ಕನ್ನಡವೇ ನಮ್ಮ ಜೀವನ ಎಂದೆಂದಿಗೂ ಇಲ್ಲಿರಲಿ ನನ್ನ ಜನನ,
ಹೃದಯದಿ ಮಿಡಿವುದು "ಕನ್ನಡ"!
ಪವಿತ್ರ ಸ್ಥಳವಿದು ಪಂಪ ರನ್ನರ
ಕನ್ನಡವೇ ಹಸಿರು , ಅದಲಿಹುದು ನಮ್ಮ ಉಸಿರು ,
ಕನ್ನಡಾಂಬೆಯ ಮಡಿಲಲಿಹುದು ನಮ್ಮ ಹೆಸರು
ವೀರ ಸಾಹಸ , ರೋಷ ಪೌರುಷ ಜನರ ನೆಲವಿದು
ಮನ ರೋಚಿತ ಕೃತಿಗಳ ಸಾಗರ ಇಲ್ಲಿಹುದು
ಭವ್ಯ ಭವನಗಳ ತಾಣವಿದು,
ಸಾಹಿತ್ಯ ಕಲೆಯ ತೊಟ್ಟಿಲು ನಮ್ಮ ಚೆಲುವ ಕನ್ನಡ
-ನಾಡಿದು....
ಅಲ್ಲಿಂದ ಬಂದು
ಇಲ್ಲಿ ನೆಲೆ ನಿಂತಾಗ
ಅಪರಿಚಿತ ಮನಸ್ಸುಗಳ
ಪ್ರಶ್ನೆ ನೂರು
ಎಲ್ಲಿಂದಲೋ ಬಂದವನೆಂಬ
ಅವರ ಹಂಗಿನ ಭಾವ
ಹೊರ ಕಾಣದಿದ್ದರೂ
ಭೂದಿ ಮುಚ್ಚಿದ ಕೆಂಡ
ಗಂಟಿಲ್ಲದವನಿಗೆ ನಂಟಿನ ಭಯವೇನು ?
ಹರಡಿಕೊಳ್ಳುತ್ತಾ ಹೋದೆ
ಹರಕು ಮುರಕು ಸರಕು
ತಪ್ಪು ಸರಿಗಳ ಲೆಕ್ಕ ಪಕ್ಕಕ್ಕಿಟ್ಟು
ನಡು ನಡುವೆ ಬಿರುಗಾಳಿ
ಚಿತ್ತ ವಿಕಲರ ದಾಳಿ
ಬಯಸಿದ್ದು ಬೆಳಕು
ದೊರೆತ್ತದ್ದು ಬೆಂಕಿ
ಬಿಚ್ಚಿ ಹೋಗಿದೆ ಬದುಕು
ಕಟ್ಟಿದರೆ ಮುಂದೇನು ?
ಕಾಡುವ ಇರುಳಿನಲಿ
ಕರುಣೆಯ ಬೆಳಕರಸಿ
ಕಾಯುತ್ತ ಕುಳಿತೆ
ಕಳವಳಿಸಿ ಕನವರಿಸಿ
ಮನೆಯೊಳಗೆ ಬಂದವರು
ಮನದೊಳಗೂ ಬಂದರು
ಎದೆಯ ರಂಗಸ್ಥಳದಿ
ಕುಣಿದು ಕುಪ್ಪಳಿಸಿದರು
ಚಿತ್ತಾರ ಬಿಡಿಸಿದರು
ಚಿತ್ತಗೆಡಿಸಿದರು
ಕನಸ ನೆಟ್ಟರು ಹಲವರು
ಕಣ್ಣು ಕಿತ್ತರು ಕೆಲವರು
ಕಡೆಗೆಲ್ಲಾ ಮುಗಿದಂತೆ
ಹೊರಟೆ ಬಿಟ್ಟರು
ನಿರ್ಭಿಡೆಯ ಮನಸಿಗರು
ಬಯಕೆ ತಣಿದರೆ ಸಾಕು
ಬಸಿರು ಯಾರಿಗೆ ಬೇಕು
ಯಾವ ಹಿಡಿತಕ್ಕೂ ಸಿಗದ
ನುಣುಪು ಜಾರುಗರು
ಮುನಿದು ಕುಳಿತರೆ ನಾನು
ಸೃಷ್ಟಿ ನಿಲ್ಲುವುದೇ ತಾನೇ ?
ನಾಳೆಗೆ ಯಾರ ಹಂಗು ?
ಸತತ ತಿರುಗುವ ಚಕ್ರ
ಇಂದಿನದೇನೆ ಇರಲಿ
ಮುಂದಿನದೇ ಒಗಟು
ಹುಚ್ಚು ಹುರುಪಿನ ದೈರ್ಯ
ಹೊಸ ಬದುಕಿಗಡಿಪಾಯ
ಅಳಿದುಳಿದ ಕನಸೊಡನೆ
ನವರಂಗ ಪ್ರವೇಶ
ಇಲ್ಲಿ ಸಲ್ಲದವರು
ಅಲ್ಲಿಯೂ ಸಲ್ಲರು
ಹಿರಿಯರಾಡಿದ ಮಾತು
ಗಹಗಹಿಸುತ್ತು
ಸಂತೆಯೊಳಗಿದ್ದರೂ
ಕಾಡುವ ಒಂಟಿತನ
ಅಪ್ಪುವುದು ಯಾರನ್ನು ?
ಒಪ್ಪುವುದು ಏನನ್ನು ?
ಅವ್ಯಸ್ತ ಅಸ್ಪಷ್ಟ
ಕಲಸು ಮೇಲೋಗರ
ತಿರುತಿರುಗಿ ಮರಳಿದ್ದು
ಮತ್ತದೇ ಹಳೆಯ ಗೂಡು
ನಾನೇ ಕಟ್ಟಿದ್ದು ನನ್ನದೇ ಗೂಡು
ಸಂಬಂದ ಹಿಂದಿನಂತಿಲ್ಲ
ಸಡಿಲಗೊಂಡಿದೆ ಎಲ್ಲ
ನನ್ನೊಡನೆ ಇರಲೆಂದು
ನಾನೇ ತಂದಿರಿಸಿದ್ದು
ಅನ್ಯವೇನಲ್ಲ ನನ್ನ ಸಹ ಬಳಿಗಳೇ
ಅವುಗಳ ಪಾಲಿಗೀಗ
ನಾನೊಬ್ಬ ಆಕ್ರಮಿತ
ಮೇಲೆಷ್ಟು ಶಾಂತ
ಒಳಗೊಳಗೇ ಸಿಡಿತ
ಇಷ್ಟಾದರೂ ನಂಬಿಕೆ
ನನ್ನೊಳಗೆ ಸತ್ತಿಲ್ಲ
ಕನಸುಗಳ ರಿಂಗಣ
ಎದೆಯೊಳಗೆ ಬತ್ತಿಲ್ಲ
ಭರವಸೆಯ ಒರತೆ
ಹನಿಯುತ್ತಲೇ ಇದೆ
ಮತ್ತಷ್ಟೂ ಮೊಗೆದಷ್ಟು
ಮೊಗೆ ಮೊಗೆದು ಸುರಿವಷ್ಟು
ಬೆಂಕಿಜ್ವಾಲೆ
ನನ್ನೆದೆಯ ಗುಡಿಯೋಳಗೆ
ಹಚ್ಚಿಟ್ಟ ದೀಪ ಜೊರಾಗಿ
ಉರಿಯುತಿದೆ ಇಂಚಿಂಚು
ಸುಡುತಿದೆ ನನ್ನೆ ನಾನು
ಬುದಿಯಾಗುವ ಮುನ್ನ
ತಂಪಾದ ಗಾಳಿಯೊಂದು
ಬೀಸಿ ಕಡಿಮೇ ಮಾಡಿತೆ
ನನ್ನೆದೆಯ ಜ್ವಾಲೇ.....
ಯಾರಿಲ್ಲದ ಮರಳುಗಾಡಿನಲ್ಲಿ
ಒಂಟಿಯಾಗಿ ಅಲೆಯುತಿರುವೆ
ಎತ್ತ ನೋಡಿದರು ಮನಮುಚ್ಚಿದೆ
ಮರಳುಗಾಡು ನಾನೆತ್ತ ಹೋಗಲಿ
ನಡೆದು ನಡೆದು ಕಾಲು ಸೋತು
ನಡುಗುತಿವೆ ಎದೆಯೋಳಗೆ
ಭಯವೊಂದೆ ನುಗ್ಗುತ್ತಿದೆ
ಆಸರೆಗಾಗಿ ಯಾವ
ಪುಟ್ಟ ಗೂಡು ಕಾಣುತ್ತಿಲ್ಲ
ಎಲ್ಲೆಂದು ಹೂಡುಕಲಿ ನನ್ನವರ
ನನ್ನದೆಯ ಗುಡಿಯ ನನಗಾಗಿ
ಹುಡುಕುತಿರುವ ನನ್ನವರೂ ಮರೆಯಾಗಿ
ಹೋಗಿರುವರಲ್ಲ ಒಂಟಿಯಾಗಿ
ದಿಕ್ಕು ಕಾಣದೆ ಕೊರಗಿ ಮರುಗಿ
ಕೂತು ಬಿಟ್ಟೆ ಯಾರಿಲ್ಲದೆ ಎನಿಲ್ಲದೆ
ಮರಳುಗಾಡಿನೋಳಗೆ.........
ಯಲ್ಲರು ಇದ್ದರು ಯಾರಿಲ್ಲದ
ಬದುಕು ನನ್ನಾಸೆಯು
ಸುಟ್ಟು ಬುದಿಯಾಗುತಿದೆ
ಕೇಳಿ ಕೊಡುವವರು ಯಾರಿಲ್ಲ
ಮಗುವಂತ ಮನಸೋಳಗೆ
ಕೆಂಡವೋಂದು ಬಂದು
ಮನಸನ್ನೆ ಸುಟ್ಟುಬಿಟ್ಟಿತಲ್ಲ
ಇರುವುದಾದರೂ ಹೇಗೆ
ಆ ಬುದಿಯಲ್ಲೆ ಮರೆಯಾಗಿ
ಹೋಗುವೆ ಹೀಗೆ........
ಕರೆದು ಕರೆದು ಕರಗೋಯ್ತು ನನ್ನ ಧ್ವನಿ,
ಬರೆದು ಬರೆದು ಸೊರಗೋಯ್ತು ನನ್ನ ಕರ,
ಏತಕ್ಕೆ ಇಷ್ಟೊಂದು ಕಟುವಾಗಿದೆ ನಿನ್ನ ಮನಸು ಕೇಳಲಿಲ್ಲವೇ ನನ್ನ ಸ್ವರವೂ.
ಬರಬಾರದೆ ಒಮ್ಮೆ ನಾನಿರುವೆನೆಂದು ನಿನ್ನಲ್ಲೇ,
ಸಿಗಬಾರದೆ ಒಮ್ಮೆ ನಿನ್ನ ನೆರಳ ಹುಡುಕಾಡುವ ಸಮಯ ಉಳಿಸಲೇನೆಗೆ,
ಹೆಜ್ಜೆ ಇತ್ತ ಕಡೆಯಲ್ಲಿ ಪಾದ ಸವಿದ ಕ್ಷಣದಲ್ಲಿ ನೊಂದಿತು ನನ್ನ ಮನ ನಿನ್ನ ಕಾಲ ಕೆಳಗೆ ಹೂವಾಗಿ ಸೇರಲಿಲ್ಲವೆಂದು.
ಬಂದಿ ಆಗದಿರು ಸದ್ದಿಲ್ಲದ ಭಾವನೆಗಳ ಬವಣಿಯಲ್ಲಿ,
ಮಮತೆ ಗುಡಿಯ ಮಾತೆಯಾಗಿರು,
ನೆನೆದ ಮನಗಳ ಕರೆಗೆ ಓಗೊಟ್ಟು ಕರೆವ ಮುನ್ನ ಕಾರ್ತಿಕ ದೀಪವಾಗಿ ಬೆಳಕ ಚೆಲ್ಲುತಿರು.
ನೀ ಹೇಗೆ ಇರುವೆಯೋ
ನಾ ಹಾಗೆ ಇರುವೆನು
ಮನದಲಿ ನೂರು ಭಾವನೆಯು
ನೋಡಲು ನಿನ್ನ ರೂಪವನು
ನೀನೇ ನಾನು,ನಾನೇ ನೀನು
ನೀ ಕೋಟ್ಟಿದ್ದನ್ನೆ ಕೊಡುವೆನು ನಾನು
ಎಂದು ಹೇಳುವ ಕನ್ನಡಿ ತಾನು
ಜೀವನ ಸತ್ಯವ ತಿಳಿಸುವೆನು
ನಿನ್ನ ಭಾವದ ಮುನ್ನುಡಿಗೆ
ಕನ್ನಡಿಯಾಗಿ ನಿಂತಿಹೆನು
ವಂಚನೆಮಾಡಿ ನಟಿಸುವಕಲೆಯ
ಬಿಟ್ಟಬಿಡು ನೀನು
ಹಮ್ಮು ಬಿಮ್ಮಿನ ಬಿಗುಮಾನವನು
ಎಂದೂ ತೋರದಿರು ನೀನು
ಕಾಣುವೇ ನಿನ್ನ ಪ್ರತಿಬಿಂಬವನು
ನನ್ನ ಮಾತನ್ನು ಕೇಳು,
ನಿನ್ನ ಮನದಂತೆ ತಾನು
ನಿನ್ನ ಕೈಗನ್ನಡಿ ನಾನು
ಕೊಲ್ಲಬೇಡ ಚೆಲುವೆ ಎನ್ನನೀ ಆ ನಿನ್ನ ಓರೆ ಕಣ್ಣಿನ ಬಾಣದಲಿ
ಮನ ಸೋತೆ ಆ ನಿನ್ನ ನೋಟಕೆ
ಸೆಳೆವುದು ಎನ್ನನು ನಿನ್ನ ಸನಿಹಕೆ
ನಿನ್ನ ಮೊಗದ ಸೊಬಗನ್ನು ಎನಿತು ಬಣ್ಣಿಸಲಿ
ನೂರಮಡಿ ಮಾಡಿಹುದು ನಿನ್ನ ಸೊಬಗ ಆ ನಿನ್ನ ಓರೆ ಕಣ್ಣು