Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅವನು

ಅವನು
---------
ನಲಿವುಗಳ ಆಚೆಯಲಿ
ನಾವಿಡುವ ಹೆಜ್ಜೆಗಳಲಿ
ಶಾಂತಿಧೂತನ ಪಾತ್ರ .

ಅವನೆತ್ತರಕೆ ಬೆಳೆಯಲು
ಅವನಿಟ್ಟ ಕಸ್ತೂರಿ
ಮೂಸಿಸಲು ನಮಗೆ ಸಮಯವಿಲ್ಲ.

ಕಿರುನಾಲಿಗೆಗೊಂದು
ಹಿರಿನಾಲಿಗೆಯ ಆಶ್ರಯ
ದೇವನೊಲುಮೆಯ ಕೀರ್ತಿ.

ಸಂತೋಷವ ಗಳಿಸಿಡಲು
ಮುಪ್ಪು ಆವರಿಸುವ ಮುನ್ನ
ಒಳಹೊಕ್ಕು ನೋಡೊಮ್ಮೆ ಅವನ.

ಅವನಂದುಕೊಂಡದ್ದು
ನಾವಿಂದು ಕೊಂಡದ್ದು
ಎರಡೂ ಒಂದೇ.

-- ಸುರೇಶ ಜಕಾತಿ.ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

05 Jan 2020, 09:46 am

ಹೈಕುಗಳು.(ಹನಿಗವನ)

ಹೈಕು
______
೧೦೧.
ಇದೆಂತಹ ಮೋಡಿ
ರಜೆ ಬಂದರೆ ಸಾಕು
ಓದುವ ಕಣ್ಣು, ಕಿವಿ ,ಮೂಗು ,ಬಾಯಿ
ಎಲ್ಲಾ ಒಂದೇ ಕಡೆ ಕೂಡುವವು.

೧೦೨.
ಸುಖದ ಸಂಸಾರಕ್ಕೆ
ತಾಪತ್ರಯಗಳೇ ಕಾರಣ.

೧೦೩.
ಕಣ್ಣು ಮಿಟುಕಿಸಿದಾಗಲೊಮ್ಮೆ
ಕಾಣುವ ಕುಂಟ ನೆಪ
ದೊಡ್ಡ ಅವಕಾಶವನ್ನೇ ಸೃಷ್ಟಿಸುವುದು.

೧೦೪.
ನಾವಿದ್ದಷ್ಟೂ ನಮ್ಮ ವಯಸ್ಸು.

೧೦೫.
ಹಣೆಬರಹದ ಹೊಣೆತನಕ್ಕೆ
ದೃತರಾಷ್ಟ್ರನೂ ಮರುಗಿದ.

೧೦೬.
ಕೌರವರೆಂದರೆ ಯಾರೆಂದುಕೊಂಡಿದ್ದೀರಿ?
ಅವರು, ನಮ್ಮೊಳಗಿರುವ ಅವಗುಣಗಳು.

೧೦೭.
ನಮ್ಮನ್ನೆತ್ತಿ ಆಡಿಸಿದ
ಮುತ್ತಾತರಿಗೂ ಗೊತ್ತಿತ್ತು
ಸೃಷ್ಟಿ ಕರ್ತನ ತಾಕತ್ತು.

೧೦೮.
ಮುತ್ತಾತರ ಕಸರತ್ತಿನ
ಫಲವೇ ಇಂದಿನ ನಾವು.

೧೦೯.
ಅವರೂ ಒಂದು ದಿನ
ಬಾಡಿ ಹೋಗುವರು.

೧೧೦.
ಕುಡಿಯಲಾಗದೇ
ಕೊನೆಯುಸಿರೆಳೆವಾಗ
ಬಾಯೊಳಗೆ ನೀರು ಬಿಡುವರು.

೧೧೧.
ತತ್ತು ಅಣ್ಣ ನೀಡದೇ
ಹೊತ್ತು ಹಾಕಿದ
ಮಕ್ಕಳು .

೧೧೨.
ನಾವಂದು ಕೊಂಡದ್ದನ್ನು
ಸಾಧಿಸಲಾರದ
ಗಳಿಗೆಯೇ ಮೌನ.

೧೧೩.
ಔಷದೀಯ ಗುಣ
ನಮ್ಮ ನಡುವಳಿಕೆ.

೧೧೪.
ನೆಮ್ಮದಿಯ ಉಸಿರಾಟಕ್ಕೆ
ಪ್ರಾಣಾಯಾಮದ ಸಂಭ್ರಮ

೧೧೫.
ಸತ್ಯ ಒಂದೇ
ಅದು ಪರಾಕಾಷ್ಠೆ!

೧೧೬.
ತ್ಯಾಗಕ್ಕೂ ಒಂದು
ಅಪವಾದ ಬಲಿದಾನ.

೧೧೭.
ತಾಳ್ಮೆಗೊಂದು ಮಿತಿ
ಗಂಡ ಹೆಂಡಿರ ಪ್ರೀತಿ.

೧೧೮.
ತವರು ಮನೆಯಾಗಿದೆ
ನಮಗೆ ಭಾರತ.

೧೧೯.
ತಿದ್ದಿ ತೀಡಿದರೂ
ಬರಲಿಲ್ಲ ಬುದ್ದಿಗೇಡಿತನ.

೧೨೦.
ಬುದ್ದಿಗೇಡಿಯಾಗಲು
ಕುಡಿದು ಬಿದ್ದ ಯುವಕನೇ ಸಾಕ್ಷಿ.

//ಸುರೇಶ ಜಕಾತಿ.ಜಮಖಂಡಿ//
8746086658.






- ಸುರೇಶ ಜಕಾತಿ.ಜಮಖಂಡಿ

05 Jan 2020, 09:11 am

ಮುಂಡಿಗೆ ಪದ್ಯ-೦೩

ಮುಂಡಿಗೆ ಪದ್ಯ-೦೩
___________________

ಬರಹದುರಿಗಿನ್ನೂ ಬದುಕುವುದು ಎಕೆ?
ಸಾಕು ಸಲುಹೆನ್ನ ಮಂದಾರ ಗಿನಿಯೇ
ಬಾಯ್ತುಂಬ ಹೊಗಳುವರ ಬೇಗುದಿಗೆ ನೀ ಸಿಕ್ಕು
ಸೊಡರು ಮಾತಿನಿಂದ ಜಂಬ ಕೊಚ್ಚಿ.

ಅರಸನೂ,ಮಂತ್ರಿಯೂ ಆಗಬಹುದೇನೋ
ನೀನೆರೆವ ನೀಕೊರೆವ ಬದುಕು ಬವನೆ
ಬಂದರಿಯೇ ನಾ ಅದನು ತದಕು ಸೊಡರೆ
ಅದಕವನು ಅಂಜುವನು ನುಂಗುವನು ಒಡವೆ

ಬಂದರೆ ಬಾ ಇನ್ನೂ ಹದಳು ಕೊಳಗಳು
ಅಲ್ಲಿನ್ನೂ ನೀರಿಲ್ಲ ಮೆಲವೂ ತಾ ಹಾಸಿಲ್ಲ
ಸುಂಟರದ ಸದ್ದಡಗಿ ಗೆಲ್ಲತಿಹುದಡವಿ
ಸಂತೆಕಂಡವರಿಗಿನ್ನೂ ಸಾವು- ನೋವು

ಅಂದು ಇಂದಿಗೆ ನಿನ್ನ ಸಂಗಡವೂ ಚೆನ್ನ
ಬರದ ನಾಡಲಿ ಬರುವ ನೀ ಎನ್ನ ಚೆಲುವ
ಉಲಿಯಕೊಂಬುವರವರು ನಲಿದರವರಿಲ್ಲ
ಚೆಲುವ ಚೆನ್ನಿಗರಾಯ ನಿನ್ನಳವೆ ಅವರಿಗಿಲ್ಲ.

ಸದ್ದುಗದ್ದಲವೂ ಸುದ್ದಿ ತೋರಣವೂ
ಎದೆ ಸೀಳಿದರಕ್ತವದಕೆ ಹಾವಿನೆಂಜಲು
ಬಾ ಎಂದರೆ ಬರದಿರುವ ತಮ್ಮನ್ನೇ ಮಾರಿರುವ
ತೊಳಲಾಟದ ಮೌನಕೆ ಶರಣರವರಿಲ್ಲ.

ಬಂದ ಬಾಯಾರಿಕೆ ತೀರಿಸಲು ಮೈದಡವಿ
ತಂದ ತಾಂಬೂಲು ಬಾಯಲ್ಲಿ ಇರಿಸಿ
ಇದು ಚೆಂದ ಮಧು ಸ್ನೇಹ ಎನ್ನತ್ತಲಿದ್ದಾರೆ
ಕಂಡ ಬ್ರಾಂತಿಯನವರು ನೆನೆಯುತ್ತಲಿದ್ದಾರೆ.

ನೀನಾರೋ, ಅವರಾರೋ ನನಗೇತಕೆ ಚಿಂತೆ
ಬಂದು ಹೋಗುವ ನಡುವೆ ಗದ್ದಲದ ಸಂತೆ
ಬರೆವ ಸೂರ್ಯನು ಒಮ್ಮೆ ಕರಗಿ ನೋಡುವನು
ಇವನಲ್ಲಿ ಅವನಲ್ಲಿ ಮೂಗು ತುರಿಸುವನು.


// ಸುರೇಶ ಜಕಾತಿ.ಜಮಖಂಡಿ//
8746086658

- ಸುರೇಶ ಜಕಾತಿ.ಜಮಖಂಡಿ

04 Jan 2020, 06:43 pm

ಕಾಪಿಟ್ಟುಕೋ ಬಾ..

ಆಗಾಗ ಅರಳುವ
ತುಟಿಯಂಚಿನ ಈ ನಗು
ಬಾಡಿ ಹೋಗುವ ಮುನ್ನ
ನೀ ಬಂದು
ನೀರ ಹನಿಸಿ ಹೋಗು,
ಚಿಗುರುವ ನವಿರಾದ
ಕನಸುಗಳು
ಚಿವುಟಿ ಹೋಗದಂತೆ
ಜೋಪಾನವಾಗಿ
ಕಾಪಿಟ್ಟುಕೊ...

- ಅಕ್ಷತ

04 Jan 2020, 12:06 am

ಮುಂಡಿಗೆ ಪದ್ಯ-೦೨

ಮುಂಡಿಗೆ ಪದ್ಯ-೦೨
__________________

ಬರುವಾಗಲದು ಬಿಂಕು ಬಿಣ್ಣಾಣದ ಪಾತರಗಿತ್ತಿ
ಅರಮನೆಯಂದದಿ ಸೊಗಸು ವಯ್ಯಾರವ
ಕಂಡು ಹಿಂಜರಿಯದೆ ಬಂದು ನೆಲೆಸಿಹುದು
ನೊಂದು ಸಾಗುವುದು ಈ ಭೂಮಿ ಮೇಲೆ!

ಹಿಂಸೆಯ ತಾಳದ ತಂಬೂರಿಯ ಮೀಟುತ
ದಿನಗಳನೆನಿಸಿ ಮುಂದೆ ದೂಡುತ್ತ
ಎಷ್ಟು ದಿನವಿದಕೆ ಬಾಯಾರಿಕೆ; ಮೇಲೆ ಬಿಸಿ ತಾಪ
ನೂರ್ಮಡಿಲು ಗೆದ್ದಿಹುದು;
ಬಂದು ಒಂದೇ ಸವನೇ ಬಿಕ್ಕುತ್ತಿದೆ.!!

ಇಂದಿಗೆ ನೊಂದಿಹುದು, ನಾಳೆ ಎಂಬುದ ಕನಸು
ಮತ್ತೆ ತಡೆವರಿಸಿ ಬಾಯಾಡಿಸುತ್ತಲಿದೆ
ಮುಂದೆ ನಲಿವುದು ಹಿಂಬದಿಯ ಬಯಲಲ್ಲಿ
ಕೆಸರುಗದ್ದೆಯ ಓಟ ;ಮುಂದೈದು ಪಂಚ ತಾರೆಯರು
ಆರತಿಯ ಬೆಳಗುತಿಹರು!!!

ಸೊಂಟ ಕಟ್ಟಿದ ಭಾಷೆ,ವಿಧ ವಿಧದ ತೃಷೆ ನಮಗೆ
ಬಲಿಯ ಕೊಡಲವರು ಆಡುವರು ಮೃದುಭಾಷೆ
ಆರು ನಾರಿನ ಹಗ್ಗ ಸೊಂಟಕ್ಕೆ ಬಿಗಿದಿಹರು
ಬಿಡಿಸೆಂದು ಭಗವಂತನ ಬೇಡುತಿಹರು!!!!

ಒಂದೇ ಮಗ್ಗುಲಲ್ಲಿ ನಾಲ್ಕೈದು ಮಕ್ಕಳು
ಎಣಿಕೆ ಮಾಡುವುದರೊಳಗೆ ಜೀಕುತಿಹರು
ಎಡದಂಡೆ ಬಲದಂಡೆ ಬಯಲು ಸೀಮೆಯಲಿ
ನಾರಿ ತಾ ವಸ್ತ್ರವಿಡಿದು ಕುಣಿದಿಹಳು!!!!!

ಎದೆ ಅಂಗಿ ಹರಿದಿರಲು ಕಲೆಯೊಂದು ಕಲಿತು
ಬಲಿತ ದೇಹದ ಭಾಗ ಭಾವಕ್ಕೂ ನಿಲುಕದು
ಎದೆಯ ತೂಕದ ಮುಂದೆ ಮತ್ತೆ ಇನ್ನೇನು?
ಕತ್ತು ಹಿಸುಕುವ ಉದ್ಯೋಗದಿ ಭ್ರಷ್ಟ ಭಾವ!!!!!!

ನಯ ವಿನಯದೆದಿರು ಜಾನಕಿಯ ಸೂಚನೆ
ಹಿಂದೆ ಕೈಕೆಯಿಯ ಶಪಥ ಪಟ್ಟಿ
ಮುಂದೆ ಕನ್ಗಳ ಸೊನ್ನೆಯನು ಬರೆಯದೆ
ನೊಂದ ಬಕುತನಿಗಿನ್ನೂ ನಾಲ್ಕು ಗೇನು!!!!!!!


--- ಸುರೇಶ ಜಕಾತಿ.ಜಮಖಂಡಿ
8746086658

ವಿಳಾಸ:- ಶ್ರೀಹರಿ ನಿಲಯ,ಮಹಾಲಿಂಗೇಶ್ವರ ಕಾಲೊನಿ.ಜಮಖಂಡಿ
ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕು- 587301

- ಸುರೇಶ ಜಕಾತಿ.ಜಮಖಂಡಿ

03 Jan 2020, 11:15 pm

ಮುಂಡಿಗೆ ಪದ್ಯ-೦೧.

ಮುಂಡಿಗೆ ಪದ್ಯ-೦೧
____________________

ನಿದಿರೆಯೊಳಗೊಂದು ಅಮಲು
ಕೊಡಲು ಬಂದಳು ತಾಂಬೂಲು
ಬೆಚ್ಚಿ ಬಿದ್ದಾಗ ಇಳಿ ಹೊತ್ತು ಸಂಜೆ
ಅಕ್ಕರೆಯ ತೋರಲವಳೇ ಇಲ್ಲ.

ಬಿಕ್ಕುತ್ತ ಬಿದ್ದಿತ್ತು ಬೆಕ್ಕು;ಹೊಸ್ತಿಲೊಳಗೆ
ಹಾಲು ಚೆಲ್ಲಿದ ಪಾತ್ರೆ
ಶಿವನಿಗಂಟಲೇ ಇಲ್ಲ ಬಿಲ್ವ ಪತ್ರೆ
ಹಿಗೇಕೆ ಎಂದು,ಮನನೊಂದುಕೊಂಡು
ಊರುರು ತಿರುಗಿದ ಮಾತು
ಎನೆಯಿಲ್ಲದೆ ಕೊನೆಗೊಂಡು
ನೆಲಕುರಳಲೇ ಇಲ್ಲ.

ಬಾಯೊಳಗೆ ಬಾಯಿಟ್ಟು
ತಾಂಬೂಲು ತಿಂದ ಎಂಜಲು
ದೀಪದೊಳಗೆ ಅಡಗಿದ
ಎಣ್ಣೆ ಬತ್ತಿಯಾದುದ ಕಂಡ
ಸಂತ ಬೈರಾಗಿಯ ಮಾತು
ಸುಳ್ಳಾಗಲಿಲ್ಲ .

ಇನಿತೆಂದು‌ ಮನನೊಂದು
ಸೂರ್ಯನಾಡುವ ಮಾತು
ಬಲು ಸೊಗಸು ಇಹುದೆಲ್ಲ
ಕೇಳಲರಿಯಲು, ಇಲ್ಲಿ ಜನರೇ ಇಲ್ಲ!!!


--- ಸುರೇಶ ಜಕಾತಿ .ಜಮಖಂಡಿ
8746086658.

- ಸುರೇಶ ಜಕಾತಿ.ಜಮಖಂಡಿ

03 Jan 2020, 01:21 pm

ನನ್ನ ದೇವರು

ಮನದೊಳಗೆ ಆರಾಧಿಸಿ ಹೃದಯತುಂಬಿ ಪ್ರೀತಿಸಿ ನನ್ನ ಕೈ ಹಿಡಿದವರು ನನ್ನ ದೇವರು ತನ್ನವರ ಮರೆಮಾಚಿ ಇಷ್ಟ ಸತಿ ಬೇಕೆಂದು ಅರಸಿ ಬಂದವರು ನನ್ನ ದೇವರು ನನ್ನ ಕಷ್ಟವ ಕಡಿದು ತ್ಯಾಗ ಸೇವೆಯಲ್ಲಿ ದುಡಿದು ಬದುಕಿಗೆ ಆಶ್ರಯವ ನೀಡಿದವರು ಸರ್ವ ಸಕಲವ ನನಗೆ ಕ್ಷಣದಲ್ಲಿ ನೀಡುತಲಿ ಜಗದೊಳಗೆ ನನ್ನ ಹೆಸರ ಹುಡುಕು ತಿಹರು ಬದುಕಿಗೆ ಗುರುವಾಗಿ ಹೃದಯದಲಿ ನೆಲೆಯಾಗಿ ಶಾಶ್ವತದ ಪ್ರೀತಿಯ ಬಯಸುತಿಹರು ಮನ ಬಯಸೋ ಪತಿಯಾಗಿ ಮಣಿ ಯೊಳಗೆ ಮುತ್ತಾಗಿ ಸಿಂಧೂರ ತಿಲಕ ದಲ್ಲಿ ಮಿರುಗುತಿಹರು ಮುತ್ತು ರತ್ನಗಳ ಬಯಕೆ ನನಗಿಲ್ಲ ವೈಭವದ ಬದುಕಿನಲ್ಲಿ ಅವರ ಜೊತೆ ನಾನಿರಲು ನಂರತೆಯ ಮನದೊಳಗೆ ಮಗುವಾಗಿ ಅವರಿರ ಲೂ ಸಿರಿ ಸುಖದ ಕೊರತೆ ನನಗಿಲ್ಲ ಸಂತಸದ ಬದುಕಿಗೆ ಹಾರೈಸಿ ರೀ ಎಲ್ಲಾ

- nagamani Kanaka

02 Jan 2020, 08:12 pm

ಮನದ ಮಾತು

ಹೋಗದಿರು ಗೆಳೆಯ ಈ ಜೀವವಾ ತೊರೆದು
ಮಾಡಿದ ತಪ್ಪುಗಳ ಕ್ಷಣಕ್ಷಣಕು ನೀ ತಿವಿದು..
ಕಾಡದಿರು ಇನಿಯ ನೀ ಪ್ರೀತಿಯಾ ಬೆಸೆದು
ಈ ಜೀವನಾ ಕಳೆವೆ ನಿನ ತೋಳಲಿ ಉಳಿದು..
ಹೇಳದಿರು ಗೆಳೆಯ ನೀ ಬೇಡ ಇನ್ನೆಂದು
ಹೇಳಿದ ಮರುಕ್ಷಣವೆ ನನ ಉಸಿರ ಕೊನೆ ಅಂದು..

- ಸಾಹಿತ್ಯಶ್ರೀ

02 Jan 2020, 01:24 am

ಜೋಪಾನ ಶಾಂತ

ಶಾಂತಾ
ಬಿಗಿಮಾಡಿಕೋ
ಕೊಡಪಾನ..

ಬೀಳದಂಗೆ
ನೋಡಿಕೊ
ಜೋಪಾನ..

ಪುಂಡರ ಮೇಲೆ
ಇರಲಿ ಸ್ವಲ್ಪ
ಗಮನ..

ಎಚ್ಚರ ತಪ್ಪಿ
ಬಿದ್ದರೆ ಮಾಡ್ತಾರೆ
ಅವಮಾನ..

- ಅಕ್ಷತ

01 Jan 2020, 11:56 pm

ಹೂ

ನೀ ಹೂವಂತೆ......
ನಾ ದುಂಬಿಯಂತೆ......

ನಿ ಎಷ್ಟೇ ದೂರಹೋದರು.....
ನ ಬರುವೇ.....

ನಿನಗಾಗಿ ಕಾಯುವೇ....
ನಿನ್ನ ನೆನಪಲ್ಲೆ ಸಾಯುವೇ......

- Ravi Jackie

01 Jan 2020, 09:52 pm