ಜಗತ್ತೆಂಬ ಮಾರುಕಟ್ಟೆಯಲ್ಲಿ
ಜಾಹೀರಾತೆಂಬ ಅಂಗಡಿಯಲ್ಲಿ
ಮಾರಾಟಕ್ಕಿಟ್ಟರು ಹೆಣ್ಣಿನ ಸೌಂದರ್ಯವನ್ನು
ಅವಳ ಪ್ರಾಣವಕ್ಕೆ ಬೆಲೆಕಟ್ಟಿ...........
ಜೀವನದ ಜಂಜಾಟದಲ್ಲಿ ಅವಶ್ಯಕತೆಗೆ ಮಾರುಹೋದಲೋ...............
ತಾರೆಯಾಗುವ ತವಕದಲ್ಲಿ ತನ್ನ ತಾ ಮಾರಿಕೊಂಡಲೊ ತಿಳಿಯಲಿಲ್ಲ ನೋಡುವ ವೀಕ್ಷಕರಿಗೆ ಹಂಗಿಲ್ಲದ ಮನರಂಜನೆಯಲ್ಲಿ...........
ಸಂಬಂಧವಿಲ್ಲದ ಸಾಮಗ್ರಿಗಳನ್ನು, ಸೌಂದರ್ಯ ವರ್ಧಕಗಳನ್ನು ಜೀವನದಲ್ಲಿ ಒಮ್ಮೆಯಾದರೂ ನೋಡದೇನೆ ತಾ ಬಳಸಿದ ವಸ್ತುಗಳೆಂದು ಪ್ರಾಚಾರಮಾಡುವಳು ಪ್ರೇಕ್ಷಕರ ಮನದಲ್ಲಿ ಖರೀದಿಸುವ ಆಸೆ ತರೆಸುವಳು............
ಜೀವನವೆಂಬ ಸುರುಳಿಗೆ ಸಿಕ್ಕ ಜೀವ
ಮರಲಿಬಾರದು ಮೊದಲಿನ ಸ್ಥಿತಿಗೆ...........
ಬಿಡುವುದಿಲ್ಲ ಜನರೆಂಬ ಅಲೆಗಳು ದಾಟಿಹೋಗಲು ನೆಚ್ಚಿನ ಜೀವನದಲ್ಲಿ ಸ್ವಾತಂತ್ರ್ಯವಾಗಿ ಜೀವಿಸಲು....................
ಅಲೆಗಳು ಆಡುವ ಜೀವದಾಟದಲ್ಲಿ ಅಲೆದಾಡುತ್ತಿದೆ ಮನಸು ನೊಂದ ಮನಸ್ಸು.......
ನೊಂದು-ಬೆಂದು ಬೆಸೆತ್ತರೂ ಅವರ ಮಧ್ಯೆಯೇ
ಸಾವು ಇವರೊಂದಿಗೆ ಬದುಕು ಸಹಾ..........
ಗಡಿಬಿಡಿಯ ಜೀವನದ ಗಲಾಟೆಯಲ್ಲಿ
ಗಾಯಗೊಳ್ಳುವುದು ದೇಹವಲ್ಲ ಮನಸ್ಸು
ಎಂದಿಗೂ ಮಾಯವಾಗದ ಗಾಯಗಳನೋತ್ತು ಅಳುವ ಮನಸು................
ಕಾಣದೆ ನಿನ್ನನು ಕಾಯುತಿದೆ ಈ ಮನಸ್ಸು
ಹತ್ತಿರ ಬಂದು ಕಣ್ಣೋಟವ ಸೆಳೆದಂತೆ
ಮೋಡದ ಮರೆಯಲಿ ಆಕಾಶವ ನೋಡುತ
ಈ ಹೃದಯ ನಿನ್ನನೆ ಅರಸುತಿದೆ
ಇರುವೆ ನೀ ದೂರ ಬಲು ದೂರ
ನಿನಗಾಗಿ ಪ್ರತಿ ಕ್ಷಣವೂ ಕಾದು ಸೋತಿರುವೆ ...
ಕಳೆಯಲಾಗದ ಈ ಸಮಯದ.. ನಡುವೆ
ಕಳೆದುಹೋದ ಕ್ಷಣಗಳ...ನೆನೆನೆನೆದು
ಮನ ಇಂದೇಕೋ ಪರಿತಪಿಸುತಿದೆ
ಒಲಿದು ಬಂದ ಕನಸು ನೀನು
ಬೇಸರವ ಮರೆಸುವ ನಿನ್ನ ಅಪ್ಪುಗೆ
ಮೌನದಲಿ ...ಕಣ್ಣುಗಳಲೇ ಸೆಳೆದು,
ಮನದಾಳದ ಒಡತಿ ನಿನಾಗಿರುವೆ ...
ದಿನವೂ ನರಳುತಿರುವೆ ನಿನ್ನ ನೆನಪುಗಳಿಂದ..
ವಿರಹದ ಈ ನೋವಿಗೆ
ಕೊನೆಯೇ ಇಲ್ಲವೆ?