Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕಾಣದೆ ಇರುವ ಲೋಕವನ್ನು ಬಯಸಿದರೆ ತಂದುಕೊಡುವ ಶಕ್ತಿ ನನಗಿಲ್ಲ........
- Dit-o boys
17 Jan 2020, 05:21 pm
ಹೊಟ್ಟೆ ಪಾಡಿಗಾಗಿ ನಗರ ಸೇರಿ,
ಕಾಲ್ ಸವಿಯೊವರೆಗೂ ಹುಡುಕಿ ಹುಡುಕಿ ಕೆಲ್ಸ ಗಿಟ್ಟಿಸಿಕೊಂಡು,
ನಾ ಮುಂದು ತಾ ಮುಂದು ಎಂದು ನಡೆಯುವವರ ನಡುವೆ ಮುಂದೊಂದಿನಕ್ಕಾಗಿ ನಡೆಯುತ್ತಿರುವೆನು
ಹೊತ್ತ ಕುಟುಂಬ ಜವಾಬ್ದಾರಿ, ನೋವು, ಆಸೆ ಆಕಾಂಕ್ಷೆಗಳನ್ನುಗಳನ್ನು ಮನದಲ್ಲಿ ಬಚ್ಚಿಟ್ಟು ,
ಈ ಮದ ಮತ್ಸರ ವೈಮನಸ್ಸುಗಳ ನಡುವೆ ಕಿರುನಗೆ ಬೀರಿ ಸಾಗುತಿರುವೆನು, ನನ್ನ ಅಂತರಂಗವ ಬಲ್ಲವರು ಯಾರಿಲ್ಲ ಇಲ್ಲಿ ಹೆಡೆ ಮುರಿ ಕಟ್ಟುವವರೆ ಸುತ್ತೆಲ್ಲಾ..
✍️ವೇಣು ಸಿ. ಎ✍️
- VenuCA
17 Jan 2020, 01:06 pm
ಸಂಜೆತನಕ ಕೂಲಿ ಮಾಡಿ,ಸಂಜೆ ಸ್ವಲ್ಪ ಹೆಂಡ ಬುಟ್ಕೊಂಡು ನನ್ನಾಕೆಗಂತ ಮಲ್ಲಿಗೆ ಹೂ ತಂದ್ರೆ,ಬೇಡ ಅಂತ ಮುನಿಸಿಕೊಂಡವಳೇ ಏಟೆ ಸಮಾಧಾನ ಮಾಡುದ್ರು ಕೊಡಲ್ಲ ಅಂತಾಳೆ ಮುತ್ತ . ಸಿಡ್ಕೊಂಡು ಹತ್ರ ಬಂದ್ಲು ಜೇಬಿಗೆ ಕೈ ಹಾಕುದ್ಲು , ಇರೋ ದುಡ್ಡು ಕಿತ್ಕೊಂಡ್ಲು ಹುಳಿ ಹೆಂಡಕೆ ಮೂರು ಕಾಸು ಕೊಡೆ ಅಂದ್ರೆ , ಮೂತಿ ತಿರುಗಿಸಿಕೊಂಡು ಬಂದು ಮೂತಿಗೆ ತಿವಿತಾಳೆ ಬಾಯಿಗ್ ಬಂದಂಗೆ ಬೈತಾಳೆ. ಏಟೆ ಅಡಿದ್ರು ಹೊಟ್ಟಿ ತುಂಬಾ ಹಿಟ್ಟಾಕಿ ಮಗುವಾಂಗೆ ಮಲಗಿಸ್ತಾಳೆ, ಕಡಲ ಸುಳಿಗಿಂತ ಆಳ ನನ್ ಹೆಂಡರು ಮನಸು.ಎಸೆ ಕಷ್ಟ ಬಂದ್ರು,ನಾನೇ ಹೊಡೆದ್ರು, ಜಾಜಿ ಮಲ್ಲಿಗೆಯಂಗ ಪಸರಸ್ಥಳ ನಗುನಾ.ಆಕಿ ಪ್ರೀತಿ ಮುಂದ ಹೆಂಡ ಅಮಲೆಲ್ಲ ಶೂನ್ಯ,ಇವಳೇ ನನ್ನ ಕಣ್ಮಣಿ.ನನ್ನ ಸೂರ ನಂದಾದೀಪ, ಏನೇ ಆದ್ರೂ ನಾನು ನನ್ ಹೆಂಡರು ಹಾಲು-ಜೇನು
✍️ ವೇಣು ಸಿ. ಎ ✍️
- VenuCA
17 Jan 2020, 12:58 pm
ಚಂದನದ ಗೊಂಬಿ ಅವಳು
ಬಂಧುರ ಬೆಡಗಿನವಳು
ಸಾವಿರದ ಕನಸುಗಳನೆಲ್ಲ
ಕಟ್ಟಿಕೊಟ್ಟವಳು ನನ್ನ ಚೆಲುವಿ..
ಕಣ್ಣ ಸನ್ನೆಯ ಮಾತುಗಳು
ಎದೆಯ ನಿನಾದಕೂ ಸ್ಪರ್ಶ
ಮಾತಿನ ಮಲ್ಲಿ,ಮಿಂಚು ಬಳ್ಳಿ
ಹುಣ್ಣಿವೆ ಚಂದ್ರನ ಜಾಡಿನವಳು..
ಕೆಂದುಟಿಯಲುಂಟು ಸುಧೆ
ನೀಳ ನಾಸಿಕವೊಂದು ಸಂಪಿಗೆ
ಬಾಳೆದಿಂಡಿನಂತೆ ಬಳುಕುವ
ಸೊಂಟದ ವೈಯ್ಯಾರಿ ಚೆಲುವಿ..
ನಸುನಗೆಯೇ ಅವಳೊಡವೆ
ಅವಳು ದೇವಲೋಕದ ಸಿರಿದೇವಿ
ಕಂಡಡೋನೆ ಎತಕೋ ಮುದ್ದು
ಪ್ರೀತಿಗಿಲ್ಲವೆ.? ಯಾವ ಮದ್ದು..
ಚೆಲುವಿ ನನ್ನ ಸೊಬಗಿನೊಡತಿ
ನನ್ನೆಲ್ಲ ಭಾವಗಳ ಕಾಪಿಟ್ಟು ಕಾಯ್ವ
ಮನದ ದೊರೆಸಾನಿ ನನ್ನಾಕೆ
ಅವಳೆ ನನ್ನ ಜೀವದ ಚೆಲುವಿ..
- ಲಕುಮಿಕಂದಮುಕುಂದ
17 Jan 2020, 12:37 am
ಗೆಳೆಯಾ ನಿನ್ನ ಸನಿಹದಲ್ಲಿ..
ದುಗುಡವೆಲ್ಲ ಮಾಯವಾಗಿ..
ಮನಸು ಬದಲಾಯ್ತು ಚಿಟಿಕೆಯಲಿ..
ನಿಟ್ಟುಸಿರು ಬಂತು ಜೋರಾಗಿ..
- deepu
16 Jan 2020, 11:06 pm
ಕೇರಿಯಂಚಿನ ಹೆಂಚಿನ ಮನೆಯ
ಕೆಂಚವ್ವನ ಮಂಚದೊಳಾಡುವ
ಕೂಸಿನ ನಸುನಗೆಯಲ್ಲಿತ್ತು ಕವಿತೆ..
ಬರದ ನಡುವೆ ಸುರಿದ ಸೋನೆಯ
ಹನಿಯೊಳು ಕುಣಿದಾಡುವ ಪೋರನ
ಮನದ ಮೂಲೆಯಲ್ಲಿತ್ತು ಕವಿತೆ..
ಮನೆಯ ಹುಂಜ ಕತ್ತೆತ್ತಿ ಕೂಗಿದಾಗ
ಕುಣಿದ ಶಿರದ ಕುಂಚದ ಕುಣಿತದಿ
ಅಂದಣವೇರಿ ಅಡಗಿ ಕುತಿತ್ತು ಕವಿತೆ..
ರೂಪಸಿಯ ಕಣ್ಣ ಸನ್ನೆಯ ನೋಟ
ವೈಯ್ಯಾರಿಯ ಬೆಕ್ಕಿನ ನಡಿಗೆಯ ಮಾಟ
ಕಂಡಾಗಲೆಲ್ಲ ನಕ್ಕು ಬಂದಿತ್ತು ಕವಿತೆ..
ದಾರಿಹೋಕ ವ್ಯಾಪಾರಿಯ ಕೂಗು
ಮಾರಿ ಜಾತ್ರೆಯ ಒಲಗದ ಸದ್ದಲ್ಲಿ
ಜಾರಿ ನನ್ನೋಡನೆ ಬಂದಿತ್ತು ಕವಿತೆ..
ಮಳೆ ಮಂಜು,ಇಳೆ ಹಸಿರ ಪರಿಸರ
ಬೀಸಿದ ತಂಗಾಳಿಯೊಡಲ ಬೆಸುಗೆಗೆ
ಮನದ ಮನೆಯಲ್ಲಿ ಮೂಡಿತ್ತು ಕವಿತೆ..
ಯಾರದೋ ಸಂಚಿಗೆ,ಜಾರಿದ ಕಂಬನಿ
ಒಡನೆ ಕಾಡಿದ ಕೆಂಗಣ್ಣಿನ ಮಿಂಚಿಗೂ
ದಕ್ಕಿತ್ತು ಗಾವಿಲರ ದಿಕ್ಕರಿಸಿದ ಕವಿತೆ..
ಒಕ್ಕುವ ರೈತನ ತೋಳ್ಬಲದಡಿಯಲ್ಲಿತ್ತು
ಮೊಲ್ಲೆ ಮುಡಿದ ಹೆಣ್ಣಿನ ಮುಡಿಯಲ್ಲಿತ್ತು
ಒಲ್ಲೆನೆಂದರೂ ಬಿಡದೆ ಕಾಡುವ ಕವಿತೆ..
- ಲಕುಮಿಕಂದಮುಕುಂದ
16 Jan 2020, 05:09 pm
ಅಧಿಕಾರದ ಮದವೇರಿ ಕುರ್ಚಿಗಾಗಿ
ಕಾದಾಡಿ ಅರಿವಳಿದವಗೆ ಹಿಡಿದಿದೆ ಗ್ರಹಣ
ಇಲ್ಲದವರ ದಳ್ಳುರಿಯ ಕಿಡಿ ತಾಕಿ
ಉಳ್ಳವರ ಅಹಂ ಸುಟ್ಟು ಹಿಡಿದಿದೆ ಗ್ರಹಣ
ಮಾನವ ಧರ್ಮದ ನಿಜವರಿಯದ
ನರಮೇಧದ ಕತೃಗಳಿಗೆ ಹಿಡಿದಿದೆ ಗ್ರಹಣ..
ನರನೇ ಹರನೆಂದು ಮೇರೆದ ಕಾಲಕ್ಕೆ
ಕೆಂಡಕಾರುವ ವೈರಿಗಳ ವರ್ಗಕ್ಕಿದೆ ಗ್ರಹಣ
ಭಾರತದ ಏಕತೆಯ ಜೇನುಗೂಡಿಗೆ
ಕಲ್ಲೆಸದ ಖಧೀಮರಿಗೆ ಹಿಡಿದಿದೆ ಗ್ರಹಣ..
ಹೆಣ್ಣು ಹಣ್ಣೆಂದು ಉಂಡೊಗೆದಾತಂಗೆ
ಎನೂ ಮಾಡದ ಕಾನೂನಿಗಿದೆ ಗ್ರಹಣ..
ಸೌಂದರ್ಯ ಲಾಲಸೆಯಲಿ ಮೊಳಗಿದ
ಪಾಪಿಗಳ ಕೂಪದಡಿಲಿದೆ ಕರಾಳ ಗ್ರಹಣ.
ಎಲ್ಲ ತಿಳಿದು ತಪ್ಪೆಸೆಗುವ ಮನುಕುಲದ
ನಿರ್ಣಾಮಕ್ಕೆ ಕಾರಣವಾಗದೆ.? ಗ್ರಹಣ.!
- ಲಕುಮಿಕಂದಮುಕುಂದ
16 Jan 2020, 03:24 am
ಓ ಮನಸೇ..!
ನಿನ್ನೊಲವ ವರ್ಷಧಾರೆ
ಸುರಿದಿದೆ ಇಂದೇತಕಿ
ಹೃದಯದ ಕಂಪಿಸಿದೆ
ಬಹುಶಃ ನಿನ್ನೋಲವ
ಧಾರೆಗೆ ಸಿಡಿಲು
ಗುಡುಗು ಅವತರಿಸಿವೆಯೇ?
ಹೇಳಿ ಬಿಡು ಒಮ್ಮೆ
ಮನಸಿನ ಎಲ್ಲ ಭಾವಗಳಿಗೆ
ಗೊಲ್ಲನ ಮನಸಿನೋಳು
ರಾಧೆಯದೆ ಧರ್ಭಾರವೆಂದು
ಅವನೂ ಅವಳಿಗಾಗೆ
ಕಾತರಿಸಿ ಕಾಯುವನು
ಯಮುನೆಯ ದಡದಿ.
- ಲಕುಮಿಕಂದಮುಕುಂದ
16 Jan 2020, 03:18 am
ಪ್ರೀಯ ಗೆಳೆಯ ಬಾಳ ದನಿಯ
ನನ್ನ ಪ್ರೀತಿಯ ಸಂಕೊಲೆಯಲ್ಲಿ
ಬಂದಿಸಿ ಹೋಸದಾದ ಪ್ರೇಮಾಂಕುರಕ್ಕೆ
ಆದಿ ಯಾಗುವ ಭಾವನೆ...
ಬಾಳ ಒಡತಿ ಪ್ರೀಯ ಗೆಳತಿ
ಸಮಾಜದ ಅಪಮಾನದ ಸಂಕೊಲೆಯ
ಕಳಚಿ ಬಂದಿಸುವುದಾದರೆ ಸ್ನೇಹ
ಸಂಕೊಲೆಯಲ್ಲಿ ಬಂದಿಸು...
ಪ್ರೇಮ ರಾಜನ ಪ್ರೇಮಾಂಕುರದ
ಬಂದಿಗಳು ನಾವು ನಾಮಗೆಲ್ಲಿ
ಆಪಮಾನದ ರಾಣಿಯ ಸಂಕೊಲೆ
ನಾಮಗ್ಯರು ಸಂಕೊಲೆ ತೊಡಿಸುವವರು..
......✍✍ವಿನೋದ್
- Vinod Naik Vinod Naik
16 Jan 2020, 02:01 am
ಕನ್ನಡವೆನಿತು ಸೊಗಸು,
ಕುಣಿಯುವುದೀ ಮನಸು!!
ಮೇಘದ ಹನಿಯಂತೆ ಕನ್ನಡ
ಸ್ವಾತಿ ಮುತ್ತಿನಂತೆ ಕನ್ನಡ
ಸೌಮ್ಯ ಕುಸುಮದಂತೆ ಕನ್ನಡ,
ನೀ ಗೆಲ್ಲಿಸಂ ಸಿರಿಗನ್ನಡ..
ದುಂಬಿಗೆ ಮಕರಂದದಂತೆ ಕನ್ನಡ. ನೀರಿನಂತೆ ಕನ್ನಡ,
ಬೆಟ್ಟಕ್ಕೆ ಹಚ್ಚ ಹುಲ್ಲಿನಂತೆ ಕನ್ನಡ. ಜೇನಿನಂತೆ ಕನ್ನಡ.
ನೀನಾಗು ಕನ್ನಡದ ಕುಡಿ
ಹೋರಾಡಿ ಕನ್ನಡಕ್ಕೆ ಮಡಿ,
ನೀನಾಗುವವರೆಗೆ ಮಣ್ಣ ಹುಡಿ
ಮಾತನಾಡು ಕನ್ನಡ ನುಡಿ.
- Sunilgarag
15 Jan 2020, 02:00 pm