Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕಂಬನಿ

ಸೂರ್ಯನ ಕಿರಣದ
ಸೆಳತಕೆ
ಸೋತಿಹ ಹಸಿರುಗಳು
ಕೈ ಚಾಚಿ ಕರೆಯುತ್ತಿವೆ
ಧರೆಗೆ ಮಳೆಯನು
ಸುರಿಸೆಂದು!

ಆಗಷ್ಟೇ ಹುಟ್ಟಿದ
ಹಸುಗೂಸೊಂದು
ಹಾಲಿಗಾಗಿ
ರಚ್ಚೆಹಿಡಿದು ಕೂಗುತ್ತಿದೆ
ಸತ್ತ ತಾಯಿಯ
ಸೆರಗನ್ನು ಸರಿಸಿ!

- ಪ್ರಿಯಾಂಕ

16 Aug 2017, 01:44 pm

ಮೊದಲ ನೋಟ

ಮೊದಲ ನೋಟದ
ಪ್ರೀತಿಯ ಕಥೆಯ
ನಾ ಹೇಳುವೆ ಕೇಳಿರಿ!!
ಅವಳ ಕುಡಿ ನೋಟದಿಂದ
ಜಾರಿದ ಅನುರಾಗವ
ನಾ ಸೆರೆ ಹಿಡಿದದ್ದು ಆಗಲೇ!!

ಅವಳು ಮುಂಗುರುಳಲ್ಲೇ
ಮುನ್ನುಡಿ ಬರೆದು
ಆಹ್ವಾನಿಸಿದಳು ತನ್ನ ಪ್ರೀತಿಗೆ!!
ಅವಳ ಆಹ್ವಾನಕೆ ನಾ
ಮಂತ್ರ ಮುಗ್ಧನಾಗಿ
ಬಿದ್ದೆನು ಅವಳ ಮೋಹಕೆ!!

ಏಕಾಂತದ ಸಲಿಗೆಯಲ್ಲಿ
ಒಡನಾಟದ ಪ್ರೀತಿಯು
ಕಾಲ ಚಕ್ರದೊಡನೆ ಸಾಗಿತು!!
ಅವಳ ಸಾಂಗತ್ಯದಲ್ಲೆ ಬೆರೆತ
ಈ ಜೀವಕೆ ಇಂದು ಅರಿಯದೇ
ಮುಪ್ಪು ತಾ ಆವರಿಸಿತು!!

- ಪಿ.ಜಿ.ಜ್ಯೋತಿ

16 Aug 2017, 10:40 am

ಮನಸಿನ ಇಂಗಿತ

ಮನಸಿನ ಇಂಗಿತಕೆ
ಕನಸಿನ ಕನ್ನಡಿಯು!!
ಹೃದಯದ ಹೂ ಬನಕೆ
ಆಸೆಯ ಮೆರವಣಿಗೆ!!

ನೀ ಸಿಗುವುದಾದರೇ
ನಾ ಇಲ್ಲೇ ಕಾಯುವೆ!!
ನೀ ಬರದೇ ಹೋದರೆ
ನಾ ನೊಂದು ಸೋಲುವೆ!!

ಬರಲೇನು ಓ ಒಲವೇ
ನೀನು ಇರುವ ಜಾಗಕೆ!!
ನೀ ಸಿಗಲು ಸಂಭ್ರಮವು
ಈ ನನ್ನ ಮನಸಿಗೆ!!

- ಪಿ.ಜಿ.ಜ್ಯೋತಿ

16 Aug 2017, 09:56 am

ಅಸುನೀಗಿದ ಬಾಲ್ಯ

ಈ ಹರೆಯ ಬಂದ ಮೇಲೆ
ಅಸುನೀಗಿತೇ ನನ್ನ ಬಾಲ್ಯ!!
ತುಂಟಾಟ ಹುಡುಗಾಟವನ್ನು
ನಾ ಮರೆತು ಮೈ ನೆರೆದೆ!!

ದೂರದಲ್ಲಿ ಆಡೋ ಬಯಕೆ
ಕೈ ಬೀಸಿ‌ ಕರೆದಂತಿಹುದು!!
ಯಾರೋ ತಡೆಯುತಿಹರು ನನ್ನ
ಹೋಗದಂತೆ ನಾನು ಅಲ್ಲಿ!!

ನಾಲ್ಕು ಗೋಡೆಯ ನಡುವೆ
ಕಳೆದುಕೊಂಡೆ ಬಾಲ್ಯದ ಒಡವೆ!!
ಹುಡುಕಿದರೂ ಸಿಗದ ನಿರಾಸೆ
ಯಾಕಾಗಿ ನನಗೆ ಈ ಹತಾಶೆ!!

ಹೊಸದಾಗಿ ಮೂಡಿಹುದು
ಮುಖದಲ್ಲಿ ಈ ಮೊಡವೆ!!
ನನ್ನಲ್ಲಿ ಚಿಗುರೊಡೆದದ್ದು
ನಾಚಿಕೆಯ ಹೆಮ್ಮರವೇ!!

ಗಂಡು ಹೆಣ್ಣು ಎಂಬ ಬೇಧ
ಅರಿಯದಂತೆ ನಾನು ಇದ್ದೆ!!
ಹರೆಯ ಬಂದು ಹೇಳುತ್ತಿಹುದು
ಹೆಣ್ಣಾದೆ ನೀನು ಎಂದು!!

- ಪಿ.ಜಿ.ಜ್ಯೋತಿ

16 Aug 2017, 09:42 am

ಶ್ವೇತ

ಹೊಸತನದ ಸ್ವಚ್ಛ ಮನಸು
ನನ್ನವಳ ನಗುವಲ್ಲಿ ನೋಡಿದೆ
ನಾನಿಂದು ಶ್ವೇತವೆಂದು............

ಸ್ನೇಹದ ಸುವಾಸನೆ ಬರಿತ ಮುದ್ದಾದ
ಮಲ್ಲಿಗೆ ನನ್ನ ಚೆಲುವಿನ ಗೆಳತಿ
ಸೊಗಸಿರಿಯ ಒಡತಿ..................

ಕಲ್ಮಶದ ಕಣ್ಮುಚ್ಚಿ ಪ್ರೀತಿಯ
ಮನ ಹೊಕ್ಕಿ ಮುಂಜಾನೆ ಅರಳಿದ
ಸೊಬಗು ಅವಳು ವನಿತೆಯವಳು ನವನಿತೆ ಅವಳು...................

ಕರೆವ ಮುನ್ನ ನೋವು ತಿಳಿದು
ನಲಿವು ಬೆರೆಸಲು ನವಿಳಂತೆ
ನಲಿದಾಡುವಳು ಮನದಲ್ಲಿ ಮಂಜಾಗಿ ಕರಗುವವಳು.................

ಶ್ವೇತ ವರ್ಣದ ಮುಖದವಳು
ನೋಟದಲ್ಲಿ ನೋವು ಕಳೆಯುವವಳು
ನನ್ನ ಸ್ನೇಹಿತೆ ಕರಗದ ನಗುವಿನ ಸೌಂದರ್ಯ ರಾಶಿಯವಳು ಶ್ವೇತ ಇವಳು ನನ್ನ ಮನವ ಹೆಜ್ಜೆನ ಸವಿಯಿಂದ ತುಂಬಿದವಳು..........

- ಚುಕ್ಕಿ

15 Aug 2017, 11:00 pm

ಅಪ್ಪ

ಅಕ್ಕರೆಯ ಕೈಯೊಂದು ಪ್ರೀತಿಯಿಂದ
ನನ್ನ ಮುಟ್ಟಿ ಮುದ್ದಾಡುವುದೆಂದು ಅಮ್ಮ
ಹೇಳಿದ್ದಳು ನಾನು ಅವಳ ಹೊಟ್ಟೆಯಲ್ಲಿ
ಮಲಗಿರುವಾಗ ಅಪ್ಪ...............

ನಾನು ನೋಡದ ಪ್ರಾಣವೊಂದು
ಪ್ರಾಣಕ್ಕಿಂತ ಹೆಚ್ಚಾಗಿ ನನ್ನ ನೋಡುವ ಮುನ್ನವೇ
ಪ್ರೀತಿಯಿಂದ ಕಾಯುತ್ತಿದೆಯೆಂದು ನನ್ನ
ಹೃದಯಕೆ ಅಮ್ಮ ಹೇಳಿದಳು ನನಗಂದು
ಅಪ್ಪ..................

ನಿನ್ನ ಕೈಬೆರಳ ಸ್ಪರ್ಶೆ ಕಾಣದ ಸ್ವರ್ಗವನ್ನು
ತೋರುವುದೇ ನಿನ್ನ ಎದೆಯ ಮೇಲಿನ
ಪ್ರತಿಯೊಂದು ರೋಮ ನನ್ನ ಪಾದದಂಚಿಗೆ
ಮಮತೆಯಿಂದ ಮುದ್ದಾಡುವುದೇ ಹೇಳಿ ಕೇಳಿ
ತಿಳಿಯುವ ಆಸೆ ಅಪ್ಪ ನಿನ್ನನು..............

ನಿನ್ನ ಮಾತು ಗಡುಸಂತೆ ನಿನ್ನ ಮನವು ಹಾಲಿನ
ಸಾಗರದಂತೆ ನಿನ್ನಲ್ಲಿನ ಗಾಂಭೀರ್ಯ ನೋಡುವ
ಸಿಂಹಕೂ ತಲೆ ಭಾಗಿ ನಿಲ್ಲುವ
ಅಚ್ಚರಿಯಂತೆ...........

ಅಮ್ಮ ಹೇಳಿದ ಮಾತುಗಳೆಲ್ಲವು ಕೇಳುತ್ತಾ ನಿನ್ನ
ರೂಪ ತಾಳಿ ಭುವಿಗೆ ಬಂದ ನನಗೆ ಕಾಣದಾದೆ
ನೀನು..................

ನನ್ನ ಹೃದಯ ಅಮ್ಮನ ಮಾತಲ್ಲಿ ನಿನ್ನ ಪರಿಚಯ
ಮಾಡಿಕೊಂಡಿದೆ ಅಪ್ಪ ಪ್ರೀತಿಯ ಸವಿ
ಉಣ್ಣದಿದ್ದರು ಸಂತಸಗೊಂಡಿದೆ ಅಪ್ಪ ನೋಡುವ
ಕಣ್ಣಿಗೆ ನೀನು ಕಾಣದಾದರೇನು ನನ್ನ ನಗುವಲ್ಲೇ
ಅನುನಿತ್ಯ ನೋಡುವೆ ನಿನ್ನ ನಾನಾಗಿ
ಅಪ್ಪ............................

ಎಲ್ಲರ ಹಾಗೆ ನಿನ್ನ ಜೊತೆ ಸುತ್ತಾಡಿಲ್ಲ ಕೈತುತ್ತು
ತಿಂದಿಲ್ಲ ಕಂಬನಿಯ ಹಂಚಿಕೊಂಡಿಲ್ಲ ನಿನ್ನ
ನೋಡುವ ಕಾತುರ ನನ್ನಲ್ಲಿ ಇಂದಿಗೂ
ದೂರವಾಗಿಲ್ಲ ಅಪ್ಪ...................

ನೋಡುವೆ ಆಗಸದಲ್ಲಿ ತಾರೆಯಾಗಿ ನಿನ್ನ
ಮಾತನಾಡುವೆ ಮೌನದಲ್ಲಿ ಗಾಳಿಕೆಳದ ಪ್ರೀತಿಯ
ಮಾತಾಗಿ ನೀನೆಂದು ನನ್ನಲ್ಲಿರು ಹೃದಯ
ಬಡಿತವಾಗಿ ಅಪ್ಪ.................

- ಚುಕ್ಕಿ

15 Aug 2017, 09:55 pm

ಪ್ರಾಣ ಸ್ನೇಹಿತ****

ನನ್ನನರಿತ ಮೊದಲ ಬಂಧು ನನ್ನೊಡನೆ ಕೊನೆವರೆಗೂ ಉಳಿಯುವ ಆತ್ಮ ಬಂದು ನನ್ನ ಪ್ರಾಣ ಸ್ನೇಹಿತ.............

ನನ್ನ ಆತ್ಮವ ದೇಹ ಹಂಚಿಕೊಂಡು ನಾನು ಎಂಬ ಅಸ್ತಿತ್ವ ಕೊಟ್ಟಿರುವುದು ನಿಜವಾದರೆ ನನ್ನಲ್ಲಿನ ನಲಿವನ್ನು ನೋವನ್ನು ನಗುವಿನಿಂದ ಹಂಚಿಕೊಂಡ ಇನ್ನೊಂದು ಜೀವ ನೀನೆಂದು ಹೇಳೇಳೇ ಗೆಳೆಯನೇ ನನ್ನ ನೆಚ್ಚಿನ ಮಿತ್ರನೇ..........

ದಿನಬೆಳಗಾದರೆ ನಿನ್ನ ನೋಡಲು
ಬಯಸುವುದು ಮನ............
ಪ್ರೀತಿಯ ಅಳತೆಗೆ ಕೊನೆಯೆಂದಿಗೂ
ಕಾಣದ ಆಕಾಶ ನಿನ್ನ ಮನ..........

ಉತ್ತವಿಲ್ಲದ ನಿಸ್ವಾರ್ಥ ಬಂಧನಕ್ಕೆ ಹೆಸರು ನೀನೇನಾ ಪ್ರಾಣದಲ್ಲಿ ಪಾಲು ಹಂಚಿಕೊಂಡ ಸ್ನೇಹಿತನು ನಿನಾ ನನ್ನಲ್ಲೇ ಹಿಂದಿದ್ದು ಕಾಯುವ ನೆರಳು ನಿನಾ ಜೀವದ ಗೆಳೆಯ............

- ಚುಕ್ಕಿ

15 Aug 2017, 09:08 pm

ಬದುಕು

ಏನು ಈ ಜೀವನದ ಚಿತ್ರ
ಯೋಚಿಸಿದರೆ ಎಲ್ಲವು ವಿಚಿತ್ರ

ಬರುವಾಗ ಇರುವುದು ಬರಿ ಉಸಿರು
ಹೋಗುವಾಗ ಉಳಿಯಬೇಕು ನಮ್ಮ ಹೆಸರು

ಒಳಿತಿನಿಂದಾಗಿರಬೇಕಾಗಿದೆ ಬದುಕು
ನೆನಪು ಉಳಿದರೆ ಮಾತ್ರ ಸಾರ್ಥಕ ಈ ಬದುಕು

- ಶಾಫಿ

15 Aug 2017, 08:15 pm

ಮಳೆಯ ಸದ್ದು

ಮಳೆ ಸದ್ದು ಮಾಡುತ್ತಿದೆ
ಆಡೋಣ ಬಾ ಎಂದು ಈ ತಂಗಾಳಿಯಲ್ಲಿ
ನಾವು ಮುಂದೆಂದು ಓಡುತ್ತಿವೆ ಗುಣಗುಟ್ಟುತ್ತ
ಕಪ್ಪೆಗಳು ಧರೆಯನ್ನು ತೊಳೆದು ತಂಪು ತುಂಬಲು ಬಂದಿರುವ ಮಳೆಯೆಡೆಗೆ.............

ಮರದಲ್ಲಿನ ಎಲೆಗಳು ಜಾರಿದರೆ ಮಳೆಹನಿಯು ಮತ್ತೆ ಸಿಗುವುದಿಲ್ಲವೆಂದು ಹಿಡಿದಿಟ್ಟುಕೊಳ್ಳುತ್ತಿವೆ ಮತ್ತೆ ಮಳೆ ನಿಂತ ಮೇಲೆ ನಮ್ಮಲ್ಲಿ ಇನ್ನು ತಂಪು ಉಳಿದಿದೆಯೆಂದು ನನ್ನ ಹಿಯಾಳಿಸಲು..........

ಹಕ್ಕಿಗಳು ಗೂಡು ಸೇರಿವೆ ಇಣುಕಿಣುಕಿ ಮಳೆಯಲ್ಲಿ ಆಡುತ್ತಿರುವ ನನ್ನ ನೋಡಲೆಂದು
ನೆನ್ನಯಲ್ಲಿನ ನಗುವು ಇಂದಿನ ಮನದಂಗಳಕೆ ತುಂಬಲೆಂದು ಕನಸು ಬಯಸಿದೆ ನನಸಾಗಿ ನನ್ನ ಪ್ರೀತಿಯ ಮುಂಗಾರು ಮಳೆಯಾಗಿ.............

- ಚುಕ್ಕಿ

15 Aug 2017, 08:02 pm

ಪ್ರೀತಿಯ ಕಾಣಿಕೆ

ಪ್ರೀತಿಯ ಕಾಣಿಕೆಯಾಗಿ
ಬಂದಿರೆ ಬಾಳಲಿ ನೀನು
ಸೋಜಿಗವು ಸಂಭ್ರಮವು
ಈ ಬದುಕಿಗೆ ಆನಂದವು!!

ಜೊತೆಯಲಿ ನೀನಿರುವಾಗ
ನನ್ನ ಭಾಗ್ಯಕೆ ದೊರೆತ ಯೋಗ
ಸುಂದರವು ಆ ಕ್ಷಣವು
ಸವಿ ಬದುಕಿನ ಮುನ್ನುಡಿಯು!!

ಬಾಯಾರಿದ ಈ ಮನಕೆ
ನೀ ಬಂದು ದಾಹ ನೀಗಿದೆ
ಒಲವಿಂದ ಆಗಲೇ ನೀನು
ನನ್ನ‌ ಮನವ ಸೇರಿದೆ!!

ಬಯಸಿ ಬಯಸಿ ಹೆಮ್ಮರವಾಗಿ
ಬೆಳೆದ ಪ್ರೀತಿ ಹೂ ಬನವಾಗಿ
ಸೊಗಸಾಗಿ ಹಿತವಾಗಿ
ನಮಗಾಗಿ ಕಂಪ ಬೀರಿದೆ!!

- ಪಿ.ಜಿ.ಜ್ಯೋತಿ

15 Aug 2017, 06:39 pm