Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ದೇಹವೆಂಬುದು ತೊಗಲು ಬೊಂಬೆ
ಮನುಷ್ಯ ಸಮಯದ ಕೈ ಗೊಂಬೆ
ನಾನ್ಯಾರು? ನೀನ್ಯಾರು? ಇವನ್ಯಾರು?
ಅವನ್ಯಾರು? ನೆಪವಷ್ಟೇ ನಾವೆಲ್ಲರು..
ಹುಟ್ಟಿದಾಗ ಸಿಹಿ, ಸತ್ತರೆ ಹಾಲು ತುಪ್ಪ
ನಾನು, ನನ್ನದು ಭ್ರಮೆ.. ತಿಳಿ ನೀ ಬೆಪ್ಪ
ನಗು, ಅಳು, ಪ್ರೀತಿ, ರೋಷ, ದ್ವೇಷ
ಮಾನವನ ಮುಖಾಡವಿಲ್ಲದ ವೇಷ
ತನ್ನ ಸುತ್ತಲೂ ತಾನೇ ಹೆಣೆದು ಜೇಡರ ಬಲೆಯ
ಕಳೆದೋಯಿತು ಜೀವನ ಹೆಣೆಯಲು ಬಲೆಯ
ಅದರೊಳು ಸಿಕ್ಕು ಹೊರ ಬರಲೆಲ್ಲಿದೆ ಸಮಯ
ಹುಡುಕಾಟದಲ್ಲೇ ಮುಗಿವುದು ಜೀವನದಧ್ಯಾಯ
ಮಾಯಾ ಜಿಂಕೆಯಂತೆ ಹಣವೆಂಬುದು
ಹಿಡಿಯಲು ಹೋದರೆ ಸುಲಭದಿ ಸಿಗದು
ಸಿಕ್ಕವನಿಗಂತೂ ನೆಮ್ಮದಿ ಕೊಡದು
ಸಿಗದವನಿಗಂತೂ ಕಾಡದೆ ಬಿಡದು
ಇರುವಾಗ ನೀ ನಕ್ಕು ಪರರ ನಗಿಸುತಲಿರು
ಪ್ರೀತಿಸಿ, ಗೌರವಿಸೆಲ್ಲರ ಯಾರನ್ನೂ ದ್ವೇಷಿಸದಿರು
ದ್ರೋಹ, ಮೋಸ, ವಂಚನೆಯ ಮಾಡದಿರು
ಪ್ರೀತಿ ಇದ್ದರೆ ಸಾಕು ಬೇಕಿಲ್ಲ ಬೇರಾವ ದೇವರು
- Tribhuvan
13 Sep 2019, 09:52 am
ಜೊತೆಯಲಿ ಸಪ್ತಪದಿ ಹಾಕಿದಳು,
ಸಾಯುವವರೆಗೂ ಜೊತೆಯಲಿರುವೆನೆಂದು
ಮಾಡಿದಳು ಪ್ರಮಾಣ.
ಕಷ್ಟ ಸುಖ ಏನೇ ಇರಲಿ
ನೋವು-ನಲಿವು ಏನೇ ಬರಲಿ
ಜೊತೆಯಲ್ಲೆ ಇರುವೇನು ಎನ್ನುತ್ತಿದ್ದಳು ನನ್ನರಸಿ,
ಬಂಧು ಬಾಂಧವರ ಆಧಾರಿಸಿ
ಗುರು -ಹಿರಿಯರಿಗೆ ಗೌರವಿಸಿ
ಅಥಿತಿಗಳಿಗೆ ಸತ್ಕಾರಿಸಿ
ತಾಯಿ ಪ್ರೀತಿ ಹಂಚಿದಳು ನನ್ನರಸಿ,
ಮಕ್ಕಳ -ಲಾಲನೆ ಪಾಲನೆ
ನನ್ನ ಎಲ್ಲಾ ಜ್ಞಾನಾರ್ಜಜನೆಗೂ
ಅವಳೇ ಪ್ರೇರಣೆ,
ವಜ್ರ- ವೈಡೂರ್ಯ ಎಂದು ಕೇಳಲಿಲ್ಲ,
ನನ್ನ ಎಲ್ಲಾ ನೋವಿನಲ್ಲೂ
ನನ್ನ ಉರಿದುಂಬಿಸಿದಳಲ್ಲ.
:--ವೀಣಾ ಲಿಂಗಣ್ಣ
ರಾಯಚೂರು.
- Veena
11 Sep 2019, 09:41 am
ಯಾಕೆ ಈ ತರ ಶಿಕ್ಷೆ
ಮಾಡಬೇಡಿ ಹೆಣ್ಣಿನ ತಾಳ್ಮೆ ಪರೀಕ್ಷೆ
ಇನ್ನು ಮುಂದಾದರು ನೀಡಿ,
ಅವಳ ಬಾಳಿನಲ್ಲಿ ನೆಮ್ಮದಿಯ ಭಿಕ್ಷೆ.
:-ವೀಣಾ ಲಿಂಗಣ್ಣ
ರಾಯಚೂರು.
- Veena
10 Sep 2019, 04:55 pm
ಯಾವ ದೇವತೆಯರ ನೆನೆಯಲಿ, ಆಗಿರಬಹುದೆ ಗುರುಗಳಲ್ಲದೆ ನನಗೆ ಈ ಮೂವರೂ ಸ್ಪೂರ್ತಿ??
ನನ್ನಾತ್ಮ ತೊಳಲಾಡಿ ಬೇಯುತಿರಲು ಬೇಗೆಯಯಲಿ,
ನವ ಮಾಸಗಳ ಹೊತ್ತು ತಂದಳು ನನ್ನನೀ ಜಗದಲಿ...
ಮೋಕ್ಷದಾ ಪಯಣದಲಿ ಮೊದಲನೆಯ ವನಿತೆ....
ಈ ಜನ್ಮದಾತೆ!
ತನ್ನೊಡಲ ಕುಡಿಯನು ಎನಗೆ ಧಾರೆಯೆರೆದಾ ತಾಯಿ, ತನ್ನಯಾ ಮಗನಂತೆ ತೋರಿದಳು ಮಮತೆ!!
ಸಾಧ್ಯವೇ ಎನಗೆ ತೀರಿಸಲು ಈ ಋಣವ ?
ಮೋಕ್ಷದಾ ಪಯಣದಲಿ ಎರಡನೆಯ ವನಿತೆ......
ಈ ನನ್ನ ವರವತ್ಸಲೆ!!!
ತನ್ನೆಲ್ಲ ಆಸೆಗಳ ನನಗಾಗಿ ತ್ಯಜಿಸಿ, ಜೀವತೆಯ್ದಳು ಈಕೆ, ನನ್ನಾಸೆ ಭರಿಸೆ,
ಭವ ಸಾಗರವ ಈಜಲು ನನ್ನ ಜೊತೆಯಾದ ಸಖಿಯೆ
ಮೋಕ್ಷದಾ ಪಯಣದಲಿ ಮೂರನೆಯ ವನಿತೆ.....
ಈ ನನ್ನ ಪ್ರಾಣ ವಲ್ಲಭೆ!!
ಈ ಮೂವರಲಿ ಇಹುದೊಂದು ಸಾಮರಸ್ಯ
ಅದುವೆ ಪದಬಂಧದಾ ಹವ್ಯಾಸ .....
ಆಗಿತ್ತೇ ಇದು ನನ್ನ ಸ್ಫೂರ್ತಿ?
- ಜೈಮಿನಿ
09 Sep 2019, 11:43 pm
ಎಂಥ ಸುಂದರ ನೊಡಿರೀ ಪರಿವಾರ!
ನನ್ನನುಜೆ ಅಲಮೇಲುವಿನಾ ಸಂಸಾರ!!
ರಮಣನಾ ಕೃಷ್ಣ ಸುಂದರ ಶ್ರೀನಿವಾಸ , ಆರತಿಗೊಬ್ಬಳು ನಾಟ್ಯ ಕಲಾಭಿರುಚಿಯ ಅನುಷ್ಕ,
ಕೀರುತಿಗೊಬ್ಬ ನಚಿಕೇತನಂತಿಹ ಜ್ಞಾನದಾಹಿ ಈ ಅನಿಕೇತ!!
ಬಾಲ್ಯದದಲಿ ಬೇಸರವ ನೀಗಿಸಿದ ಗೆಳತಿ
ಯೌವ್ವನದಿ ಕಂಕಣವ ಬೆಸೆಯೆ ಸಹಕರಿಸಿದೊಡತಿ
ಎಲ್ಲರಿಗೆ ಬೇಕಾದ ನಲ್ಮೆಯ ಯಾ ಪುಟ್ಟಿ
ಕಲ್ಲನ್ನು ಕರಗಿಸುವ ಮಾತಿನಾ ಮಲ್ಲಿ...
ನೆನಪಿದೆಯೆ ಸರಿ ರಾತ್ರಿಗಳವರೆಗೂ ನಾವಾಡುತಿದ್ದ ಮಾತುಗಳು...
ಲೆಕ್ಕಿಸದೆ ಅಮ್ಮನಾ ಪಿರಿಪಿರಿಯ ಬೈಗಳು?
ಪ್ರಾಯ ಮಾಗುತಲಿಹುದು ಮಾಸಿಲ್ಲ ನೆನಪು,
ನಾನಾಕೆಯಾ ಜೊತೆ ಕಳೆದ ಒಂದೊಂದು ಕ್ಷಣವು!!
ನೀನು ಜನಿಸಿದ ಎರಡನೆಯ ದಿವಸ ನೋಡಿದ್ದೆ ಅಮ್ಮನ ಮಡಿಲಿನಾ ಪಕ್ಕ
ಆ ನನ್ನ ನೆನಪು ಅಳಿದಿಲ್ಲವಿಂದೂ, ತನುವೆಲ್ಲ ನಿನ್ನಾ ಗುಲಾಬಿಯ ಕೆಂಪು
ಏಕೆ ಜನಿಸಿದೆ ನೀನಾಗ ಎನಗೆ ವರುಷವೆಂಟ್ ಆಗಿ,
ಎಲ್ಲಾರ ಪ್ರೀತಿಯನು ಮುದ್ದಾಗಿ ಒಮ್ಮೆಗೆಲೆ ಬಾಚಿ!
ದ್ವಂದ್ವದಲಿ ತೊಳಲಿತ್ತೆನ್ನ ಮನ, ಇತ್ತ ತಗಿಯೆಂದಾಸೆ
ಅತ್ತ ಈರ್ಷೆಯಲಿ ಕುದಿಯೆ ನೋಡಿ ನಿನ್ನ ಮೇಲೆಲ್ಲಾರ ಪ್ರೀತಿ!!
ಈಗಲೂ ಮರೆತಿಲ್ಲ ರೋಷದಲಿ ನಿನ್ನಯ ತಲೆಗೆ ನಾ ಕೊಟ್ಟ ಪೆಟ್ಟು...
ಅದ ನೆನೆದು ವರುಷಗಳ ತನಕ ನಾ ಪಶ್ಚಾತಾಪ ಪಟ್ಟು
ನಿನ್ನ ಶಾಲೆಗೆ ಕರೆದೂಯ್ವ ಸಂಭ್ರಮ ನನ್ನ ಮನದಲ್ಲಿನ್ನೂ ಹಸಿರು
ನೀ ಕಾಣದಾದಾಗ ಹೆದರಿ ನಿಂತಿತ್ತು ನನ್ನುಸಿರು
ಮತ್ತೆ ಮತ್ತೆ ಹಂಬಲಿಸಿದೆ ಮನವು, ಬರದಾಹುದೆ ಆ ಬಾಲ್ಯ ಮರುಕಳಿಸಿ ಎಂದು
ಗತಿಸಿದಾ ಕ್ಷಣಗಳನು ಮಗದೊಮ್ಮೆ ಮಿಂದು
ಸೆರೆಹಿಡಿದು ಮನದಲ್ಲಿ ಮತ್ತೆ ಎಂದೆಂದೂ!!
ಮುದೊಂದು ಜನ್ಮವಿರೆ ನೀನಾಗು ನನ್ನಕ್ಕ
ನೀ ಮಾಡಿದಾ ಕೀಟಲೆಯನೆಲ್ಲ ನಾ ಮಾರುಕಳಿಸುವಾ ಹಂಬಲ ನಿನಪಕ್ಕ
ಎಲ್ಲಿರಲಿ ನೀವೆಲ್ಲ ಶ್ರೀಹರಿಯು ಕರುಣಿಸಲಿ ನಿಮಗೆಲ್ಲ ಆಯುರಾರೋಗ್ಯ ಐಶ್ವರ್ಯ!!
- ಜೈಮಿನಿ
09 Sep 2019, 11:17 pm
ಏನೀ ಅಟ್ಟಹಾಸ..... ಏನೀ ನರ್ತನ.....
ಮೌಲ್ಯಗಳ ಮೂಲೆಗುಂಪಾಗಿಸುವ
ಕಾಮುಕರ ರುದ್ರ ನರ್ತನ
ಮುಗ್ಧ ಮನಸಿನದು ಆರ್ತನಾದ.
ಹೆಣ್ಣು ಪೂಜಿಸುವ ಪುಣ್ಯಭೂಮಿಯಲಿ
ಅಬಲೆ ಕಂದಮ್ಮನ ಆಕ್ರಂದನ
ನಾಗರೀಕತೆಯ ನಾಡಿನಲಿ
ಕಾಮಾಂಧರ ಪೈಶಾಚಿಕ ಕೃತ್ಯ.
ಹೆಣ್ಣ ಗೌರವಿಸು; ಜೀವಿಸಲು ಬಿಡು
ಹೆಣ್ಣು ಸಮಾಜದ ಕಣ್ಣು
ನಿಲ್ಲಿಸು ಅಮಾನವೀಯ ಕೃತ್ಯಗಳ
ಮೂಡಲಿ ಭ್ರಾತೃತ್ವ ಭಾವನೆಗಳು.
- arb vijay
09 Sep 2019, 03:08 pm
ಹಣದ ಮೋಹಕೆ ಸಿಲುಕಿದ ವ್ಯಕ್ತಿ,
ಕಳೆದುಕೊಳ್ಳುವನು ದೇವರ ಮೇಲಿನ ಭಕ್ತಿ,
ಇರುವವರೆಗೂ ಹಣದ ಶಕ್ತಿ
ಇರುವ ವರೆಗೂ ಹಣದ ಶಕ್ತಿ,
ಹೊಂದಲಾರನು ಜೀವನದಲ್ಲಿ ಮುಕ್ತಿ.
:-ವೀಣಾ ಲಿಂಗಣ್ಣ
- Veena
09 Sep 2019, 07:50 am
ಮಡಿ ಮಡಿ ಎಂದು
ಮನವ ಮೈಲಿಗೆಯ ಮಾಡಿ
ಮಡಿಯುವ ತನಕ
ಮನವ ಮಡಿಯ
ಮಾಡಲು ಮಜ್ಜನ
ಗಂಗೇಚ ಯಮುನೇಚವೆಂದು
ಅದರಿಂದಾಗುವೆಯಾ ನೀ ಸಜ್ಜನ
- ಭಾವಜೀವಿ ಭಾರ್ಗವ
- arb vijay
09 Sep 2019, 12:56 am
ಮುಡಿದ ಮಲ್ಲಿಗೆ
ಮುದುಡಿ ಮರುಗಿದೆ
ಕೈಯಲಿ ಕುಣಿವ
ಬಳೆ ಮೈಮರೆತು ಮಲಗಿದೆ
ಕಾಲಿಗಿಟ್ಟ ಗೆಜ್ಜೆ ಸದ್ದು
ಮರೆತು ಸತ್ತೇ ಹೋಗಿದೆ
ನಿನ್ನೇ ನಿರೀಕ್ಷಿಸಿ ಕಾದ ಕಣ್ಣ
ಕಾಡಿಗೆಯ ಮುಖ ಕಪ್ಪಿಟ್ಟಿದೆ
ನಿನಗಾಗಿ ಕಾದ ಹಾದಿಯಿಲಿ ಸಿಕ್ಕ
ತಂಗಾಳಿ ಮಾತಿಗಿಳಿದು ಅಣಕಿಸಿದಂತಿದೆ
ಜೊತೆಗೂಡಿ ನಲಿವ ಹಕ್ಕಿಗಳ ಚಿಲಿಪಿಲಿಯೂ
ನಿನ್ನ ನೆನೆಸಿ ಜೀವ ಹಿಂಡುತಿದೆ ಗೆಳೆಯ
ನೀ ಬರಬೇಕಿರುವ ಹಾದಿ
ಕಾದು ಸೋತು ಕುಳಿತ
ನನ್ನ ನೋಡಿ ಸ್ಥಬ್ಧವಾಗಿದೆ
ಮಾತಿಗೆ ಕಾದು ನೀರವತೆಯಲಿ
ಬಿಕ್ಕಿ ಅತ್ತು ಮನ ಮಸಣವಾಗಿದೆ ಗೆಳೆಯ
ನಾನೇ ಸತ್ತು ಮಲಗಿದಂತ ಮಸಣವಾಗಿದೆ
- ಶ್ರೀಕಾವ್ಯ
08 Sep 2019, 07:17 pm
ಹೊಗಳಿಕೆ ಎಂಬ ಅಟ್ಟದಮ್ಯಾಗ
ನಿನ್ನ ಏರಿಸುವರು!!
ಅಟ್ಟದ ಮ್ಯಾಲಿನ ಚಟ್ಟದಮ್ಯಾಗ
ಜಾಗ ನೀಡುವರು!!
ನಿನಗೆ ಜಾಗ ನೀಡುವರು!!
ಒಂದು ಮಾತಿಗೆ ನೂರು ಸುಳ್ಳಿನ
ಕಥೆಯ ಹೇಳುವರು!!
ಸತ್ಯದ ಕೋಣೆಯ ದೀಪವ ಆರಿಸಿ
ನಿನ್ನ ನೂಕುವರು!!
ಗೆಳೆಯ ನಿನ್ನ ನೂಕುವರು!!
ಮೋಸದ ಬಲೆಯಲಿ ಸಿಲುಕಿಸಿ ನಿನ್ನ
ದಾಸ ಎನ್ನುವರು!!
ಶ್ವಾಸವಿಲ್ಲದ ದೇಹದ ಹಾಗೆ
ಬದುಕ ಮಾಡುವರು!!
ನಿನ್ನಯ ಬದುಕ ಮಾಡುವರು!!
ಸ್ವಾರ್ಥ ತುಂಬಿದ ಲೋಕವು ಇದು
ನಿಸ್ವಾರ್ಥವು ತಿಳಿದಿಲ್ಲ!!
ಅನ್ಯಾಯ ಮಾಡುವ ಜನರ ನಡುವೆ
ನ್ಯಾಯಕೆ ಬೆಲೆ ಇಲ್ಲ!!
ಮನುಜ ನ್ಯಾಯಕೆ ಬೆಲೆ ಇಲ್ಲ!!
- ಪಿ.ಜಿ.ಜ್ಯೋತಿ
08 Sep 2019, 11:27 am