Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನ ನೆನಪು..... .. ರವಿ....

ನಿನ್ನ ನೆನಪು.....
ಕಣ್ಣ ಹನಿಗಳು ಮರೆತರು ನಿನ್ನ
ಈ ಹೃದಯವು ಮರೆಯಲಾಗದು
ಕಣ್ಣ ಹನಿಗೇನು ಗೊತ್ತು
ಹೃದಯಕ್ಕೆ ಆದ ನೋವು
ನಾನತ್ತರೂ , ನಕ್ಕರೂ
ಕಣ್ಣೀರಿನ ಬಣ್ಣ ಬದಲಾಗದು
ನೀ ಜೊತೆಯಲ್ಲಿದ್ದರೂ ಇಲ್ಲದಿದ್ದರೂ
ನಿನ್ನ ನೆನಪನ್ನೆಂದು ಅಳಿಸಲಾಗದು.....

- Ravi Rekha

12 Nov 2017, 09:28 pm

ವಿದಾಯ

ವಿದಾಯ ಹೇಳುತ್ತಿದೆನೆ
ನಕ್ಕು ನಲಿದಾಡಿದ ನಿನಗೆ,
ಜಾರಿಹೋಗುವ ಇಂದೆನ್ನುವ ಅರೆಕನಸಿಗೆ,
ನಾಳೆಯೆನ್ನುವ ಮರೀಚಿಕೆಗೆ ,
ನಿನ್ನೆಲ್ಲ ನೆನಪುಗಳಿಗೆ ,
ನಿನ್ನೆಲ್ಲ ಕನಸುಗಳಿಗೆ,
ನಿನ್ನೆಲ್ಲ ಆಸೆಗಳಿಗೆ ,
ವಿದಾಯ ಹೇಳುತ್ತಿದೆನೆ .....

- Shilpa

12 Nov 2017, 08:08 pm

ನಿನ್ನ ನೆನಪು....

ನಿನ್ನ ನೆನಪು
ಹಳೆಯ ಪುಸ್ತಕದಲಿ
ಅಡಗಿಸಿಟ್ಟ ಗುಲಾಬಿಯ ಹಾಗೆ
ವರುಷ ನೂರು ಕಳೆದರೂ
ರಂಗು , ಘಮ, ಸ್ಪರ್ಶ
ನವನವೀನ !!!!!!
ನಿನ್ನ ನೆನಪು

ನಿನ್ನ ನೆನಪು
ಏಕಾಂತದ ತನ್ಮಯತೆಯ ಹಾಗೆ
ಆತ್ಮಕೆ ಅಭ್ಯಂಜನ
ಮನಸಿಗೆ ಮಹಾಭಿಷೇಕ!!!!
ನಿನ್ನ ನೆನಪು

ನಿನ್ನ ನೆನಪು
ಮಡಿದಷ್ಟು ದ್ವಿಗುಣಗೊಂಡು
ಜನ್ಮ ತಳೆವ
ರಕ್ತಬೀಜಾಸುರನ ಹಾಗೆ
ಅಜರಾಮರ !!!!
ನಿನ್ನ ನೆನಪು

ನಿನ್ನ ನೆನಪು
ತಿಳಿ ಸೋನೆಗೆ ಸಾಕ್ಷಿಯಾಗುವ
ಇಳಿ ಸಂಜೆಗೆ ದನಿಯಾಗುವ
ಇಂಪು ಗಝಲಿನ ಹಾಗೆ
ದಣಿದ ಮನಕೆ
ಇನಿದಾದ ಜೋಗುಳ!!!!
ನಿನ್ನ ನೆನಪು

- Shilpa

12 Nov 2017, 08:08 pm

ಹೇ ಗೆಳತಿ ನೀ ಎಲ್ಲಿರುವೆ.....

ಹೇ ಗೆಳತಿ ನೀ ಎಲ್ಲಿರುವೆ
ಕಾದಿರುವುದು ನನ್ನ ಮನ
ನಿನ್ನ ಆಗಮನಕ್ಕಾಗಿ
ನೀನಿಲ್ಲದ ಈ ಸಮಯ
ಕೂತಿದೆ ಮಂಕಾಗಿ.....

ಒಲವಿನ ಅಕ್ಕರೆಯ ಜೀವನಾಡಿಯೇ
ಮಮತೆಯ ಕಡಲಿನ ಮಂದಾರವೇ
ನನ್ನ ಸವಿನೆನಪುಗಳ ಆನಂದವೇ
ಸುಂದರ ಕನಸುಗಳ ಚಲುಮೆಯೇ
ಎಲ್ಲಾವು ನಿನಾಗಿರುವೆ ಓ ನನ್ನ ನಲ್ಲೆಯೇ

ನನ್ನ ವಿರಹದಲ್ಲೂ ನೀ ಸುಖವೆ ತುಂಬಿರುವೆ
ಸುರಿದು ಹೋಗದ ಹಾಗೆ ಬರುವೆಯಾ ಓ ಗೆಳತಿ
ನಿನಾಗಿರುವೆ ನನ್ನ ಜೀವನದ ಚೆೃತನ್ಯ
ಹೀಗೊ ಮುಡಿಪಿಟ್ಟಿರುವೆ ನಿನಗೆ ನನ್ನ ಹೃದಯವ
ಹೇ ಗೆಳತಿ ನೀ ಎಲ್ಲಿರುವೆ........!!!!!

- Shilpa

12 Nov 2017, 08:08 pm

ಚೆಲುವೆ.....

ಕನಸಿನ ಬಣ್ಣದ ಮೋಡಗಳ ನಡುವೆ
ಇರುವ ಪುಟ್ಟ ಹೃದಯಕೆ
ಪ್ರೀತಿಯ ಬಾಣ ಬಿಟ್ಟು ಗಾಯ
.......ಮಾಡಿಹಳು ಚೆಲುವೆ

ಬಣ್ಣವಿಲ್ಲದ ನನ್ನೆದೆಯ ಕಾಮನಬಿಲ್ಲಿಗೆ
ಅಂದ ಚಂದದ ಬಣ್ಣಗಳನ್ನ ಹಚ್ಚಿ ಪ್ರೀತಿಯ ಬಣ್ಣದ ಲೋಕದಲ್ಲಿ ಮುಳುಗುವಂತೆ
.........ಮಾಡಿಹಳು ಚೆಲುವೆ

ಬಣ್ಣದ ಚಿಟ್ಟೆಯಂತೆ ಹಾರಾಡಿಕೊಂಡಿದ್ದ
ನನ್ನ .... ಮನಸ್ಸಿನ ಚಿಟ್ಟೆಯ
ತನ್ನ ಪ್ರೀತಿಯಲ್ಲಿ ಬಲೆಯಲ್ಲಿ ಬಂಧಿಯಾಗಿ
........ ಮಾಡಿಹಳು ಚೆಲುವೆ

ಜುಳು ಜುಳು ಸಂಗೀತದ ನದಿಯಂತೆ
ಹರಿವ ನನ್ನ ಬದುಕಿನ ಓಟಕ್ಕೆ......
ತಡೆಹೊಡ್ಡಿಹಳು ಅವಳ ಪ್ರೀತಿಯ
......... ಹಣೆಕಟ್ಟಿನಿಂದ ಚೆಲುವೆ

ಜೀವನ ಪಯಣದಲ್ಲಿ ಒಂಟಿಯಾಗಿ
ಸಾಗುತ್ತಿದ್ದ ನನ್ನ ಪ್ರಯಾಣಕ್ಕೆ....
ಜೋಡಿ ಹಕ್ಕಿ ಆಗುವ ಸೂಚನೆ
........ ನೀಡಿಹಳು ಚೆಲುವೆ



..... ಮಂಜು

- ಮಂಜು

11 Nov 2017, 09:57 pm

ಕ್ಷಣಿಕ

ಕ್ಷಣ ಕ್ಷಣಕೂ ಬದಲಾಗೋ ಜಗದಲ್ಲಿ
ಕ್ಷಣ ಕ್ಷಣಿಕವೆಂದೆನಿಸದ ಜೀವಿ
ಕ್ಷಣ ಕ್ಷಣವು ತಾನು ತನ್ನದೆನ್ನುತ್ತಾ
ಕ್ಷಣದ ಅರಿವಿಲ್ಲದೇ ಕ್ಷೀಣಿಸುತ್ತಿರಲು
ಕ್ಷಣಕಾಗಿ ಎಲ್ಲವನೂ ತೊರೆದು
ಕ್ಷಣಕ್ಕಾಗೇ ಎಲ್ಲವನೂ ಮರೆತು
ಕ್ಷಣ ಕ್ಷಣವೂ ಬದಲಾಗುತ್ತಾ
ಕ್ಷಣದಲ್ಲೇ ಪರಿಸರವನ್ನೂ ಬದಲಾಯಿಸಿ
ಕ್ಷಣದ ಕ್ಷಣವನ್ನೂ ಹಾಳುಮಾಡುವ
ಕ್ಷಣ ಮಾತ್ರ ಎಂಬುದನರಿಯದ
ಕ್ಷಣ ಅಸುರರಂತೆ ವರ್ತಿಸುವವನೇ ಕ್ಷಣಿಕ(ಮಾನವ)

- ನಾಗರಾಜ್

11 Nov 2017, 07:49 pm

ಅಮ್ಮ......

ಅಮ್ಮ ನೀನೆನ್ನ ದೈವವೂ
ನೀನೆ ನನ್ನ ಜೀವವು
ನವಮಾಸ ಹೊತ್ತೆ ನೀ ನನ್ನನೂ
ಪ್ರತಿಪೂಜೆ ಮಾಡಿದ್ದು ಹೆರಲು ನನ್ನನೂ

ಆ ಗುಡಿಯ ದೇವರ ಮೇಲೆ
ನಿನಗೆ ಭಕ್ತಿಯೂ
ನನ್ನ ಹೃದಯ ದೇವತೆ ನೀ
ನನಗೆ ನೀನೆ ಸರ್ವವೂ

ನೀನು ಹಸಿದು ಬೆಂದರು
ನಮ್ಮ ಹಸಿವ ನೀಗುವೇ
ನಿನ್ನ ಮನವು ನೊಂದರು
ನಮ್ಮ ಮನವ ನಲಿಸುವೆ

ನಿನ್ನ ಆಸೆಯಲ್ಲ ತಾಯಿ
ಸುಟ್ಟು ಬೂದಿಯಾದರು
ನಮ್ಮ ಆಸೆಯನೆಲ್ಲ ನೀ
ನನಸು ಮಾಡಿ ತಣಿಸುವೇ

ಅಮ್ಮ ನಿನ್ನ ಪ್ರತಿಮಾತು
ವೇಧವೇ ನನಗೆ
ತಾಯಿಗೆ ಕಂದನ ಪ್ರತಿಮಾತು
ಸ್ವಾತಿ ಮುತ್ತಿನಹಾಗೆ

ನಾನು ಮಲಗಲೆಂದು ತಾಯಿ
ಲಾಲಿ ಹಾಡುವೆ
ನಾನು ಅತ್ತು ಕುಳಿತಾಗ
ಕಣ್ಣೀರ ಹೊರಸಿ ನಲಿಸುವೇ

ತಪ್ಪು ಮಾಡಿದಾಗ ಹೊಡೆದು
ಬುದ್ದಿ ಕಲಿಸುವೆ
ತಾಯಿ ನಿನ್ನ ನಿದ್ರೆಯಲ್ಲಿ
ನಮ್ಮ ಚಿಂತೆಮಾಡುವೆ

ತಾಯಿ ನಿನ್ನ ಪ್ರೀತಿಗೆ
ಸರಿಸಾಟಿ ಇಲ್ಲವೇ
ಇಂತಹ ಪ್ರೀತಿಯ ಪಡೆದವನು
ನಾನೇ ಭಾಗ್ಯವಂತನು.........ಸಹೃದಯಿ

- ಡಿ.ಸಿ.ಎನ್@100%

11 Nov 2017, 06:17 pm

ಪೂರ್ಣಚಂದ್ರ ತೇಜಸ್ವೀ........

ಪುಟ್ಟಪ್ಪನ ತೋಟದ ಪುಷ್ಪವೇ
ತೇಜಸ್ವೀ ನಾಮದಿಂದ ಹರಳಿದವನೆ
ಚಿಂತನೆಯ ಸಾಗರದಲಿ ಮಿಂದು
ಮುತ್ತುಗಳ ಆರಿಸಿ ಕೊಟ್ಟವನೆ

ಸೃಷ್ಠಿಗೆ ಪ್ರಕೃತಿಯ ಸಿಹಿ ಉಣಿಸಿದವನೆ
ದೇಶದ ಬೆನ್ನೆಲುಬಿಗೆ, ಬರಹಗಳ ಬೆಳಕಿತ್ತವನೆ
ಸೂರ್ಯನ ಪ್ರತಿಭೆ ಪ್ರಭೆ ಮುಂದೆ ನಿಂದು
ಲೋಖದ ಕಣ್ಗೇ ಸ್ವ-ಅರಿವ ಬೀರಿದವನೆ

ಅನಂತ ಅನಂತ ಧಿಗಂತ
ಅಂಗಳದಲಿ ಮರೆಮಾಚಲಾಗದ
ಪೂರ್ಣಚಂದ್ರ ತೇಜಸ್ವೀ ನೀನು
ನಿನ್ನ ತೇಜಸ್ಸಿನ ಕಿರಣಗಳ ಸಾಲಲ್ಲಿ
ಅಂತ್ಯವಿಲ್ಲದ ಚಿಂತನೆಗಳ ಸಾಲು
ಜನ,ಮನಗಳ ಸೋರೆಗೊಳ್ಳುತ್ತಿವೆ.....ಸಹೃದಯಿ

- ಡಿ.ಸಿ.ಎನ್@100%

11 Nov 2017, 06:02 pm

ಒಲವರಳಿದ ಸಮಯ

ಕರಗದ ಮೇಣ, ನಿನ್ನೊಲವಿನ ಧ್ಯಾನ
ಅನುರಾಗದ ಮಿಲನ, ಮುಗಿಯದ ಕವನ
ಪ್ರಾಣವಲ್ಲಭೆ ನನ್ನಾ ಪ್ರತಿಭೆ
ಕನಸಿನ ನೀರೆ, ಜೀವದ ಉಸಿರೆ;

ಮನಸಿನ ಭಾವನೆಯ ಸಂತಸವೇ
ಪ್ರೇಮದ ಝರಿಯ ತಿಳಿನೀರೇ
ಸ್ವಪ್ನದ ಸಾವಿರ ಬಯಕೆಗಳೇ
ಬರೆಯುವ ಪದಗಳ ಸಾಲುಗಳೇ;

ನುಡಿಯುವ ಮಾತಿನ ದಾಟಿಗಳೇ
ಹಾಡುವ ಕವಿತೆಯ ರಾಗಗಳೇ
ಹರೆಯ ಪ್ರೇಮದ ಆಗರವೇ
ಜ್ಞಾನದ ಬೆಳಕಿನ ಸಾಗರವೇ;

ವಿಶ್ರಾಂತ ಬದುಕಿನ ಕುಸುಮಾಕರವೇ
ಹೃದಯದ ಸದ್ದಿನ ಸಂಭ್ರಮವೇ
ಕಣ್ಣೋಟದಿ ನುಸುಳೋ ಸಂತಸವೇ
ಹೆಸರನು ಕರೆವ ಉಸಿರ ಸುಮಬಾಣವೇ;

ಪ್ರಾಣವಲ್ಲಭೆ ನನ್ನಾ ಪ್ರತಿಭೆ
ಕನಸಿನ ನೀರೆ ಜೀವದ ಉಸಿರೆ.

ಏಕಾಂತಪ್ರಿಯ ಎಂ. ಬಿ

- ಏಕಾಂತಪ್ರಿಯ.

11 Nov 2017, 02:50 pm

ಸರಿಸಾಟಿಯಾವುದು ಈ ಪ್ರೀತಿಗೆ...

ಕಣ್ಣಹನಿಯೊಂದೂ ಜಾರದಂತೆ
ರೆಪ್ಪೆಯೊಳಗೆ ಜೋಪಾನಮಾಡಿ
ಕಂದನ ಮಲಗಿಸುವಳು ಹೆತ್ತತಾಯಿ!

ಜೋ ಜೋ ಲಾಲಿಯ ಹಾಡುತ್ತ
ನಿದ್ದೆ ಮಾಡುವ ಮಗುವ ನೋಡುತ್ತ
ಪ್ರೀತಿಯಲಿ ಗಲ್ಲವ ಸವರುವಳು ಮುದ್ದುತಾಯಿ!

ಉರಿಬಿಸಿಲಲಿ ತಾ ನೋವ ನುಂಗಿ
ಮಮತೆಯ ಮಡಿಲಿನಲ್ಲಿ
ಕೈತುತ್ತು ತಿನ್ನಿಸುವ ದೇವತೆಯ ರೂಪ, ತಾಯಿ

ಮುದ್ದು ಮಗುವ ಸದಾ ನಗಿಸಲು
ಒಮ್ಮೊಮ್ಮೆ ಪ್ರಾಣಿಯಂತೆ ನಟನೆಮಾಡುತ್ತ
ಮತ್ತೊಮ್ಮೆ ಹುಚ್ಚಿಯಂತೆ ನಗುವಳು ಮಹಾತಾಯಿ!

ಬೀಸುವ ಚಳಿಗಾಳಿಗೆ, ಮಿಂಚು-ಗುಡುಗಿಗೆ
ನಗುತ್ತಲೇ ಮಗುವ ಅಪ್ಪಿಹಿಡಿದು
ಭಯವ ಎದುರಿಸಲು ಕಲಿಸುವವಳು ತಾಯಿ!

ಎಲ್ಲಾ ಸುಖವ ಕಂದನಿಗೆ ಮೀಸಲಿರಿಸಿ
ಮೇಣದ ಬತ್ತಿಯಂತೆ ತಾ ಉರಿದು
ಬೆಳಕನ್ನು ಚೆಲ್ಲುವಳು ಮಹಾತಾಯಿ!

(ಜಗತ್ತಿನಲ್ಲಿರುವ ಎಲ್ಲಾ ತಾಯಿಂದರಿಗೆ ನನ್ನೀ ಕವನ ಅರ್ಪಣೆ)

- ಪ್ರಿಯಾಂಕ

11 Nov 2017, 02:39 pm