ಯಾಕೋ ಏನೋ ಇಂದು
ಕಲ್ಲು ಹೃದಯದಲ್ಲಿ ಪ್ರೀತಿಯ ಜನನ
ನೋವಿನ ಭಾವನೆಯಲ್ಲಿ ಒಲವಿನ ಆಗಮನ
ಒಂಟಿಯ ಜೀವನದಲ್ಲಿ ನಂಟುವಿನ ಕಾನನ
ಕನಸುಗಳ ವರ್ಣಮಯ ಇಂದು ನಯನ
ಗೊಡೆಗಳು ಕೇಳಿಸಿ ಕೊಳ್ಳುವ ಮಾತು
ಇಂದು ಮನಸ್ಸಿನ ಪಿಸುಮಾತು
ಬರಿ ಹಾಳೆ ಬದುಕಿನಲ್ಲಿ ಹೊಸ ಪ್ರೇಮ ಗೀತೆ
ಇಂದು ಹೃದಯಲ್ಲಿ ಮೆಲುಕು ಹಾಕುತ್ತೇ
ಆಯುಧ ಹಿಡಿದ ಕೈ
ಇಂದು ಲೇಖನಿ ಹಿಡಿಯುವ ಸಂಗತಿ
ಒಂದು ಒಂದು ಕ್ಷಣಿಕ
ಇಂದು ಒಂದೊಂದು ಯುಗವಾಗು ಸಮ್ಮತಿ
ಮಟಮಟ ಮಧ್ಯಾಹ್ನದ ಹಗಲಿನಲ್ಲಿ
ಹೃದಯಗಳ ದೊಚುವ ನಿನ್ನ ನಗು
ನಿನ್ನ ಮಾತಿನ ಮೋಡಿಯೊಳಗೆ ಬಂಧಿಯಾಗಿ
ಮರೆತನು ನಾ ಎಲ್ಲಾ ಕಹಿ ಬಯಕೆಯನ್ನ
ಎಂದು ನನ್ನ ಬಿಟ್ಟು ಹೋಗದಿರು
ನನ್ನ ನಿನ್ನ ಜೋಡಿ ಬಹಳ ಸುಂದರ
ನಮ್ಮನ್ನು ನೋಡಿ ಬಾನಿನಲ್ಲಿ ಮರೆಯಾಗುತಿಯನು ಚಂದಿರ
ಖುಷಿಯಿಂದ ಆಚರಿಸುತ್ತಿಯರು ನಮ್ಮ ಊರಲ್ಲಿ ಸಂಭ್ರಮ
ನೀನು ನನಗೆ ಸಿಮೀತ ಎಂದನು ನೋಡು ಆ ಚಂದಮಾಮ..........
ಯಾಕೋ ಏನೋ ಇಂದು ಲೈಟ್ಯಾಗಿ ಆಳಾಯಿತ್ತಾ ಏನೋ
ಕಿರು ನಗೆಯ
ಕುಡಿ ಹುಬ್ಬಿನವಳೇ
ಏನು ಹೇಳು
ನಿನ್ನ ನಗೆಯ ಗುಟ್ಟು
ಆದೆಂತ ಬಾಣ
ರಮಣೀಯ ತಾಣ
ನೋಡಿ ನೋಡಿ ನಗುವ
ನಿನ್ನ ಮುಖದ ಭಾವಯಾನ
ಅತ್ತಿಂದ ಇತ್ತ
ಇತ್ತಿಂದ ಅತ್ತ
ಕುಣಿ ಕುಣಿದು ನಲಿವ
ನಿನ್ನ ಮನೋಹರ ನಯನ
ಕೊನೆಯ ಪುಟದಿ
ಗಾನ ಮನದಿ
ಹುಚ್ಚೆಬ್ಬಿಸಿರುವ
ನಿನ್ನ ನಗುವೆ ತನನಂ ತನನ
ದೂರದೂರಿನ ಭಗೀರಥಿ
ನಿಲ್ಲಿಸುವೆಯಾ ನಿನ್ನ ನಗೆಯ?
ಮನದಿ ನೂರು ಆಸೆ ಉದಿಸಿ
ಕಾಣದಾದೆ ನೀ ಇಂದೇಕೆ ಮೌನವಾದೆ,,!
ಮರಣಕೆ ಬಂದವರು ನಕ್ಕಾರು
ಮನೆಯ ಕಸ ಗುಡಿಸಿಲ್ಲ
ಅಡುಗೆ ಮನೆ ಕಂಡು ಹೇಸಿಯಾರು
ಪಾತ್ರೆ ತೊಳೆದಾಗಿಲ್ಲ
ಬಟ್ಟೆ ಒಗೆದಿಲ್ಲ ನೆಲ ಒರೆಸಿಲ್ಲ
ಸ್ವಚ್ಛಗೊಳಿಸಿಲ್ಲ ಬಚ್ಚಲು,ಕಕ್ಕಸ್ಸು
ಗಿಡಗಳಿಗೆ ನೀರುಣಿಸಿಲ್ಲ
ಬೆಕ್ಕು ನಾಯಿಗೂ ಊಟ ಹಾಕಿಲ್ಲ
ನಾಳಿನ ತಿಂಡಿಯ ಕುರಿತು ಇನ್ನೂ ಯೋಚಿಸಿಲ್ಲ
ಹೇಗೆ ಸಾಯುವುದು ಹಠಾತ್ತನೆ
ಮನೆಗೆ ಬಂದೊಡನೆ ಪತಿ ಸುತರಿಗೆ
ಮನೆಯೊಡತಿಯ ಹುಡುಕುವ
ಅಭ್ಯಾಸ ಮೊದಲಿಲ್ಲ
ನುಗ್ಗುವರು ಅಡುಗೆಕೋಣೆಗೆ
ಅಡುಗೆ ಇನ್ನೂ ಮುಗಿದಿಲ್ಲ
ಹಸಿದವರ ಮುನಿಸು ನಿಮಗೆ ತಿಳಿದಿಲ್ಲ
ಹೇಗೆ ಸಾಯುವುದು ಹಠಾತ್ತನೆ
ಮಗಳ ಬಾಣಂತನ ಮಾಡಿಲ್ಲ
ಮೊಮ್ಮಗುವ ಬೆಳೆಸಿ ಕೊಟ್ಟಿಲ್ಲ
ಮಗನ ಸಿಇಟಿ ಇನ್ನೂ ಮುಗಿದಿಲ್ಲ
ಗಂಡನನು ರೊಟೀನ್ ಚೆಕಪ್ಪಿಗೆ
ಕರೆದೊಯ್ಯುವ ದಿನಾಂಕ ಸನಿಹವಿಲ್ಲ
ಹೇಗೆ ಸಾಯುವುದು ಹಠಾತ್ತನೆ
ಗೃಹಿಣಿಯ ಅಗತ್ಯ
ಇನ್ನೂ ಮುಗಿದಂತಿಲ್ಲ
ಈಗೀಗ ಮನೆಗೆಲಸಕೆ
ಜನ ಸಿಗುವುದೂ ಇಲ್ಲ
ವಯಸ್ಸಾದ ಪತಿ ಮರು
ಮದುವೆಯಾಗುವರೋ ತಿಳಿದಿಲ್ಲ
ಹೇಗೆ ಸಾಯುವುದು ಹಠಾತ್ತನೆ
- ಕಾದಂಬಿನಿ
ಏನು ಅರಿಯದ
ಏನು ತಿಳಿಯದ
ಏನು ಮಾತಾಡದ
ಮುಗ್ಧ ಪ್ರೀತಿ ನಿಂದು.
ಏನು ಕಾಣದ
ಏನನ್ನು ಹುಡುಕದ
ಏನಾದರೇನು ಅದು
ಮುದ ನೀಡೋ ನೋಟ ನಿಂದು.
ಎನ್ನೊಡನೆ ಕಾಡದ
ಏನಿದ್ದರೂ ಕೇಳದ
ಏನೂ ವಿಚಾರಿಸದ
ಮನ ಮಲೆನಾಡು ನಿಂದು.
ಎನಗೊಂದು ಲಿಂಗದ
ಮನ ನಿನಗೆ ಚಂದ
ಏನಿತ್ತರೇನು ಸದಾ
ಮನೆ ಅರಸಿ ನೀನಿನ್ನು ಮುಂದ.
ಏನನ್ನು ಮರೆಯದ
ಏನನ್ನು ಮೆರೆಸದ
ಏನಿದ್ದರೇನು ಸುಖ ? ನೀ
ನನಗಿಲ್ಲದಿದ್ದರ ಎಂಬ ಚಿಂತೆಯೊಂದು ನಿಂದು.
ಪುಟ್ಟ ಬೊಚ್ಚು ಬಾಯಿ
ಎಳಸು ತುಟಿಯ ಲಾಯಿ
ಮುಂದೆರೆಡು ಹಲ್ಲು
ಬಾಯಿ ತುಂಬ ಜೊಲ್ಲು
ಬಾಯ್ದೆರೆದು ನೀ ನಕ್ಕರೆ
ಮಲ್ಲಿಗೆ ಮೊಗ್ಗೂ ಬಿರಿದು ಹೂವಾಯ್ತು
ಚೆಂಡನು ಅನುಮಾನಿಸುವ ಗುಂಡು ಮುಖ
ಪುಡಿ ಕೂದಲಿಗೆ ತಂಗಾಳಿ ಸಖ
ಕಮಲದ ಎಸಳ ನಯನ
ಕಪ್ಪೆಚಿಪ್ಪಿನಂತ ಮೂಗಿನ ತನನ
ನೋಡಿ ಚಂದಿರ ಮುದ್ದುಗರೆಯಲು
ಕಣ್ಣ ಹೊಳಪಲೆ ಅವನ ಕಾಂತಿ ಸೇರಾಯ್ತು
ತಿಕ್ಕಿ ತೀಡಿದ ಎಳಸು ಹುಬ್ಬು
ನೋಡಲು ಕೊಂಚ ಮಬ್ಬು
ಎರಡು ಕಾಮನಬಿಲ್ಲ ನಡುವೆ ಗುಂಡಗಿನ ಕಪ್ಪು
ನೋಡುವವರು ನಿನ್ನ ಕಂಡು ಬೆಪ್ಪು
ದೃಷ್ಟಿ ತಾಗದಂತಿಟ್ಟ ಬೊಟ್ಟೂ ದೃಷ್ಟಿಸಿ
ನಿನ್ನಂದ ಕಂಡು ದೃಷ್ಟಿ ತಾಗುವಂತಾಯ್ತು
ಪುಟ್ಟ ಪುಟ್ಟ ಮುದ್ದು ಕೈಕಾಲು
ನೀ ಸೋಕಿ ತೆರೆಯಿತು ಸಗ್ಗದ ಬಾಗಿಲು
ಕೇಕೆ ಹಾಕಿ ಚಪ್ಪಾಳೆ ತಟ್ಟಿ ಕುಣಿದು ಕರೆದರೆ
ಬಾಗಿ ಆಗಲೇ ಬೇಕು ನಿನಗೆ ಕುದುರೆ
ಚಿನ್ನಾಟದ ಚೆಲುವಿನಾಟಕೆ ಮುದ್ದಿಗೂ
ಮತ್ಸರ ಬಂದು ಮುಖ ತಿರುವಿ ನಿಂತಾಯ್ತು
ನನ್ನ ನಿಟ್ಟುಸಿರಿಗೆ
ನನ್ನೆದೆಯ ಗುಟ್ಟು ಗೊತ್ತು
ಭಾರವಾದ ಅದನು ಹೊತ್ತು
ಹೊರನಡೆಯುವುದು ಗೊತ್ತು
ಪ್ರಿಯಾ..
ನಿನ್ನ ವಿಳಾಸವಷ್ಟೇ ಅದಕೆ ತಿಳಿಯದು
***
ನಾನು ಹೊಸದನ್ನೇನೋ ಹೇಳುವೆನೆಂದು
ಕಾದೂ ಕಾದೂ ನಿರಾಶನಾದೆಯಾ ಪ್ರಿಯಾ
ನಾನು ಬಂದಿರುವುದು
ಅವರು ಈಗಾಗಲೇ ಹೇಳಿಹೋಗಿರುವುದನು
ನನ್ನ ಮಾತುಗಳಲಿ ಪುನರಾವರ್ತಿಸಲು ಎಂದು
***
ನೋಡಿದೆಯಾ..
ನಿನ್ನ ಮಾತುಗನ್ನಡಿಯಲಿ
ನೀನು ತೋರಿಸಿದ ಹಾಗೆ
ನಾನು ಕಾಣುತ್ತೇನೆ.
***
ಹತ್ತಿಗೆ ಹತ್ತಿದ ಬೆಂಕಿ
ಹಬ್ಬಿದ್ದೇ ತಿಳಿಯುವುದಿಲ್ಲ
ನಿನ್ನ ಬುಡ ಸುಡತೊಡಗಿದ ಮೇಲೆ
ಅದೆಲ್ಲವೂ ನಿನಗೂ ತಿಳಿಯದೇ ಇರುವುದೂ ಇಲ್ಲ.
ನೀನೇನಾ ಆ ಸಿಹಿಕನಸು ನೀನೇನಾ ಕದ್ದೇ ನನ್ನ ಮುದ್ದು ಮನಸು
ನಿನ್ನ ಪ್ರೀತಿನೇ ನನಗೆ ಬಲು ಸೊಗಸು ನಿನ್ನ ನೋಟದಿ ನನ್ನನ್ನೇ ಮರೆಸು
ಕಣ್ಣಲ್ಲೇ ನನ್ನ ಸೆಳೆದಿರುವೆ ಸುಮ್ಮನೆ ನಾ ಬಲಿಯಾಗಿರುವೆ
ಮಾತಲ್ಲೇ ನನ್ನ ಮೋಹಿಸಿರುವೆ ಆ ಮಾತಲೇ ಮುಳುಗಿರುವೆ
ನಿನ್ನಯ ಸನಿಹದಿ ನೆನೆದು ನನ್ನಲಿ ಬಲು ರೋಚಕ
ಉಸಿರಿನ ಬಿಸಿಯಲಿ ಮನಸಲಿ ತಿಳಿಯದ ನಡುಕ
ಇನ್ನು ಕಾಡ ಬೇಡವೇ ನೀ ನನ್ನ ನಾ ಅಮಾಯಕ
ಕಾದಿಹೆನು ನಿನ್ನ ಸಲಿಗೆಗೆ ನಾನೊಬ್ಬ ಅಸಹಾಯಕ
ತಿಳಿದುಕೋ ನೀ ನನ್ನ ಪ್ರೀತಿ ಆಳ
ತುಂಬಿರುವೆ ನೀ ನನ್ನಲಿ ಬಹಳ
ಎಂದೆದು ನಿನ್ನ ಮೌನದಿ ನೋಡಿ ಕಳೆದಿದೆ ಸಮಯ
ಕೇಳಲು ನಿನ್ನೆಲ್ಲ ಮಾತನು ಕಾಯುವ ನಾನೊಬ್ಬ ಇನಿಯ
ಒಪ್ಪಿಬಿಡು ನೀ ನಿನ್ನ ತಡವರಿಸೋ ಪ್ರೀತಿಯ
ಸಾಯುವೆ ಕೊಟ್ಟುಬಿಡು ಬೆಚ್ಚನೆ ಅಪ್ಪುಗೆಯ
ಕಾಡುದೇ ಹೃದಯದಿ ನಿನ್ನ ಪ್ರೀತಿ
ತಿರುಗಿ ನೋಡೇ ಒಂದೇ ಒಂದು ಸರತಿ....