Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಅಪರಿಚಿತವಾಗಬೇಕಿದೆ ಒಮ್ಮೆ ನಾನು ನನ್ನೊಳಗೆ
ಚಿರಪರಿಚಿತ ನಾನು ಮನಸಿನೊಳಗಿನ ಬಲೆಗೆ
ಕನಸುಗಳದೆ ಸುನಾಮಿ ನನ್ನ ಎದೆಯೊಳಗೆ
ಕೊಚ್ಚಿ ಹೋಗುತಿರುವೆ ನಾ ಇವುಗಳ ಅಲೆಗೆ
ಕೊಚ್ಚಿ ಹೋಗಲೇನು ಅದರೊಳಗೆ ಎಲ್ಲಾ ಮರೆತಂತೆ
ತೋರದೆ ದಡವ ಕಾಡುತಿವೆ ಕಾಣದ ಸಾವಿನಂತೆ
ಬಿಡುಗಡೆಯ ಬಾಗಿಲಿಲ್ಲವೆ ಈ ನೋವಿನ ಸೆರೆಮನೆಗೆ
ಅರಿಯದೆ ಸೋತು ಶರಣಾಗಲೇನು ಸಾವಿನ ಮನೆಗೆ
ಆಪ್ತವಾಗಬೇಕಿದೆ ನಾನೆಂದು ಅರಿಯದ ದಾರಿಗೆ
ಸೇರಿ ಬಿಡಲೇನು ಅವು ಎಳೆದು ಸಾಗುವ ಕನಸಿಗೆ
ಬದುಕಿನ ದಾರಿಯಲಿ ಎಂದೂ ನಿಲ್ಲದ ವಲಸಿಗಳು ನಾನು
ನನಗೂ ಸೇರಲು ಅಂತಿಮ ಸ್ಥಳವಿರಬಹುದೇನು?
- ಶ್ರೀಕಾವ್ಯ
16 May 2017, 09:06 pm
ಹಣೆಯ ಮೇಲಿನ ಸಿಂದೂರ ನೀನಾಗು
ಆ ಹಣೆಬರಹ ಸುಂದವಾಗಿ ಬರೆಯುವ
ಲೇಖನಿಯಾಗು..............
ಕಣ್ಣಲ್ಲಿನ ತಂಪಾದ ಕಾಡಿಗೆಯಾಗು
ಆ ಕಣ್ಣಲ್ಲಿ ಕಂಬನಿ ಕರಗಿಸುವ
ನಗುವಾಗು...................
ಮುದ್ದಾದ ಮೂಗಿಗೆ ಬಂಗಾರದ
ಮೂಗುತಿಯಾಗು ಉಸಿರು ನಿಲ್ಲುವವರೆಗು
ಮರೆಯಾಗದ ಸ್ನೇಹವಾಗು........
ತುಟಿಯಲ್ಲಿ ಕೆಂಪಾದ ಬಣ್ಣನಿನಾಗು
ಪ್ರತಿಕ್ಷಣ ಆ ತುಟಿ ಕರೆಯುವ ಪ್ರೀತಿಯ
ಹೆಸರಾಗು...............
ಕೈಯಲ್ಲಿ ಗಾಜಿನ ಬಳೆಯಾಗು
ಆ ಕೈಹಿಡುದು ಈ ಜೀವ ಹೋಗುವವರೆಗೆ
ಜೊತೆಗಿರುವ ಸಂಗಾತಿಯಾಗು.........
ಸೊಗಸಾದ ಕಾಲಿಗೆ ಗೆಜ್ಜೆಯಾಗು
ಆ ಕಾಲಿನ ನಡಿಗೆ ನಿಲ್ಲುವವರೆಗೂ
ಕಾಯುವ ನೆರಳಾಗು..........
- ಚುಕ್ಕಿ
16 May 2017, 05:30 pm
ಬಾವನೆಗಳ ಬಳಿ ನಿಂತು ,ಕಾರಣಗಳ ಹುಡುಕುವ ಈ ಮನಸ್ಸು ,,,,
ಹುಡುಕಿ ಹುಡುಕಿ ಮೌನದ ಮನೆ ಕಟ್ಟಿತು ಮನಸ್ಸು,,,,
ಆಸೆಗಳ ಸರಮಳೆಯ ಮಾಡಿ ನಿನ್ನ ಪ್ರೀತಿಗಾಗಿ ಕಾತರದಿ ಕಾಯುತಿರುವೆ.........
- Acchu love
16 May 2017, 05:06 pm
ಮೌನದಲ್ಲಿ ಮನ ಕರಗುವ ಮಾತಿದೆ
ಎಂದು ತಿಳಿದದ್ದು ನಿನ್ನ ಕಣ್ಣ ಕಂಬನಿ ಕಂಡಾಗ.
ಹಗಲಲ್ಲಿ ಮನದಲಿ ಕತ್ತಲೆ ಮೂಡಿತು,
ನಿನ್ನ ಪ್ರಜ್ವಲಿಸುವ ಮುಖ ಕಾಣದಾಗ.
ಬಾಡಿ ಹೋದ ಗಿಡದಂತಿಹ ಈ ಜೀವಕ್ಕೆ,
ಮಳೆ ಹನಿಯಾಗಿ ಬರಬಾರದೆ ನೀನು.
- ಅಕ್ಷತ
16 May 2017, 02:06 pm
ನನ್ನ ಉಸಿರಿನ ದೇವತೆ...
ಮಮತೆಯ ಅಕ್ಷಯ ಪಾತ್ರೆ....
ಸಾಲದು ಪದಗಳು ನಿನ್ನ ಬಣ್ಣಿಸಲು....
ಅಮ್ಮ..ನಿನಗೆ ಕೋಟಿ ವಂದನೆಗಳು....
- ನಿಶಾ ರೂಪ
16 May 2017, 01:20 pm
ನೊಂದ ಬಾನ ಒಡಲಿಗೆ
ಬೆಂದ ಉಸಿರ ಮಡಿಲಿಗೆ
ಸೇರುವ ಆಸೆ ಏತಕೆ ನಿನಗೆ
ನಿನ್ನಲ್ಲಿ ನೀನಿಲ್ಲದೆ ಓ ಗೆಳೆಯಾ......
ಕರ ಬೀಸಿ ಕರಿಯುತ್ತಿದೆ
ಉತ್ಸಾಹದಿಂದ ನಿನ್ನ ಭವಿಷ್ಯ
ಕಂಬನಿಯಾ ತೊರೆದು ನಿನೊಗೂ
ನಾಳೆಯ ದಿನಕೆ ನಗುವಾಗು............
ಭುವಿಯ ಹಸಿರಿಗೆ ಉಸಿರಾಗು
ದಿವಿಯ ಶಶಿಗೆ ಮಗುವಾಗು
ಉಜ್ವಲ ದೇಶದ ಪ್ರಗತಿಗೆ ಹೆಸರಾಗು
ನೀನು ಹೆಸರಾಗು.........
- ಚುಕ್ಕಿ
16 May 2017, 11:42 am
ನಾನೇನೂ ಬರೆಯಬೇಕೆಂದು ಬಂದೆ
ಬೇಡ ಬಿಡಿ
ಸುಮ್ಮಸುಮ್ಮನೆ ಹೊತ್ತಿಸ ಬಾರದು ಕಿಡಿ
ನಾವು ಒಂದು ಇಂದು ಮುಂದೆಂದು
ಇದು ಎಲ್ಲರು ಹೇಳುವ ಮಾಮೂಲಿ ನುಡಿ
ಅವುಗಳು ಈಗ ತಾನೇ ಹುಟ್ಟಿದ ಕುಡಿ
ಅವುಗಳ ಕನಸುಗಳನ್ನು ಮಾಡಬೇಡಿ ಪುಡಿ
ಹಗಲೆಲ್ಲ ದುಡಿದು ಹೆಂಡ ಕುಡಿದು
ರಾತ್ರಿ ಕನಸು ಕಾಣುತ್ತವೆ
ಏನೋ ಸಾದಿಸ ಬೇಕಂಬ ತುಡಿತ ಅವಕ್ಕೆ
ಅವರಿಗೆ ಕನಸು ಕಾಣಲು ಬಿಡಿ
ಅವಗಳು ನನಾಸಾಗುವವೆ ಎಂದು ಕಾವುತಿದ್ದೇನೆ
ನಾನೇನೂ ಬರೆಯಬೇಕೆಂದಿದ್ದೆ
ಇಲ್ಲಿಗೆ ಸಾಕು ಮಾಡುತ್ತೇನೆ ಹೋಗಲಿ ಬಿಡಿ
ಹಕ್ಕಿಗಳನ್ನು ಪಂಜರದಲ್ಲಿ ಕೂಡಿಡ ಬೇಡಿ
ಹಾರಲು ಬಿಡಿ
- HarshaHL
16 May 2017, 11:21 am
ಮಲ್ಲಿಗೆ ಹೂವ ತೊಂಗಲಲ್ಲಿ
ಅಡಗಿ ಕುಳಿತೆ ಭೃಂಗವಲ್ಲಿ
ಮಲ್ಲಿಗೆಗೆ ನಿನ್ನ ಗಂಧವೊ
ನಿನ್ನಲ್ಲಿ ಮಲ್ಲಿಕಾ ಘಮವೊ...
ಸಂಜೆಗೆಂಪು ಕಡಲತೀರ
ಮೂಡಲು ನಿನ್ನ ಪಾದಚಿತ್ರ
ಪಾದ ರಂಗು ಉಸುಕಿಗೊ
ನಿನ್ನಲ್ಲಿ ಮರಳು ಬಣ್ಣವೊ
ಹರಡಲು ನಿನ್ನ ಕೇಶರಾಶಿ
ಉಂಗುರದ ಮುಂಗುರುಳು ತೋರಿ
ಹೆರಳ ತಾಕಿ ಇರುಳ್ಗಪ್ಪೊ
ನಿಶೆಯ ಛಾಯೆಗೆ, ಕುರುಳ್ಗಪ್ಪೊ
ಭಾವಗಳ ಘರ್ಷಣೆ ನಿಲ್ಲದು
ಹೊಲಿಕೆಗೆ ಪದ ಸಾಲದು
ನೀನ್ನಿಲ್ಲದೆ ಈ ಜೀವ ಬಾಳದು...
- Indushekar Chinivar
16 May 2017, 08:37 am
ಚುಕ್ಕಿಗಳ ಪಲ್ಲಕ್ಕಿಯಲಿ
ಮೆರವಣಿಗೆ ಹೊರಟ
ಚಂದಿರ
ನಿನ್ನ
ತಾಕಿದ ತಿಳಿಗಾಳಿಯ
ಘಮಕೆ ,
ಕ್ಷಣ ಮೈಮರೆತ
ಇರುಳು...
- Indushekar Chinivar
15 May 2017, 10:48 pm
ಪ್ರೀತಿ ನಿನ್ನ ಹಠವೇನೆ ನಿನ್ನ ಪ್ರೀತಿಸೋವರಿಗೆ
ಪ್ರತಿಕ್ಷಣ ಬೆಂಬಿಡದೆ ಕಾಡುವೆ ಮತ್ತೆ ಮತ್ತೆ ನೆನೆಪಿಸುವೆ...............
ಮಾತು ನಿನ್ನ ಹೆಸರ ರೂಪ ನಿನ್ನ ಉಸಿರಾ
ಆಕರ್ಷಣೆ ನಿನ್ನ ಅಸ್ತಿತ್ವದ ನೆಲವಾ..........
ಕೋಪ - ತಾಪ ನಿನಗೇಕೆ ...........
ನೋವು-ನಲಿವು ಬಿಡುವುದಿಲ್ಲವೇಕೆ........
ಸರಸ - ವಿರಸದ ಜಂಜಾಟವೇಕೆ.......
ಮರುವು ನಿನ್ನ ಶತ್ರುವಾ ..............
ಏಕೆ ನಿನಗ ಈ ಹುಚ್ಚು ಆಟ ಜನರ
ಜೀವದ ಜೊತೆ ಪರಿಹಾಸ್ಯದ ಅಲೆದಾಟ........
ಪ್ರೀತಿ ನೀ ಜೀವಕೋಡುವ ದೇವರಾಗು
ಜೀವತೆಗೆಯುವ ಜವರಾಯನ ಯಮಪಾಶವಾಗದಿರು..............
- ಚುಕ್ಕಿ
15 May 2017, 07:28 pm