Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಗೆಳತಿ ನೀನು..........

ಚಿಕ್ಕಂದಿನಿಂದ ಕೈಯಲ್ಲಿ ಕೈಯಿಟ್ಟು
ನಡೆದ ಸ್ನೇಹ ನಮ್ಮದಲ್ಲಾ...........
ಊಟದಲ್ಲಿನ ಸ್ವಾದಗಳ ಕೈಬೆರಳ ತುತ್ತಿಂದ
ಸವಿದಿಲ್ಲ..........

ಮನದಲ್ಲಿ ಮೂಡಿದ ಮಾತುಗಳ
ಮನಬಿಚ್ಚಿ ನಿನ್ನಲ್ಲೆಂದು ಹೇಳಲ್ಲಾ.........
ಮಾತಿಲ್ಲದ ಮಾತಲ್ಲಿ ಹೆಸರಿಲ್ಲದ ಹೆಸರಲ್ಲಿ
ಕಾಕತಾಳೀಯವಾಗಿ ಸಿಕ್ಕ ನನ್ನ ಪ್ರೀತಿಯ
ಸ್ನೇಹಿತೆ ನೀನು............

ಎದರು-ಬದುರು ನಾವಿಬ್ಬರು ಎಂದು
ಕುಳಿತಿಲ್ಲ................
ಅರಿತ ನಗುವಿನ ಒಲವು ನೀನು
ಮರೆಯಲಾಗದ ಚೆಲುವಿನ ಬೆಳಕು ನೀನು...........

ಗೆಳತಿ ನೀನು.............

- ಚುಕ್ಕಿ

05 Jul 2017, 03:36 pm

ಕರಿಮೋಡ ಮುಸುಕಿದೆ.......

ಕರಿಮೋಡ ‌ಮುಸುಕಿದೆ ಮನಸಲಿ
ಸುರಿಯಬಹುದೆ ಜೋರು ಹನಿಗಳು ಕಣ್ಣಲಿ‌
ಕಾಣದಾಗಿದೆ ಏನು ಕರಿಮೋಡದಾಚೆಗೆ
ಮಂಜು ಮುಸುಕಿದೆ ಮನಸಿನ‌ ಕಣ್ಣಿಗೆ

ನನ್ನೊಳಗೆ ಆವರಿಸಿದೆ ಎಂಥದೊ ಕತ್ತಲು
ಹುಡುಕುತಿರುವೆ ಬೆಳಕ ಹರಸಿ ಸುತ್ತಲು
ಕಳೆದು ಕೊಂಡಿರುವೆ ನನ್ನೊಳಗಿನ ನನ್ನದೆ ನೆರಳು
ಏನನು ಅರಿಯಲಾಗದೆ ಆವರಿಸಿದೆ ಮರುಳು

ಕರಗದೆ ಮೋಡ, ಹರಿಯದೆ ಕೂಡಿಟ್ಟ ನೀರ ಹನಿಗಳು
ಚಿಗುರಿ ಬೆಳೆಯವು ಹೂತಿಟ್ಟ ಕನಸಿನ ಬೀಜಗಳು
ಕನಸು ಸಂತಸವಿರದ ಬದುಕಲಿ ಉಳಿವುದೊಂದೆ ಪ್ರಶ್ನೆಗಳು
ಕತ್ತಲ ಮನಕೆ ಸಿಗುವ ಉತ್ತರ ಜೀವ ಜೀವನಕೆ ಉರುಳು

ಹಗುರಾಗಬೇಕು ಕಣ್ಣ ಹನಿಗಳ ಸುರಿಸಿ
ಮನಸಲಿನ ಕರಿಮೋಡವ ಕರಗಿಸಿ‌
ಕರಗಿ ಸುರಿದು ಕರಿಮೋಡ ಸರಿದಾಗ ಮನಸು ಹಗುರವೆನಿಸಿ
ನೋಡಿ ನಕ್ಕು ಅಪ್ಪುವುದು ಬದುಕ, ಹೊರ ಜಗವ ಗಮನಿಸಿ

- ಶ್ರೀಕಾವ್ಯ

05 Jul 2017, 10:29 am

ಮುಂಜಾನೆ ಅರಳಿದ ಮೊಗ್ಗು

ಮುಂಜಾನೆ ಆಯಿತು ಸೂರ್ಯನ
ಕಿರಣಗಳಿಂದ ಅರಳಿತು ಮುಸ್ಸಂಜೆ
ನೋಡದ ಮುದ್ದಾದ ಮೊಗ್ಗುಗಳು.......

ಚಿರಪರಿಚಿತರು ಯಾರಿಲ್ಲ ಈ ಸೊಗಸಾದ
ಮೊಗ್ಗಿಗೆ ಬೆಳದಿಂಗಳ ಶಶಿ ಬಿಟ್ಟರೆ............

ಸುಗಂಧಭರಿತ ಈ ಮುಗ್ಡೆಯ ಜನನ
ಯಾವ ಕಾರಣಕ್ಕೆ ಬಂಧಿಸಲಾಗುವುದೋ
ಇದರ ಚಲನವಲನ ಜೀವನವೆಂಬ ದಾರದಲ್ಲಿ.......

ಮುಟ್ಟಿದರೆ ನಗುವುದು, ನೋಡಿದರೂ ನಾಚುವುದು..............
ತನ್ನ ತಾಯಿಯ ಮಡಿಲಲ್ಲಿ ಕುಂತು ಕಾಣದ ಪ್ರಪಂಚ ಕಾಣುವುದು.............

ಮುಂಜಾನೆ ಅರಳಿದ ಮೊಗ್ಗನ್ನು ಪಡೆವ ಆಸೆ ಎಲ್ಲರದು ಈ ಜಗದಲ್ಲಿ.............
ತನ್ನ ಜೋಪಾನ ಮಾಡುವ ಮನಸೇರುವ ಆಸೆ ಆ ಮೊಗ್ಗಿಗೆ ಸುಂದರವಾದ ಹೂವಾಗಿ ಅರಳಿ.........

ಎಂದುಗೂ ಬಾಡದ ಕಣ್ಣುಗಳಲ್ಲಿ ಕೋಟಿ ಆಸೆಗಳ ಕನಸಲ್ಲಿ ನನಸಾಗಿ ತೆರಳಿ...............

- ಚುಕ್ಕಿ

05 Jul 2017, 07:58 am

ಚಿನ್ನದ ಹೂವು

ಚಿನ್ನದ ಹೂವಿಗೆ
ಜೀವವ ತುಂಬಲು
ತಪವನು ಗೈದರೂ
ಜೀವವು ಬಾರದು..!!

ವಲಿಯದ ಹೆಣ್ಣಿನ
ಸನಿಹವ ಬಯಸಿ
ನೀ..........‌
ಹಿಂಬಾಲಿಸಿ ನಡೆದರೂ
ಹಿಂತಿರುಗಿಯೂ
ಅವಳು....
ತಾ ನೋಡಳು......!!

- ಪಿ.ಜಿ.ಜ್ಯೋತಿ

05 Jul 2017, 07:30 am

ಮಂದಾರ

ಈ ಮುಂಜಾವಿನ
ಇಬ್ಬನಿಯ ಸೊಗಸು
ಕಂಡು ಅರಳದೇ
ಮಂದಾರಕೆ ಮುನಿಸು!!

ಆ ಸೂರ್ಯನ
ಹೊಂಗಿರಣದ ಸ್ಪರ್ಷ
ಅರಿತೂ ಅರಿಯದಂತೆ
ಯಾಕೆ ಈ ಹುಸಿ ಮುನಿಸು!!

ದುಂಬಿಯ ಝೇಂಕಾರದ
ಧನಿಯನು ನೀ
ಕೇಳಿಯೂ ಕೇಳದಂತೆ
ನಟಿಸಿದ ‌ನಟನೆ ಸಾಕು!!

ಸಾಕು ಮಂದಾರವೇ ನಿನ್ನ
ಹುಸಿ ಮುನಿಸಿನ ಈ ಆಟ
ಅರಳಿ ತೋರಿಸು ನಿನ್ನ
ಮಂದಹಾಸದ ಹೊಸ ನೋಟ!!.

- ಪಿ.ಜಿ.ಜ್ಯೋತಿ

05 Jul 2017, 07:30 am

ನಿನ್ನ ಕಂಡ ಮುಂಜಾವು

ಈ ಮುಂಜಾವಿನ ವೇಳೆ
ಕೊಡೆ ಹಿಡಿದು ನೀ ಬರುವಾಗ
ಆ ಉಷೆಗೂ ನಾಚಿಕೆ
ನಿನ್ನ ರಂಗಾದ ಗುಳಿ ಕೆನ್ನೆ ಕಂಡು!!

ಎಳೆ ಹುಲ್ಲ ಹಾಸಿಗೆಯ ಮೇಲೆ
ನಿ ನಡೆದು ಬರುವಾಗ
ಆ‌ ಇಬ್ಬನಿಯ ಹನಿಗಳು ಕರಗಿ
ತೊಳೆದಾವು ನಿನ್ನ ಪಾದ!!

ತಂಪಾದ ತಂಗಾಳಿ ತಾನು
ನಿನ್ನ ಕೋಮಲ ಮೈ ಸೋಕಿ
ಬಂದು ಸುತ್ತುವರಿದು ಆವರಿಸಿತು
ನನ್ನ ಏಕಾಂತದ ಬದುಕ ತುಂಬ!!

ಮಂಜಿನ ಮುಸುಕನು ಹೊದ್ದು
ಆ ಚಟ ಪಟ ಮಳೆಯಲಿ ಅದ್ದು
ನಿನ್ನ ನೋಡುತ್ತ ನಿಂತಾಗ ಕದ್ದು
ನನ್ನ ಎದೆಯಲಿ ನಿಲ್ಲದ ಸದ್ದು!!

- ಪಿ.ಜಿ.ಜ್ಯೋತಿ

05 Jul 2017, 07:29 am

ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ

ಕ್ಷಣ ಕಾಲ ತೆರೆದಿಡುವೆ ನನ್ನಿ ಎದೆಯನ್ನ ನೋಡು ಭಾ ಗೆಳತಿ ನನ್ನೊಳಗೆ ನಿನ್ನ... ಅಲ್ಲಲ್ಲಿ ಹುದುಗಿಹುದು ನೀ ಬಿಟ್ಟ ಹೂ ಭಾಣ ಕತ್ತೊಗೆದು ಅಪ್ಪಿಕೋ ಕಣ್ಮುಚ್ಚುವ ಮುನ್ನ....

- HariNc

05 Jul 2017, 12:22 am

ವಸಂತ ಕಾಲದ ಉಷಾ ಸಮಯ

ಸುಂದರ ವಸಂತ ಕಾಲದ ಮುಂಜಾನೆಯಲ್ಲಿ, ಸೂರ್ಯನ ಬೆಳಕು ಭೂಮಿಗೆ ಮುತ್ತಿಡುವ ಸಮಯದಲ್ಲಿ, ಹಕ್ಕಿಗಳ ಚಿಲಿಪಿಲಿ ಇಂಚರದಲ್ಲಿ,
ಜುಳು-ಜಳು ಹರಿವ ನೀರಿನ ಸದ್ದಿನಲ್ಲಿ, ಸುಂದರವಾದ ಉಷಾ ಸಮಯಕ್ಕೆ ಅದರದ ಸುಸ್ವಾಗತ.... ಶುಭದಿನ ಶುಭವಾಗಲಿ

- ವಾಸು ಕೋಲಾರ

05 Jul 2017, 12:04 am

ಕಾಣದ ಕಡಲು

ಕಾಣದ ಕಡಲಿಗೆ ಭಾವನೆಗಳ ಕನಸನ್ನು ಕಟ್ಟುತ್ತಿರುವ ತಿಳಿಯದ ತೀರ ನಾನು
ಝರಿಯಂತೆ ಹರಿಯುವ ಮುದ್ದಾದ ನದಿಯು
ನೀನು
ನಿನ್ನ ನಡುಗೆಗೆ ದಾರಿ ನಾನಾಗುವ ಆಸೆ ಗಳತಿ.
ಒಮ್ಮೆಯಾದರು ತಿರುಗಿ ನೋಡೆ
ಕತ್ತೆಲೆ ಆವರಿಸಿ ಖಾಲಿಯಾಗುತ್ತಿರವ
ನನ್ನ ಮನದ ಹ್ರೃದಯದಾಳಕ್ಕೆ ಒಮ್ಮೆಯಾದರು
ಸೇರು ಬಾರೆ ನನ್ನ ಪ್ರೀತಿಯ ಮಳೆ ಹನಿಯೇ?????????

seenuPaddu

- seenupaddu

05 Jul 2017, 12:02 am

ನಮ್ಮ ಕೋಲಾರ

ಬನ್ನಿ ಒಮ್ಮೆ ನಮ್ಮೂರಿಗೆ..
--------------------

ನೋಡ ಬನ್ನಿ ನಮ್ಮೂರ
ನಿಮಗೆ ಚಿನ್ನ ರೇಷ್ಮೆ ಹಾಲು ಕೊಟ್ಟ ಕೋಲಾರ..

ನಮ್ಮ ಊರು ಮಾಲೂರು
ಶಿವಾರಪಟ್ಟಣ ಶಿಲ್ಪಿಗಳ ತವರು
ಕಲ್ಲುಗಳಿಗೆ ಇಲ್ಲಿ ಜೀವ ತುಂಬುವರು..

ಕನ್ನಡದ ಆಸ್ತಿ
ನಮ್ಮ ಕವಿ ಮಾಸ್ತಿ
ಅವರು ನಮ್ಮವರೆಂಬ ಹೆಮ್ಮೆ ನಮಗೆ ಸ್ವಲ್ಪ ಜಾಸ್ತಿ..

ಶ್ರೀನಿವಾಸ ನೆಲೆಸಿರುವ ಚಿಕ್ಕತಿರುಪತಿ
ಬರುವ ಭಕ್ತರ ಸಂಖ್ಯೆ ಚಿಕ್ಕದಲ್ಲ ದೊಡ್ಡದಿದೆ ಖ್ಯಾತಿ..

ಬಂಗಾರವನ್ನು ಮೂಟೆಗಳಲ್ಲಿ ತಂದು ಮಾರುತಿದ್ದರಂತೆ ಬಂಗಾರಪೇಟೆಯಲ್ಲಿ
ಹೈದರ್ ಆಲಿ ಹುಟ್ಟಿದ್ದು ಇಲ್ಲೇ ಬೂದಿಕೋಟೆಯಲ್ಲಿ..

ಚಿನ್ನವನ್ನು ಬಗೆಯುತಿದ್ದ ಕೋಲಾರ ಗೋಲ್ಡ್ ಫೀಲ್ಡಲಿ
ಗೋಲ್ಡು ಖಾಲಿಯಾಗಿ ಈಗ ಫೀಲ್ಡು ಮಾತ್ರ ಉಳಿದಿದೆ..
ಇಲ್ಲಿನ ಜನಪ್ರಿಯ ಆಟ ಕಾಲ್ಚೆಂಡು
ಇಂಗ್ಲಿಷರ ಪ್ರಭಾವದಿಂದ ಇದೊಂದು ಮಿನಿ ಇಂಗ್ಲೆಂಡು..

ಕೋಟಿಲಿಂಗ ದರ್ಶಿಸಿದರೆ ಕೋಟಿ ಪಾಪ ಕಳೆವುದು
ಗುಟ್ಟಹಳ್ಳಿಯ ಬೆಟ್ಟದಲ್ಲಿ ಸಕಲ ಪುಣ್ಯ ಸಿಗುವುದು..

ಕಗ್ಗದ ಸಿರಿ ಡಿವಿಜಿ ಯವರು ಹುಟ್ಟಿದ ಮುಳಬಾಗಿಲು
ನಮ್ಮ ಕರ್ನಾಟಕದ ಹೆಬ್ಬಾಗಿಲು..
ಇಲ್ಲಿನ ಆಂಜನೇಯ, ಆವಣಿಯ ರಾಮ, ವಿರೂಪಾಕ್ಷಿ, ಕೊಲದೇವಿ, ಕುರುಡುಮಲೆ, ನರಸಿಂಹ ತೀರ್ಥ
ಎಲ್ಲಾ ದರ್ಶನದಿಂದ ನಿಮಗೆ ಸಿಗುವುದು ಪರಮಾರ್ಥ..

ಶ್ರೀನಿವಾಸಪುರದಲಿ
ಎಲ್ಲಿ ನೋಡಿದರೂ ಮಾವು..

ಸಿಹಿಗೆ ಹೆಸರು ಇಲ್ಲಿನ ಮಾವು
ದೇಶ ವಿದೇಶಕ್ಕೂ ಕಳಿಸುತ್ತೇವೆ ಇಲ್ಲಿಂದ ನಾವು..


ನಗರವನ್ನು ಕಾಯುತ್ತಿರುವ
ಕೋಲಾರಮ್ಮ ಸೋಮೇಶ್ವರ ದೇವಸ್ಥಾನಗಳು
ಮನಮೋಹಕ ಶಿಲ್ಪಕಲೆಗೆ ಉದಾಹರಣೆಗಳು..

ಶತಶ್ರೃಂಗದ ಕಣಿವೆಯಲಿ
ಹಿತಕರವಾದ ಪರಿಸರದಲಿ
ಶಿವನ ಸನ್ನಿಧಿಯಲ್ಲಿ
ಸದಾ ಸಿಹಿನೀರ ಸುರಿಸುತ್ತಾಳೆ ಅಂತರಗಂಗೆ..
ಇಲ್ಲಿ ಬಿಟ್ಟರೆ ಎಲ್ಲ ಕಡೆ ತೊಟ್ಟು ಹನಿಗೂ ಪರದಾಟ ಏಕೆ ಮುನಿಸಿಕೊಂಡಿದ್ದಾಳೋ ಹರಹರ ಗಂಗೆ..

ನೀರಿಲ್ಲದಿದ್ದರೂ ಅತಿ ಹೆಚ್ಚು ತರಕಾರಿ ಬೆಳೆಯೋರು ನಾವು
ಒಂದಿಷ್ಟು ನದಿ ನಾಲೆ ಇದ್ದಿದ್ದರೆ ಇನ್ನೆಷ್ಟು ಬೆಳೆಯುತ್ತಿದ್ದೆವು
ಯೋಚಿಸಿ ನೀವು..

ಎಲ್ಲರ ನೀರಿಲ್ಲದಿದ್ದರೇನಂತೆ..
ಪ್ರೀತಿಯ ಪನ್ನೀರ ಕೊಡುತ್ತೇವೆ..
ಒಮ್ಮೆ ಬನ್ನಿ ಇಲ್ಲಿಗೆ..
ಇಲ್ಲಿನ ಜನರ ಮನಸು ಮಲ್ಲಿಗೆ..

- ವಾಸು ಕೋಲಾರ

04 Jul 2017, 04:43 pm