ಬಾನಲಿ ಹಾರುವ ಬಣ್ಣದ ಹಕ್ಕಿಗಳೇ.......
ಕಾಯುತಿರುವಳು ನನ್ನವಳು ಈ ಘಳಿಗೆ!....
ರೆಕ್ಕೆ ಪಡೆಯುವ ಆಸೆ ನಿಮ್ಮಂತೆ ನನಗೆ................
ಹೋಗಲು ಹಾರಿಕೊಂಡು ನನ್ನವಳ ಬಳಿಗೆ!.....
ಅವಳ ಹೂ ನಗೆಗೆ......
ಸಾಗುತಿರುವೆ ನಾ ಮುಗಿಲ ಕಡೆಗೆ.
ನಮ್ಮ ಈ ಮೊದಲ ಭೇಟಿಗೆ.......
ಬರಲಿವೆ ಹಕ್ಕಿಗಳು ಮೂಕ ಸಾಕ್ಷಿಗೆ.
ಕಾಡಿಗೆಯೂ ನಾ ನಿನ್ನ ಕಣ್ಣ ರೆಪ್ಪೆಗೆ.....
ಕಂಬನಿ ಸುರಿಸಿ ತಳ್ಳದಿರು ದೂರದ ಅಂಟಿಗೆ.
ಮನದ ಪುಟದಿ ಬರೆದ ಈ ಕವಿತೆಗೆ......
ನಾಚಿ ತಲೆ ಬಾಗಿದೆ ಎಲ್ಲಾ ಹೂ ,ಬಗೆ.
ಈ ನಿನ್ನ ಮರು ಭೇಟಿಗೆ........
ಕಾದು ಕುಳಿತಿರುವೆ ಮನೆಯ ಬಾಗಿಲಿಗೆ.
ಸೋತ, ಸೋತು ಹೋಗಿಯೇ ಬಿಟ್ಟಿದ್ದ , ನೆಲಕ್ಕೆ ಮಂಡಿಯೂರಿದ್ದ
ಜೀವಕ್ಕಾಗಿ ಅವನೆದುರು ಬೇಡುವವರ ಕೊಂದು ವಿಕೃತ ಖುಷಿ ಪಟ್ಟವ
ಆಶ್ಯರ್ಯಕ್ಕೊ, ನನ್ನೆದರು ಸಾವಿಗೂ ಹೆದರದವನಿರುವನೆಂದೋ, ಇಲ್ಲ ಜೀವದ ಬೆಲೆ ತಿಳಿದೋ
ಬೆಂಕಿಯುಂಡೆ ಕಣ್ಣು, ಹೊತ್ತಿ ಉರಿಯುತ್ತಿದ್ದ ಮನಸು ತಣ್ಣಗಾಗಿತ್ತು
ಯಾರಿವನು ನನ್ನನ್ನೂ ಮುಟ್ಟದೆಯೂ ನೆಲಕ್ಕುರುಳಿಸಿದವನು
ಕೇವಲ ಪ್ರಶ್ನೆಗಳು, ಇನ್ನೂ ಉಳಿದದ್ದು ಅವರಿಬ್ಬರ ತಣ್ಣನೆಯ ಸಂವಾದ
ಅತ್ತ ಹಸನ್ಮುಖಿ ನಿತ್ಯ ಸುಖಿ ಖಾಲಿ ಕೈಯ ತುಂಬಿದ ಹೃದಯದ ಬುದ್ಧ ನಿಂತಿದ್ದ
ಬುಸುಗುಡುವ ಉಸಿರಿಗೆ ಸುಡುತ್ತಿದ್ದ ಗಾಳಿಯೂ ತಣ್ಣಗೆ ಬೀಸುತ್ತಿದೆ ಎನಿಸತೊಡಗಿತವನಿಗೆ ಈಗ
ಎಂದೂ ಯಾರ ಮಾತನು ಕೇಳದೆ ಸ್ತಬ್ಧವಾಗಿದ್ದ ಕಿವಿಗಳು
ಚೇತರಿಸಿ ನಿಮಿರಿ ನಿಂತಿದ್ದವು ಆಲೀಸಲು
ಶಾಂತಿಪ್ರಿಯ , ನಿತ್ಯ ಸರ್ವಜನ ಪ್ರೇಮಿ ಮಾತಾನಾಡುತ್ತಲಿದ್ದ
ಇವ ಕೇಳುತಲೆ ಇದ್ದ, ಅವನ ಮನಸಿಗಂಟಿದ ದುಷ್ಟತನದ ಪೊರೆಯ ಕಳುಚುತ್ತ ಇದ್ದ
ಮನಸು ಹಗುರವಾದಂತೆನಿಸುತ್ತಿದೆ, ಲೋಕದೊಳಗೆಲ್ಲೊ ದೊರೆಯದ ಹರುಷ ಆವರಿಸಿದಂತಾಗಿ ಪುಳಕಿನಾಗುತ್ತಿದ್ದ
ಬುದ್ಧನೇಳಿದ ಮಾತುಗಳಿಗೆಲ್ಲ ಒಪ್ಪಿ ಶಾಂತಿ ಬಯಸಿ ನಿಂತಿದ್ದ
ಜೀವಗಳ ಕೊಂದು ನಗುತ್ತಿದ್ದವ, ತನ್ನೊಳಗಿನ ರಾಕ್ಷಸನ ಕೊಂದು ನಗುತ್ತಿದ್ದ
ಪ್ರೀತಿ,ಪ್ರೇಮ ಕರುಣೆಗಳ ಮನಸೊಳಗೆ ತುಂಬಿಕೊಂಡಿಯೇ ಬಿಟ್ಟಿದ್ದ
ಜಗವೇ ನಿಬ್ಬೆರಗಾಗುವ ಹಾಗೆ ಕೆಂಡದುಂಡೆಯ ಕಣ್ಣಲ್ಲಿ ನಗುವ ತುಂಬಿ ಸುಖಿಯಾಗಿ ನಿಂತೇ ಬಿಟ್ಟಿದ್ದ ಅಂಗುಲೀಮಾಲ.
ನಮ್ಮೂರ ವನ ಅದೆಲ್ಲಾ ಈಗ ಬನ ಬನ
ಕಾರಣ ಮಳೆರಾಯನ ಕಾಲಹರಣ
ಜನರ ಕಷ್ಟಗಳ ಕದನ
ಮುಟ್ಟುತಿದೆ ಗಗನ
ಮಳೆರಾಯ ಈ ನಿನ್ನ ತುಂಟತನ
ಹಾಳು ಮಾಡುತ್ತಿದೆ ಭಾರತಾಂಬೆಯ ಸೌಂದರ್ಯತನ
ಬಂದರೆ ನೀನು ಸಂತಸ ರೈತರ ಮನ
ಬರದಿದ್ದರೆ ಆಗುವುದು ನಿನ್ನೇ ನಂಬಿ ಕುಳಿತವರ ಮರಣ
ಈ ನಮ್ಮ ಕೂಗು ಮುಟ್ಟಲಿ ನಿನ್ನ ಮನ
ಮುಟ್ಟಿ ಹಸಿರಾಗಲಿ ನಮ್ಮ ವನ
ಕುಣಿದು ನಲಿದಾಡಲಿ ನಮ್ಮ ಜನ.