Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವಳ ಹಾಗೆ

ಅವಳ ಹಾಗೆ ನಗುವಳು ಇವಳು
ಅವಳ ವರಸೆ ಇವಳಿಗೆ!!
ಅವಳ ಮನದ ಆಸೆಯಂತೆ
ಇವಳು ನನ್ನ ಒಡಲಿಗೆ!!

ಅವಳ ನಡೆಯ ರೂಪ ರಾಶಿ
ಇವಳ ಜೊತೆಗೆ ಸಾಗಿದೆ!!
ಅವಳು ಅರಿತ ಕಣ್ಣ ಭಾಷೆಯ
ಇವಳ ನೂಟವು ಅರಿತಿದೆ!!

ಅವಳು ನನ್ನ ಜನ್ಮ ದಾತೆ
ಇವಳಿಗೆ ನಾ ಜನ್ಮವಿತ್ತೆ!!
ಅವಳು ಹಾಡಿದ ಲಾಲಿ ಹಾಡನು
ಇವಳಿಗೆ ನಾ ಹಾಡಿದೆ!!

ಅವಳ ಮಮತೆಯ ಭಾಶೆಯಂತೆ
ಇವಳಿಗೆ ನನ್ನ ಮಮತೆಯು!!
ಅವಳೇ ಇವಳು ಆಗಿಹಳೇನೋ
ಇವಳಿಗಾಗಿಯೇ ಈ ನನ್ನ ಮಡಿಲು!!

- ಪಿ.ಜಿ.ಜ್ಯೋತಿ

18 Jul 2017, 09:15 am

ಬಾಗಿಲಲ್ಲಿ ನಿಂತು

ಬಾಗಿಲಲ್ಲಿ ನಿಂತು ನೋಡುತ್ತಿರುವೆ ನನ್ನ ಬಾಳ ಸಂಗಾತಿಗೆಂದು ದಿನ ಪೂರ್ತಿ ಬಿಸಿಲಲ್ಲಿ ಭೂ ತಾಯಿಯ ಮಡಿಲಲ್ಲಿ ನಿಂತು ಕೆಲಸ ಮಾಡಿ ಬರುವನೆಂದು.............

ಊಟದಲ್ಲಿ ನೂರು ರೀತಿಯ ತಿನಿಸುಗಳನ್ನು ಮಾಡಿರುವೆ
ನನ್ನ ಪ್ರೀತಿಯ ಸವಿ ಸೇರಿರಿ ಪಾಯಸವನ್ನು ಸಿದ್ದಗೊಳಿಸಿರುವೆ ನಿನ್ನ ಮಾತಿನ ಸವಿಯ ನಾನುಂಡು ನಿನಗೆ ಉಣಬಡಿಸಲೆಂದು....................

ಕೈಯ್ಯಲ್ಲಿ ರುಮಾಲು ಕಣ್ಮುಂದೆ ತೊಟ್ಟಿಯಲ್ಲಿ ತುಂಬಿದ ನೀರು ನಿನ್ನ ಕಾಲ ತೊಳೆದು ನನ್ನ ಮನಸ ಮನೆಯೊಳಗೆ ನಿನ್ನ ಕರೆತರಲೆಂದು............

ಸಿಂಗಾರಿಸಿಕೊಂಡು ನಿನ್ನ ಒಳವ ಚಂದ್ರ ಚಕೋರಿಯಂತೆ
ಶಿಗೆಯಲ್ಲಿ ಗುಲಾಬಿ ಮುಡಿದು ತುಟಿಯಲ್ಲಿ ನಿನ್ನ ಕರೆಯುವ ಬಯಕೆ ತಡಿದು ಕಾದು ಕುಳಿತಿರುವೆ ಹೊಸಲಲ್ಲಿ ನಿನ್ನುಸಿರ ಹೆಸರಂತೆ..........

ನನ್ನೆದುರು ನಿನ್ನ ನೋಡಿ ನಿಂತು ಹೊದೆನು ನಾನು ಮಾತಿಲ್ಲದೆ ನಿನ್ನ ಮಡದಿಯಾದರು ದಿನನಿತ್ಯ ನಿನ್ನ ಜೊತೆಗೆ ಇರಲು ಬಯಸುವ ನಿನ್ನ ಪ್ರೀತಿಯ ಪ್ರೇಯಸಿ ನಾನು ಇಂದಿಗೂ ಎಂದಿಗೂ................

- ಚುಕ್ಕಿ

17 Jul 2017, 11:08 pm

ಏನಾಗೈತೆ?

ನೇರ ದಿಟ್ಟ ನಿರಂತರ
ನನ್ನ ಪ್ರೀತಿ
ಒಪ್ಪಿಕೂಳ್ಳಕೆ ಏನಾಗೈತಿ?

ಮುಕ್ತ ವಿಶಾಲ ವಿನಂಬ್ರ
ನನ್ನ ಮನಸ್ಸು
ಒಳಬರೋಕೇ ಏನಾಗೈತಿ?

ನಿತ್ಯ ಸತ್ಯ ಬಿಂಬಿಸುವ
ನನ್ನ ಹೃದಯ
ಇಷ್ಟಪಡೂಕೆ ಏನಾಗೈತಿ?

ಪ್ರೀತಿ ಪ್ರೇಮ ಪ್ರಣಯ
ನನ್ನ ಕನಸು
ಜೊತೆಯಾಗೊಕೆ ಏನಾಗೈತಿ?

ಬಾನು ಬಣ್ಣ ಬಿಲ್ಲು
ನನ್ನ ಬರಹ
ನೋಡೋದಿಕ್ಕೆ ಏನಾಗೈತಿ?

ಒಲವು ನಲಿವು ಜೊತೆಯಲಿ
ನನ್ನ ಪಯಣ
ಬರೋದಿಕ್ಕೆ ಏನಾಗೈತಿ?

ಹರುಷ ವಿರಸ ಸರಸ
ಎಲ್ಲ ನಿನ್ನಲಿ
ಪ್ರೀತಿಸೋಕೇ ಏನಾಗೈತಿ?

ನನಗೆ ನಿನ್ನ ಪ್ರೀತಿ ಬೇಕಾಗೈತಿ, ನೀ ಏನಂತಿ!

- ಕುಮಾರ ಸಿದ್ದರಾಜ

17 Jul 2017, 10:53 pm

ಬಯಕೆ

ಬಯಕೆ ಬಹು
ದೊಡ್ಡದಿಹುದು
ಅದು ನಿನ್ನದೆ ಕೊಡುಗೆ
ಆಗಿಹುದು
ಹುಡುಕುವ ಮಾರ್ಗವು ನನ್ನ ಪಾಲಿನದು

ಅರಸಿ ನಡೆದಿಹೆ
ಬಾಳ ಹಾದಿಯಲಿ
ಬೆರಗು ಮೂಡಿಸುತಲಿಹೆ
ನಾನಿಡುವ ಅಡಿ- ಅಡಿಯಲಿ
ಹೊಸತನವ ಪಡೆಯುತಲಿಹೆ
ಅನುದಿನವು ಬದುಕಿನಲಿ

ಯಡರು-ತೊಡರಿನ
ಹಾದಿಯಲ್ಲಿ
ಒಳಿತು-ಕೆಡುಕಿನ
ಮೋಡಿನಲ್ಲಿ
ಮುಳುಗಿ-ತೇಲುವ
ದೋಣಿಯಲ್ಲಿ
ಅಂಬಿಗನಿಲ್ಲದ ಪಯಣಿಗನು ನಾನು!
ಕೈಪಿಡಿದು ಕಾಯವ್ವ ನೀನು!


ಶಾರಧ

- ಶಕುಂತಲಾ

17 Jul 2017, 10:24 pm

ಶುಭ ವಿದಾಯ

ಸಿಟಿ ಅಂದರೇನು ಕಲಿಸಿತು
ನನ್ನ ಮುಗ್ದತೆಯನ್ನು ದೂರ ಮಾಡಿತು
ಮೌನವನ್ನು ಮುರಿಯಿತು
ಅನ್ನವನ್ನು ನೀಡಿತು
ಹಣವನ್ನೂ ನೀಡಿತು
ಎಲ್ಲರಂತೆ ಬದುಕಲು ಕಲಿಸಿತು
ಜೀವನವನ್ನೇ ಬದಲಾಯಿಸಿತು
ಜೀವನಕ್ಕೆ ಹೊಸ ಅಡಿಪಾಯವನ್ನಿಟ್ಟಿತು
ಸದ್ಯ ಮಂಗಳೂರನ್ನೆ ಬಿಟ್ಟು ಹೋಗುವಂತೆ ಮಾಡಿತು
ಹೊಸ ಜೀವನ , ಹೊಸ ಅನುಭವ ಹೊಸತನವನ್ನು ನೀಡಿದ ಮಂಗಳೂರಿಗೆ ಚಿರಋಣಿ ನಾನು
ಮತ್ತೆ ಬರುವೆನೆಂಬ ಕನಸ ಹೊತ್ತು ತೆರಳುವೆನು ನಾನಿನ್ನು
ಶುಭ ವಿದಾಯ ಮಂಗಳೂರಿಗಿನ್ನು

- ಎಸ್.ಬಿ

17 Jul 2017, 08:23 pm

ಆಕರ್ಷಣೆ

ನಿನ್ನ್ ಅನುಮತಿ ಇಲ್ಲದೆ ಪ್ರೀತಿಸಿದ ನನ್ನ ಕ್ಷಮಿಸು
ಹುಸಿಮುನಿಸಿನ ನಿನ್ನ ಮೊಗ ಚೆಲುವೆ ಸೊಗಸು

ಬಡಪಾಯಿಯ ತೊಳಲಾಟಕೆ ನಿನಗಿಲ್ಲವೇ ಕರುಣೆ
ಬಿಟ್ಟರು ಬಿಡದೆ ಕಾಡುತಿಹುದು
ನಿನ ನೆನಪು ತರುಣೆ

ಈ ಪ್ರೀತಿ ಪರಿಪಾಟು ನನಗಂತೂ ಅತಿ ಹೊಸದು
ಸಾಕಾಗಿದೆ ನನಗೀಗ ಕನಸಲಿ
ಒಬ್ಬನೇ ಅಲೆದು


ಜೊತೆಯಾಗು ನಿ ನನಗೆ
ಬೇರೇನು ಬೇಡೇನಗೆ
ಈಗಂತೂ ಚಂದಿರನ ಮೊಗದಲೂ ಕಾಣುತಿದೆ
ನಿನ್ನ ಪ್ರತಿಬಿಂಬ
ಪ್ರೀತಿಯ ನೆಪದಲ್ಲಿ
ಕಾಡುತಿಹೆ ನೀ ತುಂಬಾ

- pavan

17 Jul 2017, 07:22 pm

ದುಂಬಿಯ ಜೀವನ

ಹೂವಿನ ಒಡಲಲ್ಲಿನ ಮಕರಂದ ಹೀರುವ ದುಂಬಿಗೆ ಸವಿಜೇನು ಮಾಡಲು ಬೇಕಾದ
ಕಲೆಯನ್ನು ದೇವರು ತುಂಬಿ ಕಳುಹಿಸಿರುವೆನು ಭುವಿಗೆ ಸಿಹಿಯಂಚಲೆಂದು...............

ಕದ್ದರು ಆ ಜೇನಿನ ಮಾಧುರ್ಯವನ್ನು ಮನುಜರು ಅತ್ತು ಕೊಂಬೆಯಲ್ಲಿ ಕೂರುವ ಬದಲಾಗಿ ಸ್ವಾರ್ಥವಿಲ್ಲದ ದುಂಬಿಯು ಹುಡುಕತೊಡಗಿತು ಮತ್ತಷ್ಟು ಸುಗಂಧ ಬೀರುವ ಹೂಗಳನ್ನು ಸೂರ್ಯನು ಉದಾಯಿಸುವ ಮೊದಲೇ ಸ್ವಾಧವನ್ನು ಹಿರಲೆಂದು.........

ಹಚ್ಚಹಸುರಿನ ಕೊಂಬೆಯುಡುಕಿ ಬೆಚ್ಚಗಿನ
ತನ್ನುಸಿರ ಬೇರಸಿ ಮತ್ತೆ ಕುಡಿಟ್ಟಲಾರಂಭಿಸಿತು
ಪರಿಪರಿಯ ಪುಷ್ಪಗಳ ರಸವೀರಿ ತನ್ನ ಸಂಗಡಿಗರ ಜೊತೆಗೂಡಿ.....................

- ಚುಕ್ಕಿ

17 Jul 2017, 07:22 pm

ಅಣ್ಣ

ಅಪ್ಪನ ಕೈಯಲ್ಲಿ ಕಿರುಬೆರಳ ಹಿಡಿದು ನಡೆದ ನಾನು
ನಿನ್ನ ನೆರಳಲ್ಲಿ ಮುದ್ದು ತಂಗಿಯಾದೇನೇನು.......

ಎಲ್ಲರಲ್ಲೂ ಬಹಳ ಗಂಭೀರ ನೀನು
ನನ್ನ ಬಳಿ ಇದ್ದಾಗ ಮನಸರಿತ ಸ್ನೇಹಿತನು ನೀನು.............

ಅಣ್ಣ ನೀನು ನಿಡುವ ಪ್ರೀತಿಯ ಕೈತುತ್ತು
ಅಮ್ಮನ ಮಮತೆಯ ಮಾಧುರ್ಯದ
ಸವಿಜೇನಿನ ಸವಿಯಿತ್ತು..............

- ಚುಕ್ಕಿ

17 Jul 2017, 07:03 pm

ಅಪರಿಮಿತ

ಹೊಳೆಯುವ ನಕ್ಷತ್ರಗಳಿಗೆ ಕಾಲನುಮತಿ ಇದೆ ,,
ಆದರೆ ಪ್ರೀತಿಗೆ???

ಮಳೆತರುವ ಮೊಡಗಳು ಕೂಡ ಖಲಿಯಾಗುತ್ತೆ,,
ಆದರೆ ಮನಸಲ್ಲಿರುವ ಭಾವನೆಗಳು???

ಭೂಮಿಗೂ ತನ್ನದೇ ಮಿತಿ ಇದೆ,,,
ಆದರೆ ಮನುಜನ ಆಸೆಗೆ??

- pavan

17 Jul 2017, 06:54 pm

ವಂದನೆ...

ಬೆಳಕ ತಾ ನೇಸರ ಬೆಳಕ ತಾ ನೇಸರ,
ಅಳಿಸು ನೀ ದುಗುಡದುಂಖಗಳಿಲ್ಲದ ಜನರ ಅಹಂಕಾರ,
ನೀಡದಿರು ನೊಂದ ಮುಗ್ದ ಮನಗಳಿಗೆ ಅಂದಕಾರ,
ಅಸಂಖ್ಯಾತ ಜೀವರಾಶಿಗಳಿಗೆ ಆಧಾರವಾದ ನಿನಗೆ ಇದೋ ನನ್ನ ಸಾಷ್ಟಾಂಗ

ನಮಸ್ಕಾರ...

- Spb...@#

17 Jul 2017, 01:11 pm