Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಲ್ಲಿಗೆ ಸಂಪಿಗೆ

ಮಲ್ಲಿಗೆ ಮಲ್ಲಿಗೆ ಓ
ದುಂಡು ಮಲ್ಲಿಗೆ
ಮೆಲ್ಲಗೆ ಬಂದೆ ನೀ
ನನ್ನ ಎದೆಯೊಳಗೆ!!

ಸಂಪಿಗೆ ಸಂಪಿಗೆ ಓ
ಕೆಂಡ ಸಂಪಿಗೆ
ಸೋತು ಮರುಳಾದೆ
ನಾ ನಿನ್ನ ಕಂಪಿಗೆ!!

ಅವಳ ಜೊತೆ ಸೇರಿದೆ
ಅವಳ ಮುಡಿಯೇರದೆ
ಅವಳ ಖುಷಿ ಕಂಡು
ನೀನಲ್ಲಿ ನಗೆ ಬೀರಿದೆ!!

ಶಿರದಿ ನೀ ಹಿಗ್ಗುತಿರುವೆ
ಓ ದುಂಡು ಮಲ್ಲಿಗೆ
ನಿನ್ನ ಕಂಡು ‌ನಾ ಕುಗ್ಗಿದೆನೇ
ಓ ಕೆಂಡ ಸಂಪಿಗೆ!!

- ಪಿ.ಜಿ.ಜ್ಯೋತಿ

01 Aug 2017, 03:52 pm

ಮರುಭೂಮಿಯಲ್ಲಿ

ಮರುಭೂಮಿಯಲ್ಲಿ
ದಿಕ್ಕು ಕಾಣದ ಹೊತ್ತಲಿ!!
ಎದಿರು ಸಿಕ್ಕ‌ನು ಒಬ್ಬ
ದಾರಿ ತಪ್ಪಿದ ಗೆಳೆಯನು!!

ಅವನ ಅಕ್ಕರೆಯ ಮಾತಿಗೆ
ನಕ್ಕು ಮರುಳಾದ ಮನಸಿದು!!
ಸೋತು ಹೋದೆ‌ನೇ ನಾನು
ಅವನ ಮಾತಿನ ಮೋಡಿಗೆ!!

ಜಾರಿ ಬಿದ್ದಿತೇ ಮನಸು
ಅವನ ಅಂದಕೆ ಸೋತು!!
ಚಂಚಲಗೊಂಡು ಹಾರಿತೇ ಮನ
ಮುಗಿಲೆತ್ತರಕ್ಕೆ ರೆಕ್ಕೆ ಬಡಿದು!!

ಅಯ್ಯೋ ಮೋಡದೊಡನೆ
ಆ ಸಂಭ್ರಮ ಹೇಳ ತೀರದು!!
ಮರಳಿ ಬುವಿಗೆ ಬರಲು
ಮನಕೆ‌ ದಾರಿ ತಿಳಿಯದು!!

ದೂರದ ಮರಳು ದಿಬ್ಬದ ಮೇಲೆ
ಕಂಗೆಟ್ಟು ನಿಂತಿದ್ದಳು ಒಬ್ಬಳು!!
ಅವಳ ಕಂಡೊಡನೆ ಅವನ‌‌ ಕಣ್ಣರಳಿ‌
ಓಡಿ ತಬ್ಬದ ಅವಳ ತನುವನು!!

ಎದಿರು ಸಿಡಿಲು ಬಡಿದಂತೆ
ನಾನು ಕಂಗೆಟ್ಟು ನಿಂತೆ!!
ಮುಗಿಲಿನಿಂದ ಜಾರಿ ಬುವಿಗೆ
ಉರುಳಿದ ಮನದ ಭಾವ ಛಿದ್ರ!!

ಅವಳು ಅವನ ಪ್ರಾಣಕಾಂತೆ
ನಾನು ಏಕಾಂಗಿಯಾಗಿ ನಿಂತೆ!!
ಸುಮ್ಮನೆ ಸಲ್ಲದ ಕನಸ ಹೆಣೆದು
ಯಾಕೆ ತಲ್ಲಣಗೊಂಡಿತು ಮನಸು!!

- ಪಿ.ಜಿ.ಜ್ಯೋತಿ

01 Aug 2017, 03:35 pm

ಚಿಂತೆ

ಅರಿವಿಲ್ಲದವನಿಗೆ ಗುರುವಿನ ಚಿಂತೆ
ಗುರುವಿದ್ದವನಿಗೆ ಗುರಿಯ ಚಿಂತೆ
ಹಸಿದವನಿಗೆ ಊಟದ ಚಿಂತೆ
ಉಂಡವನಿಗೆ ಕರಗಿಸುವ ಚಿಂತೆ
ಒಂಟಿಯಾಗಿದ್ದರೆ ಜಂಟಿಯಾಗುವ ಚಿಂತೆ
ಜಂಟಿಯಾಗಿದ್ದರೆ ಒಂಟಿಯಾಗುವ ಚಿಂತೆ
ಕಷ್ಟದಲ್ಲಿರುವವನಿಗರ ಸುಖದ ಚಿಂತೆ
ಕಷ್ಟ ಬಂದರೇನೆಂಬ ಚಿಂತೆ
ಸಾಯುತಿರುವವನಿಗೆ ಬದುಕುವ ಚಿಂತೆ
ಬದುಕಿರುವವನಿಗೆ ಸಾವಿನ ಭಯದ ಚಿಂತೆ
ವಯಸ್ಸಿಗೆ ಬಂದವನಿಗೆ ಹುಡುಗಿಯ ಚಿಂತೆ
ವಯಸ್ಸಾದವನಿಗೆ ರೋಗದ ಚಿಂತೆ
ಯಾರನ್ನು ಬಿಟ್ಟಿಲ್ಲ ಚಿತೆಗೇರಿಸುವ ಈ ಚಿಂತೆ
ಈ ಜಗತ್ತೇನೆಕೆ ಸೃಷ್ಟಿಸಿದೆನೆಂದು ದೇವರಿಗೆ ದೊಡ್ಡ ಚಿಂತೆ ....

ಧರ್ಮ ರಾಜ್

- ಧರ್ಮರಾಜ್

01 Aug 2017, 02:49 pm

ಅಪ್ಪಿ

ಅಪ್ಪಿ ನಿನ್ನ ಮುದ್ದಿಸಲೇ
ಮಗುವಂತೆ ‌ಮಡಿಲಲಿ ಮಲಗಿಸಲೆ
ಮನಸೊಳಗೆ ನಿನ್ನ ಬಚ್ಚಿಡಲೆ‌
ಇಲ್ಲ ಕಾವಲಿಗೆ ನಿಂತಂತೆ ಕಾಯಲೆ

ಜೋಕಾಲಿ‌ಯ ಕಟ್ಟಿ ಕೂರಿಸಿ ತೂಗಲೆ
ಹಾರುವ ಮುಂಗುರುಳ ನೋಡಿ‌ ಮೈಯ ಮರೆಯಲೆ
ನೀ ನುಡಿವಾಗ ಮೌನಿಯಾಗಬಿಡಲೆ
ನೀ ನನ್ನನೆ ನೋಡುತಲಿರಲು‌ ಮರುಳನಾಗಲೆ‌

ನೀ‌ ನನ್ನ ಸೋಕಿದಾಗ ಶಿಲೆಯಾಗಿ ಬಿಡಲೆ
ನನ್ನ ಕೈ ಹಿಡಿದು ನೀ ನಡೆಸುವಾಗ ಮಗುವಾಗಲೆ
ಕಣ್ಣು ತುಂಬಿ ನಿಂತಾಗ ತಾಯಿ ಮಡಿಲ ನಾ‌ ಕೊಡಲೆ
ಹುಸಿ‌‌ ಮುನಿಸ‌ ತೋರಲು ನೀನು,‌ ಎತ್ತವನಂತೆ ರೇಗಿಬಿಡಲೆ‌
ಹೇಳು ಬಾರೆ ನನ್ನ ಕನಸುಗಳ‌ ಸಾಲೆ
ನಿನಗಾಗಿ ಕಟ್ಟಿರುವೆ ಪ್ರೀತಿಯ ಮಾಲೆ

- ಶ್ರೀಕಾವ್ಯ

01 Aug 2017, 02:06 pm

ಕಿರುನಗೆ

ವಾಸಿಸಲು ನನ್ನ ಈ
ಪುಟ್ಟ ಎದೆಯೊಳಗೆ..

ನನ್ನವಳು ನನಗೆ ಕಟ್ಟಿದಳು
ಕಿರು ನಗೆಯ ಬಾಡಿಗೆ...

ನಾ ಮನಸಾರೆ ಮನಸೋತೆ
ನೋಡಿ ಅವಳ ಕಣ್ಣ ಕಾಡಿಗೆ...

---- ಧರ್ಮ ರಾಜ್

- ಧರ್ಮರಾಜ್

01 Aug 2017, 01:21 pm

ನನ್ನೊಳಗಿನ ನನ್ನವಳು

ನನ್ನೊಳಗಿನ ಅವಳೆಂದರೆ.....
ಕಣ್ಣಿಗೆ ಕಾಣದವಳು
ಸ್ಪರ್ಶಕ್ಕೆ ಸಿಗದವಳು
ಮಾತಿಗೆ ದೊರಕದವಳು
ನನ್ನೆಲ್ಲ ಭಾವನೆಗಳಿಗೆ ಜೀವ ತುಂಬಿ
ಕವನದ ಮೂಲಕ ವ್ಯಕ್ತವಾಗುವವಳು
ನನ್ನೊಳಗಿನ ಅವಳು .....

---- ಧರ್ಮ ರಾಜ್

- ಧರ್ಮರಾಜ್

01 Aug 2017, 01:17 pm

ಮೋಹನ ರಾಗ

ಪ್ರೇಮದಿಂದ ನುಡಿಸಿರೆ
ನೀ ಪ್ರೇಮ ರಾಗ!!
ಮೋಹಗೊಂಡು ನುಡಿಸಿರೆ
ನೀ ಮೋಹನ ರಾಗ!!

ನಿನ್ನ ಕೊರಳಿನ ದನಿಯು
ಕೊಳಲಿನಿಂದ ಹೊರ ಹೊಮ್ಮಿ
ಗಾಳಿಯಲ್ಲಿ ತೇಲಿ ತೇಲಿ
ಬಡಿಯಿತೆನ್ನ ಎದೆಯ ಬಾಗಿಲ!!

ನಾ ಮಂತ್ರ ಮುಗ್ಧಳಂತೆ
ಇಲ್ಲಿ ಬಂದು ನಿಂತೆ!!
ಅದು ಏಕೋ ಎಂದು ನನಗೆ
ಒಂದೂ ತಿಳಿಯದು ಸುಂದರ!!

ನಿನ್ನ ನೋಡುತ ನೋಡುತ
ಕೊಳಲ ದನಿಯ ಕೇಳಿದೆ!!
ಸ್ವರಗಳಲ್ಲಿ ಯಾವ ರಾಗ ಸೆಳೆಯಿತು
ತಿಳಿಸದಂತೆ ನನ್ನ ‌ಇಲ್ಲಿ ಕರೆಯಿತು!!

- ಪಿ.ಜಿ.ಜ್ಯೋತಿ

01 Aug 2017, 11:55 am

ನೀಡು ಬಾ ಬಂಗಾರದ ಪದಕ

ಬದುಕು ಎಂಬ ಪಂದ್ಯದಲ್ಲಿ
ಸೋತು ಗೆದ್ದವನು ನಾನು!!
ಪ್ರೀತಿ ಎಂಬ ಮಾಯೆ ತಂದು
ನನ್ನ ಸೋಲಿಸ ಬಂದವಳು ನೀನು!!

ನಿನ್ನ ಮೋಹದಾಟಕೆ ಮರುಳಾಗಿ
ಪ್ರೀತಿಯಲ್ಲಿ ಬಿದ್ದು ಸೋತವ ನಾನು!!
ನನ್ನ ಸೋಲನ್ನು ಕಂಡು ನಕ್ಕು
ತಿರಸ್ಕಾರ ಮಾಡಿದವಳು ನೀನು!!

ನಿನ್ನ ಪ್ರೀತಿಯಲ್ಲಿ ಸೋತ ನಾನು
ಮೂರ್ಖನಲ್ಲ‌ ಕಣೆ ಸೋತು ಗೆದ್ದವನು!!
ನಿನ್ನ ಪ್ರೀತಿಯಲ್ಲಿ ಬಿದ್ದ ಮೇಲೂ
ಎದ್ದು ಬದುಕ ಕಲಿತವನು!!

ಬದುಕು ಎಂಬ ಪಂದ್ಯದಲ್ಲಿ
ನಿಜವಾಗಿ ಗೆದ್ದವನು ನಾನು!!
ಬಾ ಬಂದು ನೋಡು ನನ್ನ ಗೆಲುವ
ನೋಡಿ ನೀಡು ಬಾ ಬಂಗಾರದ ಪದಕ!!

- ಪಿ.ಜಿ.ಜ್ಯೋತಿ

01 Aug 2017, 11:32 am

ಬಂಗಾರದ ಅಂಚಿನ ಸೀರೆ

ಬಂಗಾರದ ಅಂಚಿನ ಸೀರೆ
ನೀ ತೊಟ್ಟಿರೆ ಚಂದವು ನೀರೆ!!
ಬಳುಕುವ ಮೈಯಲಿ ಬಾರೀ
ಹೊಳಪನು ನೀಡಿದೆ ನಾರಿ!!

ನಾಬಿಗೆ ಅಂಟಿದ ನೆರಿಗೆ
ತಾ ಜಾರಿದೆ ಪಾದದ ವರೆಗೆ!!
ರವಿಕೆಯ ಸುತ್ತಲು ಸೆರಗು
ತಂದಿದೆ ಬಾರೀ ಮೆರಗು!!

ಕಾಮನ ಬಿಲ್ಲಿನ ಬಣ್ಣ
ನಿನ್ನ ಸುತ್ತಲೂ ಹರಡಲು ಚೆನ್ನ!!
ಸೂರ್ಯಾಸ್ತದ ಆ ರಂಗು
ಸೋಕಿತೇ ‌ನಿನ್ನಯ ಕೆನ್ನೆ!!

ನಾಚಿಕೆ ಏತಕೆ ಚೆಲುವೆ
ನೀ ಚೆಲ್ಲುತ ಬಾರೆ ಒಲವ!!
ದಿಬ್ಬಣದ ಮನೆಯಲ್ಲಿ ನಿನ್ನ
ಕಾದಿರುವನು ಒಬ್ಬ ವರನು!!

- ಪಿ.ಜಿ.ಜ್ಯೋತಿ

01 Aug 2017, 11:15 am

ಬಾಣ ಹೂಡಿ ಹೆದರಿಸಬೇಡ

ಕಾಡಿನಲ್ಲಿ ಅಲೆಯುತ್ತಿರುವ
ಒಂಟಿ‌ ಜಿಂಕೆ ನಾನು!!
ಬಾಣ ಹೂಡಿ ಹೆದರಿಸಬೇಡ
ನೀ ಹೋಗು ಬೇಟೆಗಾರ!!

ಅದು ಹೇಗೋ ನನ್ನವರೆಲ್ಲರಿಂದ
ದೂರಾಗಿ ಒಂಟಿಯಾಗಿರುವೆ!!
ಆದರೂ ಈ ಕಾಡಿನಲ್ಲಿ
ನಾ ನನ್ನವರ ಹುಡುಕುತ್ತಿರುವೆ!!

ಕ್ರೂರ ಮೃಗಗಳ ದೃಷ್ಟಿ ತಾಕದಂತೆ
ಮೈಯೆಲ್ಲ ಕಣ್ಣಾಗಿಲಿ ಅಲೆದಿರುವೆ!!
ಕ್ಷಣ ಕ್ಷಣಕ್ಕೂ ಹೆದರಿರುವ ಈ ನನ್ನ
ಕಣ್ಣುಗಳ ಕಂಡು ಮರುಕ ಬಾರದೇ!!

ನೊಂದಿರುವ ಪಾಪದ ಜೀವಿ ನಾ
ಎಲ್ಲವನ್ನೂ ಕಳೆದುಕೊಂಡಿರುವೆ!!
ಬಾಣ ಹೂಡಿ ಹೆದರಿಸಬೇಡ
ನೀ ಹೋಗು ಬೇಟೆಗಾರ!!

- ಪಿ.ಜಿ.ಜ್ಯೋತಿ

01 Aug 2017, 11:03 am