Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಾ ಬೇಗ

ಮತ್ತೆ ಮಳೆಯಾಗಿದೆ ಮನದಲ್ಲಿ. ಮನದಿ ಕಾಮನಬಿಲ್ಲು ಕಾಣತೊಡಗಿದೆ.
ಮಂಜುಗಡ್ಡೆ ಭೂಮಿ ಸೇರೊ ಮುನ್ನ. ಮನೆಯೆಂಬ ಜೇನುಗೂಡು ಹನಿಯ ಹಂಬಲಿಸಿದೆ. ಬಾ ಒಡತಿ
ಬಾಳ ಮನದಿ ಕತ್ತಲು ಕವಿಯೊ ಮುನ್ನ ಬಾ ಬೇಗ ಒಡತಿ...

ರಾಜೇಶ್..

- ರಾಜೇಶ್

19 Aug 2017, 12:23 pm

ಭರತ

ಭರತನೆ ನೀನು ಮರೆತೆಯಾ ನಿನ್ನನೆ?
ಮುಸುಕಿನ ಭ್ರಮೆಯಲಿ ಮರೆತೆಯಾ ನಿನ್ನನೆ?

ವೀರರ ಶೂರರ ಗತವೂ ನಿನ್ನದು
ರಾಮ ಕೃಷ್ಣರ ವಂಶವು‌ ನಿನ್ನದು
ಶಕ್ತಿಯ ಯುಕ್ತಿಯ ಪುತ್ರನು‌ ನೀನು
ರಾಣಾ‌ ಶಿವಾಜಿಯ ವಂಶಜ‌ ನೀನು !೧!

ಚಾಣಕ್ಯನ ಚಾಣಾಕ್ಷತನವೂ ನೀನೆ
ಆರ್ಯಭಟನ‌ ಜ್ಞಾನವೂ ನೀನೆ
ಸ್ವಾಮಿ ವಿವೇಕರ ಅಧ್ಯಾತ್ಮವು ನೀನೆ
ಶಂಕರ ಮಧ್ವರ ಆತ್ಮವು ನೀನೆ !೨!

ಬಸವರ-ಅಕ್ಕನ ವಚನಾಮೃತ ನೀನು
ಪುರಂದರ ಕನಕರ ಗಾನಾಮೃತ ನೀನು
ಭೀಮರಾವರ ಭವಿಷ್ಯವು ನೀನು
ರಾಮನ್ನರು ಕಂಡ ಬೆಳಕಿನ ಕೀರಣವು‌ ನೀನೆ !೩!

ಬುದ್ಧನ ಶಾಂತಿಯ ತತ್ವವು ನೀನೆ
ತತ್ವವ ಪೂಜಿಪ ಭಕ್ತನು ನೀನೆ
ಸಮಾಜದಿ ಬರುವ ಮಹಿಷಾಸುರರಿಗೆ,
ದುರ್ಗಾಮಾತೆಯ ಕ್ರೋಧವು ನೀನೆ !೪!

- Sindhur

19 Aug 2017, 07:41 am

ಧಾರವಾಹಿ

ಕಣ್ಣಿಗೆ ಕಾಣುವ ಕಥೆಗಳೆಲ್ಲಾ ಕಿರುತೆರೆಯಲ್ಲಿ ನಿಜದಂತೆ ತೋರಿಸುವವರು ನಮ್ಮ ಸಮಯ ವ್ಯಾಪಾರವ್ಯೆಕ್ತರು ಧಾರವಾಹಿಯ ರೂಪದಲ್ಲಿ..............

ಇರುವ ಬುದ್ಧಿಯನ್ನೆಲ್ಲಾ ಬದಿಗಿಟ್ಟು ಕೆಲಸಗಳಿಗೆ ನೂರು ಕಾರಣ ಹೇಳಿ ಕೈಕಟ್ಟು ಕೈಯಲ್ಲಿ ಜೀವವಿಲ್ಲದ ರಿಮೋಟನ್ನು ಕುರಿಸಿಟ್ಟು ಕುರುವರು ನಮ್ಮ ಹೆಂಗಸರು ಗಂಡಂದಿರ ಹೊಟ್ಟೆಗಳಿಗೆ ಕಾಫಿ ನೀರನ್ನು ಕೊಟ್ಟು..........

ನಾಯಕ ನಟಿ ನಟರ ಕಣ್ಣೀರಿಗೆ ಇವರ ಮನಸು ಕಣ್ಣೀರು ಸುರಿಸುತ್ತದೆ ಅವರ ವೈರಿಗಳ ಮೂತಿಗಳಿಗೆ ಬೈಗೊಳದ ಮಳೆ ಸುರಿಯುತ್ತದೆ...........

ನೋಡುವರು ಬಿಡುವಿಲ್ಲದೆ ಕಣ್ಣು ಬಿಟ್ಟುಕೊಂಡು ತಮ್ಮ ಮನೆಯ ಕಷ್ಟಗಳು ಮರೆಯಲೆಂದು ಧಾರವಹಿಗಳಲ್ಲಿನ ಕಥೆಯಲ್ಲಿ ಸುಳ್ಳು ಕಷ್ಟಗಳನ್ನು...............

ಹೊರಗೋದರು ಅದೇ ಪುರಾಣ ಆ ಧಾರವಾಹಿಯಲ್ಲಿ ಅವಳು ಅಂತಹವಳು ಅಯ್ಯೋ ಪಾಪು ನಮ್ಮವರೆಂದು ನಗೆಯ ಮಾತು ಕೇಳಿದವರಿಗೆ ಯಾರ ಬಗ್ಗೆ ಇವರ ಮಾತೆಂದು ತಿಳಿಯದವರಿಗೆ ನಿಜವೆಂದು ನಂಬಿದರೆ...............

ಬೆಳ್ಳಿತೆರೆಯ ಸೆದೆಬಡಿದು ತಾವಿಂದು ಅಗ್ರ ಸ್ಥಾನ ಪಡೆದಿರುವವರರು ಕಿರುತೆರೆಯ ಕುಲಂಕುಶ ನಿರ್ದೇಶಕರು................

- ಚುಕ್ಕಿ

18 Aug 2017, 11:33 pm

ಪ್ರಕೃತಿ

ಅಬ್ಬಾ ಎರಡು ಕಣ್ಣು ಸಾಲದು
ಅಂದದ ಚಂದದ ಸುಂದರ ಪರಿಸರ

ನಿಸರ್ಗ ದೇವತೆಯೇ ಹಾಯಾಗಿ ಮಲಗಿದಂತೆ
ಭಾಸ್ಕರನ ಕಿರಣ ಕಣ್ಣಿಗೆ ಬಡಿದಂತೆ
ಮಳೆಯಾ ಹನಿ ಮೊಗವನ್ನು ಸೋಕಿದಂತೆ
ತಣ್ಣನೆಯ ಗಾಳಿ ಚಳಿಯಾಗಿ ಬಂದಂತೆ

ಎತ್ತರೆತ್ತರ ಬೆಟ್ಟಗಳು,ಮುಂಜಾನೆಯ ಮಂಜುಗಳು,
ಹಕ್ಕಿಗಳ ಚಿಲಿಪಿಲಿ ಕಲರವಗಳು,
ಮೋಡದ ಓಟಗಳು,ನವಿಲಿನ ನಾಟ್ಯಗಳು
ಹರಿವ ನದಿಯ ಜುಳುಜುಳು ಸದ್ದುಗಳು

ಎಲ್ಲಾ ವಿಸ್ಮಯಗಳ ಕಣ್ಣಾರೆ ನೋಡಿದ ಈ ಕಣ್ಣುಗಳು
ಜನುಮ ಜನುಮದಾ ಪುಣ್ಯಗಳು.....

- AnilHegde

18 Aug 2017, 07:34 pm

ಆರದೇ ಉರಿಯುತಿರು

ದೀಪದ ಬೆಳಕು ಆರದಂತೆ
ಉರಿಯಬೇಕಿದೆ ಗೆಳತಿ
ನೀನು ಹಿಂದಿರುಗಿ
ಇಲ್ಲಿ ಬರುವವರೆಗೂ!!

ಅರಳಿಯ ಬತ್ತಿ ಇರೆ
ಎಣ್ಣೆಯ ಸುರಿದಿರುವೆ
ಗಾಳಿಗೆ ತಡೆಯೊಡ್ಡಿ
ಅಂಗೈಯ ಹಿಡಿದಿರುವೆ!!

ಆರದೇ ಉರಿಯುತಿರು
ಬೆಳಕೇ ನೀನು
ನನ್ನವಳು ಹಿಂದಿರುಗಿ.
ಇಲ್ಲಿ ಬರುವವರಗೂ!!

ಕಾಲವನು‌ ನಾ ಸರಿಸಿ
ನಿನಗಾಗಿ ಕಾದಿರುವೆ
ಬಂದು ಸೇರಿಕೋ ನನ್ನ
ನಾ ಕಾದಿರುವೆನು ಇಲ್ಲೇ!!

- ಪಿ.ಜಿ.ಜ್ಯೋತಿ

18 Aug 2017, 06:40 pm

ಅಂತರಂಗದ ಹೂ ಬನ

ಅಂತರಂಗದ ಹೂ ಬನದಿ
ಬಯಕೆ ಹೂವ ರಾಶಿಯ!!
ಕಾದಿಹುದು ಅರಳಿ ನಿಂತು
ನೀನು ಬರುವ ದಾರಿಯ!!

ನೀನು ಬರಲು ಕಾಯಿಸಬೇಡ
ಬಯಕೆ ಹೂವ ಬಾಡಿಸಬೇಡ!!
ಸಾಕು ಅಂತರ ಒಲವೇ
ಬಾ ಬೇಗ ನೀ ನನ್ನ ಹತ್ತಿರ!!

ಗೀಚಿ ಬರೆದ ಪದಗಳೆಲ್ಲ
ಕವನವಾಗಿ ಹೋಯಿತಲ್ಲ!!
ಕವಿಯು ಅಲ್ಲದ ನಾನು
ಇಂದು ಕವನ ಬರೆದೆನೇ!!

ನಿನ್ನ‌ ಕಂಡ ಮೇಲೆ ಮನಕೆ
ನೀನೇ ತಾನೆ ಸುಂದರ ಬಯಕೆ!!
ನಿನ್ನ ಮೇಲೆ ಮೋಹ ಅದಕೆ
ಬಂದು ಸೇರಿಕೋ ನೀ ನನ್ನ!!

- ಪಿ.ಜಿ.ಜ್ಯೋತಿ

18 Aug 2017, 06:02 pm

ಮತ್ತೆ ಬಾ ಬಾಳಲಿ..

ದೀಪದ ನಾಟ್ಯ ನಾಚುವ ನಗು ನಿನ್ನದು
ನನ್ನ ಕಣ್ಣಿನ ರೇಪೆ ನಿನ್ನ ನೋಡವ ಆಸೆ ನನ್ನದು.
ಕಾಣದೆ ಹೋದೆ ಕಣ್ಣ್ ನೀರಾ ತೋರಿಸಿ.
ಮತ್ತೆ ಬಾರದೆ ಹೋದೆ. ಒಮ್ಮೆ ತಿರುಗಿ ಬಾ ಗೆಳತಿ...

ರಾಜೇಶ್...

- ರಾಜೇಶ್

18 Aug 2017, 05:59 pm

ವಿಹಾರಿ

ನಾನು ಕನಸುಗಳ ವಿಹಾರಿ
ಮುಂಜಾನೆ ಬಿದ್ದ ಕನಸುಗಳನು
ಕಣ್ಣಲ್ಲೇ ಬಚ್ಚಿಟ್ಟಿರುವೆನು!

ಸಾಗರದ ಕಪ್ಪೆಚಿಪ್ಪಿನಲಿ ಅಡಗಿರುವ
ಮುತ್ತಿನಂತೆ ನನ್ನ ಬದುಕು.
ಸಾಗರವನ್ನೇ ಈಜಿ
ಮುತ್ತನ್ನು ಕದಿಯಬಲ್ಲ
ಸಾಹಸಿ ಅವನು!

ನನ್ನೀ ಹೃದಯದಲ್ಲೀಗ
ಅವನ ಪ್ರೀತಿಯದೇ ಕಾರುಬಾರು.
ಜೋಡಿ ಹಕ್ಕಿಯಂತೆ
ಸಂಭ್ರಮಿಸಿದೆವು ಪ್ರೀತಿಯ ಗೂಡಿನಲ್ಲಿ!

ಜೊತೆಯಾಗಿ ಬಹುದೂರ
ವಿಹರಿಸಿದಂತೆ ಅಸ್ಪಸ್ಟ ಚಿತ್ರಣಗಳು.
ಕಂಗಳಲ್ಲಿ ನಿನ್ನ ಬಿಂಬವ
ಅಡಗಿಸಿರಲು ಸೋತುಹೋಗಿಹ
ಪ್ರೇಮಿ ನಾನು!

ಖಾಲಿ...ಮನಸಿನ ಹುಚ್ಚು ಕನಸಿದು.....
ತಪ್ಪುತಿಳಿಯಬೇಡಿರಿ,
ಮತ್ತೊಂದು ಕನಸಿನತ್ತ
ವಿಹಾರಿಸಬೇಕಿದೆ!

- ಪ್ರಿಯಾಂಕ

18 Aug 2017, 05:00 pm

ನಾ ಬರೆದಂತೆ ಕವಿತೆ ನಿನ್ನದೇ

‘ನಾ ಬರೆದಂತೆ ಕವಿತೆ ನಿನ್ನದೇ
ನೆನಪುಗಳಲಿ
ಅದು ಹೇಗೊ ಅಕರ್ಷಕ
ಕಂಗಳ ನೋಡುತ ಬರೆದ
ಕವನ ಸ್ವಾಭಾವಿಕ
ನಿನ್ನದೇ ಹೆಜ್ಜೆಗಳ
ಹಿಂಬಾಲಿಸಿ ಬರೆವ
ಈ ಕವಿ ನಿನಗೇ ಅನಾಮಿಕ...;)

- Naveen

18 Aug 2017, 04:48 pm

ರಹಸ್ಯ

ಈ ಭೂಮಿ ಒಂದು ರಹಸ್ಯ
ಈ ರಹಸ್ಯ ದಲ್ಲಿ ಮನುಜ ಜನ್ಮ ಒಂದು ಗೊಂಭೆಯಾಟ

ಯಾವುದು ಅಜ್ಞಾನ, ಜ್ನಾನ ಒಂದು ತಿಳಿಯದು
ಪ್ರಪಂಚದಾಚೆ ಕಂಡವರು ಯಾರು..

ತಲೆ ತಿರುಗುವುದು ಪ್ರಪಂಚದ ಇತಿ ಮಿತಿ ಯೂಚಿಸಿದರೆ!


ಇದು ಬೆದಿಸಲು ಅಸಾಧ್ಯ
ಇದು ಹೆಳಲು ಅಸಾಧ್ಯ
ಇದು ಯೊಚಿಸಲು ಅಸಾಧ್ಯ

ಇದುವೆ ನಿಜವಾದ ರಹಸ್ಯ ಅಲ್ಲವೆ?

ಇಲ್ಲಿ ಎಲ್ಲರೂ ಹೂಟ್ಟೆ ಪಾಡಿಗೆ ಅಲ್ಲವೆ?

ನಾವೆಲ್ಲರೂ ಜ್ನಾನದ ಕತ್ತಲೆಯಲ್ಲಿ ಅಡಗಿಲ್ಲವೆ?

ಮತ್ತೆತಕೆ....

ಮಂದುವರಿಯುವದು.

- ಮದನ್

18 Aug 2017, 02:11 pm