ಜೀವನ ಸಾಗರದಲ್ಲಿ...........
ಸಂಸಾರ ದೋಣಿಯೊಂದಿಗೆ ಸಾಗುತ್ತಿರಲು
ಕ್ಷಣ ಕ್ಷಣವೂ ಕಾಡಿವೆ ಭಯದ ಅಲೆಗಳು
ಹಿರಿಯ ಅನುಭವಿ ನಾವಿಕರಿರುವಾಗ
ಯುವಕರ ಬಲದ ಮೇಲೆ ನಂಬಿಕೆಯಿಟ್ಟು
ಉಟ್ಟುಗೋಲು ನಮಗೆ ಕೊಟ್ಟಿರುವಾಗ
ಅವರ ನಂಬಿಕೆಯ ಕಳೆಯುವುದುಂಟೆ
ಜೀವನ ಸಾಗರದಲ್ಲಿ ಅಡಚಣೆಗೆ ಸಿಲುಕಿರಲು
ಕಾಪಾಡುವ ಹೊಣೆ ನಮ್ಮದಿರುವಾಗ
ಮೈ ಮರೆಯುವುದುಂಟೆ
ಕಠಿಣ ಸವಾಲುಗಳನ್ನು ಎದುರಿಸುವ ಶಕ್ತಿ
ನಮಗಿರುವಾಗ............. ದಡ
ತಲುಪುವ ಗುರಿ ಬಿಡುವುದುಂಟೆ
ಬಿಟ್ಟರೆ ನಮ್ಮ ನಂಬಿದವರಿಗೆ
ನಾ ಏನ ಕೊಟ್ಟಂತೆ
ಶನಿವಾರದ ಮುಂಜಾನೆಯ
ನೆನೆದು ಬೇಸರಿಸುತಿದೆ ಈ ಮನ
ದೂರವಾಗುತಲಿರುವೆ ನೀ ಪ್ರೀತಿಯಿಂದ
ವಿರಹ ವೇದನೆಯನು ನೀ ಕೊಡುತಾ
ಆರಂಭವಾಗಲಿದೆ ನನ್ನ ತಾಳ್ಮೆಯ ಪರೀಕ್ಷೆ
ಮತ್ತೊಂದು ವಾರದ
ಸಮರದ ತಯಾರಿಗೆ ಸಜ್ಜಾಗುತಿದೆ
ವಿರಹದ ವೇದನೆಗೆ ಈ ಮನ
ಬಿಟ್ಟು ಹೋಗುತಿರುವೆ ನನ್ನ ಮನಸಲಿ
ಅಳಿಸಲಾಗದ ಹೆಜ್ಜೆ ಗುರುತುಗಳನಿಟ್ಟು
ಜೊತೆಗೆ ಒಂದಿಷ್ಟು ವಿರಹದ
ನೋವನ್ನೂ ಕೊಟ್ಟು..
ಹೋಗಿ ಬಾ ಒಲವೇ...
ಸುಂದರವಾಗಿರಲಿ ನಿನ್ನ ಪಯಣ
ಅಮ್ಮನ ಮುದ್ದು ಕಂದ
ನಿನಗಿದೂ ನನ್ನಯ ಕವನ
ನನ್ನ ಮಡಿಲಿನ ಮುದ್ದು ಕಂದ
ಬೆಳಕಂತೆ ಬಂದೆ ನೀನು ನಮ್ಮ ಮನೆಗೆ
ನೀ ಬಂದ ಆ ಗಳಿಗೆ ನನ್ನ ಪಾಲಿನ ಅಮೃತ ಗಳಿಗೆ
ನಿನ್ನ ನಗು ವೂಂದಿದರೆ ಸಾಕು ನನಗೆ ಬೆರೆನು ಬೇಡ
ನಿನ್ನ ತುಂಟಾಟ ನನಗೆ ಓಡಾಟ
ನಿನ್ನ ಅಪ್ಪನ ಮುದ್ದು ಮಗಳೆ
ನನ್ನ ಜೀವನ ಜೀವ ನೀನು
ಹೆಳಿದರೆ ಮುಗಿಯದು ನಿನ್ನ ಬಗ್ಗೆ
ಮುದ್ದಿನ ಕಂದ ನನ್ನಯ ಮಡಿಲಿನ
ಸುದರ ದೆವತೆ....
ನನ್ನ ಕಂದ......
ಬೆಳದಿಂಗಳ ಅಗಂಳದಲಿ
ನಗುತಿರುವ ತಾರೆಗಳೆ
ನಿವೆಕೆ ಅಷ್ಟು ದೂರ
ನಿಮ್ಮನು ದಿನಾ ನೂಡುವ ಆಸೆ ನನಗೆ
ನನ್ನ ಬಳಿ ಬರಬಾರದೆ ಒಮ್ಮೆ ತಾರೆಗಳೆ
ಎಣಿಸಲಾಗದಷ್ಟು ದೊಡ್ಡದು ನಿಮ್ಮ ಬಳಗ
ನಾನು ಬರಲೆನೂ ನಿಮ್ಮ ಜೊತೆ ಆಡಲು
ಎಷ್ಟು ನೂಡಿದರು ಸಾಲದು ನಿಮ್ಮ ಲೋಕಾ
ಅದು ಬಲು ಸುಂದರ ......
ಹೆಳಿರೆ ತಾರೆಯೆರೆ ಕತ್ತಲಿನ ಲೋಕಾದ
ರಾಣಿಯರೆ.......
ಮಿನುಮಿನು ಮಿನುಗುವ ಮಿಂಚುಳ್ಳಿ ಯರೆ
ನೂಡಿದಷ್ಟು ದೂರ ಹಿಡಿಯಲಾಗದಷ್ಟು ಬಾರ
ಅದರು ನಿವು ಎಲ್ಲರ ಮನದ ತಾರೆಗಳು....
ಸುಂದರ ಲೋಕಾದ ಸುಂದರಿಯರು.....
ಕತ್ತಲನು ನುಂಗಿ ಮಿನಗುವ ತಾರೆಯರು......