ಹಿಮಾಲಯದಸ್ಟು ಎತ್ತರ ನಮ್ಮ ಸ್ನೇಹ,
ಬರಡಾದ ಬದುಕಿಗೆ ಭಾವನೆಗಳ ಚಿಲುಮೆ ಈ ಸ್ನೇಹ,
ಸೋತ ಮನಸಿಗೆ ಸ್ಪೂರ್ತಿ ಈ ಸ್ನೇಹ,
ನಡೆದಸ್ಟು ದೂರ ಜೊತೆಗಿರುವುದೀ ಸ್ನೇಹ,
ಕೊನೆಯೆಂಬುದ ಕಾಣದ ಈ ಸ್ನೇಹ,
ಪದಗಳಲಿ ಬರೆಯಲಾಗದ, ಮಾತಿನಲ್ಲಿ ಹೇಳಲಾಗದ ಈ ಸ್ನೇಹ,
ತನಗಾಗಿ, ತನ್ನವರಿಗಾಗಿ, ತನು ಮನವ ಧಾರೆಯೆರೆಯುವ ಸ್ನೇಹ,
ಅಡೆ ತಡೆ ಇಲ್ಲದೆ, ಕೊನೆ ಮೊದಲಿಲ್ಲದೆ, ಹಸ್ತ ಚಾಚಿದೆ ಈ ಸ್ನೇಹ,
ಆದಿಯನ್ನು ಮಾತ್ರ ಕಂಡು ಅಂತ್ಯವನ್ನೇ ಕಾಣದ ಈ ಸ್ನೇಹ,
ಎಂದೆಂದೂ ಶಾಶ್ವತವಾಗಿರಲು ಈ ಸ್ನೇಹ.....
ಪ್ರೀತಿಯ ಮೊಳಕೆಮುರಿದಾಗ
°°°°°°°°°°°°°°°°°°°°°°°°°°°°°°°°
ಅವಳು ನನ್ನ ಜೀವನದಲ್ಲಿ ನಶ್ವರವಾದ ಕ್ಷಣ
ಧರೆಗೆ ಎರೆಯಾಗಿ
ಗಿಡಕ್ಕೆ ಗೊಬ್ಬರವಾಗಿ
ಕಣ್ಣಿಗೆ ಕಾಣದ ಸಸಿಗೆ ಉಸಿರಾಗಿ
ಪ್ರಕ್ರುತಿಯಲ್ಲಿ ಲೀನ ವಾಗುವ ಜೀವ
ನಾನಾಗಿ.
ಸದಾ ನನ್ನವಳ ನೆನಪಲ್ಲಿ
ಹಸಿರೆಂಬ ಉಸಿರನ್ನ ನನ್ನ ನೆರಳನ್ನು
ಬಯಸುವ ಪ್ರೇಮಿಗಳಿಗೆ ಧಾರೆಯಾಗಿ
ಪ್ರೀತಿಯೆಂಬ ಮೊಳಕೆಯನ್ನು ಪುನಃ ಅವರ ಮನದಲ್ಲಿ ನಾ ಚೆಲ್ಲಿ ಅವರೊಂದಿಗೆ ಸದಾ ಅವರ ಪ್ರೀತಿಯ ಯಶಸ್ಸಿಗೆ ನಾ ಜೊತೆಯಾಗಿ ಇರುವೆ ....
ಪ್ರೀತಿಯ ಮೊಳಕೆ
°°°°°°°°°°°°°°°°°°°°°°°°°°°°
ಮರೆಯದ ಮಾಣಿಕ್ಯ ಅವಳು
ಕಡಲ ಅಲೆಯಲ್ಲಿ ತೇಲಿ ಬಂದ ಅಪರೂಪದ ಮುತ್ತು ಅವಳ ಅವಳು.
ನನ್ನ ಕಣ್ಣಿನ ಪಾಪೆಯಲ್ಲಿ ರಶ್ಮಿಯಾಗಿ ಹೊಳೆಯುತಿರುವಳು.
ನನ್ನ ನಯನದ ದ್ವಾರಬಾಗಿಲಿಗೆ ಕಾಡಿಗೆ ಎಂಬ ಬೀಗ ವಾದವಳು ನನ್ನವಳು.
ಪ್ರತಿ ದಿನ ನಾ ನೊಡುವ ದರ್ಪಣದಲ್ಲಿ ನನ್ನ ಪ್ರತಿಬಿಂಬವಾಗಿ ಬಂದವಳು ಅವಳು.
ನಾ ಜೀವನದಲ್ಲಿ ಬಿದ್ದಾಗ ನನ್ನ ಕೈ ಹಿಡಿದು ಎತ್ತಿ ನನ್ನ ಸರಿದಾರಿಗೆ ತರುವವಳು .
ನನ್ನ ತೊಳಿಗೆ ತೊಳ್ಕೊಟ್ಟು ನಿಲ್ಲುವಳು.
ಅವಳೇನನ್ನ ದೇಹಕ್ಕೆ ಉಸಿರಾಗಿ ಕಲೆತವಳು ನನ್ನ ಮನದಲ್ಲಿ ಬೆರೆತವಳು.
ಸದಾ ನನ್ನ ಜೀವನದಲ್ಲಿ ಜೊತೆಯಾಗಿ ನಡೆಯುವವಳು.
ಹೂಸಬದುಕಿನ ಹಾದಿಯಲ್ಲಿ
ಕಿರು ನಗುವಿನ ಮುಖದಲ್ಲಿ
ಪ್ರೀತಿ ತುಂಬಿದ ಒಲವಲಿ
ಒಲವು ತುಂಬಿದ ಆಸರೆ ಯಲ್ಲಿ
ಹೂಸ ಪುಟಗಳ ತಿರುವಿ ಹಾಕುತ
ಹೂಸ ಹೆಜ್ಜೆ ಜೊತೆಗೆ ಹೆಜ್ಜೆ ಹಾಕುತ
ಸಾದನೆಯ ಹಾದಿಯಲ್ಲಿ
ಎಲ್ಲ ರ ಸುಖ ಬಯಸುತ
ನಿಮ್ಮ ಹೂಸ ಬದುಕು ಶುರುವಾಗಲಿ........
ಶುಬಾಷಯಗಳು................
ಹೂಸ ಬದುಕಿಗೆ............
"ನನ್ನವನು ಹೇಳಿದನು
ನಾನು ಖುಷಿಯಾಗಿರಲು
ನೀ ನನ್ನ ಮರೆಯಬೇಕು
ನನಗೆ ನೀ ಕರೆ ಮಾಡುವುದು ಬಿಡಬೇಕು"
ಆದರೆ ನನ್ನನೆಂದು ಕೇಳಲಿಲ್ಲ
ನೀ ಖುಷಿಯಾಗಿರಲು ನಾ
ಎನು ಮಾಡಬೇಕೆಂದು
ಅವನೆಂದು ಯೋಚಿಸಲಿಲ್ಲ
ಅವನ ಮರೆತ ಈ ಹೃದಯ
ಬದುಕುವುದು ಹೇಗೆಂದು ...?