Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಏಕಾಂತ ತುಂಬಿದ ಈ ಬದುಕಿನಲ್ಲಿ
ಬಲಗಾಲಿಟ್ಟು ನೀ ಒಳಗೆ ಬಾ!!
ಮಂದಮತಿಯಾದ ಈ ಮನಸಿನಲ್ಲಿ
ಮಂದಹಾಸ ನೀ ತುಂಬು ಬಾ!!
ಇರುಳಿನಲ್ಲಿ ಕಂಗೆಟ್ಟು ನಾ ನಿಂತಾಗ
ಭರವಸೆಯ ಬೆಳಕಾಗಿ ನೀ ಬಳಿಗೆ ಬಾ!!
ಮರಳು ಗಾಡಿನಲ್ಲಿ ಅಲೆಯುತ್ತಿರುವಾಗ
ಕೈ ಹಿಡಿದು ನೀ ದಾರಿ ತೋರು ಬಾ!!
ಭಾವನೆಗಳನ್ನೇ ಮರೆತು ಕುಳಿತ
ಮನಸಿಗೆ ನೀ ಕನ್ನಡಿ ಹಿಡಿಯ ಬಾ!!
ಅರ್ಥವಿಲ್ಲದ ಈ ಬದುಕನು ಅರ್ಥೈಸುವ
ಮುನ್ನುಡಿ ನೀ ಆಗು ಬಾ!!
- ಪಿ.ಜಿ.ಜ್ಯೋತಿ
11 Aug 2017, 10:59 am
ಗೆಳೆಯ........
ಮರು ಜನುಮದಲ್ಲಿಯಾದರೂ
ನೀ ನನ್ನ ಕಂಬನಿಯಾಗುವ ಬದಲು
ನನ್ನ ನಗುವಾಗಿ ಬಾ......!!
ಇರುಳಿನಲ್ಲಿ ಚಂದಿರನಂತೆ
ಹಗಲಿನಲ್ಲಿ ನೆರಳಿನಂತೆ
ಸದಾ ನನ್ನ ಜೊತೆ ಬೆಂಗಾವಲಾಗಿರುವ
ಆತ್ಮ ವಿಶ್ವಾಸವಾಗಿ ಬಾ..!!
- ಪಿ.ಜಿ.ಜ್ಯೋತಿ
11 Aug 2017, 10:37 am
ಸ್ವಾತಂತ್ರ್ಯ ಎಂಬ ಸೊತ್ತು
ಯಾರಪ್ಪನ ಮನೆಯ ಆಸ್ತಿಯಲ್ಲ!!
ಭಾರತ ಮಾತೆಯ ಮಡಿಲಲ್ಲಿ
ಹುಟ್ಟುತ್ತಲೇ ದೊರೆತ ಭಾಗ್ಯ!!
ಸ್ವಾತಂತ್ರ್ಯ ಎಂಬ ಸೊತ್ತು
ಯಾರೂ ನೀಡಿದ ಭಿಕ್ಷೆ ಅಲ್ಲ!!
ಸದಾ ನಮ್ಮ ಆತ್ಮ ವಿಶ್ವಾಸದ
ಏಣಿಯ ಮಜಲುಗಳು!!
ಸ್ವಾತಂತ್ರ್ಯ ಎಂಬ ಸೊತ್ತು
ಸೊಕ್ಕಿ ಮೆರೆವ ಅಹಂಕಾರವಲ್ಲ!!
ನೆಚ್ಚಿನ ಕಾಮನೆಗಳನ್ನು
ಸ್ವಚ್ಛವಾಗಿ ನಿರ್ವಹಿಸುವುದು!!
ಸ್ವಾತಂತ್ರ್ಯ ಎಂಬ ಸೊತ್ತು
ಯಾರ ಮೇಲಿನ ದಬ್ಬಾಳಿಕೆಯಲ್ಲ!!
ಎಲ್ಲರೂ ಒಂದಾಗಿ ಕಟ್ಟಬೇಕಾದ
ಸಹಬಾಳ್ವೆಯ ಬದುಕಿನ ಸಂಪತ್ತು!!
- ಪಿ.ಜಿ.ಜ್ಯೋತಿ
11 Aug 2017, 08:53 am
ಆಕಾಶದಷ್ಟು ಪ್ರೀತಿ ಇದೆ ಅನ್ನೋ ಎದೆಯಲ್ಲಿ
ಎಳ್ಳಷ್ಟು ಪ್ರೀತಿ ಇಲ್ದೇ ಇರಬಹುದು
ಎಳ್ಳಷ್ಟು ಪ್ರೀತಿ ಇಲ್ಲ ಅನ್ನೋ ಎದೆಯಲ್ಲಿ
ಆಕಾಶದಷ್ಟು ಪ್ರೀತಿ ಇರಬಹುದು
ಆ ಬಾನಲ್ಲಿ ಒಮ್ಮೆ ಅಮವಾಸೆ ಬಂತು ಅಂತ
ಚಂದ್ರನ ಜಾಗ ಬದಲಾಯಿಸಬಾರದು
ಅಮವಾಸೆ ಬಂದ ಮೇಲೆನೆ ಹುಣ್ಣಿಮೆ ಬರೋದು
- ಅಗಸ್ತ್ಯ
11 Aug 2017, 08:23 am
ಮುಸ್ಸಂಜೆ ಮಂಜಿನಲಿ , ಕೋಗಿಲೆಯ ಕಂಪಿನಲಿ
ಬಿಡಿಸಲಾರದ ಒಗಟಲಿ ಮುಳುಗಿದ್ದೆ ನಾನು
ನೀರಿರದ ಊರಿನಲಿ , ಮುಂಗಾರ ರೀತಿಯಲಿ
ಮುಂಗುರುಳ ಸರಿಸುತ್ತ ಸುಳಿದವಳು ನೀನು.
ಕಂಡೊಡನೆ ಸೌಂದರ್ಯ , ಮನಕೇನೊ ಆಶ್ಚರ್ಯ
ಮನವನ್ನೆ ಕದ್ದಿತು ನಿನ್ನದಾ ಮಾಧುರ್ಯ
ಏನೀ ಅಚಾತುರ್ಯ , ಏನೀ ಅನಾದರ್ಯ
ಹೀಯಾಳಿಸಿ ನಗುತಿದೆ ನಿನ್ನದಾ ಚಾತುರ್ಯ
ಕುಗ್ಗಿರುವೆ ಒಳಗೆ , ಸೋತಿರುವೆ ನಿನಗೆ
ಚುಚ್ಚಿಯೇ ಕೊಲ್ಲುತಿದೆ ಆನಿನ್ನ ಮುಗುಳ್ನಗೆ
ಮನದಲ್ಲಿ ಕೆಂಧಗೆ , ಬಯಸುತಿದೆ ಒಪ್ಪಿಗೆ
ಮನ ಹಂಬಲಿಸುತಿದೆ ಕಾಣದ ಕಡಲಿಗೆ
-ಇಂತಿ ನಿನ್ನ ಪ್ರೀತಿಯ ಬಂಗಾರ..
- ನಾಗು
11 Aug 2017, 06:29 am
ಈ ತಣ್ಣನೆಯ ತಂಗಾಳಿ ತಂದು
ನಿನ್ನೆದೆಯಲ್ಲಿ ನನ್ನುಸಿರಂತೆ ಸುರುಯುವ
ಆಸೆಯಾಗಿದೆ ನನಗೆ...............
ಬೆಳಕನ್ನು ಕಳೆದುಕೊಂಡ ಅಮಾವಾಸ್ಯೆ
ಚಂದಿರನಿಗೆ ನಿನ್ನ ಪ್ರೀತಿಯ ಔತಣವ ಏರ್ಪಡಿಸಿ
ಉಣಬಡಿಸುವ ಆಸೆಯಾಗಿದೆ ಹುಣ್ಣಿಮೆಯ ಬೆಳಕನ್ನು ತುಂಬಲು ಅವನಲ್ಲಿ................
ನಿನ್ನ ಚೆಲುವಿನಿಂದ ಮೊಗಸಿರಿಗೆ ನನ್ನ ಸೊಗಸಿರಿಯ ಸೇರಿಸಿ ಕಂಕಟ್ಟುವಂತೆ
ಬಣ್ಣಗಳನ್ನು ನಮ್ಮ ನಗುವಲ್ಲಿ ತುಂಬಿ........
- ಚುಕ್ಕಿ
10 Aug 2017, 11:44 pm
ನಿನಗಾಗಿ ಕಾದೆ ಬರದೇನೆ ಹೋದೆ
ಪ್ರೀತಿಗಾಗಿ ಕಾದೆ ಸಿಗದೇನೆ ಹೋದೆ
ನಿನ್ನ ಹೆಸರ ಹಿಂದೆ ನನ್ನ ಹೆಸರ ಬರೆದೆ
ನೀ ದೂರ ಹೋದೆ ನನ್ನ ಬಿಟ್ಟು ಹಿಂದೆ
ಆಸೆಗಳ ಬುಟ್ಟಿ ನಾ ದಿನವು ಕಟ್ಟಿ
ಮನದಲ್ಲಿ ನಾನು ಪೂಜಿಸಿದೆ ನಿನ್ನ
ನಿನ್ನಿಂದ ತೂತಾದ ಹೃದಯವನು ನೆಚ್ಚಿ
ಇನ್ಯಾರ ಪ್ರೀತಿ ನಾ ಮಾಡ್ಲಿ ಚಿನ್ನ
ನಾ ದಿನವು ಕಾದದ್ದು ಬರಿ ಒಂದು ಕನಸೇ
ನಿನಗಾಗಿ ಕಾದಿದ್ದ ನೆನಪುಗಳು ಸೊಗಸೆ
ನೆನಪನ್ನು ನೆನಪಿಸುತ ನೆಪವಾಯ್ತು ಜೀವನ
ನನ್ನ ಕಣ್ಣೀರಿನ ನೋವಿಗೆ ನೀನಾದೆ ಕಾರಣ
ನನದೊಂದೇ ಆಶಯ ನೀನೆಲ್ಲೆ ಹೋದರೂ
ಯಾರೊಂದಿಗಿದ್ದರು ಸುಖವಾಗಿರು
ಕೊನೆಯಾಗಿದೆ ಇಂದು ನನ್ನ ಪ್ರೀತಿ ಕಥನ
ಇದೋ ಈ ಕವನಕೆ ಕಣ್ಣೀರಿನ ವಿರಾಮ...
-ಅರೆಯೂರು ಚಿ.ಸುರೇಶ್
- ಅರೆಯೂರು ಚಿ. ಸುರೇಶ್
10 Aug 2017, 10:15 pm
ಅವಳ ನೋಡಿದ ಖುಷಿಯಲಿ ಇಂದು
ನನ್ನ ಕಣ್ಣುಗಳಿಗೆ ಹಬ್ಬದ ಸಂಭ್ರಮ!!
ಅವಳ ವಯ್ಯಾರದ ರಸದೌತಣ ಉಂಡು
ನನ್ನ ಕಣ್ಣುಗಳು ಹಿಗ್ಗಿ ಬೀಗುತ್ತಿವೆ!!
ಆ ಅಪೂರ್ವ ಗೊಂಬೆಯನ್ನು ತಿದ್ದಿ ತೀಡಿದ
ಆ ಸೃಷ್ಟಿಕರ್ತನಿಗೆ ನನ್ನದೊಂದು ನಮನ!!
ಎಷ್ಟೇ ತಡೆದರೂ ಅವಳನ್ನು ಮತ್ತೆ ಮತ್ತೆ
ನೋಡುವ ಬಯಕೆ ನನ್ನ ಕಣ್ಣುಗಳಿಗೆ!!
ಎದುರಲ್ಲಿಯೇ ಇದ್ದರೂ ಅವಳನ್ನು
ಕದ್ದು ಕದ್ದು ನೋಡುವ ಚಟ ನನ್ನ ಕಣ್ಣುಗಳಿಗೆ!!
ಹೇಗಾದರೂ ಮಾಡಿ ಅವಳನ್ನು ನನ್ನ ಕಣ್ಣಲ್ಲೇ
ಸೆರೆ ಹಿಡಿದಿಟ್ಟುಕೊಳ್ಳುವ ಬಯಕೆ ನನ್ನದು!!
- ಪಿ.ಜಿ.ಜ್ಯೋತಿ
10 Aug 2017, 02:59 pm
ಸಾವಿರ ಶತಮಾನಗಳ ಹಿಂದೆ....
ದಿಗಂಬರನಾಗಿ ಹುಟ್ಟಿದ ಕಂದ
ತಾಯಿಯ ಶಾಂತಿ ಮೊಲೆಯುಂಡು ಬೆಳೆದ
ತಂದೆಯ ಅಕ್ಕರೆ -ಸಕ್ಕರೆ ಮಾತು ಕೇಳಿದ
ಶಿಕ್ಷಣದ ಶಿಕ್ಷೆ ಪಡೆದ ಶಿಖರದಂತೆ ಬೆಳದು ಬಂದ
ಭಾರತ ತಾಯಿಯನ್ನು ಸುಂದರವಾಗಿ ಗೀಚಿದ
ವರ್ಣನೆಯನ್ನು ಸುರುಳಿಯಾಕಾರದಲ್ಲಿ ಬರೆದ
ಓದುಗರ - ಕೇಳಗರ- ಒಪ್ಪಿದರು ಪ್ರಶಂಸೆ ಪಡೆದ
ಸಣ್ಣ ದೊಡ್ಡ ಮಾತುಗಳನ್ನು ದೂರ ತಳ್ಳಿದ
ದೀನ - ದಲಿತರಿಗೆ ಸ್ವ ಸಹಾಯ ಮಾಡಿದ
ಜಾತಿ - ಧರ್ಮವನ್ನು ದೂರಗಟ್ಟಿದ
ವಿಜ್ಞಾನವನ್ನು ಎಲ್ಲರಲ್ಲೂ ಹುಡುಕಿದ
ಮಾನವತೆ ನಡತೆಯಲ್ಲಿ ನೆಡೆದ
ಸೂರ್ಯ ಮುಳುಗಡೆಯ ಕಡೆಗೆ ಸಾಗಿದ
ಜಾತಿ - ಅಧರ್ಮ-ಅನೀತಿ ನೋಡಿ ಕಣ್ಣೀರು ಹಾಕಿದ
ಮಾನವರ ದೌರ್ಜನ್ಯ ನೋಡಿದ
ಹೃದಯ ಕಂಪನ ನಿಲ್ಲಿಸಿದ
ಇವನೇ ನಮ್ಮ ಆರಾಧ್ಯ ದೈವನಾದ
ಈ ದೇಶವನ್ನು ಬದಲಿಸಿದ ಪುಣ್ಯತ್ಮಾನಾದ
ಅವರೇ ನಮ್ಮ ಹೃದಯಕ್ಕೆ ಹತ್ತಿರನಾದ
ನಿತ್ಯವೂ ಆಲಿಸೋಣ ಅಣಿಮುತ್ತುನಾದ
- Shinan
10 Aug 2017, 10:59 am
ಮಿನುಗುವ ತಾರೆಯ
ಹೋಲಿಕೆಯು ಅವನಿಗೆ!!
ಮಿನುಗಿ ಮರೆಯಾಗುವ
ಮಾಯೆಯಂತೆ ಅವನು!!
ಸನಿಹ ಕಂಡರೂ ದೂರ
ಎನಿಸುವ ಕಾಂತಿ ಅವನದು!!
ದೂರ ಇದ್ದರೂ ಹೊಳೆದು
ಮನಸೆಳೆವ ಗೀಳು ಅವನಿಗೆ!!
ವಿರಹದ ಜಾಡು ಹಿಡಿದು
ಕಾಡಿಸುತ್ತಿರುವ ನನ್ನ ಅವನ!!
ಕಂಡೂ ಕಾಣದಂತೆ ನಟಿಸುವ
ನಾಟಕದ ಪಾತ್ರಧಾರಿ ಅವನು!!
ಸೇರದಾದೆ ಅವನ ನಾನು
ಬಾರದಾದ ಇಲ್ಲಿ ಅವನು!!
ಅವನ ಮೇಲೆ ಮೋಹ ನನಗೆ
ಸೇರಲಿ ಹೇಗೆ ನಾನು ಅವನ!!
- ಪಿ.ಜಿ.ಜ್ಯೋತಿ
10 Aug 2017, 08:43 am