Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಶಿಲೆಗೆ ಸೋತ ಸುಶೀಲೆ

ಬೇಲೂರ ಶಿಲೆಯ ರಸ ಕಲೆಯ ಮುಂದೆ
ನವಿಲೂರ ನೈದಿಲೆ ಹಸನಾಗಿ ನಿಂತಿಹಳು
ಕನಕಾಂಬರ ಹೂವಿನ ಮಾಲೆಯನು ಮುಡಿದು
ಕಿವಿಯೋಲೆ ಆಭರಣ ಅಂದವಾಗಿ ಧರಿಸಿ.

ಕೆಂದುಟಿಯಲಿ ಇಣುಕಿಹುದು ಕಿರು ಮಿಂಚಿನ ನಗುವು
ಶೀಲಾ ಬಾಲಕಿಯ ಕಂಡು ಹೊಮ್ಮಿರುವುದೇನೋ,
ಶಿಲ್ಪಿಯ ಕಲೆಯ ಸೊಬಗು
ಈ ಚೆಲುವಿಯ ನಲ್ಮೆಯ ನಗುವು.
ತಾನೇ ಯಾರೋ ಕಡಿದ ಶಿಲ್ಪವೆಂದರಿಯದೆಲೆ
ಮಾರು ಹೋಗಿಹಳು ಮತ್ತೊಂದು ಶಿಲ್ಪಕ್ಕೆ ತರಳೆ.

ಕೆನ್ನೆ ತುಸು ಕೆಂಪಾಗಿಹುದು
ಸೂರ್ಯನ ಬಿಸಿಲ ಹೊಡೆತಕ್ಕೊ
ಮನದ ಇನಿಯನ ಮಧುರ ಸೆಳೆತಕ್ಕೊ..
ತೂಗಿ ತೊನೆಯುತ್ತಿದೆ ತರುಣಿಯ ಲೋಲಾಕು
ಕಡುಗಣ್ಣ ಸೆಳೆದು ಬೀಗುತ್ತಿದೆ ಲಲನೆಯ ಪೋಷಾಕು.

ಬಂಗಾರ ಬಣ್ಣದ ಅಂಚಿನ ಸೀರೆ
ಒಪ್ಪವಾಗಿ ಉಟ್ಟು ಹೊದ್ದ ಸುಂದರ ನೆರಿಗೆ
ತುಸುವೇ ಕದ್ದು ಇಣುಕಿದ ಎದೆಯ ಚಂದ್ರಮ
ಮರೆತಳೇನೋ ಮುಚ್ಚಿಟ್ಟುಕೊಳ್ಳಲು ಅವನ.

ಕಿರು ಬಾಳೆ ದಿಂಡಿನಂತೆ ನುಣುಪು ಕೈಗಳು
ತರು ಲತೆಗಳಂತೆ ಹೊಸೆದ ಬೆರಳು
ಬಳುಕು ನಡೆಗೆ ಉಳುಕುವುದೇನೋ ಸಿಂಹ ಕಟಿ,
ಒಮ್ಮೆ ತಿರುಗಿ ನನ್ನತ್ತ ನೋಡಬಾರದೆ
ಬೀಸಿ ನೋಟದ ಈಟಿ!

- ಶ್ರೀಗೋ.

28 Mar 2018, 10:11 pm

ಅರಳಿದ ಕವನ

ಬರೆಯಲು ಕುಳಿತಿರೆ ಕವಿಯು
ಪದ ಪದಗಳ ನಡುವೆ ಕದನ...

ಸುರಿಯಲು ಅನುಭವ ಸವಿಯ
ಯುಗದಾಚೆಗೆ ಕವಿಯ ಗಮನ....

ತೋಚಿದನ್ನೆಲ್ಲಾ ನೆನೆಯಲು ಮನವು
ಮನಸೊಳಗೆ ವಿಷಯದ ಮನನ..

ಗೀಚಿದನ್ನೆಲ್ಲಾ ಕೂಡಲು ಹಾಳೆಯು
ನಿಮಿಷದಲೇ ಅರಳಿತು ಕವನ.....

....ಕುಶಿ..

- sharin rao

28 Mar 2018, 07:32 pm

ಪ್ರೀತಿಯ ದಡ

ನಾನೊಂದು ದಡದಲ್ಲಿ ,
ನೀನೊಂದು ದಡದಲ್ಲಿ ,
ನಡುವೆ ಕೈ ಚಾಚಿರುವ ಪ್ರೀತಿ ,
ಯಾವ ದೋಣಿಯು ತೇಲಿ ,
ಎಂದೂ ಬರುವುದೋ ನಾ ಕಾಣೆ ,
ನೀ ನಿರುವ ಬಳಿಯಲ್ಲಿ ನನ್ನ ಬಿಡಲು ,
ನಿನ್ನ ಕಂಗಳ ಕೊಳದಿ ......

- sparsha surya

28 Mar 2018, 07:13 pm

ರಾಜಾ ರಾಣಿ

ನಾನು ರಾಜಾ ಅಲ್ಲ
ನೀನು ರಾಣಿ ಅಲ್ಲ
ಆದ್ರೂ ನೀನು ನನ್ನ ಹೃದಯದ ಅರಮನೆಗೆ ನೀನೇ ರಾಣಿ ನಾನೆ ರಾಜಾ....
ಸೇವಕರು ಬೇಡ ಹಾ ಅರಮನೆಗೆ
ನಾನೆ ಮಾಡುವೆ ನಿನ್ನ ಎಲ್ಲಾ ಸೇವೆಗಳ.....
ನಾ ಇರುವೆ ನಿನ್ನ ಪಾದ ದಾಸನಾಗಿ....
ಬಂದು ಸೇರಿಬಿಡು ಗೆಳತಿ ನಾ ಸಾಯುವ ಮುನ್ನ ಈ ಬಡವನ ಅರಮನೆಗೆ.....
ಇಂತಿ ನಿನ್ನ ಪ್ರೀತಿಯಾ ಕೋತಿಮರಿ.....

- ShruthiR

28 Mar 2018, 01:21 pm

ನೋವು

ನನಗೆ ಯಾವಾಗ ಸಿಕ್ಕಿತು

- Bandopant Kulkarni Solapur

27 Mar 2018, 09:21 pm

ಪ್ರೀತಿ

ಈರುಳುಗಳ ನಡುವಲ್ಲಿ ಕನಸುಗಳ
ತೆರೆಯಲ್ಲಿ ನಿನ್ನ ಬಿಂಬಗಳು ಪ್ರಿಯೆ
ಮತ್ತೆ ಮತ್ತೆ ನಡೆದಿವೆ....ಕತ್ತರಿಸಿ
ಹೋಗಿರುವಾ ಪ್ರೇಮ ಬಳ್ಳಿಯ
ಚೆಲುವೆ ಮತ್ತೆ ನೆಡುವೆಯಾ ನಿನ್ನ
ಪ್ರೇಮದಾರೇಯ ಹರಿಸಿ....?(ಸಂಗು)

- sangu

27 Mar 2018, 08:09 pm

ನಾನೊಬ್ಬ ಮೌನಿ

ನಾನೊಬ್ಬ ಮೌನಿ...
ನನಗೊಂದು ತಿರುಕನ ಕನಸು...
ಅತೀ ಪ್ರೀತಿ ಅತೀ ವಾತ್ಸಲ್ಯ......
ಅತೀ ಮಮತೆ ಅತೀ ಕೋಪ.....
ಎಲ್ಲವು ನಿನ್ನಿಂದಲೇ ನಿನಗಾಗಿಯೇ ಇದ್ದವು....
ಇಂದು ನಿನ್ನಿಂದಲೇ ಮಣ್ಣಾಯಿತು...
ಇಂತಿ ನನ್ನ ಪ್ರೀತಿಯಾ ಕೋತಿಮರಿ....

- ShruthiR

27 Mar 2018, 01:58 pm

ಬಂಧನ.....

ಕಣ್ಣಲೇ ಕೊಲ್ಲುವೆ ನನ್ನ....
ಹಾ ನಗುವಲ್ಲೇ ಸೆಳೆಯುವೆ ನನ್ನ....
ನಾ ಸೋತೆ ಗೆಳತಿ...
ದಯಮಾಡಿ ಬಂದಿಸು ನನ್ನ
ನಿನ್ನ ಪ್ರೀತಿಯ ಬಂಧನದಲ್ಲಿ.....
ನನ್ನ ಪ್ರೀತಿಯಾ ಕೋತಿಮರಿ.....

- ShruthiR

27 Mar 2018, 11:24 am

ಕ್ಷಣ

ದಿನ ವಾರವಾಯ್ತು, ವಾರ ತಿಂಗಳಾಯ್ತು
ತಿಂಗಳು ವರ್ಷವಾದರೂ ಹರುಷ ಕಾಣುತಿಲ್ಲ ಮುಖದಲಿ
ಗತಿಸಿದ ಕ್ಷಣವದು ನೆನಪಾಯಿತಿಂದು ಉಸಿರು ಬಿಸಿಯಾಗುತಿದೆ ಕಣ್ಣು ಹಸಿಯಾಗುತಿದೆ
ಆದರೂ ನೀನೆಕೆ ಕಾಣದೇ ಹೊದೆ
ಅದೇ ಒಂದು ನನಗಿರುವ ಬಾದೆ.

- ChetanJain

27 Mar 2018, 08:17 am

ಪ್ರೀತಿಯ ಪ್ರವೇಶ....

ಚಂದ್ರನು ನಾಚುವನು ನಿನ್ನ ನಗುವ ಕಂಡು
ಹಾ ಸೂರ್ಯ ಭಯ ಪಡುವನು ನಿನ್ನ ಕೆಂಪನೆಯ ಕಣ್ಣನು ಕಂಡು ಚೆಲುವೆ
ನಾ ಇರುವೆ ನಿನ್ನೊಂದಿಗೆ ಹಾ ಸೂರ್ಯ ಚಂದ್ರರಿರುವವರೆಗೂ
ದಯಾ ಮಾಡಿ ಕರುಣಿಸು ನನ್ನ ಪ್ರೀತಿಯಾ ಪ್ರವೇಶ ಮಾಡಲು ನಿನ್ನ ಹೃದಯದ ಅರಮನೆಗೆ..
ನನ್ನ ಪ್ರೀತಿಯಾ ಕೋತಿಮರಿ.....

- ShruthiR

26 Mar 2018, 10:49 pm