Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನ

ನಾವು ಜೀವನದಲ್ಲಿ ಒಂದೇ
ಜೋಕ್ ಗೆ ಪದೇ ಪದೇ
ನಗಲ್ಲ ಅಂದ್ಮೆಲೆ ಯಾಕ್ರಿ
ಒಂದೇ ನೋವಿಗೆ ಪದೇ ಪದೇ
ಅಳಬೇಕು



ಇದು ಮನದಾಳದ ಮಾತು

- Munna Rk

30 Jul 2017, 08:05 am

ಸವಿ ಸ್ನೇಹ

ಒಲವ ಸವಿ ಮುಂಜಾನೆಯಲಿ
ಕರಗುತಿಹ ಮಂಜು ನಾವಿಲ್ಲಿ,
ಸ್ನೇಹದ ಅಪ್ಪುಗೆಯಲಿ,
ಬಂಧನಗಳ ಶಾಖದಲಿ,
ಬಾಂಧವ್ಯಗಳ ಹೊಳಪಿನಲಿ,
ಪ್ರೀತಿಯ ಬೆಳಕಿನಲ್ಲಿ,
ಈ ಮುಂಜಾನೆಯ ತಂಪಿನಲಿ,
ಹಕ್ಕಿ-ಪಿಕ್ಕಿಗಳ ಕಂಠದ ಇಂಪಿನಲಿ,
ಮೆಲ್ಲನರಳಿದ ಮೊಗ್ಗುಗಳ ಕಂಪಿನಲಿ,
ಇವೆಲ್ಲ ಬಿಂಬಿಸುವ ಸ್ನೇಹ-ಪ್ರೀತಿಯೆ ತುಂಬಿದೆ ನಮ್ಮಲ್ಲಿ,
ಈ ಸ್ನೇಹವೆಂದು ಚಿರಕಾಲ ಉಳಿಯಲಿ...!

ಇಂತಿ ನಿಮ್ಮ ಗೆಳೆಯ ಮನೋಜ್

- manoj kumar

29 Jul 2017, 06:34 pm

ಅಪರೂಪ

ಏನ ಹೇಳಲಿ ಆ ಹೊಳಪ
ಅನಿಸುವುದು ವಿಭೂತಿ ಬಿಳಪ

ಬೆಳಗು ಜ್ಯೋತಿಯ ದೀಪ
ಎದೆ ಬೇಗೆ ಆರಿಸುವ ತಂಪ

ಕೆಂದುಟಿಯಲಿ ಮುಗಳ ನಗುವಿನ ನೆಪ
ಅದುವೇ ಆಕರ್ಷಣೆಯ ಮಂಟಪ

ಕಂಡಾಗ ಸ್ವರ್ಗದ ಪ್ರಸ್ತಾಪ
ಕಾಣದೆ ಇದ್ದಾಗ ಭಾವನೆಗಳ ಆಲಾಪ

ಗೆಳತಿ ಗೆಳತಿಯರ ಕಲಾಪ
ಎದ್ದು ಕಾಣುವುದು ಈ ಮುಖ ಒಂದೇ ಸಾಪ

ಅವಾಗ ಅವಾಗ ಉಕ್ಕುವುದು ಕೋಪ
ಬಿಟ್ಟು ಬಿಟ್ಟು ಕಾಣಿಸುವದಕಿರಬೇನೋ ಪಾಪ

ನೋಡಿದರು ನೋಡದಂತೆ ಮುಂಗೋಪ
ಅಂದು ಅದೆ ಸಮಾರೋಪ

ನಗುವಿಗೆ ಯಾಕೋ ಸಂತ್ತಾಪ
ಕಣ್ಣಲ್ಲೆ ಕಾಣುವುದು ಪ್ರೇಮದ ಮಾಪ

ಮನದಲಿ ಕಾಡುವದೆನೋ ನೆನಪ
ಅದಕ್ಕಾಗಿ ಇರಬೇಕೆನೋ ಹಪ ಹಪ

ಮಳೆ ಸುರಿದಂತೆ ಕನಸುಗಳು ತಪ ತಪ
ಬೆಳೆಯುವುದೊಂದು ಪ್ರೀತಿ ಗೋಪುರದ ವೃಕ್ಷ ಕಲ್ಪ

ಜನ ಭಯಕ್ಕೆ ಮಾತು ಬರದೆ ಗಪ್ಪ ಚಿಪ್ಪ
ಅರಳುವ ಒಲವಿಗೆ ಇದೊಂದು ವಿಧಿಶಾಪ

ಎಂದು ಮಾಸದಿರಲಿ ನಗುವಿನ ರೂಪ
ಹಿರೇಉಳ್ಳಿಗೇರಿ ಕರೆಮ್ಮಳ ಆಶೀರ್ವಾದ ಪಡೆದ ನೀ ಅಪರೂಪ

- MB

29 Jul 2017, 03:52 pm

ಬರಗಾಲ

ಎಲ್ಲೆಲ್ಲೂ ಹರಡಿದೆಯೋ
ಬರಗಾಲ
ನಮಗೆ ಇನ್ನೆಲ್ಲಿದೆಯೋ
ಉಳಿಗಾಲ

ತಿನ್ನಲು ಮೇವಿಲ್ಲ
ದಾಹ ನೀಗಲು ಜಲವಿಲ್ಲ
ಮಳೆಯು ಮರೀಚಿಕೆಯಾಯಿತಲ್ಲ
ನರರಿಂದ ನಮಗೆ ಉಳಿಗಾಲವಿಲ್ಲ

ಸಹಪಾಠಿಗಳೆಲ್ಲ ಖಸಾಯಿಖಾನೆ
ಸೇರುತಿರುವರಲ್ಲ
ನಮ್ಮ ಈ ಯಾತನೆ
ಆಲಿಸುವರಾರು ಇಲ್ಲ

ದೇವ ನೀ ದಯೆತೋರೆಯ
ಬಡ ಜೀವವ ಉಳಿಸೆಯ


ಶಾರಧ

- ಶಕುಂತಲಾ

29 Jul 2017, 12:52 pm

"ನಾ".."ನೀ"

"ನಾನು",ನನ್ನದೆಂಬ ನುಡಿಯು "ನಿನ್ನನ್ನು" ನಿಂದಿಸದಂತಾಗದಿರಲಿ..
"ನಾನು".., "ನಿನ್ನನ್ನು" ನಗುವ ನುಡಿಯಾಗಿರಲಿ...
"ನಾನು" ನಿಮ್ಮ ನೆಮ್ಮದಿಯ ನುಡಿಯಾಗಿರಲಿ..

- ಗೌಡಕಲರ್ಪುಲ್

29 Jul 2017, 07:11 am

ವೇದನೆ

ನಿದ್ದೆ ಮಾಡಬೇಕೆಂದಾಗಲ್ಲೆಲ್ಲ
ನಿನ್ನ ನೆನಪು ಕಾಡಿಸಿ ಎಬ್ಬಿಸುತ್ತೆ ಪದೇಪದೇ
ಕಣ್ಣ ರೆಪ್ಪೆ ಮುಚ್ಚಿದರೂ ಕಂಗೊಳಿಸುತಿದೆ ನಿನ್ನ ಮನವೆಲ್ಲ
ನೀ ದೂರಾಗಿ,ದಿನ ಕಳೆದರೂ ನಿನ್ನ ನೆನಪಿನ ಗುಂಗಿನಲ್ಲೆ ಇರುವೆ ನಾ ಸಾದಾ
ಮರೆತು ಮರೆಯಾಗಬೇಕೆಂದ ನಿನ್ನ ನೆನಪುಗಳು ಈ ಮಧ್ಯ ರಾತ್ರಿಯಲ್ಲೇ ನೆನಪಿಸುತಿದೆಯಲ್ಲ
ನಿನ್ನ ಬಿಟ್ಟು ಇರಲಾರದ ಬದುಕು
ಅನುಭವಿಸುತಿದೆ ಕ್ಷಣ ಕ್ಷಣಕ್ಕೂ ಯಾತನೆ
ನಿನ್ನ ನೆನಪೊಂದೆ ಹಗಲು ಈ ನಡು ರಾತ್ರಿಯ ಪುಳಕವು
ಸ್ಟೇಟಸ್ ನೋಡಿದವ ಅಂದುಕೊಂಡನು
ಇವ ಎಂತ ಮಾನಸಿಕ ಪ್ರೇಮಿ ಬರೆಯುತ್ತನೆ ನಡು ರಾತ್ರಿಯಲ್ಲೂ ಅವಳನ್ನೇ ಧ್ಯಾನಿಸಿ
ನೀ ಅಲ್ಲದೇ ನಿನ್ನಾರ ನೆನಪ ಬರಲಿ ಈ ನಡು ರಾತ್ರಿ ಓ.....ಬಿಟ್ಟು ಹೋದಾ ಪಿಶಾಚಿ...
ಓ.....ಸಾರಿ....ಪ್ರೇಯಸಿ...!!

- ಎಸ್.ಬಿ

29 Jul 2017, 01:42 am

ಋಣ

ಅನ್ನದ ಋಣವ
ಬಲ್ಲವರಾರು
ಹುಡುಕುತ ಬರುವುದು
ಬೇಡವೆಂದರು

ಕನಸಿನ ಕೋಟೆ
ಕರಗಿದರೇನು
ತಾಳ್ಮೆಯ ಜ್ಯೋತಿ
ಬೆಳಗದೇನು

ಅರಸಿ ಬಂದಾಗ
ದೂರ ಸರಿದೆ
ನಿಟ್ಟುಸಿರು ಬಿಟ್ಟಾಗ
ನೀನೆ ಬಳಿ ಬಂದೆ

ನಾ ಬಯಸಿದಂತೆ
ನಡೆಯದೇನು
ನಡೆಯುವುದೆಲ್ಲ ನಿನ್ನ ಲೀಲೆಯಲ್ಲವೇನು

ನಾ ನಿನ್ನ ಮಗಳಲ್ಲವೇನು!
ನನ್ನ ಏಳಿಗೆ ನಿನ್ನ ಹೊಣೆಯಲ್ಲವೇನು!
ಕೈ ಹಿಡಿದು ಕಾಯವ್ವ ನೀ‌ನು!
ಸದಾಕಾಲ ನಿನ್ನ ಸೇವಕಳು ನಾನು!



ಶಾರಧ

- ಶಕುಂತಲಾ

28 Jul 2017, 10:10 pm

ಬದುಕು ಮರೀಚಿಕೆ....

ಬದುಕಾಗಿದೆ ಮರೀಚಿಕೆಯ ಹುಡುಕುವಂತ ಪರಿ
ಕಣ್ಣೀರ ಕಡಲೆ ಹರಿಯುತಿದೆ ಕಣ್ಣಿಂದ ಜಾರಿ
ಸೋಲುಗಳೇ ಜೊತೆ ಸೇರಿವೆ ಪ್ರತಿ ಬಾರಿ
ಮರೀಚಿಕೆಯ ಹಿಡಿಯಲು ಇರುವುದೆ ದಾರಿ

ಜೀವನವಾಗಿದೆ ನೋವುಗಳ ರೂವಾರಿ
ಕರೆತಂದಿದೆ ಮನಸಿಗೆ ಸಾವೆಂಬ ವ್ಯಾಪಾರಿ
ಉಳಿದೋಗಿದೆ ಜೀವ ವ್ಯಾಪಾರದಲಿ‌ ಆಗದೆ ಬಿಕರಿ
ಸೋತಿರಲು ಜೀವ ವ್ಯಾಪಾರಿಯೆದುರು ಹಲವು ಬಾರಿ

ನಾನಿಗಿರುವೆ ಮಾತಾಡಲಾಗದ ಮೌನಿ‌ ಜಗದೆದುರು‌
ಮಾತಾಗಲಾರದ ಮೌನವು ಬಿಗಿಹಿಡಿದಿದೆ ನನ್ನ ಉಸಿರು
ಕರುಣೆ ಇ‌ಲ್ಲದೆ ನಿಲ್ಲಿಸಿಬಿಡಲೆ ಮನಸಿನ ಮಾತು
ಮನಸಿರದೆ ಬದುಕಿ ಮಾಡುವುದಾದರು ಎಂತು

- ಶ್ರೀಕಾವ್ಯ

28 Jul 2017, 09:23 pm

ಏಕಾಂತ

ಇಬ್ಬರೊಳಗೂ ಏಕಾಂತವಿದೆ.
ಆದರೆ........
ಅವನದು ಸ್ವ ಇಚ್ಛೆಯ ಏಕಾಂತ,
ನನ್ನದು ಹೇರಿಕೆಯ ಏಕಾಂತ.

ಕಣ್ಣೀರೆಲ್ಲ ಜಾರಿ ಭೂ ಸ್ಪರ್ಶವಾದರೂ
ಅವನು ಕಲ್ಲು ಬಂಡೆಯಂತೆ ತಟಸ್ಥ,
ನಿಜಕ್ಕೂ ಅವನು ನನ್ನವನಲ್ಲ!!!!
ನನ್ನವನು ನಿಜಕ್ಕೂ ಅವನಲ್ಲ!!!!
ಕಳೆದುಕೊಂಡಿಹೆನು ಏನನ್ನೊ....

ಮಾತಾಡಬೇಕೆಂದು ಕರೆದವನ ಮೌನ
ಎಲ್ಲದಕ್ಕೂ ಉತ್ತರವಾಗಿ ನಿಂತಿದೆ.
ಪುನಃ ಮಾತಾಡಿ ಪ್ರಶ್ನೆಗಳ ಸುರಿಮಳೆ ಹರಿಸಲೆ?
ಮಾತಾಡದೆ ಮೌನದಲಿ ಎಲ್ಲವನು ಬಗೆಹರಿಸಲೆ?
ಅನರ್ಥಗೊಂಡಿದೆ ಎಲ್ಲವೂ....

ಅಕ್ಕ-ಪಕ್ಕದಲಿ ಕುಳಿತ ಇಬ್ಬರಲ್ಲೂ ಏಕಾಂತ.
ಆದರೆ......
ಅವನದು ಸ್ವ ಇಚ್ಛೆಯ ಏಕಾಂತ,
ನನ್ನದು ಹೇರಿಕೆಯ ಏಕಾಂತ.

- ಅಕ್ಷತ

28 Jul 2017, 03:13 pm

ತೃಪ್ತಿ ಅತೃಪ್ತಿ

ಹಕ್ಕಿಗಳ ಇಂಪಾದ ನಾದದಲಿ
ಇಷ್ಟವಾದ ಹಾಡಿನ ಗುಂಗಲಿ
ಸುಂದರವಾಗಿ ಕಾಣುವ ಆಕೃತಿಯಲಿ
ಹರ್ಷ ಮೂಡುವುದು ಎದೆಯಲಿ

ಸಮುದ್ರದ ಅಂತರಾಳದಲಿ
ಆಗಸದ ಮೋಡಗಳ ಎತ್ತರದಲಿ
ಭೂವಿಯ ಗರ್ಭದ ಗುಹೆಗಳಲಿ
ಭಯ ಕಾಡುವುದು ಹೃದಯಂಚಿನಲಿ

ಅರಿಯದೆ ಆದ ತಪ್ಪಿನಲಿ
ಅನ್ಯರಿಗೆ ಮಾಡಿದ ಸಹಾಯದಲಿ
ಹಿರಿಯರಿಗೆ ನೀಡಿದ ಗೌರವದಲಿ
ಸಮಾಧಾನವಿರುವುದು ಮನದಲಿ

ಕನ್ಯೆಯ ಆಕರ್ಷಣೆಯಲಿ
ಹೊನ್ನಿನ ವಿಚಾರದಲಿ
ಮಣ್ಣಿನ ಸಂಘದಲಿ
ಹಿರೇಉಳ್ಳಿಗೇರಿ ಕರೆಮ್ಮ ಚಿಂತೆಯೇ ಪ್ರತಿಯೊಂದು ಅಂಗದಲಿ

- MB

28 Jul 2017, 01:46 pm