Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮ

ಎತ್ತವಳಿವಳು
ತನ್ನ ಉಸಿರ‌ ಮರೆತು
ನನಗೆ ಉಸಿರಿತ್ತವಳು
ತಾ ಕಂಡ ನೋವನೇ ಮರೆತು
ನನ್ನ ಕಂಡು ನಕ್ಕವಳು

ನಾನವಳ ಒಡಲ ಕೂಸು
ತನ್ನ ಒಡಲಲಿ ನೋವನೆ ಬಚ್ಚಿಟರು
ನನಗೆ ನಗುವ ಕಲಿಸಿದವಳು

ತಾಯಿಯೇ ದೈವ, ಅಮ್ಮನೇ ಮೊದಲ‌ ಗುರುವು
ನನ್ನ ಕೈ ಹಿಡಿದು ಅಕ್ಷರ ಕಲಿಸಿ
ಮನಸು ಮಾನವತೆ ತುಂಬಿದ ಗಳು

ನೋವು ಕಷ್ಟಗಳ ಕಂಡರೇನಂತೆ
ನಗು ನಲಿವ ಹೊಸ ಕನಸಿಗೆ
‍ ಅವಳ ಮಡಿಲೇ ಕಲ್ಪವೃಕ್ಷದಂತೆ

ಸೋತಿರಲು ನಾನು ನನ್ನನೇ ನಂಬದೇ
ಅವಳೇ ಸ್ಪೂರ್ತಿಯ ಹಣತೆಯು
ನವ ಕನಸುಗಳ ಹಚ್ಚುವ ಜ್ಯೋತಿಯು

- ಶ್ರೀಕಾವ್ಯ

10 Apr 2017, 02:07 pm

ಪ್ರಶ್ನೆಯೆಂಬ ಜೀವನ

‌‌ತಾಳು ಮನವೇ ತಾಳು
ಕಾಡದಿರು ಕನಸುಗಳ ಹೊತ್ತು
ಬದುಕಿ ದು ಮರೀಚಿಕೆಯಾಗಿಹುದು ಈ ಹೊತ್ತು

ಕನಸುಗಳ ಗುಂಗಲಿ ನೀನು
ಬದುಕಿನ ಹೊಡೆದಾಟದಲ್ಲಿ ನಾನು
ಕನಸುಗಳೇ ಅಂತಿಮ ಪರ್ವವು ನಿನಗೆ
ನನಸಾಗಿಸಲಾಗದ ಸಂಕಟವು ನನಗೆ
ಕನಸುಗಳ ಸುಖವು‌ ನಿನಗೆ
ನನಸಾಗದ ದುಃಖವು ನನಗೆ
ಇತ್ತ ನಿನ್ನ ಕನಸುಗಳೇ ದರಿಯಂತಾಗಿರಲು
ಕಾಣದವನ ಆಟವೇ ಪುಲಿಯಂತಾಗಿರಲು
ಎತ್ತ ಸಾಗಲಿ ನಾನು
ನನ್ನ ಮನವೇ ಕಂಡ ದರಿಯ ಪಾಲಾಗಲೇನು
ಎಲ್ಲ ಬಲ್ಲ ವನ ಆಟವೆಂದು ಪುಲಿಯ ಬಾಯಲಿ‌ ಸೇರಲೇನು

ಅಂತಿಮ ಉತ್ತರವೇ ಸಿಗದ ಆಟವಿದು ಬದುಕು
ಕಂಡ ಉತ್ತರದೊಳಗೂ ಸಾವಿರ ಪ್ರಶ್ನೆಯ ತಿರುವು
ಕೊನೆಯಾಗದ ರಸಪ್ರಶ್ನೆಯ ಕಾರ್ಯಕ್ರಮ ನನ್ನೊಳಗೆಂದೂ
ಕಾಣದ‌ ಆಟದಲಿ ಉತ್ತರವೇ ಅಂತಿಮವೆಂದರೂ
ಹೋಗುವುದಾದರು ಎಲ್ಲಿಗೆ ಕವಲೊಡೆದ ದಾರಿಯಲಿ
ಅದರ ಅಂತ್ಯವ ಬಲ್ಲವರಾರು‌ ಇಲ್ಲಿ......

- ಶ್ರೀಕಾವ್ಯ

10 Apr 2017, 01:44 pm

ಅಂದು(ಕಳೆದು ಹೋಗಿದೆ)

ಮಳೆ ಬಂದು ನಿಂತಾಗ ಕಾಗದದ ದೋಣಿ
ಬಿಡುವ ಸಂತಸ ಅಂದು

ರಜ ಬಿಟ್ಟಾಗ ಅಜ್ಜನ ಊರಿಗೆ ಹೋಗುವ
ಸಂಭ್ರಮ ಅಂದು

ಮಕ್ಕಳೆಲ್ಲ ಸೇರಿ ಹುಣಸೆ ಚಿಗಳಿ ಕುಟ್ಟೋ
ಸಾಹಸ ಅಂದು

ದೀಪದ ಬೆಳಕಿನಲ್ಲೂ ಸಹ ಕುಳಿತು
ಆಡುವ ಉತ್ಸಾಹ ಅಂದು

ಲಗೋರಿ, ಕುಂಟೆಬಿಲ್ಲೆ,ಐಸ್ ಪೈಸ್,
ಕವಡೆ ಆಟ ಅಂದು

ಊರಿಗೆ ಹೋದ ಗೆಳತಿಗೆ ಪತ್ರ
ಬರೆವ ತುಡಿತ ಅಂದು

ಅಜ್ಜನ ಕತೆಗಳು, ಅಜ್ಜಿಯ ತಿಂಡಿಗಳು
ರಸದೌತಣ ಅಂದು

ಒತ್ತಡ ತುಂಬಿದ ಇಂದಿನ ದಿನಗಳಲ್ಲಿ
ಕಳೆದು ಹೋಗಿದೆ ಅಂದು

ಕವಿ ರಾಜ.......

- kavita Rajesh

09 Apr 2017, 10:52 pm

ನನ್ನ ಕವಿತೆ}

ಗೆಳತಿ ನಿನ್ನ ಮಾತುಕೇಳಿ
ಸುಮ್ಮನೆ ಗುನುಗುತ್ತಿದೆ
ಸರಿಗಮ ಸಂಗೀತ
ನನ್ನೆದೆಯ ಏಕಾಂತದಲ್ಲಿ಼಼಼಼಼




ನಾನು}

- Basava

09 Apr 2017, 10:05 pm

ನೆನಪುಗಳ ಜೊತೆ ...

ಮರಳು ದಂಡೆಯ ಮೇಲೆ ಗೀಚಿದ ಹೆಸರು
ನಡುವೆ ಸವೆದು ಹೋದ ಕಾಲು ದಾರಿಗಳು
ಕೈಬೀಸಿ ನನ್ನ ಕರೆಯುತ್ತಿರಲು..

- ನಮಿತ ಗಟ್ಟಿ

09 Apr 2017, 05:01 pm

ಒಡೆದ ಮೋಡ(ಹಲ್ಕಾ ಕವನ)

ಕಿರು ಬೆರಳ ಸಂಧಿಯೊಳಗೆ
ನನ್ನ ಬೆರಳು ಜೋತು
ಬೀಳಬೇಕೆನ್ನುವಾಗ
ನೀ ಅನಾಮತ್ತಾಗಿ ಮುಂಗುರುಳ
ಸರಿಸುವೆ ಗೊತ್ತಾಗದೆ

ಒಲವಿನೂರಿನ ಮೆರವಣಿಗೆಗೆ
ಅನಿರ್ದಿಷ್ಟಾವಧಿ ಹರತಾಳ
ಮಾಡುವವಳ ಹರಸಾಹಸ
ನನಗಂತೂ ಸೋಜಿಗ ಅಂದಿನಿಂದ

ಗಡಿಯಾರದ ವಾರೆ ಓಟಕ್ಕೆ
ಪಕ್ಕದಲ್ಲೊಂದು ಬಯಕೆ
ಬೆತ್ತಲಾಗಿ ಸಾಯುತ್ತದೆ
ಹಿಂದಿನ ಹೆಜ್ಜೆಗಳನ್ನೆಲ್ಲಾ
ಮರೆಸುವ ಅಕಾಲಿಕ ಪ್ರಯತ್ನದಲ್ಲೊಂದು
ಸಫಲತೆ ಕಾಣುತ್ತೀಯ ನೀ ಆವಾಗಲೇ

ಸಣ್ಣಮಟ್ಟದ ತರ್ಕದಲ್ಲಿ ನಾ
ಯಶಕಾಣದ ಮುಂದಿನ ನಡೆ
ನೀ ಮೆಹಂದಿ ಹಚ್ಚಿದ ಕರಗಳ
ಮುಂದಿಟ್ಟದ್ದು ನಾನೋ
ಇನ್ನು ಒಡೆದ ಮೋಡ
ಮಳೆ ಸುರಿಸುತ್ತವೆಂಬ ಭ್ರಮೆಯವ

ಹಲ್ಕಟ್

ಅವಿಜ್ಞಾನಿ

- ಅವಿಜ್ಞಾನಿ

09 Apr 2017, 04:47 pm

ಮನಸು

ಅತ್ತಿಂದ ಇತ್ತ ಅಡವಿಯ ಸುತ್ತ
ಓಡುತಲಿ ಇರುವ ಪುಟ್ಟ
ಚಂಚಲದ ಮಾಯಾ ಜಿಂಕೆಯಂತೆ
ಆಯಿತು ಈ ನನ್ನ ಮನಸು!!

ತಪ್ಪು ಸರಿ ಏನೆಂದು ಅರಿಯದೇ
ತೊದಲುವ ಪುಟ್ಟ ಕಂದನ
ಮಾತಿನಂತೆ ತಡವರಿಸಿ
ನುಡಿಯುತಲಿ ಈ ನನ್ನ ಮನಸು!!

ಸ್ವಚ್ಛ ವಸ್ತ್ರದ ಮೇಲೆ
ಬಣ್ಣದ ಗೆರೆ ಎಳೆದು
ಅಂದ ಹೆಚ್ಚಿಸುವ ಕೆಲಸ
ಮಾಡ ಬಯಸಿತು ಈ ನನ್ನ ಮನಸು!!

ತನ್ನ ಅರಿವನೂ ಮೀರಿ
ನವ ಪುಳಕದಲಿ ಮೈ ಮರೆತು
ಸವಿ ಪ್ರೀತಿಯಲಿ ಮಿಂದೆದ್ದ ಸಂತಸವ ಮೆರೆದಿಹುದು ಈ ನನ್ನ ಮನಸು!!

- ಪಿ.ಜಿ.ಜ್ಯೋತಿ

09 Apr 2017, 04:19 pm

ಬಂಗಾರ ನೀನು...........

ನನ್ನ ಜೀವನದ ಒಂದು ಸುಂದರ
ಕನಸು ನೀನು .
ನಿನ್ನ ಸ್ನೇಹದ ಸವಿ ಉಣಿಸಿದ
ಬಂಗಾರ ನೀನು .

ಮಾತಲ್ಲಿ ಹೇಳಲಾರೆ ನಿನ್ನ
ಸ್ನೇಹದ ಅಕ್ಕರೆ ......
ಕ್ಷಣಮಾತ್ರ ನೋಡಲಾರೆ ನಿನ್ನ
ನಿನ್ನ ಕಂಬನಿಯ ಕಲೆಗಳ ನನ್ನ ಕನಸಲ್ಲೂ .

ಎಂದಿಗೂ ನೀನು ನನ್ನ ಆಪ್ತನಾಗಿರು
ನಿನ್ನ ನಗೆಯಲ್ಲಿ ಸಮಪಾಲು
ನನಗಾಗಿ ಇಟ್ಟಿರು.

ನಿನ್ನ ಮಗುವಿನಂತ ನಗು
ನಿಷ್ಕಲ್ಮಶ ಮನಸ್ಸು ಅದೆಂದಿಗೂ
ನಿನ್ನಷ್ಟೇ ಸುಂದರ ಗೆಳಯ.......

ನನ್ನ ಪ್ರಾಣ ಸ್ನೇಹಿತನಾಗಿ ನೀನಿರು
ನಿನ್ನ ಎಲ್ಲಾ ನೋವುಗಳನ್ನು ನನ್ನ ಬಳಿ ಸಂಕೋಚವಿಲ್ಲದೆ ಹಂಚುತಿರು.

ನಿನಗಾಗಿ ನಾನೇನು ಕೊಡಬಲ್ಲೇನೋ ನನಗೆ ತಿಳಿದಿಲ್ಲ ಆದರೆ ನನ್ನ ಗೆಳತನವ ಮಾತ್ರ ನಿನ್ನ ಹೊರೆತು ಬೇರ್ಯಾರಿಗೂ ನಾ ನೀಡಲ್ಲ ಗೆಳೆಯ ನೀಡಲ್ಲ............

ಇಂತಿ ನಿನ್ನ ಸ್ನೇಹಿತೆ ಶ್ರಿ.......... .

- ಚುಕ್ಕಿ

09 Apr 2017, 11:26 am

ಮುಖವಾಡ

ಕೋಣೆಯಲ್ಲಿ ಬಿದ್ದಿವೆ
ನೂರಾರು ಮುಖವಾಡ
ಕೆಲವೊಮ್ಮೆ ನಗುವ ಮುಖವಾಡ
ಕೆಲವೊಮ್ಮೆ ಮೌನದ ಮುಖವಾಡ,

ಮುಖವಾಡವಿಲ್ಲದ ಮುಖವ
ಎಂದು ತೋರುವೆನೋ ಜಗಕೆ
ಕಾಣುವುದು ಬರೀ ಕಂಬನಿ ನೋಡ

- ನಿಶಾ ರೂಪ

09 Apr 2017, 07:48 am

ನಾ ಸತ್ತಮೇಲೆ

ನಾ ಸತ್ತಮೇಲೆ ನನ್ನ ಸುಟ್ಟ ಭೂದಿಯೂ
ಈ ನೆಲದ ಮೇಲೆ ಉಳಿಯಲು ನನಗಿಷ್ಟ ಇಲ್ಲ....
ಈ ಪಾಪಿ ಜನರು ಅದನ್ನೂ ತುಳಿದು ಹೋಗುತ್ತಾರೆ.

ಭೂತಾಯಿಯ ಮಡಿಲಲ್ಲಿ ಶಾಶ್ವತವಾಗಿ
ಬಚ್ಚಿಟ್ಟುಕೊಂಡರೆ ಸಾಕು ಇವರಿಗೆ ಕಾಣದ ಹಾಗೆ...
ಬದುಕಿದ್ದಾಗ ಕ್ಷಣಮಾತ್ರವು ನಿಲ್ಲದ ಕಣ್ಣೀರು
ಕೊನೆಯುಸಿರು ಎಳೆದಾಗಳಾದರು ನಿಂತರೆ ಸಾಕು..

ಮುಕ್ಕೋಟಿ ದೇವರು ಇರುವುದು ನಾಮಮಾತ್ರಕ್ಕೆ
ಕಷ್ಟದಲ್ಲಿ ಕಾಪಾಡಲು ಒಂದು ಕೈ ಸಿಗಲ್ಲ ಇವರದು.
ನಿತ್ಯ ಪೂಜೆ, ಅಲಂಕಾರ,ಅಭಿಷೇಕ,ರಥೋತ್ಸವ
ಕಲ್ಯಾಣ ಈ ಜನರು ಮರತೆ ಹೋಗಿದ್ದಾರೆ.........

ಎಲ್ಲೋ ಇದ್ದ ಕಲ್ಲು ಬಂಡೆಯ ಕೆತ್ತ ಶಿಲ್ಪ ಈ ದೇವರೆಂದು.
ಭೂಮಿಯಲ್ಲಿ ಸಿಕ್ಕ,ಬಂಗಾರ,ತಾಮ್ರ,ಬೆಳ್ಳಿಯಲ್ಲೇ ದೇವರ ಮೂರ್ತಿಗಳೆಂದು.......

ಕೆತ್ತವನು,ವಿಗ್ರಹ ಮಾಡಿದವನು ಕೊನೆಗೂ ಸೇರುವುದು ಅವನಿಯ ಮಡಿಲಿಗೆ ಅದಕ್ಕೆ ಜೀವನದಲ್ಲಿ,ಜೀವಹೋದ ನಂತರ ನಮ್ಮನ್ನು ಹೊರುವುದು ಅವಳೇ..........

ಕೊನೆವರೆಗೂ ನಾ ಚಿರ ಋಣಿ ಅವಳ
ಪಾದ ಕಮಲಗಳಿಗೆ.
ನಂತರವೂ ಋಣಿ ಅವಳ ತಾಯಿ ಪ್ರೀತಿಗೆ .......

- ಚುಕ್ಕಿ

09 Apr 2017, 01:30 am