Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ನಡೆಯುವ ಹಂಸ್ಮ ನಡಿಗೆ

ನೀ ನಡೆಯುವ ಹಂಸ್ಮ ನಡಿಗೆ
ಹೂ ಹಾಸುವೆ ನಿನ್ನಯ ಅಡಿಗೆ
ನಾ ನಿನ್ನ ಪಡೆದ ಗಳಿಗೆ
ಕೈ ಮುಗಿಯುವೆ ಆ ದೇವರಿಗೆ

⚔ರಾಜಾಹುಲಿ ಯಲಗೂರ

- ರಾಜಾಹುಲಿಯಲಗೂರ

05 Nov 2017, 05:52 pm

ನಿವೇದನೆ..!

ಪ್ರೀತಿಯೆಂದರೆ..
ಕೇಳು ಗೆಳತಿ.....
ಹೆಜ್ಜೆ-ಹೆಜ್ಜೆಗೂ
ಕಾಲು ಕಟ್ಟುವ
ಬಂಧನವಲ್ಲ.!

ಪ್ರತಿ ಪಯಣಕೂ
ಉತ್ಸಾಹ ತುಂಬುವ
ಸ್ಫೂರ್ತಿಯ ಇಂಧನ.!
ಪ್ರತಿ ನಡಿಗೆಗೂ
ಉಲ್ಲಾಸ ನೀಡುವ
ಒಲವ ಸಿಂಚನ.!

ಕ್ಷಣ-ಕ್ಷಣವೂ
ಕನಸುಗಳಲ್ಲೇ..
ಕಳೆದು ಹೋಗುವ
ಸುಖಾನುಭವವಲ್ಲ.!

ಅನುಕ್ಷಣವೂ..
ಪುಳಕಗೊಳಿಸುತ
ಗುರಿ-ಗಮ್ಯದೆಡೆಗೆ
ನಡೆಸುವ ದಿವ್ಯ
ಮಧುರಾನುಭಾವ.!

ದೂರದಿಂದಲೇ
ಸದಾ ಮಿಡಿಯುವ,
ನೂರು ನುಡಿಯುವ
ಆಂತರ್ಯದೊಳಗಿನ
ಸುಪ್ತ ಗುಪ್ತಗಾಮಿನಿ.!
ನಿತ್ಯ ಚೈತನ್ಯದಾಯಿನಿ.!!

- ನಾಗರಾಜ್

05 Nov 2017, 02:47 pm

ಬಂದೆ ಬರುವೆ

ಕಾಡುಮೇಡು,ಬೆಟ್ಟಗುಡ್ಡಗಳ ನಡುವೆ
ನಾ‌ ದೇಶಕಾಯೊ ಕಾಯಕದ ಮೇಲಿರುವೆ
ಕ್ಷಣ ಕ್ಷಣವೂ ನಿನ್ನ ನೆನಪಲೆ ಬೇಯುವೆ
ನನ್ನೊಲವಿನ ಹೂವೆ ಪ್ರೀತಿಯ ಚೆಲುವೆ

ಅಪರೂಪಕೆ ಬರುವ ನಿನ್ನ ಪ್ರೇಮಪತ್ರ
ನೀನೆನೆ ಬಂದು ನಿಂತಂತೆ ಮಾಡುವುದು ಹತ್ರ
ನನ್ನೆತ್ತವರಿಗೆ ನೀನಲ್ಲ ಬರಿ ಸೊಸೆ ಮಾತ್ರ
ತುಂಬುಬಿಡು ಅವರಿಗೆ ಮಗ ಮಗಳ ಪಾತ್ರ

ಕರುಳಕುಡಿಳಿಗೆ ಅಪ್ಪ ಅಮ್ಮ ಎರಡು ನೀನೆ
ಅಲ್ಲಿ ಎಲ್ಲರೂ ಸೌಖ್ಯದಿಂದಿರುವರು ತಾನೆ?
ನಾನು ನೆನಪಾಗಿ ನಿಮಗೆಲ್ಲ ಕಾಡುವೆನೇನೆ?
ಕ್ಷಣಕ್ಷಣ ಕಾಯುವೆ ನಾ ಮುಂಬರುವ ರಜೆಗೇನೆ.

ನಿಂತಲ್ಲು, ಕುಳಿತಲ್ಲೂ ನನಗೆ ನಿಮದೇ ನೆನಪು
ನೆನಪು ಕದ್ದು ಬಿಡುವುದು ನನ್ನ ಕಣ್ಣ ಹೊಳಪು
ಜೀವ ಪಣವಿಟ್ಟು ಎನ್ನಮ್ಮನ ಕಾಯುತಿರುವೆನು
ಕಾಪಾಡೊ ದೈವವಿದೆ ಕಾಯುತಿರಿ ನಾ ಬಂದೆ‌ ಬರುವೆನು

- ಶ್ರೀಕಾವ್ಯ

05 Nov 2017, 02:39 pm

ಹೆಣ್ಣು

ವರ್ಣಿಸಲಾಗದ ಕಲ್ಪಿತ ಸುಂದರಿ ಹೆಣ್ಣು.
ಮನೆಯ ಕತ್ತಲಿನ ದೀಪ ಬೆಳಗಿಸುವ ಕಣ್ಣು..
ಮೊಳಕೆಯೋಡಸಿ,ನೀರುಣಿಸಿ ಜೀವ ಕೊಡುವ ಮಣ್ಣು...
ತಾಳ್ಮೆಯ-ಬಾಳ್ವೆಯ ಕಲಿಸುವ ಸಿಹಿಯಾದ ಹಣ್ಣು....
ಒಲುಮೆಯ-ಚಿಲುಮೆಯ ಪಲವತ್ತತೆಯ ಕೆಮ್ಮಣ್ಣು.....

ಒಂದೂರಲ್ಲಿ ಹುಟ್ಟಿ ಮತ್ತೊಂದುರಲಿ ಜೀವ ಕೊಡುವ ಭೋಗಿ.
ಸೌಂದರ್ಯ ಧಾರೆಯರೆದು ಸುಖವ ಕೊಡುವ ತ್ಯಾಗಿ..
ಜೀವನದ ಮೊದಲ ಪಾಠ ಕಲಿಸುವ ಗುರುವಿನಂತಿರುವ ಯೋಗಿ..
ಪುರುಷ -ಪ್ರಪಂಚಕೆ ತಗ್ಗಿ ಅಂಜಿ ನೆಡೆಯುವವಳು ಭಾಗಿ..
ನೋವು-ನಲಿವು ನುಂಗಿ ಜೀವ ಕೊಡುವಳು ಕೂಗಿ...

ಉಂಗುರ,ತಾಳೆ,ಬಳೆ ತೊಟ್ಟು ಪತಿಗೆ ಸತಿಯಾಗಿರುವವಳು..
ಸೀರೆ ,ಕುಬಸ ಉಟ್ಟು ದೇಹ ಮುಚ್ಚಿ ರತಿಯಾಗಿರುವವಳು..
ಕಠಿಣ ಪರಸ್ಥಿತಿಯಲ್ಲೂ ಧೈರ್ಯ ತುಂಬಿ ಜೊತೆಯಾಗಿರುವವಳು..
ಸ್ನೇಹ,ಪ್ರೀತಿ,ವಾತ್ಸಲ್ಯಕೆ ಸುಸಂಸ್ಕೃತ ಕಥೆಯಾಗಿರುವವಳು..
ಇಷ್ಟಿದ್ದರೂ ಒಮ್ಮೆಮ್ಮೆ ಕುತ್ತಿಗಿಗೆ ಹಗ್ಗ ತರುಲು ಮತಿಗೆಟ್ಟಿತಿರುವವಳು!

- ಆರ್. ಎಸ್ .ಸುಗ್ಗಿ

05 Nov 2017, 11:27 am

ಮುಖವಾಡ ಕಳಚಿ

ಮುಖವಾಡ ಕಳಚಿ ತೋರಿ ನೀಚ
ಜನರೇ ನಿಮ್ಮ ನೈಜ ರೂಪಗಳನ್ನು.
ಮಾತಿನಲ್ಲಿ ಸವಿಯ ತುಂಬಿ ಮನದಲ್ಲಿ ವಿಷವಣಿರಿಸಿ ಏತಕ್ಕೆ ನಟಿಸುವಿರಿ
ಒಳ್ಳೆಯವರೆಂದು ನಮ್ಮನ್ನು ನಂಬಿಸಿ.

ಹೆತ್ತ ತಾಯಿಯ ಎದೆಗೆ ಒದೆಯುವ
ದುಸ್ಸಾಮಾಜ ದುರ್ಮಗರು ನೀವು.
ಬಾಳಿ ಬದುಕಿ ಮನುಷ್ಯತ್ವ ಹೊತ್ತು ಒಂದು ದಿನವಾದರು ಭೂ ತಾಯಿ ನಿಮ್ಮ ಕುತಂತ್ರಗಳ ಭಾರ ಹೊತ್ತು ಕೊರಗುತ್ತಿರುವುದಕ್ಕಾದರೂ.

ಪದಗಳಿಗೆ ಸಿಗದ ನಿಮ್ಮ ಸ್ವಾರ್ಥಪೂರಿತ ವ್ಯಕ್ತಿತ್ವಕ್ಕಾಗಿ ಏನೆಂದು ಬರೆಯಲಿ ಎಷ್ಟೆಂದು ಉಗಿಯಲಿ ಇಂದು ನಾನು ನಿಮ್ಮ ಕಂಡು ನನ್ನ ಕಣ್ಣಲ್ಲಿ.

ಕೋಪವನ್ನು ಕಟ್ಟಿ ಹಾಕಿ ಮನಸನ್ನು ಗಟ್ಟಿ ಮಾಡಿ ನಾಚಿಕೆಯಿಲ್ಲದೆ ನೀವು ಮಾಡುವ ಮೋಸಗಳಿಗೆ
ಒಂದು ಗಳಿಗೆ ನಡು ರೋಡಿನಲ್ಲಿ ನಿಲ್ಲಿಸಿ ನಿಮ್ಮ ಮಾನ ಮರ್ಯಾದೆಯನ್ನು ಹಾರಾಜು ಹಾಕಲೆ ಇನ್ನ ಮುಂದೆ ಬರುವ ಮೊಸಗಾರರಿ ಮನದಟ್ಟಾಗುವಂತೆ ಇನ್ನೊಂದು ಕಲ್ಮಶವಿಲ್ಲದ ನಿಸ್ವಾರ್ಥ ಮನಸು ನನ್ನಂತೆ ದುಃಖಿಸದಂತೆ ಇಂದು

- ಚುಕ್ಕಿ

05 Nov 2017, 09:06 am

ಚುಟುಕು

ಇದ್ದವರು ಮೂರು ಪೈಕಿ
ಕದ್ದವರು ಯಾರು?
ಒಪ್ಪಿಕೊಂಡಿತು ಮರದ ಬೇರು
ಭೂಮಿಯೊಳಗಿನ ಸತ್ವವನ್ನು ಹಿರಿಬಿಟ್ಟೆ
ಹಣ್ಣು-ಹಂಪಲುಗಳನ್ನು ಮನುಜನಿಗೆ ಕೊಟ್ಟೆ...

- ಅಭಿ

05 Nov 2017, 01:11 am

ಚುಟುಕು

ಹಾದಿಯಲ್ಲಿ ಇರುವುದು ಹಾವು
ಕಚ್ಚಿದರೆ ಒಪ್ಪುವುದಿಲ್ಲ ನಮಗೆ ಸಾವು,
ಹಾಗೆಂದು ಹಾದಿ ಬಿಟ್ಟರೆ
ನಮ್ಮ ಜೀವನವೆ ಸಮಾಧಿ...

- ಅಭಿ

05 Nov 2017, 01:00 am

ಪ್ರೀತಿವೆಂಬುದು..

ಪ್ರೀತಿವೆಂಬುದು ಬೇಗ ಉತ್ತರಿಸದ ಪ್ರಶ್ನೆ !!
ಕನಸ್ಸುಗಳಿಗೆ ಮಿತಿಯಿಲ್ಲದ ರಸಪ್ರಶ್ನೆ !!!
ಸಿಟ್ಟು,ಕೋಪ,ತಾಪಗಳ ತವರೂರು!!!
ಬಳಲಾಟ,ತಾಳಲಾಟಗಳ ಕಣ್ಣೀರು!!
ಜಗಳ,ರಗಳೆಗಳ ತಿಳಿಯದ ಹಿನ್ನಡಿ!!
ಮಹಾನಪಂಡಿತರಿಗೂ ಅರ್ಥವಾಗದ ಮುನ್ನುಡಿ

- ಆರ್. ಎಸ್ .ಸುಗ್ಗಿ

04 Nov 2017, 11:57 pm

ಏನೇನೋ ಆಗಿದೆ

ಹೃದಯಕೆಕೋ ತಡಿಯಲಾಗದ ಗುದ್ದಾಟ!
ಕಳೆದುಕೊಳ್ಳುವನೆಂಬ ಅರಿಯದ ಹೊಯ್ದಟ!!
ಮನಸ್ಸಿಗೇಕೋ ಸಹಿಸಿಕೊಳ್ಳದ ಕಾದಾಟ!!!
ದೂರಹೋಗುವೇನೆಂಬ ತಿಳಿಯದ ಹೊಡೆದಾಟ!!!!
ಕನಸ್ಸಿಗೇಕೋ ನನಸಿನ ಚಿಂತೆಯ ನರಳಾಟ!!!!
ಇಷ್ಟವಾಗುವುದಿಲ್ಲವೆಂಬ ಭಯದ ಕಣ್ಣೀರಿನ ಕಚ್ಚಾಟ!!!!!!!

- ಆರ್. ಎಸ್ .ಸುಗ್ಗಿ

04 Nov 2017, 11:45 pm

ಹೃದಯ

ಹುಟ್ಟಿನಿಂದ ಸಾವಿನ ತನಕ ಜೊತೆಗಿರುವೆನೆಂದು ಭಾಷೆಯಿತ್ತ ಹೃದಯ ನಿನ್ನ ನೋಡಿದ ತಕ್ಷಣ ಜಾರಿ ಬಿತ್ತಲ್ಲೇ ಚೆಲುವೆ ನಿನ್ನ ನೆರಳಾಗಿ ಪ್ರತಿಕ್ಷಣವೂ ನಿನ್ನ ಕಾಯಲು.

ಅದರ ಬಡಿತದ ಪ್ರತಿಯೊಂದು ಹಂತದಲ್ಲೂ ನಿನ್ನ ಪ್ರೀತಿಗೆ ಹೆಸರಾಗಿ ನಿಲ್ಲಲು.

ನನ್ನೊಳವೆ ನಿನ್ನೊಳಗೆ ಮರೆಯಾಯ್ತು ನನ್ನ ಹೃದಯ ನನ್ನ ಆಗಸಕ್ಕೆ ತಾಗಿಸಿ ನಿನಗೆ ಬೆಳಕ ನೀಡುವ ನಕ್ಷತ್ರ ತಾನಾಗಳೆಂದು.

- ಚುಕ್ಕಿ

04 Nov 2017, 10:59 pm