ಬದುಕು ರೂಪಿಸಿದವರಿವರು ಬಾಳಲಿ...
ಎರಡೇ ಪದಗಳಲಿ ನಾ ಹೇಗೆ ಹೇಳಲಿ??
ಗಿಡ್ಡನೆಯ-ದಪ್ಪನೆಯ ದೇಹದ ಆಕಾರ..
ಹೆಗಲಮೇಲೊಂದು ಸರಳತೆಯ ಬ್ಯಾಗಿನ ವಿಕಾರ..
ಗಣಿತ-ಇಂಗ್ಲಿಷ್ ಬೋಧನೆಯು ವೃತ್ತಿಯ ಸತ್ಕಾರ..
ಮಕ್ಕಳ ಮೇಲಿನ ಮಮತೆ-ಕಾಳಜಿಯ ಸಾಕಾರ...
ನನ್ನಂಥವರಿಗೆ ಅವರ ಕೊಡುಗೆ ಬಹುದಾಕಾರ...
ಉದ್ದನೆಯ ಸಾಧಾರಣ ದೇಹದ ಕೋನ..
ಶಾಂತ ಸ್ವಭಾವದ ಅವರ ದೃಷ್ಟಿಯೇ ಒಂದು ಯಾನ..
ಅವರನ್ನೇ ಎಳೆಯದ ಅವರ ಗಾಡಿಯ ಹೆಸರು ಲೋನಾ..
ಶಿಕ್ಷಕ ವೃತ್ತಿಗೆ ಅವರ ಹೆಸರೇ ಒಂದು ದೊಡ್ಡ ಮಾನ...
ನಮ್ಮಂತವರಿಗೆ ಅವರು ಸಿಕಿದ್ದೆ ನಮಗೊಂದು ಬಹುಮಾನ..
ಸಣ್ಣನೆಯ-ಕಪ್ಪನೆಯ ದೇಹದ ರೂಪ...
ಸಂಗೀತ ಆರಾದನೆಯೇ ಅವರ ಪ್ರವೃತ್ತಿಯ ಸ್ವರೂಪ..
ಡಸ್ಟರ್ನಲ್ಲಿ ಕೈ ಬೆರಳಿಗೆ ಬಡಿಯವ,ಹಾ ಹಾ ಅವರ ಕೋಪ..
ನಿಮ್ಮಿಂದಲೇ ಸಂದಿ-ಸಮಾಸ ಇವತ್ತಿಗೂ ಕಣಸಿನಲ್ಲಿಯೂ ಆಲಾಪ.
ರಾಜ್ಯೋತ್ಸವದ ಕಳಸ ಬಂದಿದ್ದೆ ನಮಗೊಂದು ಅಪರೂಪ..
ನೆನಪುಗಳ ನೋವು ಮನದಿ ಮನೆಮಾಡಿರಲು,
ಹೇಳಲಾಗದೆ ಮನ ಮೌನವತಾಳಿರಲು,
ನಿನ್ನ ನೋಡವ ಆಸೆಯು ಮನತುಂಬಿರಲು,
ಗೆಳತಿ
ಎಲ್ಲಿ ಹುಡುಕಲಿ ನಾ ಈಗ ನಿನ್ನ ನೆಲೆ
ಕಾಯುತಿರುವೆ ಸದಾ ಆ ನಿನ್ನ ನೆನಪಲೆ.
ತಿರುಗಿ ಬರುವೆನೆಂದ ನನ್ನವಳು
ಬರುವ ಹೊತ್ತಾದರೂ ಬಾರದಾಗ,
ಬರುವ ದಾರಿಯ ಹಿಡಿದು ಹೊರಟೆ ಬರುವಳೆಂದು,
ಕಾಲ ಕಳೆದರೂ ಕಾಲು ಸವೆದರೂ,
ದಿನರಾತ್ರಿ ಸದಾ ಒಡುತಲಿರುವೆ ನನಸಲ್ಲದ ಆ ಕನಸುಗಳ ದಾರಿಯಲಿ...
ಮುಖವಾಡ ಬೇಕಾಗಿದೆ ನನಗೊಂದು,
ಚೆಂದನೆಯ ಆಕರ್ಷಕ ಮುಖವಾಡ,
ನೋಡಿದವರು ಮತ್ತೊಮ್ಮೆ ಮಗದೊಮ್ಮೆ
ನೋಡುತ್ತಲೇ ಇರಬೇಕು,
ಇವ ನಯ ನಾಜೂಕಿನವನೆಂದು ನಂಬಬೇಕು !
ನಯ ವಂಚನೆಗೆ ಹೇಳಿ ಮಾಡಿಸಿದಂತಿರಬೇಕು,
ರಾತ್ರಿ ಕಂಡ ಬಾವಿಗೆ ಹಗಲು ಬಿಳುವಂತಿರಬೇಕು.
ಬೇಕೇ ಬೇಕು ಮುಖವಾಡ,
ನಮ್ಮ ನೋವ ಮರೆಸಿ
ಹೊರಗೆ ಮುಗುಳ್ನಗೆ ಚೆಲ್ಲಲು
ದುಮ್ಮಿಕಿದ ಎರಡು ಹನಿ ಕಣ್ಣೀರು
ಪನ್ನೀರೆಂದು ಹೇಳಿ ನಂಬಿಸಲು !
ಆತ್ಮ ಬಂಧುಗಳು ಕೊಡುವ
ಕೊಡಲಿ ಏಟನು ತಾಳಿ,
ನೋವು ನಲಿವುಗಳನ್ನು ಮೀರಿ
ತನ್ಮಯತೆಯಲಿ ಬಾಳಿ,
ಜತನದಲಿ ಬಾಳ ಪಯಣವನ್ನು ಬೆಳೆಸಲು..
ಬೇಕೇ ಬೇಕಾಗಿದೆ ನನಗೊಂದು
ಸುಂದರ ಮುಖವಾಡ !
ಸಾಕಾಗಿದೆ ಈ ಬಣ್ಣ ಗೆಟ್ಟು ಸುಕ್ಕು ಬಿದ್ದ
ಆತ್ಮಾಭಿಮಾನದ ಕೆಟ್ಟ ಮುಖ.