ನನಗಾಗಿ ತನ್ನೆಲ್ಲಾ
ಸಿರಿಯನ್ನು ತ್ಯಜಿಸಿ ಬಂದವಳು
ಸುಖ ದುಃಖದಲ್ಲಿ ನೆರಳಾಗಿ
ಅಡಿಗಡಿಗೆ ಜೊತೆಯಾದವಳು
ಚೆಂದುಟಿಯ ಮೇಲೆ
ನಸುನಗೆಯ ಚೆಲ್ಲಿ ಸದಾ
ನನ್ನ ಬಾಳ ಗೆಲುವಾಗಿಸಿದವಳು
ಅವಳ ಅಂದದಾ ಹಣೆಗೆ
ನನ್ನೊಲುಮೆಯನ್ನೆ ಸಿಂಧೂರ
ಮಾಡಿಕೊಂಡವಳು
ಬಾಳಿನ ಏಳು ಬೀಳಿನ ದಾರಿಲಿ
ಸದಾ ಜೊತೆಯಾಗಿ ಬಂದವಳು
ನನ್ನ ಬಾಳ ಬೆಳದಿಂಗಳಾಗಿ
ನನ್ನವಳು..
ಮೂಗುತಿ :
ಬೀಗಬೇಡ ಹೆಣ್ಣೇ,
ನೀನೇ ಚೆಂದವೆಂದು,
ಕವಿ ಪಾಮರರು ಹೋಗಳುವರಲ್ಲೇ
ಬಲು ಅಂದವೆಂದು ನಿನ್ನ ಮೂಗು ಮೂತಿ.
ಮರೆತೇ ಬಿಡುವರು ಅಂದ ತಂದು ಕೊಟ್ಟ
ಪುಟ್ಟ ಮೂಗುತಿ.
ಹೆಣ್ಣು :
ಓ ಮೂಗುತಿಯೇ,
ನನ್ನಿಂದ ನೀನೊ, ನಿನ್ನಿಂದ ನಾನೊ,
ನನ್ನ ಮೂಗಿನ ಆಸನ ದೊರೆಯದೆ ಹೋದರೆ
ಅದೆಲ್ಲಿ ಬಿದ್ದಿರುತ್ತಿದ್ದೆಯೊ ನೀನು.
ನನ್ನ ಮೂಗ ಸುಮ್ಮನೇ ಏರಿದೆಯೇನು ?
ಚುಚ್ಚಿ ರಕ್ತ ಬರಿಸಿ ನೋವ ಕೊಡಲಿಲ್ಲವೇನು ?
ಹೂವಿನ ಜೊತೆಗೆ ನಾರೂ ದೇವರ ಮುಡಿಗೇರಿದಂತೆ,
ನನ್ನ ಅಂದದ ಮೂಗನೇರಿ ನೀ ಕುಂತೆ !
ಮೂಗುತಿ :
ಬೆಂಕಿಯಲಿಟ್ಟು ಸುಟ್ಟು, ಬಡಿದ ಸೊನಗಾರ,
ಚೆಂದುಳ್ಳಿ ಚೆಲುವೆಗೆ ಆಗದಿರಲೆಂದು ನಾ ಬಾರ.
ಕೊಟ್ಟ ಹೊಳಪ, ಹರಳ ಬಿಸುಪ,
ಹೊಳೆಯುವೆ ನಾನು,
ಸೆಳೆಯುವೆ ನಾನು,
ನನ್ನ ಹೊತ್ತು ತಿರುಗುವ
ನಿನ್ನದೇನು ಬಿಂಕ ಬಿನ್ನಾಣ ?
ನಾನಾದೆ ನಿನಗೆ ಸುಂದರ ಮೂಗಿನ ನತ್ತು,
ಆದರೇನು, ಬೇರೇನಿಲ್ಲ ನನಗೆ ಸವಲತ್ತು.
ಹೆಣ್ಣು :
ನನ್ನಿಂದ ನೀನು, ನಿನ್ನಿಂದ ನಾನು
ಇಬ್ಬರೂ ಪಡೆವೆವು ಬಿಗುಮಾನವನ್ನು,
ಹೆಚ್ಚಿತು ನನ್ನಂದ
ನಿನ್ನ ಇರುವಿಕೆಯಿಂದ,
ಮುನಿಸೇಕೆ ಮೂಗುತಿಯೇ ಈ ಇರುಳು,
ನಿನ್ನ ನಾ ದಿನವೂ ಒಪ್ಪವಾಗಿ
ಹೊತ್ತು ತಿರುಗುತಿರಲು.
ಕವಿತೆಯೊಂದು ಮೋಜಿನ ಆಟ
ಬರೆಯಲು ನಡೆಸಬೇಕು ಪದಗಳ ಹುಡುಕಾಟ.
ಹೇಗೆ ಹುಟ್ಟು ಹಾಕಲಿ ನಾ ಕವಿತೆಯ ಸಾಲೊಂದ
ಯೋಚಿಸಿ-ಯೋಚಿಸಿ ಸೋತು ಹೋದೆ ನಾ
ಹೋಗಿ ಹುಡುಕಲೇ ಪದಗಳ ಪುಸ್ತಕದಂಗಡಿಯಲಿ
ಅಲ್ಲಾದರು ಸಿಗಬಹುದೇನೋ ಒಂದು ಹೊಸ ಪದದ ನಿರೀಕ್ಷೆಯಲಿ.
ಮನಸಲಿ ಮೂಡುತಿವೆ ಹಳೆಯ ಪದಗಳ ನೆನಪು
ಆದರೆ ನನಗೆ ಹೊಸ ಪದಗಳ ಹುಡುಕುವ ಹುರುಪು.
ಯಾರಿಗೆ ಕೇಳಲಿ ನಾ ಹೊಸ ಪದಗಳ ಭಂಡಾರ
ಹೊಸ ಪದಗಳ ಸೃಷ್ಟಿಸದ ನನ್ನ ಬಗ್ಗೆಯೇ ಇರಲಿ ಧಿಕ್ಕಾರ.
ಹೇಗೆ ಬರೆಯಲಿ ನಾ ಹೊಸದೊಂದು ಕವನ
ನನ್ನ ಮನವು ಮಾಡುತ್ತಲೇ ಇದೆ ಹೊಸ ಪದಗಳ ಧ್ಯಾನ.
ಕೊನೆಗೂ ಸಿಕ್ಕಿತೊಂದು ಹೊಸ ಪದ
ಜೋಡಿಸುತಲಿ ಬರೆದೆ ಹೊಸ ಕವನ ಸಾಲೊಂ
ಯಾಕೋ ಗೊತ್ತಿಲ್ಲ ನನ್ನ ಲೇಖನಿಗೆ ಏರುತಿದೆ ಮದ
ಮರೆತು ಹೋಗುತಿದೆ ಬಂದ ಒಂದು ಹೊಸ ಪದ.
- ಉಮೇಶ್.
ಸುತ್ತಲೂ ಆವರಿಸಿದೆ
ಮಂಜಿನ ಇಬ್ಬನಿ
ನನ್ನ ಮನದಲ್ಲಿ ಅಡಗಿದೆ
ಕಳೆದುಹೋದ ನೆನಪುಗಳ ಕಹಾನಿ
ಮಳೆಹನಿಗಳಂತೆ
ಜಿನುಗುತ್ತಿದೆ ಕಣ್ಣೀರ ಹನಿ
ಸುಮ್ಮನಿದ್ದರೂ ಕಾಡುತ್ತಿರುವಳು
ನನ್ನ ಹೃದಯದ ಅರಗಿಣಿ!
ಮುದ್ದು ಮುದ್ದಾದ ಪದಗಳಿಷ್ಟು
ನಿನ್ನ ಒಲವಿನ ಸವಿ ನನ್ನಲ್ಲಿ ಕದ್ದು ಕದ್ದು
ಕಣ್ಣಲ್ಲಿ ಬಚ್ಚಿಟ್ಟಿವೆ ಒಂದೊಂದು ಹೊಸತಾದ
ಭಾವ ನಿನ್ನ ಹೊಳೆಯುವಂತ ನಯನಕೆ
ಬಂಗಾರದ ಬಣ್ಣ ಹಚ್ಚಿ ನಿನ್ನುಸಿರ ಬೆಚ್ಚನೆಯ
ಗಾಳಿಗೆ ಸೋಕಿ ಸುಗಂಧ ಭರಿತ ಪ್ರೀತಿ
ಶಾಯಿಯಲ್ಲಿ ಮಿಂದು ನನ್ನ ಮನಸ ಹಾಳೆಯ
ಮೇಲೆ ಕಚುಗುಳಿ ಹಿಡುತ ಗೀಚಾಲೆಂದು.