Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೊಸ ಗಾಯನ.. ಹಾಡುವ ಸಂಭ್ರಮ..

ಹೊಸ ಗಾಯನ... ಹಾಡುವ ಸಂಭ್ರಮ...
ಹೊಸ ಜೀವನ ನಿಡೆಂದು ಬೇಡುವೆನು ಆ ದೇವನ
ಎಂದೆಂದೂ ನಿಡೆಂದು ಬೇಡುವೆನು ಆ ದೇವನ
ಸಂತೋಷವೇ ಬಾಳಲಿ, ಸಂಭ್ರಮವೇ ಬಾಳಲಿ
ಸಂಗೀತವೇ, ಸಂತಸವೇ ಶೃಂಗಾರವೇ ಬಾಳಲಿ
ಹೀಗೆ ನಗುವಿನಲಿ ತೆಲುತಲಿರಲಿ ನನ್ನ ಜೀವನ
ಹೀಗೆ ಸಾಗುತಿರಲಿ ನನ್ನ ಪ್ರೀತಿ ನನ್ನ ಪಯಣ
ಗರೀಬಿಚ್ಚಿ ಕುಣಿದ ನವಿಲು ಸಂತಸದ ಹಾಡಿದ ಕೋಗಿಲೆ
ಈ ಸುದಿನ ಈ ದಿನ ಹೀಗೆ ಇರಲೆಂದು ಬಾಳಲಿ..
ವಸಂತ ಮಾಸದ ಚಿಗುರಿದ ಗಿಡ ಮರ ಹೂ ಬಳ್ಳಿ
ಮಲ್ಲಿಗೆಹೂವೇ ತಾವರೆಹೂವೆ ಗುಲಾಬಿ ಹೂವೇ
ಎಂದೆಂದಿಗೂ ಸುಗoಧ ಪರಿಮಳ ಸುಸುತಲಿರಲಿ
ಎಲ್ಲವೂ ಚಂದವೇ... ಎಲ್ಲವೂ ಆನಂದವೇ...
ನನ್ನ ಬದುಕಲಿ ಎಲ್ಲಾ ಹೊಸತನವೇ...
ಆಕಾಶದಲಿ ನಕ್ಷತ್ರ ಮಿನುಗುವ ಚಂದಕ್ಕಿಂತ ಚಂದ
ಮೋಡದ ಮರೆಯಲಿ ತೆಲಿ ಬಂದ ಚಂದಿರ ಅಂದ
ಹಕ್ಕಿಗಳ ಚಿಲಿಪಿಲಿ, ನದಿಗಳ ಕಲರವೇ ಚಂದವೇ
ಈ ನಾಡು ಶ್ರೀಗಂಧ ಈ ನಾಡ ಸೌಂಗಂದ
ಎಲ್ಲೆಲ್ಲೂ ಹರಡಲಿ ಸುಮಧುರ ಸುವಾಸನೆ...

✍️ ಲೇಖಕರು, ಕವಿ,ವೀರೇಶ್ ವೀ ಖೈರವಾಡಗಿ

- Veereshappa v khairawadagi

26 Jul 2026, 04:48 pm

ನಾನು ಅನುಭವದ ಮಾತು

ಜೀವನದ ಹಾದಿಯಲ್ಲಿ ನಡೆದ ಹೆಜ್ಜೆಗಳು
ಪ್ರತಿ ಕ್ಷಣವೂ ಹೊಸ ಪಾಠವನ್ನೇ ಕಲಿಸಿದವು
ಸೋಲು ಕಂಡ ದಿನಗಳು ಧೈರ್ಯ ತುಂಬಿದವು
ಗೆಲುವಿನ ಕ್ಷಣಗಳು ವಿನಯದ ಅರ್ಥ ತಿಳಿಸಿದವು

ನಂಬಿದವರು ದೂರವಾದಾಗ ಸತ್ಯ ಅರಿವಾಯಿತು
ನೋವು ಬಂದಾಗ ಬದುಕಿನ ಬೆಲೆ ಗೋತ್ತಾಯಿತು
ಕತ್ತಲೆಯೇ ದಾರಿಯಲ್ಲೂ ಬೆಳಕನ್ನು ಹುಡುಕಿದಾಗ
ಆತ್ಮ ವಿಶ್ವಾಸವೇ ನನ್ನ ನಿಜವಾದ ಗೆಳೆಯನಾಯಿತು

ಅನುಭವದ ಮಾತು ಪುಸ್ತಕದಲ್ಲಿಲ್ಲ
ಅದು ಬದುಕಿನ ಪುಟಗಳಲ್ಲಿ ಬರೆದ ಪಾಠ
ಕಾಲ ಕಲಿಸಿದ ಪ್ರತಿಯೊಂದು ಪಾಠವೂ
ಮುಂದಿನ ಹೆಜ್ಜೆಗೆ ದಾರಿ ದೀಪವಾಗಿದೆ.

ಸ್ವ ಕವಿತೆ ರಚನಾಕಾರರು:-
ಕೆ.ಅದ್ವಿತ ಭಟ್ ಕಾರ್ಕಳ

- ಕೆ.ಅದ್ವಿತ ಭಟ್

23 Jul 2026, 10:32 am

- ashwath

23 Jul 2026, 01:29 am

- Yallaling Haralayya

21 Jul 2026, 01:56 pm

8

- Yallaling Haralayya

21 Jul 2026, 01:46 pm

ಪ್ರೀತಿಯ ಮೌನ ರಾಗ

ನಿನ್ನ ಗುಂಗಿನಲ್ಲಿ ಮುಳುಗಿದ ಈ ಮನ,
ನನ್ನ ಹೃದಯದ ಮೌನ ಗೂಡಲ್ಲಿ ಮೂಡಿತು ಗೀತೆಯೊಂದು…
ನಿನ್ನ ನೆನಪು ಮಳೆಯ ಹನಿಯಂತೆ ಬಂದು,
ಮನದ ಆಳದಲ್ಲಿ ಅರಳಿಸಿತು ಒಲವಿನ ಕವಿತೆಯೊಂದು…
ನಿನ್ನ ನಗು ಬೆಳಕಾಗಿ ಹರಿದು,
ನನ್ನ ಬಾಳಿಗೆ ಕನಸಿನ ಬಣ್ಣ ತುಂಬಿತು…
ನಿನ್ನ ಮಾತಿನ ಸಿಹಿ ಸ್ಪರ್ಶದಲ್ಲಿ,
ಮೌನವಾಗಿಯೇ ಹುಟ್ಟಿತು ಪ್ರೀತಿಯ ರಾಗ…

-Bhargavi ✒️

- Bhargavi

18 Jul 2026, 08:18 pm

ಈ ಜನ್ಮ ಭೂಮಿ ನಮ್ಮದು

ಈ ಜನ್ಮಭೂಮಿ,ನಮ್ಮದು
ನಮ್ಮ ಕರುನಾಡು
ನಮ್ಮ ಕರುನಾಡು
ಈ ಮಾತೃಭಾಷೆ ನಮ್ಮದು
ಅದುವೇ ಕನ್ನಡ
ಅದುವೇ ಕನ್ನಡ
ವೈಭವತುಂಬಿಕೊಂಡು ಮೆರೆದ
ನಾಡಗುಡಿಯೂ ನಮ್ಮದು
ಸೌಂದರ್ಯ ಈ ನೋಡುವುದೇ
ಸೌಭಾಗ್ಯ ಸೌಭಾಗ್ಯ ನಮ್ಮದು

ನಮ್ಮನುಡಿಸಿರಿ ಕನ್ನಡಸಿರಿ
ಎಲ್ಲೆಲ್ಲೆಲ್ಲೂ ಕನ್ನಡವೇ
ಕಂಪು ಮೊಳಗಲಿ
ಎಲ್ಲೆಲ್ಲೆಲ್ಲೂ ಕನ್ನಡವೇ
ಇಂಪು ಬೆಳಗಲಿ
ನಮ್ಮ ಮೈಸೂರು ದಸರಾ
ನಮ್ಮ ಕರುನಾಡೇ ಸುಂದರ
ಶ್ರೀ ಚಾಮುಂಡೇಶ್ವರಿ ದರ್ಶನ
ನೋಡುವುದೇ ಸುಂದರ
ಕಾವೇರಿತಾಯಿ ಹರಿದ ನಾಡು
ದಾಸರು ಶರಣರು ನಲಿದ ನಾಡು
ನಮ್ಮ ಕರುನಾಡು ನಮ್ಮ ಕರುನಾಡು
ನಮ್ಮ ಪುಣ್ಯ ಭೂಮಿಗೆ
ವಂದನೆ ಅಭಿನಂದನೆ...

✍️ವೀರೇಶ್ ವಿ ಕುಂಬಾರ ಖೈರವಾಡಗಿ

- Veereshappa v khairawadagi

16 Jul 2026, 05:05 pm

ಮುದ್ದಿನ ಗಿಣಿಯಂತೆ ನಾ ಸಾಕುವೆ (ಜಾನಪದ )

ನನ್ನ ಮನದೊಳಗೆ ರಾಣಿ
ನಿನ್ನ ನೆನಪು ಮೂಡಿದೆ ರಾಣಿ
ನನ್ನ ಕನಸಿನೊಳಗೆ ನೀ
ತುಂಬಾ ಕಾಡಿದೆ ನೀ ಕಾಡಿದೆ
ಯಾವ ಜನ್ಮದ ಪುಣ್ಯವೋ ನೀ ಸಿಕ್ಕಿದೆ
ನೀ ದಕ್ಕಿದೆ ನೀ ಸಿಕ್ಕಿದೆ
ನನ್ನ ಹೃದಯದ ರಾಣಿ ನೀನಾದೆ...
ನನ್ನ ಹೃದಯದ ರಾಣಿ ನೀನಾದೆ....

ಮುದ್ದಿನ ಗಿಣಿಯಂತೆ ನಾ ಸಾಕುವೆ
ಬಂಗಾರಿ ನಿನ್ನ ನಾ ನಿನ್ನ ಮುದ್ದಿಸುವೆ
ಬೆಟ್ಟದಷ್ಟು ಕಷ್ಟವೇ ಬರಲಿ ನಾನಿರುವೆ
ಕಷ್ಟವೇ ಇರಲಿ ಸುಖವೇ
ನಿನ್ನ ಬಳಿಯಲಿರುವೆ ನಿನ್ನಲ್ಲೇ ಇರುವೆ
ನಾ ನಿನ್ನೊಂದಿಗೆ ನಾ ಬಾಳುವೆ...
ನಾ ನಿನ್ನೊಂದಿಗೆ ನಾ ಬಾಳುವೆ..

ಮಲ್ಲಿಗೆ ಮಾಲೆಯಾಹೂ ಚಂದ ನಿನ್ನ ಮೂಡಿಗೆ
ಸಂಪಿಗೆ ಮಲೆಯಾ ಹೂ ಚಂದ ನಿನ್ನ ಮೂಡಿಗೆ
ನೀ ನನ್ನೊಂದಿಗೆ ಬಂದರೆ ಘಮೀಸುವೇ
ಹೂ ಮಾಲೆಯಲಿ ನೀ ಚಂದವೇ ನೀ ಅಂದವೇ
ಅಂದದ ಚಿತ್ತಾರದ ರಾಣಿ ನೀ
ಚಂದದ ಚಿತ್ತಾರದ ರಾಣಿ ನೀ
ಹೃದಯದ ಮಹಾರಾಣಿ ನೀ
ಹೃದಯದ ಮಹಾರಾಣಿ ನೀ

✍️ವೀರೇಶ್ ವೀ ಖೈರವಾಡಗಿ








- Veereshappa v khairawadagi

15 Jul 2026, 04:51 pm

ಅಪರಂಜಿ ಬಣ್ಣದ ಚಲುವೆ

ಅಪರಂಜಿ ಬಣ್ಣದ ಚಲುವೆ.
ಎಷ್ಟು ಸುಂದರ...
ನಿನ್ನ ಕಣ್ಣ ಬೆಳಕಿಗೆ ಹೊಳಿತಾವೇ
ಎನೂ ಸುಂದರ
ಬಳ್ಳಿಯಲಿ ಮೊಗ್ಗುಗಳು ಹರಳಿದವು
ಇನ್ನೂ ಸುಂದರ....

ನಿನ್ನ ಕೆನ್ನೆಯಲಿ ಮೂಡಿದ
ಆ ಬಾನ ಚಂದಿರ...
ಹುಣ್ಣಿಮೆಯ ಬೆಳಕೇ ನೀನು
ಸೌಂದರ್ಯದ ರಾಣಿ ನೀನು
ಈ ಭೂರಮೆಯೇ.. ಸುಂದರ..

ಕನ್ನಡದ ಮಣ್ಣಿನ ಮಗಳೇ..
ಕನ್ನಡದ ಕಸ್ತೂರಿ ಸುರಿಮಳೆ
ಎಲ್ಲೆಲ್ಲೂ ಹೋಗುವ ನನ್ನ ಮನಸ
ನಿನ್ನ ಪಡಿಯುವ ಹೃದಯದ ಕನಸ

ಚಂದದ ಬಣ್ಣದ ಚಲುವೆ
ನೀನೇಷ್ಟು ಅಂದವೇ
ಮನದಲಿ ನೀ ತುಂಬಿರುವೆ
ನನ್ನೊಳಗೆ ಹೃದಯದಲಿ
ಕಾಡುತಳಿರುವೆ.....
ನೀನೆಂದು ಪ್ರೀತಿ ಹೃದಯದವೇ...

✍️ವೀರೇಶ್ ವಿ ಕುಂಬಾರ ಖೈರವಾಡಗಿ
ಕವಿ ಪರಿಚಯ
ಸ್ಥಳ :ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ಖೈರವಾಡಗಿ ಗ್ರಾಮ
ವಿದ್ಯಾಭ್ಯಾಸ : ಎಲ್ ವಿ ಡಿ ಕಾಲೇಜು ರಾಯಚೂರು
ಅನುಭವ : ಮುಕ್ತ ಮುಕ್ತ, ಮಿಂಚು 'ಶುಭಮಂಗಳ ಧಾರಾವಾಹಿಗಳ ಸಹ ಸಂಕಲನ.
ಹವ್ಯಾಸಗಳು : ಕವನಗಳು, ಸಾಹಿತ್ಯ, ಜಾನಪದ,
ಬರೆಯುವದು, ಓದುವುದು.
ಕವನ ಸಂಗ್ರಹಣೆ
"ಕನ್ನಡ ಕವನ ಇನ್ "ವೆಬ್ಸೈಟ್



















- Veereshappa v khairawadagi

13 Jul 2026, 04:45 pm

ಇನ್ಸ್ಟಾಗ್ರಾಮ್ ನಲ್ಲಿ ನೀ ಇಷ್ಟವಾದೇ

ಇನ್ಸ್ಟಾಗ್ರಾಮ್ ನಲ್ಲಿ ನೀ ಇಷ್ಟಾವಾದೇ
ಫೇಸ್ಬುಕ್ ನಿನ್ನ ಫೋಟೋ ನೋಡಿದೇ
ವಾಟ್ಸಪ್ಪ್ ನಲ್ಲಿ ನಿನ್ನ ವಿಡಿಯೋ ನೋಡಿದೇ
ಟ್ವಿಟ್ಟರ್ ನಲ್ಲಿ ನೀ ಮೆಸೇಜ್ ಮಾಡಿದೆ
ಕಾಮೆಂಟ್ ಬಾಕ್ಸ್ ಕಾಮೆಂಟ್ ಮಾಡಿದೆ
ಇಷ್ಟೆಲ್ಲಾ ಆದಮೇಲೆ ಇನ್ನೇನಿದೆ...

ನಾ ನಿನ್ನ ಜೊತೆಯದೆ ಚಲುವೆ
ನೀ ನನ್ನ ಉಸಿರಾದೆ ಚಲುವೆ
ಬಾ ಬಾರೆ ಹೋ ಚಲುವೆ
ಎಂದೆಂದಿಗೂ ನಾ ನಿನ್ನ
ಮರೆಯಲಾರೆ ಓ ಚಿನ್ನ
ನಮ್ಮಿಬ್ಬರ ಒಂದೇ ಟೀನ್ಏಜ್
ನಾವು ಹೋಗೋಣ ಕಾಲೇಜು

ಕಳೆದರೂ ಬಾರದ ವಯಸ್ಸು
ನಮ್ಮಿಬ್ಬರ ಒಂದೇ ಕನಸು
ಜೊತೆಯಾಗಿ ಇರೋಣ
ಜೊತೆಗೆ ನೆಡೆಯೋಣ
ಬದಲಿಸಬೇಡ ನಿನ್ನ ಮನಸು
ಕುಡಿದಾಸೆ ನೀ ಈಡೇರಿಸು
ಪ್ರೀತಿಯಲಿ ಇರಲಿ ಸಿಹಿ ಮುತ್ತು
ಪ್ರೀತಿಯ ದೋಣಿಯಲಿ ಸಾಗೋಣ
ಪ್ರೀತಿ ಸಾಂಬ್ರಾಜ್ಯ ಕಟ್ಟಿ ಮೇರಿಯೋಣ
ಜೋಡಿ ಹಕ್ಕಿಯಂತೆ ಹಾರೋಣ
ಪ್ರೀತಿ ಗೂಡು ಸೇರಿ ಹೋಗೋಣ

✍️ ವೀರೇಶ್ ವಿ ಖೈರವಾಡಗಿ











- Veereshappa v khairawadagi

13 Jul 2026, 11:20 am