Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಮ್ಮನ ಮಡಿಲು

ಪ್ರಪಂಚವೆಲ್ಲಾ ಸುತ್ತಿ ಬಳಲಿ ಬಂದರೂ
ಒಂದು ಕ್ಷಣ ಅಮ್ಮನ ಮಡಿಲಲ್ಲಿ
ಮಲಗಿದರೆ ಸಾಕು ಸ್ವರ್ಗದಲ್ಲಿಯೂ
ಸಿಗದ ನೆಮ್ಮದಿ ನಾನೋಡುವೆ.........

ಎದೆಯಾಲು ಕುಡಿಸಿದ ಅಮ್ಮನಿಗೆ
ಸರಿದುಗವು ಕೋಟಿ ಕಾಣಿಕೆಗಳು ಕೊಟ್ಟರು..........
ಸಾವನುಂಗಿ ನಮಗೆ ಜೀವಕೊಟ್ಟ ಹೆತ್ತತಾಯಿಗೆ
ಏನನ್ನು ಕೊಡಬಲ್ಲೆ ನನ್ನ ಜೀವನ ಬಿಟ್ಟರೆ............

ಹರಿಕೆ ಹೊತ್ತು ನೂರು ನಮನಸಲ್ಲಿಸಲೇ
ಆ ಕಾಣದ ದೇವರಿಗೆ ನನ್ನ ಮುದ್ದು ಅಮ್ಮನಿಗೆ ಸದಾ ಮನದಲ್ಲಿ ಮಂದಹಾಸವ ತುಂಬೋ ಎಂದು............

- ಚುಕ್ಕಿ

03 Jul 2017, 08:46 pm

ಮತ್ತೆ ಮಳೆ ಹನಿಗಳು

ಮತ್ತೆ ಮಳೆ ಹನಿಗಳು
ಮತ್ತೆ ಕಾಡುವ ನೆನಪುಗಳು
ಮತ್ತದೆ ನೋವುಗಳು
ಮುಗಿಯದ ಕಣ್ಣೀರಾ ಹನಿಗಳು
ಕೊನೆಗೆ ಉಳಿದಿದ್ದೆ ಹಾಗೆ ಗೀಚಿದ ಕವನಗಳು.....

- prashanth

03 Jul 2017, 07:43 pm

ಪ್ರೀತಿಯ ಒಡತಿ

ಬಾನ ಹಕ್ಕಿ ಹಾರುವ ವೇಳೆ
ಉದಯ ರವಿಯು ಮೂಡುವ ವೇಳೆ
ಈ ನನ್ನ ಹೃದಯ ಮಿಡಿಯುವ ವೇಳೆ
ಆಕಾಶದಲ್ಲಿ ಚಂದ್ರನ ಉದಯವನ್ನೆ
ಕೊಲ್ಲುವಂತ ನಿನ್ನ ಪಾದದ ನಡುಗೆಗೆ
ನನ್ನ ಈ ಹೃದಯ ಹಾಸಿ ನಿಲ್ಲುವೆ
ನನ್ನ ಪ್ರೀತಿಯ ಒಡತಿ


seenupaddu

- seenupaddu

03 Jul 2017, 11:23 am

ಪ್ರೀತಿ

ನೀನು ಅಂಕ ಗಣಿತ
ನಾನು ಬೀಜ ಗಣಿತ
ನಮ ಇಬ್ಬರ ಪ್ರೀತಿ ರೇಖಾ ಗಣಿತ

- Anil Tej

03 Jul 2017, 10:22 am

ಬಾ

ತಂಗಾಳಿ‌ ಆಗಿಯಾದರೂ ಬಾ
ಬಿರುಗಾಳಿ ಆಗಿಯಾದರೂ ಬಾ

ಬಾ.......
ಬಂದು ನೀ‌ ನನ್ನನ್ನು ಒಮ್ಮೆ
ಸೋಕು ಸಾಕು....
ಬೇರೇನು ಬೇಡ ನನಗೆ
ಈ ಜನುಮಕೆ....
ನಿನ್ನ ಒಲವಿನ ಸನಿಹ ಸಾಕು
ಪ್ರತಿ ಜನುಮಕೆ....

- ಪಿ.ಜಿ.ಜ್ಯೋತಿ

03 Jul 2017, 10:08 am

‌ಬರೆಯಬೇಕು ಕಾಗದ.....

ಮೌನದಲಿ ಕೂಡಿಡಲಾಗದ
ಮಾತಿನಲಿ ಹೇಳಲಾಗದ
ಸ್ವರಗಳು ತಟ್ಟುತ್ತಿವೆ ಮನಸಿನ ಕದ
ಹೇಳಲೆಂದೆ ಬರೆಯಬೇಕಿದೆ ಕಾಗದ
ಬರೆಯಲೆಂದು ಕೂಡಿಸಿರುವೆ ಲೆಕ್ಕವಿಲ್ಲದಷ್ಟು ಪದ

ನೂರಾರು ಕಾಗದ ಗೀಚಿದರು
ಹೇಳೆಲೆಂದು ಕೂಡಿಟ್ಟ ಪದಗಳು ಕಳೆದು ಹೋದರು
ಎಂದೂ ಈ ಕಾಗದಕೆ ಕೊನೆಯಿಲ್ಲವೆಂದು ತಿಳಿದರು
ಮತ್ತೆ ಮತ್ತೆ ಬರೆಯುವೆ ತುಂಬಿ ನನ್ನೆಲ್ಲ ಭಾವಗಳ ಉಸಿರು

ಹೇಳಬೇಕು ತುಂಬಾ ನಿನಗೆ
ಮಾತಾಗದ ಮೌನವು ‌ಮನಸಿನೊಳಗೆ
ಕೊನೆಯಿಲ್ಲ ಹೇಳಬೇಕೆನಿಸುವ ಮನಸಿನ ಮಾತಿಗೆ
ತೋಚದಾಗಿರುವೆ ಹೇಗೆ ಹೇಳಲಿ ‌ಕನಸುಗಳ‌ ನಿನಗೆ

ನೀ‌ ಜೊತೆಯಾಗಿರುವ ಕ್ಷಣವೆಲ್ಲ ನನಗೆ ವಿಸ್ಮಯ
ನನ್ನ ನಗುವೆ ನೀನಾಗಿರಲು ನಿನ್ನಲಿ‌ ನಾನು ತನ್ಮಯ
ಕೈ ಹಿಡಿದು‌ ನಡೆಸು ನನ್ನ ನಿನ್ನ ಜೊತೆಯಲಿ,
ನಿನ್ನ ಹೊರತು ಬೇರೇನು ಬೇಡ ಜಗದಲಿ
ನಿನ್ನ ಉಸಿರೆ ನನ್ನ ಜೀವಕೆ ಹೆಸರಾಗಲಿ

- ಶ್ರೀಕಾವ್ಯ

03 Jul 2017, 09:42 am

ಗೆಳೆಯ

ಗೆಳೆಯ........
ನೀ ಅಳಿಸಿಬಿಡು ಬಿಡು
ಎಂದಾಕ್ಷಣ ಅಳಿಸಲು
ನಿನ್ನ ನೆನಪು
ಕಪ್ಪು ಗೋಡೆಯ ಮೇಲೆ
ಬರೆದಿರುವ ಅಕ್ಷರವಲ್ಲ!!

ನನ್ನ ಎದೆಯ ಒಳಗೆ
ಬರೆದಿರುವ ಅಳಿಸಲಾಗದ
ಪದಗಳ ಸಾಲು....

ಆ ಪದಗಳೆಲ್ಲ ಜೀವ ತಳೆದು
ಪ್ರತಿ ಕ್ಷಣವೂ
ಮಿಡಿಯುತ್ತಿರುವುದು
ಅದು ಕೇವಲ ನಿನಗಾಗಿ!!

- ಪಿ.ಜಿ.ಜ್ಯೋತಿ

03 Jul 2017, 08:46 am

ಕಳೆದ ಮಾಣಿಕ್ಯ

ಕಳೆದು ಹೋಯಿತು
ನಾ ನಿನ್ನ ಕಂಡ ಆ ಸಮಯ!!
ಮರಳದಾಯಿತು ಅಂದು
ನಾ ಕಳೆದುಕೊಂಡ ಹೃದಯ!!

ಆದರೂ ಸಿರಿತನ ತುಂಬಿ
ಹಿಗ್ಗುತಿತ್ತು ನನ್ನ ಮನ!!
ನೀ ಬಡವನಿಗೆ ದೊರೆತ
ಅಪರೂಪದ ಮಾಣಿಕ್ಯವೆಂದು!!

ಮೈಯೆಲ್ಲ ಕಣ್ಣಾಗಿಸಿ
ಜೋಪಾನವಾಗಿ‌ ಕಾದಿದ್ದೆ ನಾ!!
ಆದರೂ ತಿಳಿಸದೇ ಎಲ್ಲೋ
ನುಸುಳಿ ಹೋದೆ ನೀನು!!

ನಿನ್ನ ಹುಡುಕಿ ಹುಚ್ಚನಂತೆ
ನಾ ಅಲೆಯುತ್ತಿರುವೆ!!
ಮತ್ತೊಮ್ಮೆ ಹೊಳೆದು ನೀ
ಕಾಣಬಾರದೇ ನನ್ನ ಕಣ್ಣಿಗೆ!!

- ಪಿ.ಜಿ.ಜ್ಯೋತಿ

03 Jul 2017, 08:41 am

ಮೊಕವಿಸ್ಮಿಕ

ಬಾಳೆಂಬ ದಾರಿಗೆ
ಒಲವೆಂಬ ದೇವಿಗೆ
ತಂದತಹ ಪ್ರೇವಿುಗೆ
ಸೊತೇನಾ ಮೊದಲಬಾರಿಗೆ

- ರಾಜೇಶಕಿಚ್ಚ

03 Jul 2017, 06:22 am

ನಿಶಬ್ದದಲ್ಲಿ ನೂರು ಮಾತು

ನಿಶಬ್ದದಲ್ಲಿ ನೂರು ಮಾತನು ಕೇಳಬಹುದು
ಸಾವಿರ ಮಾತನಾಡಬಹುದು ಕೇಳವವರು
ಯಾರು ಇಲ್ಲ,ಉತ್ತರಿಸುವವರು ಯಾರಿಲ್ಲ................

ನೋಯಿಸುವವರು ಯಾರಿಲ್ಲ,
ಬೈಯುವವರಿಲ್ಲ ಯಾರಿಲ್ಲ,
ಬೇಸರಗೊಳಿಸುವವರು ಯಾರಿಲ್ಲ...........

ಸುಮಧುರ ಸಂಗೀತವ ಕೇಳಬಹುದು,
ಕರ್ಕಶ ಶಬ್ದಗಳನ್ನು ಕೇಳಬಹುದು,
ಎಡಬಿಡದೆ ಬಡೆದು ಕೊಳ್ಳುವ ಎದೆಬಡಿತ ಕೇಳಬಹುದು.............

ಕೋಟಿ ಕನಸುಗಳು ಕಾಣುವ ಕಣ್ಣುಗಳಿಗೆ
ಕಣ್ಣೀರನು ಸುರಿಸಿ ಸಮಾಧಾನಗೊಳಿಸಬಹುದು
ಎಂದಿಗೂ ನನಸಾಗದೆಂದು...............

ಮರೆಯಾಗದ ನಿನ್ನ ನೆನಪುಗಳನ್ನು ಮತ್ತೆ ಮತ್ತೆ ನೆನೆದು ನನ್ನಲ್ಲಿ ನಾನು ನೊಂದು ಭರವನ್ನು ಹೊತ್ತು ಬದುಕಬಹುದು, ಕೊರಗಿ ಕೊರಗಿ ಸಾಯಬಹುದು
ನಿಶಬ್ದದಲ್ಲಿ ನೂರು ಮಾತನು ಕೇಳಬಹುದು.......

- ಚುಕ್ಕಿ

02 Jul 2017, 08:06 pm