Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅದೃಷ್ಟವೋ..... ಹಣೆಬರಹವೋ......

ಅಪ್ಪ ಕೊಟ್ಟ ಆಭರಣವ
ಗಂಡ ದುಡಿದು ಕೂಡಿಟ್ಟ ಹಣವ
ಮುರುಕಲು ಕಪಾಟಿನಲ್ಲಿಟ್ಟು
ತೆರಳಿದೆವು,ಕದ ತೆರೆದಿಟ್ಟು

ಸಜೀವಗಳನ್ನೆ- ನಿರ್ಜೀವಗಳಾಗಿಸಿ
ದೋಚುವರು ಜಗವ ಮರುಳಾಗಿಸಿ
ಕಬ್ಬಿಣದ ಸರಪಳಿಯಿಂದ ಬಂದಿಸಿದ್ದರು.........
ಬಿಡಿಸಿ ಜಾಣ್ಮೆಯಿಂದ
ನಿನ್ನ ಪಡೆವರು.........

ನಾ ತೆರೆದಿಟ್ಟ ಕದವ ನೆನೆದು
ಮನವು ಆತಂಕದಲ್ಲಿ ಓಲಾಡಿತು
ಉಸಿರ ಬಿಗಿಹಿಡಿದು
ನೂರು ದೇವರ ಮನದಲ್ಲಿ ನೆನೆದು
ಓಡಿಬಂದೆವು.......

ಅದೃಷ್ಟವೋ- ಹಣೆಬರಹವೋ
ಇದ್ದದ್ದು ಇದ್ದಂತೆ ಇತ್ತು
ಹೊದ ಜೀವ ಮರಳಿತು
ನಮ್ಮ ಪುಣ್ಯವೋ....
ದೇವರ ವರವೋ.....

ಅಂತು ಸುಖಾಂತವು
ನಮ್ಮ ದುಗುಡವು

ಶಾರಧ

- ಶಕುಂತಲಾ

02 Jul 2017, 05:21 pm

ಹಾಲುಗಡಲು

ಹಾಲುಗಡಲ ವೀಕ್ಷಣೆಗಿಂತ ನಿನ್ನ
ಹಾಲಿನಂತಹ ಮನಸಲ್ಲಿ ಕೆನೆಯಾಗಿ
ಉಳಿದುಕೊಳ್ಳಲು ಮನವಿಂದು ಬಯಸುತ್ತಿದೆ...............

ಕೋಮಲವಾದ ನಿನ್ನ ಸ್ಪರ್ಶೆ ಗಾಳಿಯಲ್ಲಿನ
ತುಂತುರು ಮಳೆಯಷ್ಟು ಭಾರವಾಗಿದೆ ಧರೆಸೇರುವ ಮೊದಲೇ ನನ್ನ ಮನಸೇರುವೆಯಾ ಅಮೃತವಾಗಿ..........

ಆದಿ ತಳಿಯದ ನನ್ನ ಪ್ರೇಮ ಸಾಗರದ
ಅಲೆಗಳಿಗೆ ಅಂತ್ಯವೆಲ್ಲಿ ಎಂದು ಹೇಳಲಿ ನಾನು ನಿನ್ನ ನೋಡುತ್ತಾ ಕುಳಿತಿರಳು............

ನಿನ್ನ ನಿಲಿಗಣ್ಣಲ್ಲಿನ ತಿಳಿನೀರ ಧಾರೆಯಾಗಿ
ನನ್ನ ಮನದ ಕೈಸೇರಿ ಪ್ರೇಮ ಭಾಷೆಯ ನೀನಾಲಿಸು ನನ್ನಲ್ಲಿ ಮನಸಿಗೆ ನೂತನ ಹೆಸರಾಗಿ............

- ಚುಕ್ಕಿ

02 Jul 2017, 03:10 pm

ಕನ್ನಡವೇ ಜೀವ

ಹೂವಾಗಿ ಹರಳುವುದು ಸುಗಂಧದ ವಾಸನೆ,
ಓದುತ್ತಾ ಹರಳುವುದು ಜ್ಞಾನದ ವಾಸನೆ,
ಕವಿಗಳಿಂದ ಹರಡುವುದು ಕನ್ನಡದ ವಾಸನೆ,
ಕನ್ನಡದ ವಾಸನೆಯಿಂದಲೇ ನಮ್ಮೆಲ್ಲರ ಸ್ವಾಸನೆ.

- ಪರೋಶ್ರೀ

- Srinivasakavana

02 Jul 2017, 02:52 pm

ತೊರೆದಿರುವೆನು ನಾನು ಬದುಕುಬಲ್ಲೆನು...

ತೊರೆಯುವಂತೆ‌ ಮಾಡಿರುವೆ ನಿನ್ನ ಸಂಗ
ಬಲ್ಲೆ ಒಬ್ಬಂಟಿಯಾಗಿ ಬದುಕುವುದು ‌ಹೆಂಗ
ಮತ್ತೆ ತರಬೇಡ‌ ನನ್ನ ಏಕಾಂತಕೆ ಭಂಗ
ನಾನೆಂದು ಕೊಡೆನು ಬೆಲೆಕಟ್ಟಲಾಗದ ನನ್ನ ಒಲವ‌ ನಿಂಗ

ಅನ್ನುವರಲ್ಲೊ ಪತಿಯೆ ಸತಿಯ ಪರದೈವ
ನೀನಾದೆಯಲ್ಲ‌ ನನ್ನ ಪಾಲಿಗೆ ಕಾಡಿಸುವ ದೆವ್ವ
ನಾ ನಂಬಿ ನಿನ್ನ ಪಾದವ ಸೇರಿದ ಹೂವ
ಹೊಸಕಿ‌ ಹಾಕಿದೆಯಲ್ಲೊ‌ ನೀಡಿ ಕೊಡಬಾರದ ‌ನೋವ
ತಾಳಲಾಗದೆ ಒಲವಿರದ ನೋವ ‌ಮುದುಡಿ ಹೋಗಿದೆ ಜೀವ

ನೀ ಹಾಕಿದ ಮೂರು ಗಂಟಿಗೆ ‌ಸೋತು
ಏಳು‌ ಹೆಜ್ಜೆಯ ನಂಟಿಗೆ ‌ನನ್ನನೆ‌ ಮರೆತು
ಬಾಳ ಏಳು‌ ಬೀಳುಗಳಲಿ ನಿನ್ನಲೆ ಕಲೆತು
ಬಂದೆನೊ ನೂರು ಕನಸುಗಳ ಮನಸಲಿ ಹೊತ್ತು
ಹೊರಟಿರುವೆನು ನಿನ್ನಿಂದಲೆ ದೂರ ಅವುಗಳೆಲ್ಲ ಸತ್ತು

ಎದುರಿಸಿ‌ ಬದುಕವೆನೊ ಬಂದರು ಸಾವಿರ ನೋವು
ನೀನಿಲ್ಲದಿದ್ದರು ನಡೆವುದು ನನ್ನ ಜೀವನ ಜಗವು
ಅಂದುಕೊಳ್ಳದಿರೊ ನೀನಿಲ್ಲದಿದ್ದರೆ ನನಗಿಲ್ಲ ಉಳಿವು
ನಿನ್ನ ಕೈಯಲಿಲ್ಲ ನನ್ನ ಅಳಿವು , ನಾ ನೋಡಬಲ್ಲೆ ಗೆಲುವು
ಸ್ವತಂತ್ರ ಬದುಕ ಎಣೆಯುವೆನು ಬರುವವರೆಗು ಸಾವು

- ಶ್ರೀಕಾವ್ಯ

02 Jul 2017, 10:44 am

ಮಡಿಕೆಯ ಬೇಧ

ಹೊನ್ನಿನ ಮಡಿಕೆಗೂ
ಮಣ್ಣಿನ ಮಡಿಕೆಗೂ
ನಡುವಲಿ ಏನಿದು ಬೇಧ!!
ಪಳ ಪಳ ಹೊಳೆಯುವ
ಹೊನ್ನಿನ ಮಡಿಕೆಯು
ಬೀಗುತಲಿಹುದು ನೋಡ!!

ಬಿದ್ದರೆ ಒಡೆಯುವ
ಮಣ್ಣಿನ ಮಡಿಕೆಯೇ
ನನ್ನಯ ಯೋಗವ ನೋಡು!!
ರಾಜನ ಮನೆಯಲಿ
ಹಿರಿಮೆಯ ಪಡೆದಿಹ
ನನ್ನಯ ಕೀರ್ತಿಯ ನೋಡು!!

ಬಡವನ ಗುಡಿಸಲ
ಮುರುಕಲ ಮನೆಯಲಿ
ನಿನ್ನಯ ಪಾಡದು ನೋಡು!!
ಬಿದಿರಿನ ಕಡ್ಡಿಯ
ಬಾಗಿಲ ಒಳಗಿನ ನಿನ್ನಯ
ಸೊಬಗಿನ ಬಗೆ ನೋಡು!!

ಬೀಗುತ ಸಾಗುತ ಇಬ್ಬರೂ
ಹೊರಟರು ದೂರದ
ಕೆರೆಯನು ಅರಸಿ!!
ಕೆರೆಯಲಿ ಮುಳುಗಿ ಏಳಲು
ಕಂಡವು ನೀರಿನ
ಹನಿಗಳು ತುಳುಕಿ!!

ಹೊನ್ನಿನ ಮಡಿಕೆಗೂ
ಮಣ್ಣಿನ ಮಡಿಕೆಗೂ
ಬೇಧವ ಕಾಣದು ನೀರು!!
ಇಬ್ಬರ ಒಳಗೂ ತನ್ನನು ತುಂಬಿಸಿ
ನಗುತಲೇ ನುಡಿಯಿತು
ನಾ ಎಲ್ಲರಿಗೂ ಸಮ ಪಾಲೆಂದು!!

- ಪಿ.ಜಿ.ಜ್ಯೋತಿ

02 Jul 2017, 10:42 am

ನಿವೃತ್ತಿ

ನಾ ನ್ಯಾಯಾಧೀಶನಾಗಿ
ನ್ಯಾಯ ಹೇಳುತಿದ್ದೆ!!
ಅನ್ಯಾಯ ಮಾಡಿದವರ
ಕೈಗೆ ಕೋಳ ತೊಡಿಸುತಿದ್ದೆ!!

ನ್ಯಾಯ ದೇವಿಗೆ ನಾ
ಮೆಚ್ಚಿನ ಮಗನು ಅಂದು!!
ಕಾಲ ಸರಿದರೂನೂ
ಅನ್ಯಾಯ ಸುಳಿಯಲಿಲ್ಲ!!

ಕಣ್ಣಿನ ಕಪ್ಪು ಬಟ್ಟೆ
ತಾ ಸರಿಸಲಿಲ್ಲ ತಾಯಿ!!
ಕೈಯಲಿ ತಕ್ಕಡಿ ಹಿಡಿದು ನಿಂದು
ತಾ ತೂಗಿ ನೀಡಿದಳು ತೀರ್ಪು!!

ನ್ಯಾಯ ದೇವತೆಗೆ ನಾ
ನಿವೃತ್ತಯ ಮಗನು ಇಂದು!!
ಅನ್ಯಾಯ ಕಂಡರೂನೂ
ನ್ಯಾಯ ನೀಡಲಾರದೇ ಹೋದೆ!!

ಅಂತರಂಗದ ಕಣ್ಣಿಗೆ ನಾ
ಕಪ್ಪು ಬಟ್ಟೆ ಕಟ್ಟಿ ಕುಳಿತೆ!!
ಅನ್ಯಾಯದ ಪರದೆಯ ಹಿಂದೆ
ನಿವೃತ್ತಿಯ ಪಟ್ಟ ಹೊತ್ತು ಕುಳಿತೆ!!

- ಪಿ.ಜಿ.ಜ್ಯೋತಿ

02 Jul 2017, 10:35 am

ಮಳೆ

ತುಂತುರು ತುಂತುರು ಮಳೆಯಲಿ
ನಾವಿಬ್ಬರೂ ನಿಂತೆವು ಜೊತೆಯಲಿ!!
ತಂಪಿನ ಸ್ಪಂದನ ಇಳೆಯಲಿ
ನಡುಗಿದೆ ಈ ತನು ಚಳಿಯಲಿ!!

ಹಾಯಾದ ಆನಂದ ಇಂದು
ಈ ಸಂಜೆ ಮಳೆಯಲಿ ಮಿಂದು!!
ನೀ ಹೆಜ್ಜೆ ಇಡುವಾಗ ಜೊತೆಗೆ
ಇರುವಂತ ಹೆಜ್ಜೆಯು ನನದೇ!!

ನಿನ್ನ ಕೈಹಿಡಿದು ನಾ ನಡೆಯುವಾಗ
ಜಾರಿ ಬಿದ್ದಂತೆ ಈ ಪ್ರೇಮ ಯೋಗ!!
ಮಾತಾಡದೇ ಮನ ಮೂಕಾಗಿದೆ
ಈ ಅನುರಾಗ ಜೊತೆ ಸೇರಿದಾಗ!!

- ಪಿ.ಜಿ.ಜ್ಯೋತಿ

02 Jul 2017, 10:11 am

ಗೆಳತಿ....!!!

ಗೆಳತಿ ನಾ ಬರಲಿ,
ಬರದೆ ಇರಲಿ,
ನಾ ಮನಸಾರೆ ಕೊಟ್ಟ ಹೂ
ಬಾಡದಿರಲಿ.....

- AbhinandanJayagoud

02 Jul 2017, 08:46 am

ಮನದನ್ನೆ

ನಸುಕಿನ ರವಿಯ ಕೆಂಪನೆಯ ಹೆಣ್ಣೆ
ಸನ್ಸಕ್ರೀನ್ ಬಳೆದಿರುವ ಕೆಂಬಣ್ಣದ ಕನ್ನೆ
ದುಂಡಾದ ಮೊಗದ ಸುಂದರ ಕೆನ್ನೆ
ರೂಪಲಾವಣ್ಯ ಬಣ್ಣಿಸುವೆ ಮನದನ್ನೆ

ಆರಡಿ ಎತ್ತರದ ನಿನ್ನೀ ಸುಂದರ ನಿಲುವು
ಕಣ್ತುಂಬ ಸೆಳೆಯುವ ತುಟಿಯ ನಸುನಗು
ಮಂದಾರ ಪುಷ್ಪದಂತಹ ಮುಗ್ದ ಚೆಲುವು
ಎಷ್ಟು ಬಣ್ಣಿಸಿದರೂ ಸಾಲದು ನಿನ್ನೀ ಸೊಬಗು

- sathyabapuji

02 Jul 2017, 12:03 am

ನನ್ನ ಮೊಮ್ಮಗಳು

ಕಣ್ಣಿನ ನೋಟದಲ್ಲೇ ಎಲ್ಲರ ಸೂರೆಗೊಳ್ಳುವಳು
ನಯನ ಭಾವದಲ್ಲೇ ತನ್ನಿಚ್ಛೆ ತೋರ್ಪಡಿಸುವಳು
ಹಠ ಮಾಡುವುದರ ಮೂಲಕ ತನ್ನ ಬೇಕು ಬೇಡಗಳು
ನಯವಾಗಿ ಪೂರೈಸಿಕೊಂಡು ಗೆದ್ದೆನೆಂದು ಬೀಗುವಳು
ನಮ್ಮೊಲವಿನ ಸದಾ ನಗುವ ಮುದ್ದಿನ ಮೊಮ್ಮಗಳು

- sathyabapuji

01 Jul 2017, 11:13 pm