Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಿಸಿ ಬಿಸಿ ಸುದ್ದಿ

ಕೇಳಬನ್ನಿ ಕೇಳಬನ್ನಿ
ಒಯ್ದಿಹೆನು ಬಿಸಿ ಬಿಸಿ ಸುದ್ದಿ
ಹೇಳಬಾರೆ ಹೇಳಬಾರೆ
ಏನ ಸುದ್ದಿ ತಂದಿಹೆ ಸುಬ್ಬಿ

ಊರೂರು ಅಲೆದಿಹರು
ಕೇರಿಗಳಲಿ ಉರುಳಿಹರು
ಬಡವ-ಬಲ್ಲಿದ,ಮೇಲು-ಕೀಳು
ಅರಿವಿಲ್ಲದೆ ಬೇಡುತಿಹರು

ಯಾರ್ಯಾರು ಅಲೆದಿಹರು
ಎಲ್ಲೆಲ್ಲಿ ಉರುಳಿಹರು
ಏನನ್ನ ಬೇಡಿಹರು
ತಿಳಿಸಿ ಹೇಳೆಲೆ ಸುಬ್ಬಿ

ಐದುವರುಷಗಳ ಕಾಲ
ಅಧಿಕಾರ ಹಿಡಿದು ಕೂರುವರು
ಮದಗಜಗಳಂತೆ ಮೆರೆಯುವರು
ಮರಳಿ ನಮ್ಮಕಾಲಿಗೆರಗುವರು

ಪದವಿ ಬಂದಾಗ
ಪರಮಾತ್ಮನನ್ನೆ ಮರೆಯುವರು
ಪದವಿಗಾಗಿ ಪರಮಾತ್ಮನಿಗೆ
ಆಮಿಷಗಳ ಸುರಿಮಳೆ ಸುರಿಸುವರು

ರಣರಂಗದಲಿ ರಣಕಹಳೆ ಊದಿ
ಹೊರಾಡುವರು ವೈರಿಯ ಶಯನಕಾಗಿ
ಸ್ಥಾನಮಾನ ನೀಡುವೆನೆಂದರೆ
ಒಂದೆಲೆಯಲಿ ಉಣ್ಣುವರು ಒಂದಾಗಿ
ಹಗೆಯ ಮರೆವರು ಅರಗಳಿಗೆಯಲಿ

ತಾನೊಂದು ಹತ್ತಿಹಣ್ಣೆಂಬುದ
ಮರೆತ ಮೂರ್ಖರು
ಬೇರೊಂದು ಹಣ್ಣೊಳಗಿನ
ಉಳುಕ ಹುಡುಕುತಿಹರು

ತರತರದ ಬಣ್ಣವ ಹಚ್ಚಿ
ತರತರಹದ ನಟನೆಗಳ ಮಾಡುತಿಹ
ಸೀಟಿಗಾಗಿ ಶೀಲವ ತ್ಯಜಿಸುತಿಹ
ನಾಯಕರುಗಳ ಸುದ್ದಿ ಕೇಳಬನ್ನಿ



ಶಾರಧ

- ಶಕುಂತಲಾ

28 Apr 2018, 03:39 pm

..........

ಏಕೋ ,ಏಕೋ ನನ್ನೆದೆಯಲ್ಲಿ ಪ್ರೀತಿ ತಂದೆ.
ನಾ ಕಾಣದ ಕಲ್ಪನೆಗಳ ನನ್ನೆದುರಲಿಟ್ಟು, ಏಕೋ ನಲಿದಾಡುವಂತೆ ಮಾಡಿದೆ ...

ಕಾರಣಗಳ ಹುಡುಕುಟಲಿರುವೆ ಇಂದಿಗೂ ನಾ ಮಾಡಿದಾ ತಪ್ಪಾದರೂ ಏನು ಎಂಬುದು....

ಪ್ರೀತಿ ಇಲ್ಲದೆ ಇರುವಾಗ ಎಷ್ಟೋ ಬಾರಿ ನಾ ದೂಡುವಗಲು ನಿ ನನ್ನೇ ಬೇಕು ಎಂದು ಕೂಗಿ ,ಓಡೋಡಿ ಬರುತ್ತಿದ್ದೆ
.....

ಆದರೆ ಇಂದು ತುಂಬು ಹೃದಯದಿ ಪ್ರೀತಿಯಿಂದ ಕೂಗಿ ಕೂಗಿ ಕರೆಯುತಿರುವೆ ನಿ ಕಾರಣಗಳ ಹೇಳದೆ ದುರಾಗುತ್ತಿರುವೆ ಏಕೋ ಮನ ಬಾರವೆನಿಸತೊಡಗಿದೆ ...

ಹೇಳಲಾಗದ ಮಾತುಗಳು ಮನ ತುಂಬಿಕೊಂಡು ಕೊಳ್ಳುವಂತ ವೇದನೆಗಳು ಕಾಡತೊಡಗಿದೆ...

- Acchu love

28 Apr 2018, 02:40 pm

ಅಷ್ಟೇ ಕಣ್ರೀ ಈ ಜನ(ಮತದಾರ)

ಅಷ್ಟೇ ಕಣ್ರೀ ಈ ಜನ
ಎಷ್ಟೇ ಡಂಗೂರ ಸಾರಿದ್ರೂ ಬಿಡಲ್ಲ ಇವರ ಬುದ್ದಿನಾ..
ನೋಟಿನ ಆಸೆಗೆ ಮಾರಿಕೊಳ್ತಾರೆ ಓಟನ್ನ
ಇನ್ನೇಲ್ಲಿ ಉದ್ದಾರ ಆಗುತ್ತೆ ಇವರ ಜೀವನ..

ಯಾರು ಜಾಸ್ತಿ ಕೊಡ್ತಾರೋ ಅವ್ರಿಗೆ ನಮ್ಮ ಓಟು ಅಂತಾರೆ
ಅವನು ನಮ್ಮ ಜಾತಿ ಅವನಿಗೆ ನಮ್ಮ ಸಪೋರ್ಟು ಅಂತಾರೆ..
ಶಿಷ್ಟ ನಾಯಕ ಇವ್ರಿಗೆ ಎಂದೂ ಬೇಕಿಲ್ಲ
ಭ್ರಷ್ಟ ಪಾತಕನಿಗೆ ಗೆಲ್ಲಿಸೋದು ಬಿಡಲ್ಲ..

ಸುಳ್ಳು ಭರವಸೆಗಳಿಗೆ ಜೈಕಾರ ಹಾಕ್ತಾರೆ
ಗುಳ್ಳೆ ನರಿಗಳಿಗೆ ಅಧಿಕಾರ ನೀಡ್ತಾರೆ..
ನೆಚ್ಚಿನ ನಾಯಕನ ವಹಿಸಿಕೊಂಡು ನೂರಾರು ಚರ್ಚೆ ಮಾಡೋದು ಬಿಡಲ್ಲ
ನಾಡಿನ ಸಮಸ್ಯೆಗಳನ್ನ ತಿಳಿದುಕೊಂಡು ಒಂಚೂರು ಯೋಚನೆ ಮಾಡೋದು ಇಲ್ಲ..

- ಸುರೇಶ್ ಟಿ ವಿ

27 Apr 2018, 01:40 pm

ನೆನಪುಗಳು.....

ಪೀತಿಯ ನೆನಪುಗಳು .......
ಪೀತಿ ಮಾಡುವುದನ್ನು ಕಲಿಸಿ ಕೋಟ್ಟೊನು ನೀನು
ಆದರೆ ನಿನ್ನ ಮರೆಯುವುದನ್ನು ಕಲಿಸಲಿಲ್ಲ ಯಾಕೆ ???

ನಿನ್ನ ನೆನಪಲ್ಲೆ ನಾ ಸಾಯುತ್ತಿರುವ ನಾನು
ಒಮ್ಮೆ ಯಾದರೂ ಬರಲಿಲ್ಲ ಯಾಕೆ ನೀನು ???

ನೀನ್ನ ಆ ಸುಂದರ ಮಾತುಗಳು ಅದು ಖುಷಿ ಕೊಟ್ಟಿತ್ತು
ಇದು ಆ ಮಾತುಗಳು ನನ್ನ ಸ್ವಲ್ಪ ಸ್ವಲ್ಪನೆ ಸಾಯಿಸುತ್ತಿದೆ ....

ನಿನ್ನ ಬಿಟ್ಟು ನಾ ಹೇಗೆ ಇರಲಿ ......
ಕ್ಷಮಿಸು ನನ್ನ ಮರಳಿ ಬಾ ನನ್ನ ಬಳಿ ......
ನಿನಗಾಗಿ ಕಾಯುತ್ತಿರುವ ನಿನ್ನ ಮುದ್ದು.....

ಮುದ್ದು ಪೆದ್ದು

- Shilpa

27 Apr 2018, 01:21 pm

ಸನಿಹ..

ನಾನು ಕಾಣದ
ಅತೀವ ಆನಂದ
ನಾನನುಭವಿಸದ
ಆಡಂಬರ ನೀನು..
ನಗೆಯ ಹೊಗೆಯಲಿ
ಹಗೆಯ ಸಾದಿಸುವಾಗ
ಬಗೆ ಬಗೆಯ ಸವಾಲು
ನಿನ್ನನ್ನೊಲಿಸಲು ನನ್ನಲ್ಲಿ..
ಒಬ್ಬನಿದ್ದಾಗ ಮಬ್ಬನಾಗಿ
ಕಬ್ಬಕ್ಕಿಯಂತೆ ನಿಬ್ಬೆರಗಾಗಿ
ಹಬ್ಬದೂಟಕ್ಕಾಗಿ ಹಾತೊರೆಯುವ
ಸುಬ್ಬನಾಗಿರುವೆ ನಾನು..
ಹಸಿಮಣೆಯೊಂದಿಗೆ
ಕಸಿಬಸಿಯಾಗುವಂತಹ
ನಸಿಬಕ್ಕಾಗಿ ಮಸೀದಿಗೆ
ನಸುಳುತ್ತಿರುವೆ ನಾನು
ಬೇಗ ಸನಿಹ ಬಾ...

ಇಂತಿ ನಿಮ್ಮ "ಸ್ನೇಹ ಸಿಂಚನ"
ನಾಗರಾಜ ಬಿ {9743216235}

- ನಾಗರಾಜ ಬಾಕೆ೯ರ್

23 Apr 2018, 03:59 pm

ನನ್ನ ಕಪ್ಪುಗೆಯ ರಾಣಿ

ಗುರಿ ಇಟ್ಟು ಹೋದೆ ಕಾಲೇಜಿಗೆ
ಪ್ರೀತಿ ಪ್ರೇಮ ಬೇಡವೆಂದು
ಅನಿಸಿತ್ತು
ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗ
ಬೇಕೆಂಬ ಆಸೆ ನನ್ನಲ್ಲಿ
ಆದರೆ ಕಾಲೇಜಿಗೆ ಬಂದಿಳಿದಳು
ಕಪ್ಪುಗೆಯ ರಾಣಿ.

ನೋಡುವುದಕ್ಕೆ ಚೆಂದವಿಲ್ಲದಿದ್ದರೂ
ನಾ ಬಿದ್ದೆ ಅವಳ ನಡೆತೆಗೆ
ಕೆಲವರು ಇದು ನಿನಗೆ ಬೇಡವೆಂದು
ಹೇಳಿದರೂ
ನನ್ನ ಮನಸ್ಸಿನ ದಾರೆ ಅವಳ ಗುನಕ್ಕೆ
ಕಟ್ಟಿಯಾಗಿತ್ತು.
ಸಮಯ ಬಂದಲ್ಲಿ ನಾ ಬಂದು
ಕೇಳುವೆ ನೆಂಬ
ಭರವಸೆಯನ್ನು ಕೊಟ್ಟೆ,
ಇದೀಗ ಕಾಯುತಿರುವೆ ಆ ಕರಗೆ

- Hasan Muhaz

23 Apr 2018, 07:10 am

ನಿನ್ನ , ಹರುಷದ ಆ ಕ್ಷಣ...

ಮುಖ ತುಂಬ ಮುಗ್ದ ನಗು
ಮನ ಬಿಚ್ಚಿ ಜಿಗಿದ
ಎದೆಯಾಳದ ಪಿಸುಮಾತು...
ನಿನ್ನ ಮನ ಗೆದ್ದು
ನೀ ಪಟ್ಟ ಸಂಭ್ರಮ

ನಾ ಕಂಡೆ ಇಲ್ಲ
ಈ ಲೋಕದೋಳಗೆ
ಕೋಟಿ ಜನರ
ಈ ಪರಿಯ ಸಂತಸ.

ನಿನ್ನ ಹರುಷದ
ಆ ಒಂದು ಕ್ಷಣ
ನೆನೆದರೆ ನಾ
ಮರೆಯುವೆ
ಈ ಲೋಕವೇ...

- Vamu Gavada

22 Apr 2018, 08:53 pm

ಬೇಕಾಗಿದ್ದಾರೆ...

ಬೇಕಾಗಿದ್ದಾರೆ...

ನಮಗೆ ಒಂದಿಷ್ಟು ಮಂದಿ
ನಿನ್ನೆ ಇಂದು ನಾಳೆಯು...

ಭಾರವೇ ಇಲ್ಲದ
ಹತ್ತಿಯಂತ ಕೆಲಸ
ಕತ್ತೆಯ ಸ್ವರ ಸಂಗೀತ
ಬಲ್ಲವರು...

ಬೇಕಾಗಿದ್ದಾರೆ...

ಹಸ್ತ ಪ್ರದರ್ಶನ
ಕೃಷಿ ಪ್ರದರ್ಶನ
ಪುಷ್ಪ ಪ್ರದರ್ಶನ
ಮಾಡಲು...

ಬೇಕಾಗಿದ್ದಾರೆ....

ಸುಳ್ಳು ಹೇಳಲು
ಕಪ್ಪುಧನ ಹಂಚಲು
ಉಚಿತ ಮಧ್ಯ ನೀಡಲು..
ಮಾಯಾವಿಗಳು...

ಬೇಕಾಗಿದ್ದಾರೆ....

ನನ್ನ ಮುಖಕ್ಕೆ ಬಣ್ಣ
ಪ್ರತಿಸ್ಪರ್ಧಿಗೆ ಸುಣ್ಣ
ಬಿದಿ ಜನರಿಗೆ ಕಣ್
ಸನ್ನೆ ಮಾಡಲು..

ಬೇಕಾಗಿದ್ದಾರೆ...

ಆಸಕ್ತಿ ಉಳ್ಳವರು
ಸಂಪರ್ಕಿಸಿ ಇಂದು
ನಿಮ್ಮೊಣೆಯ
ನಾಯಕರನ್ನು...
@@@@@

- Vamu Gavada

21 Apr 2018, 09:10 pm

ಶಾಯಿರಿ

ಬಾಯ್ಬಿರ್ದು ನನ್ನೆ ನುಂಗೋಕ್ ಕುಂತ ಎದೆಗೆ
ಸುರ್ದವವ ನೀ ತುಂತುರು ಮಳೆಯಂಗ
ಹೇಳ ಕೊಳೆ‌ ತೆಗೆದು ಕಳೆ ಕೊಟ್ಟು
ಎದೆಯೊಡ್ಲಲಿ ಹಸ್ರು ಚಿಗ್ರಿಸಿದ್ ನಿನ್ ಮರೆಯೋದೆಂಗ


ನಕ್ಕು ಬಿಡ ಒಮ್ಮೆ ಸ್ವಾತಿ ಮುತ್ತು ಎಲ್ಲೆಲ್ಲೂ ಚೆಲ್ದಂಗ
ಹರಿದೇ‌ ಬಿಡ್ಲಿ ನನ್ನೆದೆಯೊಳಗ ಬತ್ತದ ಪ್ರೀತಿ ಗಂಗ


ಎದೆಯಾಳದ ಕಪ್ಪೆಚಿಪ್ಪಿನೊಳಗ
ಬಿದ್ದು ಬಿಡೆ ಸ್ವಾತಿ ಮಳೆಯಂಗ
ಬಂದದ್ದು ಬರಲಿ ಬಾಳ್ನಾಗ
ಕಾಯ್ತೀನಿ ಸ್ವಾತಿ ಮುತ್ತ ಕಾದಂಗ

- ಶ್ರೀಕಾವ್ಯ

21 Apr 2018, 01:03 pm

ಮತ ಗೊಂದಲ !

ಒಬ್ಬ ಭ್ರಷ್ಟ, ಇನ್ನೊಬ್ಬ ದುಷ್ಟ
ಅವನು ಕಳ್ಳ, ಇವನು ಸುಳ್ಳ
ಆ ಪಕ್ಷ ಕೋಮುವಾದಿ
ಈ ಪಕ್ಷ ಜಾತಿವಾದಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?

ಅವನಿಗೆ ಗೊತ್ತಿದೆ ಕೋಟಿ ದೋಚುವ ಕಲೆ
ಇವನ ಕೈಗೆ ಅಂಟಿಕೊಂಡಿದೆ
ಅಮಾಯಕರ ರಕ್ತದ ಕಲೆ !
ಅದೋ ನಾಮಪತ್ರ ಸಲ್ಲಿಸಿ ಆಯ್ತು ಅತ್ಯಾಚಾರಿ
ಇದೋ ಕೈ ಮುಗಿದು ಬೇಡಿ ಬರುತಿಹನು
ನಿತ್ಯ ದುರಹಂಕಾರಿ..
ಯಾರಿಗೆ ಮುದ್ರೆಯೊತ್ತಲಯ್ಯ ನಾನು?

ಜನರ ಜೇಬಿಗೆ ಕತ್ತರಿ ಹಾಕುವ ಕದಿಮನೊಬ್ಬ
ತಿಜೋರಿ ದೋಚಿ ವಿದೇಶದಲ್ಲಿ
ಬಚ್ಚಿಡುವ ಭೂಪನೊಬ್ಬ.
ಕೊರಳ ಪಟ್ಟಿ ಹಿಡಿದು ಹೊಡೆದಾಡಿಕೊಂಡ
ಬದ್ದ ರಾಜಕೀಯ ವೈರಿಗಳು
ದಿನಾ ರಾತ್ರಿ ಒಂದೇ ತಟ್ಟೆಯಲ್ಲಿ
ಬಡವರ ಹೆಣ ತಿನ್ನುತಿಹರು!
ಯಾರಿಗೆ ಮುದ್ರೆಯೊತ್ತಲಯ್ಯ ನಾನು?

- ಶ್ರೀಗೋ.

20 Apr 2018, 11:21 pm