Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಡಿಕೆಯ ಮೇಲೆ ಬಿಡುಸುವ
ರಗೋಲಿಯ
ನನ್ನ ಎದೆ ಮೇಲೆ ಬಿಡಿಸುವದು
ಅದ್ಯಾವಾಗ ???
ಬಣ್ಣದ ಲೇಖನಿ ಹಿಡಿದಿರುವ
ಬೆರಳುಗಳು
ನನ್ನ ಜೊತೆ ಕೈಹಿಡಿದು ನಡೆಯುವುದು
ಅದ್ಯಾವಾಗ ???
ಚಂದ್ರನು ನಾಚುವಥ ನಿನ್ನ ನಗೂ
ನನ್ನ ಎದೆಯಾಳದಲ್ಲಿ ಬಚ್ಚಿಯಿಡುವದು
ಅದ್ಯಾವಾಗ ???
ನಕ್ಷತ್ರಗಳೇ ಬೆರಗಾಗುವಂಥ ನಿನ್ನ
ಕಣ್ಣನೋಟ ಕನಸಿನಲ್ಲಿ ನಾ ಕಾಯುವುದು
ಅದ್ಯಾವಾಗ ???
ನನ್ನಾಸೆಯ ಅರಸಿ ಪ್ರೀತಿಯ ಕುವರಿ
ಮನಸ್ಸು ಬಿಚ್ಚಿ ಹೇಳು ನನ್ನ ಪ್ರೀತಿಯ ಸ್ವೀಕರಿಸಿ
ನೀನು ಇರದೇ ನಾನಿಲ್ಲ ನಾ ಇರದೇ ನೀನು ಇಲ್ಲ
ಪ್ರೀತಿ ನನ್ನ ಹೆಸರು......
- Prakash Angadi
07 Sep 2018, 09:36 am
ಏನೆಂದು ಒಣ್ಣಿಸಲಿ ನಾ ಗುರುಗಳನ್ನು
ವಣ೯ಗಳೇ ಸಾಲದು ವಣ೯ಮಯವಾಗಿರುವುದು
ಪ್ರತಿ ದಿನವು ಹೂಸ ವಿಷಯವನ್ನು
ತಿಳಿಸುವ ಗುರುಗಳನ್ನು ಒಣ್ಣಿಸಲು ಪದವೇ ಸಾಲದು...
ಅರಿತು ಬಾಳುವನಿಗೆ ದಾರಿ ದೀಪ
ವಿದ್ಯಾಥಿಗಳಿಗೆ ಇವರೇ ಮಾಗ೯ದಶ೯ನ
ಕಲಿಯುವವರಿಗೆ ಇವರೇ ನಿಜ ಸ್ವಗ೯ತಿ
ಅರಿತು ಕಲಿತರೆ ಮುಂದೆ ಸನ್ಮಾಗ೯...
ನೂರಾರು ವಿಷಯವನ್ನು ತಿಳಿಸುವ ದೇವರು
ವಿದ್ಯಾಥಿ೯ ಪ್ರತಿಭೆಯನ್ನು
ಗುರುತಿಸುವ ಶಕ್ತಿ ನಿಮ್ಮಗಿದೆ
ಏನೆಂದು ಒಣ್ಣಿಸಲಿ ನಾ ಗುರುಗಳನ್ನು
ವಣ೯ಗಳೇ ಸಾಲದು ವಣ೯ಮಯವಾಗಿರುವುದು.
ಬಡಮಾರನಹಳ್ಳಿ ಮಂಜುನಾಥ ಬಿ.ಟಿ
- Manjunatha BT
05 Sep 2018, 10:01 pm
ಅಜ್ಞಾನದ ಮನಕ್ಕೆ
ಜ್ಞಾನದ ಸುಧೇ ಸುರಿದು
ಸುಜ್ಞಾನದೆಡೆಗೆನ್ನ ಉಣಬಡಿಸುವ
ಕಲ್ಲುನ್ನು ಶಿಲೆಯಾಗಿರುವ
ಜಾದುಗಾರು ಗುರುಗಳಿಗೆ...
ನನ್ನ ನಮನಗಳು
ಗುರು ಚರಣದಲಿ
ಅಕ್ಷರವೆಂಬ ಅರಿವಿನ ಹಣತೆ ಹಚ್ಚಿ
ಬೆಳಕೆಂಬ ಹಸಿರು ಪಲ್ಲವದ
ಗುಣವ ಬೆಳಸಿ
ಅಂಧಕಾರದ ಲಕ್ಷಣ ಅಳಿಸಿ
ಒಳ್ಳೆಯ ಬದುಕಿನ ನಡೆಗೆ
ಕರೆದೊಯ್ಯುವ ಮಹಾ ಮಾಂತ್ರಿಕ
ಗುರುಗಳಿಗೆ ನನ್ನ ಶರಣಗಳು
ಅಕ್ಷರವೆಂಬ ದಿವ್ಯಜ್ಯೋತಿ ಬೆಳಗಿಸಿದ
ಗುರುವಿನ ನಾವೆಂದೂ ಅವರ ಸತ್ಕಾರ್ಯಕೆ ಋಣಿ
ಅವರಿಂದಲೇ ಬೆಳಗುತಿದೆ ಮನುಕುಲದ ಕೀರುತಿ
ಅವರಿಗೆ ನನ್ನ ವಂದನೆಗಳು
ಅವರಿಂದಲೇ ನಮ್ಮ ಸಾಧನೆಗಳು
ಅಕ್ಷರ ಕಲಿಸಿ ಜೀವನದ ಮೌಲ್ಯಗಳನ್ನು ತಿಳಿಸಿ
ಗಣಿತದ ಗಣಿ ಎಂದು ಮಾಡಿ
ಸತ್ಯದರಿವಿನ ಜ್ಞಾನವ ಕಲಿಸಿ
ನಾವು ಕಲಿಸುವ ನಿಸ್ವಾರ್ಥರಾಗಿ
ಸಧ್ಭಾವದಲಿ ವಂದಿಸೋಣ
ಈ ಪರಿಯಲ್ಲಿ ಗುರುದಕ್ಷಣೆ ಸಮರ್ಪಿಸೋಣ
- Prakash Angadi
05 Sep 2018, 06:27 am
ಹೃದಯ ದೂರಲಿ ಬಿದ್ದ ಬೆಂಕಿಯ
ನಂದಿಸುವವರು ಬೇಕಾಗಿದ್ದಾರೆ
ಪ್ರೀತಿ, ಸ್ನೇಹ, ವಿಶ್ವಾಸವಂತಹವನೆ
ವೇತನವಾಗಿ ಪಡೆಯುವವರಿದ್ದರೆ
- ಶ್ರೀಕಾವ್ಯ
04 Sep 2018, 08:16 pm
ನನ್ನ ನಿನ್ನ ನಡುವಿನಲ್ಲಿ
ಬಿಸಿಲಿನಲೂ ಹೂಮಳೆ ಚೆಲ್ಲುತ್ತಿರಲೂ..
ಮುಳ್ಳಿನಲೂ ಮೃದುವಾದ ಮನಸ್ಸು
ನನ್ನ ನಿನ್ನ ನಡುವಿನಲೂ
ನೆನಪಿನ ಅಂಗಳದಲ್ಲಿ
ಪ್ರೀತಿಯ ಮೆರವಣಿಗೆಯ ಸೊಬಗು ಮೂಡುತ್ತಿರಲೂ
ನಕ್ಷತ್ರಗಳು ಶರಣಾದವು
ನನ್ನ ನಿನ್ನ ನಡುವಿನಲೂ
ಮೌನವೇ ರಾಗವಾಗಿ ರವಾನಿರುತಿರಲೂ
ಕಲ್ಲು ಹೃದಯಗಳ ಹಾಡುಗಾರಿಕೆ
ಮತ್ತೆ ಮತ್ತೆ ಮೆಲುಕು ಹಾಕುತ್ತಿಹವೂ
ನನ್ನ ನಿನ್ನ ನಡುವಿನಲೂ
ಮನಸಿನ ಭಾವನೇ ಒಂದೇ ಆಗಿರಲೂ
ಎಲ್ಲರ ಕಣ್ಣು ನಮ್ಮ ಮೇಲೆ ಬೀಳುತ್ತಿರಲೂ
ನಮ್ಮ ಪ್ರೀತಿ ಅಜರಾಮರ ಆಗಿರಲೂ....
- Prakash Angadi
03 Sep 2018, 12:15 pm
ಮರೆವದೆಂತು..!
ಮರೆಯಲಾರೆ ಮನನೊಂದ ನಿನ್ನ ಪ್ರೀತಿಯ ಕರೆವದಂತು
ಕರೆಯಲಾರೆ ನನ್ನ ಬಾಳಿನ ನಲ್ಮೆಯ
ಸಿರಿಯನೆಂತು..!
ಬೇಡಲಾರೆ ನಿನ್ನನೆಂದೂ ಒಡೆಯ
ಬಾಳಿಗೊಂದು
ಬದುಕನೀಡು ಮರೆಯಲಾರೆ ಈ ಭವಣೆಯ
ಅರ್ಥವೆಂತು..!
ಅರಿಯಲಾರೆ ದೂರದೂರಿನ ದೊರೆಯ
ಸ್ವಾರ್ಥವೊಂದು
ಸಾರುತ್ತಿದೆ ಧರೆಯೊಳಗಿನ ಧಗಧಗೆಯ
ಇಷ್ಟವೆಂತು..!
ಇಷ್ಟ ಪಡಲಾರೆ ನೀ ದೂರವಾಗುವ ಸಮಯ
ಕಷ್ಟವೇನು ಮಹಾ..
ಕಣೀರ್ಹಾಕಿ ಮರೆಯಬೇಕು ನೀ ಕೊಟ್ಟ ಪ್ರೀತಿಯ
- vasu
02 Sep 2018, 08:05 pm
ಎತ್ತುಗಳು ಬೇಕು ಊರಿನ ಹೊಲ ಹೂಡಲು...
ಸ್ವಚ್ಛ ಮನಸ್ಸು -ನಿಸ್ವಾರ್ಥ ಸೇವೆಯ ಹಾಡು ಹಾಡಲು..
ನಕರಾತ್ಮಕ ಚಿಂತನೆಯ 'ಸುಳಿ'ಯಿರದ..
ತುಂಬಿದೋಲಕೆ ಬಿಟ್ಟರೂ 'ಬದು'ವನ್ನಷ್ಟೇ ಮೆಯುವ..
ಮುಟ್ಟಿದರೆ ಬೆದರದ, ತಟ್ಟಿದರೆ ಅದರದ...
ಮನೆಯಷ್ಟು ಮಂದಿ ಹಿಡಿದರು ಹಿರಿಯದ... !
'ಬಂಡಿ'ಗೂ - 'ನೊಗ'ಕ್ಕೂ ಸೈ ಎನ್ನುವ...
ಸೇವೆಯಂಬ 'ಮೇವ'ನಷ್ಟೇ ಹೊಟ್ಟೆತುಂಬ ಮೆಯುವ..
ನಿಂದೆ ಅಪವಾದದ 'ಮುಸುರಿ' ನೀರು ಕುಡಿಯುವ..
ಮೆರವಣಿಗೆಯಲ್ಲೂ ನೆತ್ತಿಮೇಲಿನ 'ಕೊಂಬ'ನು ಬಗ್ಗಿಸುವ...!!
'ಕೂರಿಗೆ '- 'ಕುಂಟೆ'ಗೂ ತಂಟೆ ತಗೆಯದ...
'ಗಳೆವ' ಹೂಡಿದಾಗ ದುಬ್ಬ ಮುಟ್ಟಿಸಿಕೊಳ್ಳದ..
ತುಂಬಿದ ಬಂಡಿಯಲಿ ,ಹ್ಯಾಸಿ,ಎಳೆಯದ..
ಏನೂ ಇಲ್ಲದಿದ್ದರೂ ಅರ್ಧಕ್ಕೆ "ಬಳಗ" ಹೊಗೆಯದ..!!!
ಎತ್ತುಗಳು ಬೇಕು ಊರಿನ ಹೊಲ ಹೂಡಲು...
ಸ್ವಚ್ಛ ಮನಸ್ಸು -ನಿಸ್ವಾರ್ಥ ಸೇವೆಯ ಹಾಡು ಹಾಡಲು..
ಸುಗ್ಗಿ..
- ಆರ್ ಎಸ್ ಸುಗ್ಗಿ.
02 Sep 2018, 02:24 pm
ಕಣ್ಣು ಕಣ್ಣಲ್ಲಿ ಕಣ್ಣಿಟ್ಟು ಕರೆದವನ ಕವಿತೆ ಇದು
ಕಾಡುತ್ತ ಕರೆಯುತ್ತ ಬೆಂಬಿಡದೆ ಹಾಡುತಿದೆ
ಮನದಲ್ಲೇ ನನ್ನಯ ರೇಖೆಗಳ ಬಿಡಿಸಿದ
ಕಣ್ಣಲ್ಲೇ ಬಣ್ಣಗಳ ಜೀವವ ತುಂಬಿದ
ನಾನಂತೂ ಅವನನ್ನು ಈ ಹಿಂದೆ ಕಂಡಿಲ್ಲ
ನನ್ನನ್ನು ಅವನೀಗ ಅತಿಯಾಗಿ ಅರಿತಿರುವ
ಕಲ್ಪನೆಯ ಕವಿಯು ಅವನೇನು ಅಲ್ಲ
ನಿಜವಾದ ನನ್ನನ್ನೇ ಕನ್ನಡಿಗೆ ತೋರಿದ
ಕನ್ನಡದ ಕನ್ನೆಯ ಕವಯತ್ರಿ ಮಾಡಿದ
ಲೇಖನಿಗೆ ವರ್ಣನೆಯ ವರ್ಣ ವ ತುಂಬಿಸಿ
ನಲ್ನುಡಿಯ ಅಕ್ಕರದ ಮಾಲೆಯ ತೊಡಿಸಿದ
ಮಳೆ ಮೋಡ ಕಂಡಂತ ನವಿಲ್ ಆದೆ ನಾನಾಗ
ದಾಂಪತ್ಯ ರಸ ಸವಿಯೇ ಮೊದಲಾದ ಅವನಾಗ
- kempukanda
01 Sep 2018, 11:33 pm
ಪ್ರಿಯೆ!..
ನಿನ್ನ ನಗುವಿನ ಕ್ಷಣಗಳನ್ನು ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತ್ತಿದೆ....
- Murali.T
01 Sep 2018, 05:11 pm
ಇಂದು ನೀ ನನ್ನ ಅಗಲಿ ಹೋದರೂ
ನಿನ್ನ ನೆನಪುಗಳಿಂದ ಮಾಸಿ ಹೋದರೂ
ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ
ಹುಡುಕದಿರು ನೀ ನನ್ನ ಮತ್ತೆಲ್ಲಿಯೂ ನಾ ನಿನ್ನ ಕಣ್ಣಲ್ಲೇ ಇರುವೆ
ಒಂದು ಹನಿ ಕಣ್ಣೀರಾಗಿ...
- Murali.T
01 Sep 2018, 05:10 pm