Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆ ದಿನಗಳು

ಆ ದಿನಗಳು ಎಲ್ಲಿ ಹೋದವು
ಸೂತ್ರ ಕಟ್ಟಿ ಆಕಾಶಕ್ಕೆ ಪಟ ಹಾರಿಸಿದ್ದು
ಚಿನಿಪನಿ ಹಿಡೆದು ಹೊಡೆದು ಆಡಿದ್ದು
ಗುಂಡ, ಗಜಗ, ಕಣಗಲಿ ತೋರಬೆರಳಲಿಟ್ಟು ಹೊಡದದ್ದು
ಅಜ್ಜ ಅಜ್ಜಿಯ ತೊಡೆಯ ಮೇಲೆ ಕಥೆ ಕೇಳುತ್ತಾ ನಿದ್ದೆಗೆ ಜಾರಿದ ಆ ದಿನಗಳು
ಬೊಗಸೆ ಶೆಂಗಾಕ್ಕೆ ಉರಿಬಿಸಲಲಿ ಶೆಂಗಾ ಶೊಸಿಸಿದ್ದು
ಬೊಗಸೆ ಹುಣಸೆ ಕಪ್ಪ ಕೆ ಹುಣಸೆ ಹಣ್ಣು ಜಜ್ಜದ್ದು
೨ಪೈ ಸೆಗೆ ಒಂದು ಉಣ್ಣುವ ಎಲೆ ಕಟ್ಟದ್ದು
೨೫ ಪೈಸೆಗೆ ಒಂದು ತಾಸ ಬಾಡಿಗೆ ಸೈಕಲ್ ಹೊಡದದ್ದು
೭೫ ಪೈಸೆಗೆ ನೆಲಕೆ ಟಿಕೆಟ್ ತೆಗೆದು ಸಿನೇಮಾ ನೋಡಿದ್ದು
ಸಂಕ್ರಮಣ ಕ್ಕೆ ೧೦ ಕಿ.ಮಿ ನಡೆದು ರೊಟ್ಟಿ ಖಾರ ತಿಂದದ್ದು
ಊರ ಮದುವೆ ಸಮಾರಂಭಗಳಿಗೆ ಕರೆಯದೇ ಕಳಸಗಿತ್ತಿಯಂತೆ ಹೋಗಿದ್ದು
ಎಸ್ ಎಸ್ ಎಲ್ ಸಿ ಪರೀಕ್ಷೆಲಿ ನಮಗೂ ಯಾರ ಕಾಫಿ ಕೊಡಲು ಬರದದ್ದಕ್ಕೆ ಕಣ್ಣೀರು ಹರಸಿದ್ದು
'ಬಬ್ರುವಾಹನ' ಅಣ್ಣವರ ಸಿನೇಮಾ ನೂರು ಬಾರಿ ನೋಡಿದ್ದು
ಇದ್ದದ್ದೊಂದು ಹಳೆಕಾಲದ ಕೈ ಗಡಿಯಾರ ಕ್ಲಾಸಲಿ ಎಲ್ಲರಗೂ ಕಾಣುವಂಗ ಕೈ ಗೆ ಕಟಗೊಂಡಡ್ಡಾಡಿದ್ದು
ತಲೆ ಗುಂಡ ಹೊಡಸಿಕೊಂಡ ಹಣೆಗೆ ವಿಭೂತಿ ಪಟ್ಟ ಬಳಕೊಂಡ ಕ್ಲಾಸಮೇಟಗಳ ರ್ಯಾಗಿ‌ಂಗಿಗೆ ಒಳಗಾಗಿದ್ದು
ಎಲ್ಲ ಜಾತಿ ಮತ ಧರ್ಮ ಗೆಳೆಯರ ಜೊತೆ ಒಂದೇ ತಾಟಲಿ ಉಂಡಾಡಿದ್ದು
ಪತ್ರ ಬರೆದು ಉತ್ತರಕ್ಕೆ ಹದಿನೈದು ದಿನಗಳವರೆಗೆ ಪತ್ರದ ದಾರಿ ಕಾಯ್ದದ್ದು
ವರ್ಡಕಪ್ ಆಟ ನೋಡಲು, ಸಾಹುಕಾರ ಮನೆಯ ಕಿಡಕಿಗಳಲಿ ಇಣಿಕಿ ಟಿ.ವ್ಹಿ.ನೋಡಿದ್ದು
ಸೈಜ್ ಬರದಿದ್ದರೂ ಗೆಳೆಯರ್ ಡ್ರೆಸ್ ಹಾಕ್ಕೊಂಡು ಕಾಲೇಜ್ ದಲಿ ಬಿಲ್ಡಪ್ ಕೊಟ್ಟದ್ದು
ಮನುಷ್ಯ ಜಾತಿ ಒಂದೇ ಎಂಬ ತತ್ವ ಬದಕಲ್ಲಿ ಅಳವಡಿಸಿಕೊಂಡದ್ದು.
ಆ ದಿನಗಳು ಎಲ್ಲಿ ಹೋದವು...

- Siddugouda

12 Feb 2020, 04:13 pm

!! ಪ್ರೀತಿ ಗೂಡು !!

ಪ್ರೀತಿ ಎಂದರೆ....
ನೀತೀಯ ಗೂಡು....
ನಾವೇ ಸೃಷ್ಠಿಸಿಕೊಂಡ...
ಕಷ್ಠ-ಸುಖದ
ಬೀಡು !!

ಕಿದ್ವಾಯಿ ರಾಜಶೇಖರ್.

- Raj Raj

12 Feb 2020, 02:34 pm

ಪ್ರೇಮು

ನಲ್ಲ-ನಲ್ಲೆ
ಪ್ರೀತಿ-ಪ್ರೇಮ
ನೂರು ಗ್ರಾಮು
ಸಂಸಾರ-ಗಿಂಸಾರ
ಬಿರುಕು ಬಿಟ್ರೆ
ಹಾಕಿಸಬೇಕು ನೋಡು
ಪ್ರೇಮು !!

-ಕಿದ್ವಾಯಿ ರಾಜಶೇಖರ್.

- Raj Raj

12 Feb 2020, 02:24 pm

ಮೂಗನ ಅಂತರಾಳದ ಮಾತು

ಮೂಗನ ಅಂತರಾಳದ ಮಾತು
ಅರಿತವರುಂಟೇ..‌‌.
ಈ... ಜಗದಲಿ......
ಮೂಗಿನ ನೇರಕ್ಕೆ
ಮಾತನಾಡುವ ಜನರ ನಡುವೆ
ಮೌನದ ಬೆಲೆ
ಸಾಸಿವೆಯಷ್ಟೂ ಕೆಡದೇ ಇರಲಿ...

- ಪಿ.ಜಿ.ಜ್ಯೋತಿ

12 Feb 2020, 11:07 am

ಜನನ...

ಕಾಗೆಯ ಗೂಡಿನಲ್ಲಿ
ಕೋಗಿಲೆಯ ಜನನ...
ಆದರೂ ಕೆಡಲಿಲ್ಲ
ಕಂಠದಿ ಹೊಮ್ಮುವ
ಸುಮಧುರ ಗಾಯನ...

ಕೆಸರಿನ ತವರಲ್ಲಿ
ಕಮಲದ ಜನನ...
ಆದರೂ ಮಾಸಲಿಲ್ಲ
ಅಂದದ ಹೂವಿನ
ಚೆಂದದ ಸುಮ ಘಮ...

ಕತ್ತಲೆಯ ಲೋಕದಲ್ಲಿ
ಬೆಳಕಿನ ಜನನ...
ಆದರೂ ಕುಗ್ಗಲಿಲ್ಲ
ನೇಸರನು ಉದಿಸಿದ
ಮುಂಜಾನೆಯ ಮೂಡಣ...

- ಪಿ.ಜಿ.ಜ್ಯೋತಿ

12 Feb 2020, 11:02 am

ಅರಿತು ನಡೆ ನಿತ್ಯ...

ಕಲ್ಲು ಮುಳ್ಳಿನ ಹಾದಿ
ಬರಿಗಾಲ ಪಯಣ...
ಸುಡು ಬಿಸಿಲ ತಡೆಗೆ
ಮರವಿಲ್ಲ ನೆರಳಿಡಲು...

ಬರಗಾಲದ ಊರಲ್ಲಿ
ಹನಿ ನೀರ ಮಾತೆಲ್ಲಿ...
ಕಷ್ಟಕ್ಕಾಗದ ಬಂಧು
ಇದ್ದು ಸತ್ತಂತಿಹನಿಲ್ಲಿ...

ಒಂಟಿ ನೀನು ಒಂಟಿ
ಕೊನೆವರೆಗೂ ಇದೇ ಜಂಟಿ...
ಇರುವುದೊಂದೇ ಸತ್ಯ
ಇದ ನೀ ಅರಿತು ನಡೆ ನಿತ್ಯ...

- ಪಿ.ಜಿ.ಜ್ಯೋತಿ

12 Feb 2020, 11:01 am

ಇರುಳ ದಾರಿಗೆ ಬೆಳಕ ನೀಡಲು

ಇರುಳ ದಾರಿಗೆ ಬೆಳಕ ನೀಡಲು
ಬಂದನು ನೋಡು ಚಂದಿರ!!
ಅವನ ಸುತ್ತಲು ಹೊಳೆಯುತಿರುವ
ತಾರಾ ಲೋಕವು ಸುಂದರ!!

ಕನಸಿನ ಊರಲಿ ನಾನಾ ರೂಪದ
ಕಥೆಯನು ಹೇಳುವ ಚಂದಿರ!!
ಮನದ ಭಾವದ ಬಯಕೆ ಚಿತ್ರಕೆ
ಬಣ್ಣವ ತುಂಬುವ ಸುಂದರ!!

ಮುಗ್ಧ ಮನಸಿನ ಮಗುವ ಮೊಗದಲಿ
ನಗೆಯ ಚೆಲ್ಲುವ ಚಂದಿರ!!
ತಾಯಿಯು ಹಾಡುವ ಲಾಲಿ ಪದದ
ಸಾಲುಗಳೇ ಬಲು ಸುಂದರ!!

ನಿಂತ ನೀರಿನಲಿ ಬಿಂಬವ ಚೆಲ್ಲುತ
ಇಣುಕಿ ನೋಡುವ ಚಂದಿರ!!
ಹರಿಯುವ ನೀರಿನ ಚಲನ ವಲನಕೆ
ಸಾಕ್ಷಿಯು ನೀನೇ ಸುಂದರ!!

ಕಾಣದ ಸುಂದರ ಲೋಕಕೆ ನನ್ನನು
ಕೈ ಹಿಡಿದು ಕರೆತಂದೆ ಚಂದಿರ!!
ಪಯಣದಿ ನೀನು ಜೊತೆಯಿರೆ ಹೀಗೆ
ಸಾಗುವ ದಾರಿಯೇ ಸುಂದರ!!

- ಪಿ.ಜಿ.ಜ್ಯೋತಿ

12 Feb 2020, 10:33 am

ಕಲಿಗಾಲ

ಸಿಂಹದ ಮರಿಯ ತಂದು ಸಾಕಿ ಬೆಳಸಿದರೆ, ಅದಕೆ
ಆಕಳ ಗುಣ ಬಂದಿತೆ? ಅಮೃತದಂತ ಹಾಲು ಕೊಟ್ಟಿತೆ?
ನರಿಯ ಮರಿಯ ತಂದು ಸಾಕಿ ಬೆಳಸಿದರೆ ಅದಕೆ
ನಾಯಿಯಂತ ನಿಯತ್ತಿನ ಗುಣ ಬಂದಿತೆ?
ಕಳ್ಳಬೆಕ್ಕಿಗೆ ಮನೆಯಲ್ಲಿ ಜಾಗ ನೀಡಿ
ನಿಯತ್ತಿನ ನಾಯಿಗೆ ಅಂಗಳದಲ್ಲಿ ಜಾಗ ನೀಡಿದ
ಮನುಜನ ನೋಡಿ
ಇದು ಕಲಿಗಾಲವಯವ್ಯ
ಎಂದ ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.

- Siddugouda

11 Feb 2020, 03:25 pm

ಮನಸೆಂಬ ಪರದೆಯ ಸರಿಸಿ....

ಮನದೊಳಗೆ ಒಲವನ್ನು ಅರಸಿ...
ಸಿಗಬಹುದೇ ನನಗೊಬ್ಬ ಪ್ರೇಯಸಿ...
ಎಂದು ದಾರಿಕಾಯುತ್ತ...
ಮನಸೆಂಬ ಪರದೆಯ ಸರಿಸಿ...
ಬಕ ಪಕ್ಷಿಯಂತೆ ಕಾಯುತಿದೆ ಮನ ಬರಬಹುದೆಂದು ಪ್ರೇಯಸಿ... ✍️ಮಲ್ಲ....

- Mallesh

11 Feb 2020, 12:00 pm

ಅಧಿಕಾರದ ಅಟ್ಟಹಾಸ

ಸುತ್ತಲು ಮುಸುಕಿದೆ ಗಾಢಾಂಧದ ಕತ್ತಲೆ
ಈ ಕತ್ತಲೆಯೊಳಗೆ ಸಮಾಜವೇ ಬತ್ತಲೆ
ನನಸಾಗಲಿಲ್ಲ ಮಹನೀಯರ ಕನಸು
ಬಡವರು ದೀನರು ಆದರು ಬಲಿಪಶು

ಎಲ್ಲೆಡೆ ಮತಾಂಧತೆ ಜಾತೀಯತೆಯ ಸಾಮ್ರಾಜ್ಯ
ನಿಜವಾಗಿಯೂ ಲಭಿಸಿದೆಯೇ ನಮಗೆ ಸ್ವರಾಜ್ಯ?
ಕಣ್ಬಿಟ್ಟ ಕಡೆಯಲ್ಲೆಲ್ಲ ಕೋಲೆಬಸವಗಳ ಗುಟುರು, ಕಾಕು
ಹಿಂದೆಯೆ ನಡೆದಿದೆ ಗದ್ದುಗೆಯ ಅಹಂಕಾರದ ಪರಾಕು
ಹಿಂಬಾಲಕರಿಗೆಲ್ಲ ಅಧಿಕಾರದ ರಕ್ಷಾ ಕವಚದ ಬಾಳು
ರಕ್ಷಕರೆಲ್ಲಾ ಭಕ್ಷಕರಾಗಿ ಎಂಜಲಿಗೆ ದೇಹಿಯೆನ್ನುವ ಗೋಳು

ನೋಟ ಬೀರಿದಲ್ಲೆಲ್ಲಾ ನಾನು ನನ್ನದೆ!
ನನ್ನ ಬಿಟ್ಟು ಜಗದಲಿ ಏನಿದೆ?
ಕ್ಷಣಕ್ಷಣಕೂ ಬಲಿಯುತಿದೆ ಅದ್ವಿತೀಯನಾಗುವ ಸ್ವಾರ್ಥ
ಸಾವಿರ ಪ್ರಾಣಗಳುಸಿರುಗಟ್ಟಿದರು ಸರಿಯೇ,
ದೇಶವನ್ನೆ ದೋಚಿ ಮಾರುವುದಾದರೂ ಸರಿಯೇ

ಎಡಬಿಡದೆ ನಡೆದಿದೆ ಅತಿಕ್ರಮ ಅತ್ಯಾಚಾರ
ಸಿಕ್ಕಿದ್ದನ್ನೆಲ್ಲ ಅಗೆದು ತೆಗೆದು ಬಗೆದು ಸಿಗಿದು ತಿನ್ನುವಷ್ಟು
ಇವರ ಕಣ್ಣಿಗೆ ಬಿದ್ದು ಸತ್ತವರೆಷ್ಟೋ? ಸೊರಗಿದವರೆಷ್ಟೋ?
ತನ್ನನ್ನೇ ಅಡವಿಟ್ಟು ಗಂಟು ಕಟ್ಟಿಕೊಂಡವರೆಷ್ಟೋ?

ಆಚಾರದ ನೆರಳಲ್ಲಿಯೇ ಅನಾಚಾರ
ಅಡಿಯಡಿಯಲ್ಲಿಯೂ ಆವರಿಸಿದೆ ಭ್ರಷ್ಟಾಚಾರ
ಇನ್ನೆಲ್ಲಿಹುದು ಸುಸಂಸ್ಕೃತಿಯ ಶಿಷ್ಟಾಚಾರ
ನಡೆದಿದ್ದು, ನಡೆಯುವುದೆಲ್ಲ ಅಗೋಚರ


ಹೆಜ್ಜೆ ಇಟ್ಟಲ್ಲೆಲ್ಲ ಬರೀ ಆಶಾಭಾವದ ಸೋಗು
ಎಂದಿಗೂ ನಿಲ್ಲದು ನೊಂದವರ ಕೂಗು
ನೊಂದವರ ನಿರ್ಗತಿಕರ ಹಾಹಾಕಾರ
ತಿರುಕನ ಕನಸೇ ಇದಕೆಲ್ಲ ಪರಿಹಾರ

ಪ್ರತಿ ನುಡಿಯಲ್ಲೂ ದೇಶದ ಬೆನ್ನೆಲುಬು ರೈತ
ಇಂದು ಅವನ ಸ್ಥಿತಿ ಬರೀ ಜೀತ ಜೀತ
ದೇಶದ ಅನ್ನಕಾಗಿ ದುಡಿದು ದುಡಿದು ಸೋತ
ಇಂದಾಗಿದೆ ಅವನ ಬಾಳು ಬಲು ವಿಪರೀತ

ಒಂದೆಡೆ ಅನ್ನಕ್ಕಾಗಿ ಕ್ರಾಂತಿ ಕ್ರಾಂತಿ
ಮತ್ತೊಂದೆಡೆ ಅಜರ‍್ಣದ ವಾಂತಿ
ಎಂದೆದಿಗೂ ಆಗದಿದ್ದಲ್ಲಿ ಕ್ರಾಂತಿ
ದೇಶದ ಪ್ರಗತಿ ಕೇವಲ ಬ್ರಾಂತಿ

ಈ ಪಾಪ ಕೂಪದ ವಿಹ್ವಲ ಕತ್ತಲ ರಾಜ್ಯದ
ಅಕ್ರಮ ಕ್ರೌರ್ಯಗಳ ಮೆಟ್ಟಿ ಸಮಗಟ್ಟಲು
ಅವತರಿಸುವನೇ ಆ ಭಾರ್ಗವರಾಮ!
ಕುಸಿದಿರುವ ಭಾರತಾಂಬೆಯ ನಡುವಿಗೆ
ಊರುಗೋಲಾಗಲು ಬರುವನೇ ಅವತಾರಿ ಕಲ್ಕಿ?

ಎಲ್ಲಿದೆ ಆ ಧೀರತ್ವದ, ವೀರತ್ವದ, ಸಮಾನತೆಯ ಅರಿವಿನ
ದೇದಿಪ್ಯಮಾನದ ಜ್ಯೋತಿ
ತನ್ನ ತಾಸುಟ್ಟು ಲೋಕವ ಬೆಳಗುವ ಜ್ಯೋತಿ
ಆಗಬೇಕಿದೆ ಎಲ್ಲರಿಗೂ ಸ್ಫೂರ್ತಿ

ಕುಮಾರ ಸಿ

- Kumara.C

11 Feb 2020, 07:12 am