ಎ ಹುಡುಗ
ನಿನ್ನದು ಏನು ತಪ್ಪಿಲ್ಲ
ನಾನೆ ನಿನ್ನ ಅತಿಯಾಗಿ ಪ್ರೀತಿಸಿಬಿಟ್ಟೆ..
ಅತಿಯಾಗಿ ನಂಬಿಕೊಂಡೇ...
ನಿನು ಅತಿಯಾಗಿ ಕಾಡಿದರು..
ನಿನ್ನೊಳಗಿನ ಪ್ರೀತಿ ಚಿಗುರಲಿಲ್ಲ ಅಂದ್ರೆ...
ನೀನು ಒಣಗಿದ ಮರದ ಆಗೇ.....
ನಿನ್ನ ಹೃದಯ ಬರಡು ತುಂಬಿದ ಮರಳಿನ ಆಗೇ.....
ಕ್ಸಮಿಸು ಗೆಳೆಯ.....
ಸುರಿಯುತಿದೆ ಎದೆಯೂರಿಗೆ ಮತ್ತೆ ಒಲವ ಮಳೆ
ಬೀಗಿ ನಲಿಯ ಬೇಡ ಮನವೆ ಹೇಳುವುದ ಕೇಳೆ
ಸಂಧಾನವೊ ಕರುಣೆಯಲಿ ಸಿಕ್ಕ ಅನುದಾನವೊ ತಿಳಿದವರ್ಯಾರು ಹೇಳೆ
ಯೋಚಿಸೊಮ್ಮೆ ಎದೆಯೂರಿನಲಿ ಬೆಳೆವ ಮುನ್ನ ಒಲವ ಬೆಳೆ
ಹುಟ್ಟುತಿರುವ ಕನಸೊಂದು
ಮೊಳಕೆಯಂತೆ ಚಿಗುರೊಡೆದು
ಬೆಳೆದು ಹೆಮ್ಮರವಾಗಿ ಮುದ್ದು
ಹಕ್ಕಿಗಳಿಗೆ ಆಸರೆ ನೀಡುವ ಬಯಕೆ
ಆದರೆ ಬೆಳೆಯುವ ಮುನ್ನವೆ
ಹಬ್ಬಿನಿಂತಿರುವ ಬಳ್ಳಿಗಳ ಬಂದವನ್ನೆ
ಕಳಚುವುದಾದರೆ ಹೇಗೆ
ತಾಯಿ ಬಳ್ಳಿಯ ಕಳಚಿದರೆ ಆ ಮರದ
ಜೀವ ಒಣಗಿ ಬರಿದಾಗಿ ಬಿಡುವುದು
ನೂರಾರೂ ಹಕ್ಕಿಗಳಿಗೆ ನೆರವಾಗುವ ಆ ಕನಸು
ನನಸಾಗಿಯೆ ಉಳಿದು ಬಿಡಲೆ ಹೀಗೆ
ಪುಟ್ಟದೊಂದು ಮೊಳಕೆ ದೊಡ್ಡದಾಗುವ ಮುನ್ನವೆ
ಕಳಚದಿರಿ ಹುಟ್ಟದೆ ಆಗೆ ಇದ್ದು ಬಿಡಲಿ
ಆ ಕನಸ್ಸು........... ಎಂದಿಗು .........
ನಿನ್ನ ಮತ್ತು ನನ್ನ ಪ್ರೀತಿ ಪರಿಗಣಿಸಲಾಗಿದೆ
ನನ್ನ ಕೈ ನಿನ್ನ ಕೈಯಿಂದ ಬಿಟ್ಟು ಬೇರೆ ಆಗುತ್ತದೆ
ಯಾವಾಗಲೂ ನೀನು ನನ್ನ ಸಂಗಾತಿ ತಪ್ಪಲಾರದೆ
ನಿನ್ನ ಕೈಗಳ ಪರೀಮಳ ಇನ್ನೂ ನನ್ನ ಕೈಯಲ್ಲಿದೆ
ನಿನ್ನ ಆ ಸೊಗಸು ಇಂದು ನಿನ್ನ ನೆನಪು ನೀಡುತ್ತದೆ