!
- ಪಿ.ಜಿ.ಜ್ಯೋತಿ
20 Jul 2017, 10:13 am
ಅಂದದ ಹೆಣ್ಣಿಗೆ
ಚೆಂದದ ಮೂಗುತಿ!!
ಮುತ್ತಿನ ಮಣಿ ಇರೋ
ಚಿನ‌್ನದ ಮುಗುತಿ!!
ಅವಳ ನಗುವಿನ ಮಿಂಚಲಿ
ಮೂಗುತಿ ನಿನ್ನ ಹೊಳಪಿರಲು!!
ಚೆಲುವೆಯ ಚೆಂದವು ಹೆಚ್ಚಿತೇ
ನೀನು ಹೊಳೆದಿರಲು!!
ಸೂರ್ಯನ ಕಿರಣವು ಸೋಕಲು
ಕಾಮನ ಬಿಲ್ಲದು ನಿನ್ನಲಿ!!
ನನ್ನೆದೆ ಬಡಿತವೂ ನಿಲ್ಲದು
ಕಾಣಲು ನೀನು ಅವಳಲಿ!!
- ಪಿ.ಜಿ.ಜ್ಯೋತಿ
20 Jul 2017, 09:58 am
ಪ್ರೀತಿಯ ನೆನಪಲಿ
ಮನಸಿನ ಮನೆಯಲಿ
ಬಿಡಿಸಿರುವೆ ಕನಸುಗಳ ರಂಗೋಲಿ
ಕಟ್ಟಿರುವೆ ಪ್ರೀತಿ ತೂಗಲು ಅಲ್ಲೊಂದು ಜೋಕಾಲಿ
ನೀ ಬರುವ ದಾರಿಯಲ್ಲೆಲ್ಲ ಹೂವುಗಳ ಚೆಲ್ಲಿ
ನಿನ ಬಾಳಲೆಂದು ತರುವೆ ಮೃದು ಮಲ್ಲಿಗೆಯ ಕಂಪು
ನನ್ನೆದೆಯ ವನದಲಿ ನಿನಗೆಂದು ಹೊಂಗೆ ನೆರಳ ತಂಪು
ತುಂಬುವೆನು ಮನಸಿನ ಮಾತಿಗೆ ಹಕ್ಕಿಗಳ ಇಂಪು
ಕಾಯುವೆ ನಾ ನಿನ್ನ ಪ್ರೀತಿಗೆ ತಾಗದಂತೆ ಮುಪ್ಪು
ಜಗವೇನೆ ಜರಿದು ಅಂದರೂ
ನಾವಗೋಣ ಕಿವುಡರು
ಯಾರು ಕಂಡು ನಕ್ಕರು
ನಾವಿ ಜಗದ ನೋಟಕೆ ಅಂಧರು
ಬಂದರೆ ಅರಿಯದ ಎಡರು ತೊಡರು
ಜೊತೆಯಾಗಿ ನಡೆಯುವ ಪ್ರೀತಿಯೆ ನಮಗೆ ದೇವರು
ಇರುವವರೆಗೆ ಕೊನೆಯ ಉಸಿರು
ಇರಬೇಕು ಜೊತೆಗೆ ಎಂದಿಗೂ ನಾವಿಬ್ಬರು
- ಶ್ರೀಕಾವ್ಯ
20 Jul 2017, 09:37 am
ಇದೆಂಥ ರೋಗ ನನ್ನ ಕಾಡುತಿದೆ
ಊಟ ಸೇರುತ್ತಿಲ್ಲ
ನಿದ್ದೆ ಬರುತ್ತಿಲ್ಲ
ಮನಕೆ ಸಮಾಧಾನವಿಲ್ಲ...
ಯಾವ ವೈದ್ಯರಲ್ಲಿಗೆ ಹೋದರು
ವಾಸಿಯಾಗದ ಖಾಯಿಲೇ ಇದು
ಹೃದಯ ಕದ್ದ ಚೋರಿ ಬರಬೇಕು
ಎದುರಲಿ ನನ್ನ ಉಳಿಸಲು....
ಹೃದಯ ಸಿಲುಕಿರುವಾಗ ಸುಳಿಯಲಿ
ಅಳೆದರೆಸ್ಟು ಗುಡಿಗಳಿಗೆ
ಹೊತ್ತರೆಸ್ಟು ಹರಕೆ ದೇವರಿಗೆ
ಜೀವ ಉಳಿಯದು ಅವಳು ಸಿಗದೇ...
ಗೆಳತಿಯ ಸನಿಹವೆ ಮದ್ದು
ಪ್ರೀತಿಯ ಖಾಯಿಲೆಗೆ
ಮನದಲಿ ಪ್ರೀತಿಯ ಜಲಧಾರೆ
ಗೆಳತಿ ಮಾಡುವ ಮುದ್ದಿಗೆ...
- ಕುಮಾರ ಸಿದ್ದರಾಜ
19 Jul 2017, 09:25 pm
ಮುಸ್ಸಂಜೆ ಕವಿದರೆ ಸಾಕು
ಮನವೇಕೋ....ಗೋಳಾಡುತ್ತೆ
ಇದ್ದವರು ಇಲ್ಲದಾಗ ಮಾತು ಮೌನವಾಗುತ್ತೆ
ಖುಷಿಯಲ್ಲಿರಬೇಕಾದ ಬದುಕು ಕರಾಬ್ ಆಗಿ ಹೋಗಿರುತ್ತೆ
ಕಣ್ಣೀರು ಸುರಿ ಮನಸ್ಸನ್ನೇ ಮನಸ್ಸು ಸಮಾಧಾನಿಸುತ್ತೆ
- ಎಸ್.ಬಿ
19 Jul 2017, 08:32 pm
ಬದುಕಲ್ಲಿ ಬಂದವರು ಭಾರವನ್ನು ತುಂಬಿ ಹೋದರು
ಭಾವನೆಗೆ ಬೆಲೆಯೇ ನೀಡದೆ ಭಾಂದವ್ಯವನ್ನು ಬರಡಾಗಿಸಿ ಹೋದರು
ಬದುಕಿಗೆ ಬಹು ದೊಡ್ಡ ಪಾಠ ಕಲಿಸಿ ಹೋದರು
- ಎಸ್.ಬಿ
19 Jul 2017, 08:05 pm