Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕೊಲ್ಲುವುದಾದರೆ ಕೊಂದುಬಿಡು

"ಕುಡಿ ನೋಟಕ್ಕೆ ನಾಚಿ
ನಾಚಿಕೆಯ ಪ್ರೀತಿಯ
ಮುತ್ತು ಸುರಿಸಿ
ಅಂಜಿಕೆಯ ನುಡಿ ನುಡಿದು
ನನ್ನ ಹೃದಯದಲ್ಲಿ
ಪ್ರೀತಿಯ ಬೀಡು ಬಿಟ್ಟು
ನನ್ನ ಮನಸಲ್ಲಿ
ಪ್ರೀತಿಯ ರಂಗೋಲಿ ಇಟ್ಟವಳೇ ನೀ ಗೆಳತಿ.

"ಏಕೆ......
ನನ್ನ ಮುದ್ದುಗೆಳತಿ ಆಡುತ್ತಿರುವೆ
ಹೃದಯಾದ ಬಡಿತ ನಿಲ್ಲಿಸೋ
ಚುಚ್ಚು ಮಾತುಗಳನಾ,

"ಚುಚ್ಚು ಮಾತುಗಳಿಂದ
ಚುಚ್ಚಿ ಚುಚ್ಚಿ...........
ಕೊಲುತ್ತಿರುವೇ ಏಕೆ... ಹೇಳೇ
ನನ್ನ ಹೃದಯಾದ ದೇವತೆ,

"ಕೋಲುವೆಯಾ
ಕೊಂದುಬಿಡು ಗೆಳತಿ ನಿನ್ನ ಕೈಯಾರೇ
ನಿನ್ನ ಮನಸಾರೆ ಪ್ರೀತಿಸಿದ
ನನ್ನ ಹೃದಯನಾ,

"ಕೋಲುವಾ ಮುನ್ನ ತಿಳಿಯೇ
ನಾ ಮನಸಾರೆ ಪ್ರೀತಿಸುತ್ತಿರುವೆ
ನಿನ್ನ ಕೈ ಹಿಡಿದು ಹಸೆಮಣೆ ಏರಿ
ಸಪ್ತಪದಿ ತುಳಿಯುವಾ ಘಳಿಗೆಗಾಗಿ,

"ನಾ ಸತ್ತರು ಚಿಂತೆಯಿಲ್ಲ
ನೀ ಇಲ್ಲದ ಈ ಲೋಕದಲ್ಲಿ
ಏಕೆ ಮೌನವಾಗಿರುವೇ
ನನ್ನ ಪ್ರತಿಯ ದೇವತೆ...............ಹೇಳು.

***ರಾಜು ಗುಡಿ***ಹಾಸನ

- ರಾಜು ಹಾಸನ

21 Dec 2017, 03:48 pm

ಮರೆತಿದ್ದೆವೆ ನಾವು

ಮರೆತ್ತಿದ್ದೆವೆ ನಾವು ಹಳೆಯ ಪದ್ದತಿಗಳನ್ನು

ಬಿಸುವ ಕಲ್ಲಿನ ರಬಸವನ್ನು
ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು
ರಂಟೆ ಕುಂಟೆಗಳ ನಂಟನ್ನು
ಮರೆತ್ತಿದ್ದೆವೇ ನಾವು ಮರೆತ್ತಿದ್ದೆವೆ

ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು
ಗರತಿಯರ ಬಾಯಲ್ಲಿ ಬರುವ ಜನಪದ ಹಾಡುಗಳನ್ನು
ಡೊಳ್ಳು ಕುಣಿತ ವೀರಗಾಸೆಯಂತಹ ಕಲೆಗಳನ್ನು
ಮರೆತ್ತಿದ್ದೆವೆನಾವು ಮರೆತ್ತಿದ್ದೆವೆ

ಗೌರಿ ಹಬ್ಬದಲ್ಲಿ ರೇಷ್ಮೆಯ ಸೀರೆ ಉಟ್ಟು ಬರುವ ಚಲುವೆಯರನ್ನು
ಅದನ್ನು ನೋಡಲು ಕುಳಿತ ಹುಡುಗರ ಗುಂಪನ್ನು ಕಣ್ಸನ್ನೆ ಮೂಲಕ ಉಂಟಾಗುವ ತುಂಟ ಪ್ರೀತಿಯನ್ನು
ಮಾತು ಕತೆಗಳೊಲಿಲ್ಲದೆ ಅನುಭವಿಸುವ ವಿರಹ ವೇದನೆಯನ್ನು
ಮರೆತ್ತಿದ್ದೆವೆ ನಾವು ಮರೆತ್ತಿದ್ದೆವೆ.

ಅಜ್ಜ ಅಜ್ಜಿಯರು ಕತೆ ಹೇಳುವ ರೀತಿಗಳು
ಹಬ್ಬ ಹರಿದಿನಗಳಲ್ಲಿನ ಆಟೋಟಗಳು
ದೊಡ್ಡಾಟ ಬಯಲಾಟ ನಾಟಕಗಳು ಅಳಿವಿನಂಚಿನಲ್ಲಿ ಇವೆ ಇವು ಅಳಿವಿನಂಚಿನಲ್ಲಿವೆ..


.ಅಮರ್ತ್ಯ ಮಾರುತಿ ಯಾದವ್..

- ಅಮರ್ತ್ಯ ಮಾರುತಿ

21 Dec 2017, 02:06 pm

ಒಳ್ಳೆಯವರು ನಮ್ಮ ಜನ

ತುಂಬ ಒಳ್ಳೆಯವರು ನಮ್ಮ ಜನ ತುಂಬ ಒಳ್ಳೆಯವರು

ತನ್ನ ಪಕ್ಕದಲ್ಲೆ ಸತ್ತರು ತಿರುಗಿ ನೋಡದವರು
ನಮಗೆ ಯಾಕೆ ಬೇಕೆಂದು ಸುಮ್ನೆ ಹೋರಡುವರು
ತಮಗೆ ಅದೇ ರೀತಿಯಾದಗ ಅಳುಕಿ ಅಂಜುವರು
ಒಳ್ಳೆಯವರು ಜನ ಒಳ್ಳೆಯವರು....

ಪುಕಸಟ್ಟೆ ದುಡ್ಡಿಗೆ ಬಾಯ್ ಬೀಟ್ಟು ಕೂರುವರು
ಆದರೂ ದಾನ ಮಾಡದ ಮನಸ್ಸೇ ಇಲ್ಲದವರು
ಕಾಗೆಗೂ ಕೂಡ ಅನ್ನ ಹಾಕದವರು..
ಸಿಕ್ಕಪಟ್ಟೆ ಅನ್ನವನ್ನು ಎಲ್ಲಿಯಂದರಲ್ಲಿ ಚೆಲ್ಲುವರು
ಒಳ್ಳೆಯವರು ಜನ ತುಂಬ ಒಳ್ಳೆಯವರು..

ಕಾಲಕ್ಕೆ ತಕ್ಕಂತೆ ವೇಷವನು ಹಾಕುವರು
ಬಾಯ್ತುಂಬ ಸುಂದರ ಮಾತುಗಳನ್ನು ಹಾಡುವರು
ಏನು ಅರಿಯದ ಜನರ ತಲೆಯನ್ನು ಕೇಡಿಸುವರು
ತಮ್ಮ ಕೆಲಸ ವಾಗುವ ವರೆಗೂ ಪಾಪ ಪುಣ್ಯ ಅನ್ನುವರು
ಒಳ್ಳೆಯವರು ಜನ ತುಂಬ ಒಳ್ಳೆಯವರು




.ಅಮರ್ತ್ಯ ಮಾರುತಿಯಾದವ್..

- ಅಮರ್ತ್ಯ ಮಾರುತಿ

21 Dec 2017, 01:41 pm

""ಚಿಲಿ ಪಿಲಿ""

"ಸುಂದರವಾದ
ಬೆಳ್ಳಿ ಮೋಡಗಳ,ಬೆಟ್ಟ ಗುಡ್ಡಗಳ ನಡುವೆ
ಕಾವೇರಿ ತಾಯಿಯ ಮಡಿಲಲ್ಲಿ
ಸಿರಿ ಉಡುಗೆ ತೊಟ್ಟು ನಿಂತ್ತಿದೆ
ನನ್ನ ಜ್ಞಾನ ದೇಗುಲ,

"ಮುಂಜಾನೆಯ ಮಂಜಲಿ
ತಂಗಾಳಿಯ ಸುಳಿಯಲ್ಲಿ
ಸೂರ್ಯನ ಹೊಂಗಿರಣದಂತೆ
ಪ್ರಜ್ವಲಿಸುತ್ತಿದೆ ಜ್ಞಾನ ಮಂಟಪ
ನನ್ನ ಜ್ಞಾನ ದೇಗುಲ,

"ಒಂದಾನೊಂದು ಕಾಲದಲ್ಲಿ
ರೆಕ್ಕೆ ತೆರೆದು ಚಿಲಿ ಪಿಲಿ ಎಂದು
ಸ್ವಚಂದವಾಗಿ ಹಾರಡಿದೆವು
ಮಮತೆಯ ಮಂದಿರ ಜ್ಞಾನ ಬಂಡಾರದಿ,

***ರಾಜು ಗುಡಿ***ಹಾಸನ

- ರಾಜು ಹಾಸನ

21 Dec 2017, 12:16 pm

ಅಪ್ಪನೆನಿಸಿಕೊಂಡ ಆ ಕ್ಷಣ

ಹೇಗೆಂದು ವರ್ಣಿಸಲಿ ಅಪ್ಪನೆನಿಸಿಕೊಂಡ ಆ ಕ್ಷಣವನು
ಬಹು ಕಾಲದ ಆಸೆಯ ನೆರವೇರಿಸಿ
ಅಂದು ನೀ ಕೊಟ್ಟೆ ಸಹಿ ಸುದ್ಧಿಯ
ಜೇನಿಗಿಂತಲು ಮಿಗಿಲಾದ ಮನಸ್ಸಿಗೆ ಹಿತವಾದ ಖುಶಿಯನು
ನಮ್ಮಿಬ್ಬರ ಪ್ರೀತಿ ತುಂಬಿರಲು ನಿನ್ನುಧರದಲಿ
ನಾನೆ ಧನ್ಯನು ಇಂದು
ಎದೆಬಡಿತ ಕೇಳಿದ ಆ ಕ್ಷಣ ಮೈಯ್ಯಲೇನೋ ರೋಮಾಂಚನ
ಕಂಡು ಮಗುವಿನ ಚಲನವಲನ ತುಂಬಿತ್ತು ಎನ್ನ ಮನ
ಮರೆಯಲಾರೆ ಎಂದೆಂದಿಗೂ ಈ ನೀನಿತ್ತ ಉಡುಗರೆಯ
ಧನ್ಯವಾದಗಳು ನಿನಗೆ ಓ ನನ್ನ ನಲ್ಲೆ

- ರಘು

21 Dec 2017, 11:55 am

ಮುಂಜಾನೆ ಮಂಜಿನಲಿ

ಕನಸಿನಲಿ ಕಂಡ ನಿನ್ನ ಮೊಗವ
ಕಂಡೆ ನಾ ಮುಂಜಾನೆಯ ಮಂಜಿನಲಿ
ಏನೆಂದು ಹೇಳುವುದು ಚೆಲುವೆ
ನಕ್ಷತ್ರದ ಹೊಳಪು ಮೀರುವಂದದಿ
ಬಾನ ಬೆಳದಿಂಗಳ ಚಂದಿರನ ನಾಚುವಂದದಿ

ರಘು

- ರಘು

21 Dec 2017, 11:14 am

ಪ್ರೀತಿಸುವೇ, ಪ್ರೀತಿಸುತಲೆ ಇರುವೆ

"ಪ್ರೀತಿಸುವೇ, ಪ್ರೀತಿಸುತಲೆ ಇರುವೆ
ನನ್ನ ಪ್ರೀತಿಯ ಬಂಗಾರಿ
ಈ ಜೀವಾ ಮಣ್ಣು ಸೇರಿದರು,

ನೀ ಕಣ್ಣೀರು ಹಾಕದಿರು
ನನ್ನ ಬಂಗಾರಿ ಉಸಿರು ನಿಂತ
ಈ ನಿನ್ನ ಗೆಳೆಯನ ದೇಹದ ಮುಂದೆ,

ನಾ ಬಯಸುವೆ ನಾ ಸತರೂ
ಜಾರದಿರಲಿ ಕಂಬನಿ ನನ್ನ ಬಂಗಾರಿ
ನಿನ್ನ ಕಣ್ಣುಗಳಲ್ಲಿ ಎಂದು
ನಗು ತುಂಬಿರಲಿ ಸದಾ
ನನ್ನ ಬಂಗಾರಿ ನಿನ್ನ ಮನದಲಿ ಎಂದೆಂದಿಗೂ.

***ರಾಜು ಗುಡಿ*** ಹಾಸನ

- ರಾಜು ಹಾಸನ

21 Dec 2017, 12:53 am

ನಾನರಿಯದಾದೆನವ್ವ!

ತುಂತುರು ಮಳೆಗೆ
ಚುಂಬಿಸಿ ಬೀಸೋ ಗಾಳಿಗೆ
ಅಂಜದೆ ಬಾಳುವ ಆಲದಮರ
ನಾನೆಂದುಕೊಂಡಿದ್ದೆನವ್ವ !

ಖಡ್ಗದಿ ತುಂಡಾಗದ
ಬಡ್ಗೀಲಿ ಬಗ್ಗದ
ಕುಗ್ಗದ- ಬಗ್ಗದ ಲೋಹ
ನಾನೆಂದುಕೊಂಡಿದ್ದೆನವ್ವ!

ನಿಲ್ಲದೆ ಓಡುವ ನದಿಯಂತೆ
ಝಲ್ಲೆನಿಸುವ ಸುನಾಮಿಯಂತೆ
ಎಲ್ಲವ ಎದುರಿಸುವ ಧೀರೆ
‌ನಾನೆಂದುಕೊಂಡಿದ್ದೆನವ್ವ!

ಸುಂದರವಾದ ಬಳ್ಳಿಯ
ಸುಂದರವಾದ ಕಸುಮವಾಗಿ
ಸುಂದರ ನಿನ್ನ ಪಾದಬೆಳಗೋ ಹೂ
ನಾನೆಂದುಕೊಂಡಿದ್ದೆನವ್ವ!

ಅಡಿಗಡಿಗೆ ಎಡವುತ
ಅಡಿಗಡಿಗೆ ಕಂಬನಿ ಕರೆಯುತ
ಪಡಿಸಣಿ ಗೇಮೆಯು
ನನದಾಯಿತಲ್ಲವ್ವ!

ಕಾಣದ ನಿ‌ನಗಾಗಿ
ಕಾಣದ ದಾರಿಯಲಿ
ಕಣ್ಮುಚ್ಚಿ ಕರೆಯೋ
ವೇದನೆ ನನದಾಯಿತಲ್ಲವ್ವ!

ಎಂತಿರುವೆ ನೀನಾನರಿಯೆ
ಎಂದಿಲ್ಲಿ ಬರುವೆ ತಿಳಿಯೆ
ಅಂದಿಗಾಗಿ ಬಾಳುವಾಸೆ
ನನ್ನಲ್ಲಿರುವುದವ್ವ!

ನಿನಗಂದು ಒಡ್ಡಿದೆ ಆಮಿಷವ
ನನಗಾಗಿ ನೀಡೆಂದು ವಿದ್ಯೆಯ
ಮೌನವಾಗಿ ಮರೆಯಾದೆ ಏಕೋ
ನಾನರಿಯದಾದೆನವ್ವ!

ಎಲ್ಲವ ಗೆಲ್ಲುವ ಉಮ್ಮಸ್ಸು
ಬಲ್ಲವರಾರು ನಿನ್ನ ವರ್ಚಸ್ಸು
ಅಲ್ಲಗಳೆವರು ನನ್ನವರೆಂದು
ನಾನರಿಯದಾದೆನವ್ವ!

ಸಂಸಾರದಲ್ಲಿ ಬಂದಿಯಾದೆನು
ಸಂಸಿದ್ಧಿಗಾಗಿ ಪರಿತಪಿಸಿದೆನು
ಸಂಪೂರ್ಣವಾಗಿ ಮಣ್ಣಾಗುವೆನೆಂದು
ನಾನರಿಯದಾದೆನವ್ವ!



ಶಾರಧ

- ಶಕುಂತಲಾ

20 Dec 2017, 10:32 pm

ನಾ ಮಾಡಿದ ತಪ್ಪಾದರು ಏನೋ ....ಗೆಳೆಯ

ನೀನಿಟ್ಟ ಪ್ರೀತಿಯ ಮಾತೆ ಸುಳಾದರೆ , ಈ ನನ್ನ ಮನಸ್ಸು ಉಳಿಯುವುದೇ....
ನೀ ಕೊಟ್ಟ ಆಶ್ವಾಸನೆ ಇಂದು ಎನ್ ಆಯಿತೋ ....

ನೀನೇ ಇಂದು ನನ್ನ ಬಿಟ್ಟು ಹೊರಡುವ ಕಡು ನಿರ್ಧಾರವೇಕೋ ಮಾಡಿದೆ ....

ನೀ ಬಿಟ್ಟು ಹೊರಡುವ ಮುನ್ನ ಒಂದು ಬಾರಿ ನನ್ನ ನೆನೆಯೊ .....

ನನ್ನ ಬಿಟ್ಟು ಹೋಗೋ ತಪ್ಪಾದರೂ ನಾ ಮಾಡಿದ್ದಾದರು ಏನೋ ????

ನಾ ನಿನ್ನ ಹಚ್ಚಿಕೊಂಡಿದ್ದೆ ತಪ್ಪಾ , ನಿನ್ನ ಪ್ರೀತಿ ಮಾಡಿದ್ದೆ ತಪ್ಪಾ ... ಇಂತ ಶಿಕ್ಷೆ ವಿಧಿಸುವ ಬದಲು .....ಮರಣ ಬರುವಂತಾದರೆ ಎಷ್ಟೋ ಚೆನ್ನ ಗೆಳೆಯ .......

ನಿನಗೆ ನಾ ಬೇಡವಾಗಿರುವಾಗ ನಾ ಬದುಕಿದ್ದು ಸತ್ತಂತೆ

- Acchu love

20 Dec 2017, 09:50 pm

ಅರಿತವರಾರು......

ಬಾನಗಲದ ಮನಸೋನೆ
ನಿನ್ನಾರು ಸೇರ ಬಲ್ಲರೊ
ನಿನ್ನರಿತ ಮನಸ ಹೊರತು....

ಗಿರಿ ಎತ್ತರದ ನಿಲುವೋನೆ
ನಿನ್ನಾರೂ ಅಪ್ಪಿಕೋಳ್ಳುವರೋ
ನಿನ್ನರಿತ ಜೀವದ ಹೋರತು.....

ಧರೆಅಗಲದ ದಣಿಯೋನೆ
ನಿನ್ನಾರು ಅಳಿಯ ಬಲ್ಲರೋ
ನಿನ್ನರಿತ ಉಸಿರ ಹೋರತು.....

ನಿನ್ನರಿಯುವರಾರೋ ನಿನ್ನೋಳಗಿರುವ
ನಿನ್ನ ಹೋರತು.....

- ರಾಗಸಿರಿ....

20 Dec 2017, 09:47 pm