Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮರಗಳ-ಮರುಗು

ಬ್ಯಾಸಗಿ ದಿವಸಕ ಬೇವಿನ ಮರ ತಂಪ ಅಂತಿದ್ರಿ.
ಅರಳಿ-ಕಟ್ಟೆಯ ಮೇಲೆ ಊರಾ ನ್ಯಾಯ ಹೇಳ್ತಿದ್ರಿ..
ಊರ ಮುಂದಿನ ಬಸವಣ್ಣಗ ಬಿಲ್ಪತ್ರಿಯ ಎರಸ್ತಿದ್ರಿ.
ಇಗ್ಯಾಕೆ ಇಷ್ಟು ಬದಲಾಗಿರೀ, ತಿಳಿವಲ್ತು ನಿಮ್ಮ ಆಟ!!

ಬನ್ನಿ ತಗೊಂಡು ಬಂಗಾರದಂಗ ಇರೋಣ ಅನ್ನೋಕೆ ಅಸ್ಟೆನಾ ನಾವು?
ಚಪ್ಪರಿಸಿ ನಾ ಬಿಟ್ಟ ಹಣ್ಣು ತಿನ್ನೋಕೆ ಅಷ್ಟೇನಾ ನಾವು
ರಣ-ಬಿಸಿನಲಿ ನಿಮಗೆ ನೆರಳು ಕೊಟ್ಟಿಲ್ಲೇನು ನಾವು?
ತಿಂದ ಮನೆಗೆ ಜಂತಿ ಎಣಿಸೋರು ನೀವಲ್ಲದೆ ಮತ್ತೆಲ್ಲಿದಿರಾ?

ನಿಮ್ಮ ಆಡು-ಕುರಿ ತಿನ್ನಸಲಿಕ್ಕೆ ನಾವೇನು ಅಂದವರಲ್ಲ!
ನಿಮ್ಮ ಕೂರಿಗೆ-ಕುಂಟೆಗೆ ನಾವೇನು ತಂಟೆ ತಗದವರಲ್ಲ.!!
ಅಷ್ಟೇ ಯಾಕೆ ನಮ್ಮನ್ನ ಕತ್ತರಸಿ ಜಂತಿ ಮಾಡಿಕೊಂಡಗಲೂ ಪಿಟಕ್ ಅಂದವರಲ್ಲ!!!
ಇಷ್ಟಿದ್ದರು ಅದು ಎಷ್ಟರ ಐತಿ ನಿಮ್ಮ ದಬ್ಬಾಳಿಕೆಯ ದೌಲತ್ತು??

ಲಕ್ಷ್ಯ ಕೊಟ್ಟ ಕೇಳ್ರಿ ಇನ್ನ ನಮ್ಮಿಂದ ಆಗಲ್ಲ..
ಅನಾಮತ ಎಂಥ ಪಾಪ ಅಂದ್ರ ಐತಿ ಇಲ್ಲ ಅದಕ?
ನಮಗ ತಲೆ ಕೇಟ್ರಾ ಸುಟ್ಟು ಬುದಿನಾ ಆಗ್ತಿರೀ!!
ಈಗಲಾದರೂ ಕೈ ಮುಗಿತಿವಿ ನಮ್ಮನ್ನ ಉಳಿಸಿ-ಬೆಳೆಸಿ.
ಸುಗ್ಗಿ..

- ಆರ್ ಎಸ್ ಸುಗ್ಗಿ.

09 Oct 2019, 01:58 pm

ಹಸಿರಿನ ಉಸಿರಲಿ -ಪುನಾ

ಹಸಿರಿನ ಉಸಿರಲಿ, 

ತಂಪನೆ ತವರಲ್ಲಿ.. 

ಬೆಳಗಲು ಬಾಳು ಹಸಿರೋತ್ಸವದಲಿ.. 

ಕಡಿಯದಿರಿ ಮರಗಿಡಗಳ.. 

ಇಲ್ಲವಾದರೇ...

ದಿನಗಳುರುಳುರುಳಿ ಕಳೆದುಕೊಳ್ಳುವೆವು ತಂಪನೆ ಉಸಿರ ಸವಿರುಚಿ..! 

ಕಾಣದ ಮೋಡದ ಕೆಳಗೆ, ಬಾರದ ಮಳೆಯ ನೆಲೆಗೆ ಬೇಸತ್ತು ಸಾಯುವೆವು ಮುಂದೊಂದು ದಿನ..!!!

- PunitNarayan

09 Oct 2019, 12:03 am

ಕಾದಿರುವೆ ನೀ ಬರಬಾರದೆ...

ರಾತ್ರಿ ವೇಳೆಯಲ್ಲಿ ಕಾಣುವ
ಆ ಚಂದ್ರ ಮುಖದವಳು
ಕನಸಲ್ಲಿ ಕಾಡುವ ಹಸನ್ಮುಖಿ
ಕಣ್ಣುದ್ದುರು ಎದ್ದು ಬರುವ ದೇವತೆಯೇ...

ಸೂರ್ಯ ಮುಳುಗು ಹೊತ್ತಿನಲ್ಲಿ
ಇಬ್ಬರು ಜೊತೆಯಾಗಿ ಕೂತು
ಆಡೋಣ ನೂರೆಂಟು ಮಾತುಗಳು
ನಾ ಕನಸ್ಸಿನಲ್ಲಿ ನೀ ನನಾಗಿತ್ತ ಮುತ್ತು
ನಿನ್ನ ದಾರಿಯನ್ನೇ ಕಾದಿರುವೆ ನಾನು
ಇನ್ನಂದ್ದರೂ ನೀ ಬರಬಾರದೇನು...

ತುರು ತುರು ಮಳೆ ಬಾರುವ ಸಮಯ
ನಾ ಬಂದು ನಿಂತಿರುವೆ ನಿನ್ನ ಸನಿಹ
ತಿಳುಸುವೆಯ ನಿನ್ನ ಮನದ ಬಯಕೆಯು
ಅಂದು ಕನಸಲ್ಲಿ ಕೊಟ್ಟ ಬಾಷೆಯ
ನಂಬಿ ನಾ ಕಾದಿರುವೆ ನಿನ್ನ ದಾರಿಯನ್ನು
ಇನ್ನಂದ್ದರೂ ನೀ ಬರಬಾರದೆಯೇ..... ನಿನಗಾಗಿ ಕಾಯುವೆ ಸದಾ......

- Ajay

08 Oct 2019, 09:22 pm

ತಾಯಿ ದೇವಕಿ

ಒಂಬತ್ತು‌ ತಂಗಳು
ಗರ್ಭದಿ ನಿನ್ನಿರಿಸಿ
ಹಡೆದಳಾ ತಾಯಿ ದೇವಕಿ!!
ಅಂಗೈಯ ಬೊಗಸೆಯಲಿ
ಕಂದನ ಮೊಗ ನೆನೆದು
ಮುದ್ದಿಸಿದಳಾ ತಾಯಿ ದೇವಕಿ!!
ಬರಿಗೈಯ ತಾ ಹಿಡಿದು
ಮುತ್ತಿಕ್ಕಿ ಎತ್ತಾಡಿ
ಲಾಲಿಸಿದಳಾ ತಾಯಿ ದೇವಕಿ!!
ತುಂಬಿದ ಎದೆಯಿಂದ
ಅಮೃತವನು ಚಿಮ್ಮಿ
ಪಾಲಿಸಿದಳಾ ತಾಯಿ ದೇವಕಿ!!
ನೀನಿರುವ ಗುಂಗಲ್ಲಿ
ಬರಿ ಮಡಿಲ ಸವರುತ್ತ
ಪೋಶಿಸಿದಳಾ ತಾಯಿ ದೇವಕಿ!!
ನಿನ್ನ ಒಂದು ಅಪ್ಪುಗೆಗೆ
ಹಗಲಿರುಳು ಸೆರೆಯಲ್ಲಿ
ಕಾದಿರುವಳಾ ತಾಯಿ ದೇವಕಿ!!

- ಪಿ.ಜಿ.ಜ್ಯೋತಿ

06 Oct 2019, 10:59 am

ಮನಸು

ಮಗುವ ಮುಗ್ಧ ಮನಸು ನೋಡಿ
ಮಂತ್ರ ಮುಗ್ಧ ನಾದೆ ನಾನು
ಕಂಡದ್ದೆಲ್ಲಾ ಬಯಸಿ ಕೇಳುವ
ಕಿಶೋರ ಮನವ ಒಲಿಸೆ ನಾನು

ಅರಿಯಬಹುದೆ ಸುಲಭದಲ್ಲಿ
ಚಂಚಲಚಿತ್ತ ಚಕೋರಿ ಮನವ
ಅಂಧಕಾರದಲ್ಲಿ ಮುಳುಗಿ
ಪ್ರೀತಿಯಲ್ಲಿ ಸೋತ ಮನವು

ಸ್ಫಟಿಕದಷ್ಟು ಸ್ಪಷ್ಟ ಖಚಿತ
ನನ್ನ ತಂದೆ ಮನದ ನಿಲುವು
ಬೆಣ್ಣೆಯಂತೆ ಮೃದುವು ಕಾಣಿ
ಮಗುವಿಗಾಗಿ ತಾಯ ಮನವು

ಕುಸುಮದಂತೆ ನಯವು ಸೂಕ್ಷ್ಮ
ನನ್ನ ಪ್ರಿಯೆಯ ನವಿರು ಮನಸು
ಹತ್ತಿಯಂತೆ ಹಗುರ ನೋಡಿ
ನನ್ನ ತುಂಟ ತಂಗಿ ಮನವು

ಎಂದೊ ಕರಗದಿಹದು ನೋಡಿ
ನನ್ನ ಬಾಸ ಕಲ್ಲು ಮನಸು
ಶ್ವೇತ ಶುಭ್ರ ಹಾಳೆಯಂತೆ
ಗೆಳೆಯನಾ ತೆರೆದ ಮನವು

ಕಲ್ಪನೆಗೂ ಮೀರಿಹುದು
ಕರುಣಾಮಯಿ ಆ ದೇವನ ಮನವು!!

- ಜೈಮಿನಿ

06 Oct 2019, 05:33 am

ಆನಂದವ ಹೇಗೆ ಹೇಳಲಿ

ನಮ್ಮ ಕನಸೊಂದು
ಮಗುವಾಗಿ ಇಂದು
ಈ ಭೂಮಿಗೆ ಬಂದಾಯಿತು!!
ಈ ಶೃಷ್ಠಿಯ ತುಂಬ
ಹಸಿ ಹಸಿರಿನ ಚೆಂದ
ಎಲ್ಲೆಲ್ಲೂ ನವಿರಾಯಿತು!!

ಮುಂಜಾನೆಯ ಅರುಣ
ಎಳೆ ಬಿಸಿಲಿನ ತರುಣ
ಹೊಂಬೆಳಕನು ನೀ ತಂದೆಯಾ!!
ಕೋಗಿಲೆಗಳೆ ಕೇಳಿ
ಎಲ್ಲೆಲ್ಲೂ ಸಾರಿ
ನಮ್ಮ ಮಡಿಲಿನ ಆನಂದವ!!

ಇಬ್ಬನಿ ಮಣಿ ಸಾಲೆ
ಹಸಿರೆಲೆಗಳ ಮೇಲೆ
ಹೋಳೆ ಹೊಳೆದು ನೀ ಹಿಗ್ಗುವೆ!!
ಅಂಗೈಯ ಮೇಲೆ
ಹಸುಕಂದನ ಲೇಲೆ
ಎತ್ತಾಡುತ ನಾ ಹಿರಿಹಿಗ್ಗುವೆ!!

ತಿಂಗಳ ಮನೆಯಲ್ಲಿ
ಬೆಳದಿಂಗಳ ಹೋಳಿ
ಕಂಗಳಿಗೆ ಹಿತ ನೀಡಿವೆ!!
ತಂಗಾಳಿಯ ಜೋಲಿ
ನಮ್ಮ ಕಂದನಿಗೆ ಲಾಲಿ
ಆನಂದವ ಹೇಗೆ ಹೇಳಲಿ!!

- ಪಿ.ಜಿ.ಜ್ಯೋತಿ

05 Oct 2019, 03:30 pm

ವಯಸ್ಸು

ಹರೆಯದ ವಯಸ್ಸು
ಕರಗದ ಕನಸ್ಸು
ಅಡಿಯಿಡುವೆಡೆಯೆಲ್ಲ
ತುಂಬಿದೆ ಹೊಲಸ್ಸು

ಮನದಿ ನೂರೊಂದು ಬಯಕೆ
ಮುಚ್ಚಿಡುವ ನಟನೆಯಾಕೆ
ಅಂಕೆಯಿಲ್ಲದ ಮನಸ್ಸು
ಕಣ್ಸನ್ನೆಯ ಸೊಗಸು
ಯಾತಕೀ ಹುಸಿಮುನಿಸ್ಸು

ಮುಂಗುರುಳ ಮರೆಯಲ್ಲಿ
ಮೋಹಕ ನಗೆಯಲ್ಲಿ
ವಯ್ಯಾರದ ನೋಟ
ಇದೆ ಹದಿಹರೆಯದವರ ಆಟ

ಮಾಮರ ಚಿಗುರೊಡೆಯಲು
ಕೋಗಿಲೆಯ ಗಾನದ ಹೊನಲು
ಎಲ್ಲೆಲ್ಲು ನಿಸರ್ಗದ ಒಲವು
ವಸಂತನ ಜನನದ ಸುಳಿವು
ವಯಸ್ಸಿನ ಅಮಲು
ಅವನತಿಯ ಸುಳಿವು



ಶಾರದ

- ಶಕುಂತಲಾ

05 Oct 2019, 02:16 pm

ಅವನು/ಅವಳು

ಅವನು:
ನಲ್ಲೆ ನಾನೇನೆಂದರೂ
ನೀನೇಕೆ ಒಲ್ಲೆ

ಅವಳು:
ಯಾಕೆಂದರೆ ನಿನ್ನೊಳಗೇನಿದೆ
ಎಂಬುದ ನಾ ಚೆನ್ನಾಗಿ ಬಲ್ಲೆ

- basheer

05 Oct 2019, 10:47 am

ಕನ್ನಡವೆ ನನ್ನತನ

ರೈತಾ ಬೇಳೆಯುವ ಬೆಳೆಯಂತೆ
ಕನ್ನಡತನವು ನನ್ನ ಮನದಲ್ಲಿ ಬೆಳೆದ್ದಿದೆ
ನಾ ಯಂದೆದಿಗು ಕನ್ನಡಿಗನಾಗೆ ಬಾಳುವೆ
ಕೂನೆ ಉಸಿರಿರುವರೆಗು
ನನ್ನ ಕೂನೆಯ ಪದ ಕನ್ನಡವೆ ಯಾಗಿರುವುದು

- hingeramesh19@gmail.com

04 Oct 2019, 10:50 pm

ಕೈ ಕೋಟ್ಟ ಹುಡುಗಿಗೊಂದು ಸಂದೇಶ

"ಇದ್ದಾಗ ಕನಸಲ್ಲಿ ಬಂದವಳು ನೀನು,
ಈಗ ಕೈ ಕೊಟ್ಟು ಕತೆಯಾದವಳು ನೀನು,
ನೀನು ಇದ್ದಾಗ ಕೈ ಗೆ ಸಿಗಲಿಲ್ಲ,
ಈಗ ಸಿಕ್ಕರೆ ಏನು ಉಪಯೋಗ ಇಲ್ಲ,
(my first love❤️

- Manju Hadimani

04 Oct 2019, 09:30 pm