ದಿಗಂತಕ್ಕೂ ದಿಗಿಲಾಯಿತೇನೋ
ಭುವಿಯಲ್ಲಿನ ದುರ್ಜನರ
ಕಂಡು, ಅಮ್ಮನ ಬೆನ್ನಹಿಂದ ಬಚ್ಚಿಟ್ಟುಕೊಳ್ಳಲೆಂದು ಬಿಕ್ಕಿ ಬಿಕ್ಕಿ ಅಳುತ್ತಿದೆ ನನ್ನ ಕಣ್ಣ ಆಸರೆ ಕೊಡುವೆ ಬಂದು ಸೆರೆ
ಮಳೆಹನಿಯೇ ನನಗೆ ಮನೆ ಇಲ್ಲದಿದ್ದರೂ!!
ಯಾವ ಮರದ ಮುದ್ದು ಎಲೆಯೋ ಒಂದಿನಿತು ಅಡ್ಡಿಯಾಗಿ ನನ್ನ ರಕ್ಷಿಸುತ್ತಿದೆ,
ನಿನ್ನ ಕಣ್ಣ ತಂಪಿನಿಂದ.
ಯಾರು ನಿರ್ಮಿಸಿದ ರೈಲು ಹಳಿಯೋ ದಣಿದ
ಒಡಲ ಭಾರಕೆ ಕಿಂಚಿತ್ತೂ ಅಲುಗಾಡದೆ ಮುಖಭಾವಗಳಿಲ್ಲದೆ ಮಂಕಾಗಿ ನಿಂತಿದೆ.
ಖರ್ಚಾಗದ ಮೌನ ಮಾತಿಗೆ ಬೆಲೆ ಕೇಳುವುದೆಂದು
ಮೌನಿಯಾಗಿರುವೆ ಇವೆಲ್ಲವೂ ನಿನಗೆ
ನೇರವಾಗಿ ತಿಳಿಸದೆ ಬೆಂದ ಬಡಪಾಯಿಯ ನೊಂದ ಕಣ್ಣುಗಳ ನೋಡಿ ತಿಳಿಯೇ ಆಗಸವೆ
ನಿನಗಿಂದು ನನ್ನಯ ಸಣ್ಣ ಮನವಿ!!
ಕಣ್ಣು ಕತ್ತಲಾಗಿದೆ ನಿನ್ನ
ಪ್ರೀತಿ ಕಾಣದೆ
ಮನಸ್ಸು ಮೌನವಾಗಿ ನಿನ್ನ
ಮಾತು ಕೆಳದೆ
ಕಣ್ಣ ತುಂಬಾ ನಿನ್ನ ಬಿಂಬ ಹಾವರಿಸಿದೆ
ಹೃದಯ ಮುಟ್ಟಿ ಹೇಳುವೆ ಕೇಳು
ಈ ಹೃದಯಕ್ಕೆ ನಿನ್ನನ್ನು ಪ್ರೀತಿ
ಮಾಡೋದು ಬೀಟ್ಟು ಬೆರೇನು ಗೊತ್ತಿಲ್ಲ..
ಓ ಹೃದಯ ವಾಸಿಯೇ
ಪ್ರೀತಿಯಲಿ ನೋಂದ ಹೃದಯ
ಮುರಳಿಧರ ವಿನಾಯಕ ಟೈಲರ್
ಕೇಸರಹಟ್ಟಿ
ಪ್ರೀತಿಸಿ
ಹೊರೆಟು ಬಿಟ್ಟೆಯಾ
ಒಂಟಿಯಾಗಿ ಬಿಟ್ಟು
ಈ ಹೃದಯವನ್ನ
ಮೌನವೇ ಆವರಿಸಿದೆ
ಈ ಮನಸ್ಸಿನ ಮನೆಯಲ್ಲಿ
ಕಾರ್ಮೋಡ ಕವಿದಿದೆ
ನನ್ನೆದೆಯ ಗೂಡಲ್ಲಿ
ಅಂದು ನೋವು ಮರೆಸಿದ
ನಿನ್ನ ಮುದ್ದು ಪ್ರೀತಿ
ಇಂದು ಎಲ್ಲಿ ಹೋಯ್ತು
ಆ ನಿನ್ನ ಮುದ್ದು ಪ್ರೀತಿ
ಮರೆತರು ಮರೆಯಲಾಗುತ್ತಿಲ್ಲ
ನಿನ್ನ ಮುದ್ದು ಪ್ರೀತಿಯ ಗೆಳತಿ