ನಾನಲ್ಲ
ಅದ್ಯಾವುದೂ ನಾನಲ್ಲ
ನಾನು ಅವನಾಗುವ ಮೊದಲು ಮಗುವಾಗಿದ್ದೆ
ಮಗುವಾಗಿದ್ದಕ್ಕೆ ಅಪ್ಪನಾದೆ
ಯಾರೋ ಕಟ್ಟಿದ ರಂಗಸ್ಥಳದ ಕಟ್ಟುವೇಷವಾದೆ
ಕುಣಿದು ಕುಸಿದೆ
ಕಣ್ಣೀರಿನ ಕೆಸರಾದೆ...
ನನಗೂ ನೋವಿದೆ
ನಿಲ್ಲುವ ಉಸಿರಿದೆ
ಹೇಳಲು ಕಥೆಯಿದೆ
ಬೆತ್ತಲಾಗದೆ ಬಟ್ಟೆಯಾದೆ
ಬಿದ್ದ ಬೆಂಕಿಯಲ್ಲಿ ಕರಟಿದೆ...
ಯಾರೋ ಬರೆದು ಹೋದ
ಚಿತ್ರದ ನಕಲಾದೆ...ಸವೆದುಹೋದೆ
ಅಪ್ಪನೆಂದರೆ ಏನೆಂದು ತಿಳಿಯಲಾಗದೆ
ಮತ್ತೆ ಅವಳೊಡಲ ಮಗುವಾದೆ!
-ಆರುಡೋ ಗಣೇಶ
ನೀ ನಡೆವ ದಾರಿಯಲ್ಲಿ
ಬರಿ ಸುಖವೇ ತುಂಬಿರಲಿ
ನಿನ್ನ ಕಣ್ಣಂಚಿನ ಹನಿಗೆ
ಈ ನನ್ನ ಕವನದ ಕೊಡುಗೆ
ಅಂದವಿದ್ದಾ ಮಾತ್ರಕ್ಕೆ ಭಂಗವಿಲ್ಲವೆಂದಲ್ಲಾ
ತಂದೆಯಾಗಿ ನೀ ಅದನ್ನೆಲ್ಲಾ ಕಂಡೆಯಲ್ಲಾ
ಹುಟ್ಟಿನಿಂದ ಸಾವಿನವರೆಗೊ ನಿನ್ನ ಜೊತೆ
ನಂತರವೂ ನೀನೇ ರಾಜ ಎಂದೇಳುವ ಈ ಕಥೆ
ಮುಗಿಯುವುದಿಲ್ಲಾ ಆ ದಿನದ ತೊಗಲಿನಾಟ
ನೆನೆದು ಸಾಕಾಗಿದೆ ಪ್ರೀತಿಯ ಓಟ
ಆ ಹಬ್ಬದ ದಿನ ಬಂದಾಯ್ತು,
ಋಣದ ಹೊರೆ ಇಳಿಸುವ ಈ ದಿನ
ಹೇಳಿ ಆಶಿಸುವೆ ನಿನಗೆ ಸುಭಾಷಯ
ಎಂದೆಂದಿಗೂ ಹೀಗೇ ಉಳಿದಿರು
ಮಾಸದ ಹೃದಯದಲ್ಲಿ ಹಸಿರಾಗಿರು...
ಸಹಿ ಹಾಕಿದೆ ಸಿಹಿ ಸಿಹಿ ನೆನಪು
ನನ್ನ ಮನಸಿನ ಬಿಳಿ ಹಾಳೆಯಲಿ
ನೀ ಒಲವಿನ ಮುದ್ರೆ ಒತ್ತಿದ ನಂತರ
ಹೆಸರಾಯಿತು ನನ್ನ ಜೀವನ ನಿನ್ನಯ
ಕೊನೆ ತನಕ .
ಪುಟ ಪುಟದಲ್ಲೂ ನಿನ್ನ ಚಿಟ ಪಟ ನೆನಪು
ಸರಿಗಮ ಹಾಡಿದೆ ನಿರಂತರ .
ಬಿಡದೆ ಕಾಡುತಿದೆ
ತಟ್ಟಿ ಹೃದಯದ ಕದವ
ಕದಲಿಸಿ ನನ್ನ ಭಾವಾಂತರ.
ಅಚ್ಛಾಗಿ ಹೊಗಿದೆ ನಿನ್ನ ಮೊಗ
ಮೊದಲ ಪುಟದಲಿ
ಹುಚ್ಚಾಗಿಸಿ ನನ್ನ ಚಿತ್ತ ...
ಪ್ರತಿ ಅಧ್ಯಾಯದಲಿ ನಿನ್ನದೇ
ಪ್ರೇಮಾಯಣ ಇದುವೆ ಹುಡುಗ
ನನ್ನ ಮನದ ಭಾವಯಾನ
ಸಾವಿರ ನೆನಪುಗಳ ಈ ಹೊತ್ತಿಗೆ
ಮೈದುOಬಿಸಿದೆ ಒಲವಿನ ಅಲೆ ಅಲೆಯಲಿ .
ಕಪ್ಪು ಸಾಹಿ ಗೀಚಿ ಹಾಕಿದೆ
ಶ್ವೇತ ಹಾಳೆಗಳ ಒಡಲಲಿ
ಇನ್ನೂ ಗೆಳೆಯ ಬರೆಯಬೇಕಾಗಿದೆ
ಹೊಸ ಅಧ್ಯಾಯ ಕೊನೆಯ
ಪುಟದಿಂದಲೇ ಈಗ .
ಬಯಲು ಸೀಮೆಯ ತವರಲ್ಲಿ
ಚೆದುರಿ ಉದುರಿ ಸವಿದ
ಕಪ್ಪು ಕಲ್ಲು ಬಂಡೆಗಳ ಒರಟು ಮೈಯಲ್ಲಿ
ಜಿನುಗುವ ಬೆವರು ಹನಿಗಳ ಕಮಟು
ಹಸಿರಿಲ್ಲದ ನಿಟ್ಟುಸಿರು ಚೆಲ್ಲಿದಮುಖ ದನಿಗಳು
ಇದೀಗ ಬಿಸಿಲೊಯುತ್ತಿದೆ
ಕಟೀರದ ಮುಖ ಬೀಜಗಳು
ಹುಡುಕುತ್ತಿದೆ ಗಂಗೆ ಮೂಲ ದಾರಿಗೆ
ಮಣ್ಣಿಗೂ ಮುತ್ತಜ್ಜರ
ನಡೆದು ಹೊದ ಹೆಜ್ಜೆಗುರುತು ಜಾಡು
ಅಜ್ಜಿಯ ಆಲದಮರ ಕಥೆ
ಹೊಂದಿಕೊಳ್ಳಬಹುದು
ಪೊರ್ವಿಕರ ಬೆಳದಿಂಗಳ ಕುಣಿತಕ್ಕೆ
ನಗೆ ಚೆಲ್ಲುವ ಪೂರ್ಣ ಚಂದ್ರ
ಉಳಿಸಿಕೊಂಡಿದ್ದಾನೆ ಪ್ರತಿ ರಾತ್ರಿ
ಲಾಲಿ ತಟ್ಟಿ ಹೇಳಿದ ಕಥೆಗಳ ಗಂಟು
ಹಾಗೆ ಇದೆ ಸಿಡಿಯದೆ
ಅಮ್ಮ ನಿನ್ನ ಬಿಡಲು ಆಗುತ್ತಿಲ್ಲ
ನಾನು ತಮ್ಮನ ಹಾಗೆ ನಿನ್ನ ಗರ್ಭದಲ್ಲಿ
ಒಂಬತ್ತು ತಿಂಗಳು ಮಾತ್ರ ಇದ್ದಿಲ್ಲ........
ನಿನ್ನ ಬಿಡಲಾಗದೆ ಹತ್ತು ತಿಂಗಳು ನಿನ್ನಲ್ಲಿ
ನಾನಿದ್ದೆ ನೀನು ತಿಂದಿದ್ದೆ ತಿನ್ನುತ್ತಿದ್ದೆ
ನಿನ್ನ ಉಸಿರಲ್ಲೆ ಉಸಿರಾಡುತ್ತಿದ್ದೆ..........
ನೋವಲ್ಲಿ ನಾನು ಅಳುತ್ತಿದ್ದೆ ನಗುವಲ್ಲಿ
ನಲಿಯುತ್ತಿದ್ದೆ ಅಮ್ಮ ನಿನ್ನಲ್ಲಿ ನಿನಾಗಿ.......
ಕರುಳಬಳ್ಳಿಯ ನಂಟು ಇನ್ನು ನನ್ನ ಬಿಟ್ಟಿಲ್ಲ
ಕೇಳುತಿರುವುದು ನನ್ನನಿಂದು ನನ್ನ ಬಿಟ್ಟು ಹೋಗುವೆಯ ಎಂದು...........
ಸಮಯಕ್ಕೆ ಬದ್ಧಳಾಗಿ ಈ ಭುವಿ ಸೇರಿದೆ
ನಾನು ಹೆಣ್ಣುಮಗುವಾಗಿ ಗುಬ್ಬಚ್ಚಿಯಂತೆ ನಿನ್ನ ಮಡಿಲಲ್ಲಿಟ್ಟು ಬೆಳೆಸಿದೆ ನನ್ನ.............
ಧೈರ್ಯತುಂಬಿ ನನ್ನಲ್ಲಿ ವಿದ್ಯಾಭ್ಯಾಸಕ್ಕೆ
ಕಳುಹಿಸಿ ಯಾರಿಗೂ ನನ್ನ ಮಗಳು ಕಡಿಮೆ ಇಲ್ಲವೆಂದು ಹೆಮ್ಮೆಪಟ್ಟೆ ನೀನು..........
ಈ ಕ್ಷಣದಲ್ಲಿ ನನ್ನ ತವರು ಮನೆ ನನಗೆ ಬಿಳ್ಕೊಡುತ್ತಿದೆ ಹೋಗಿಬಾ ಮಗಳೇ ನಿನ್ನ
ಗಂಡನ ಮನೆಗೆಂದು ನಗು ನಗುತಲಿ ನೀನಿರು
ಆ ಮನೆಯ ಮಹಾಲಕ್ಷ್ಮಿಯಾಗಿ ಎಂದು........
ಅಮ್ಮ ನನ್ನುಸಿರು ನೀನು ಹೇಗೆತಾನೆ ಬಿಟ್ಟೋಗಲಿ
ಬಿಟ್ಟೋಗಲಿ ನಿನ್ನನು ನಿನ್ನ ಮಡಿಲನ್ನು..........
ನಿನ್ನ ಬೆಚ್ಚನೆಯ ಕೈಬೆರಳ ಸ್ಪರ್ಶೆಯನ್ನು ನಿನ್ನ ಕೈತುತ್ತನ್ನು...............
ಆಗಿರಬಹುದು ನಾನು ದೊಡ್ಡವಳು ವಯೋಮಾನದಲ್ಲಿ ಆದರೂ ಚಿಕ್ಕ ಮಗುವೇ
ನಿನ್ನ ಮಮತೆಯ ನೋಟದಲ್ಲಿ ನೀನು ಬೇಕು ನನಗೆ ನಿದ್ದೆಯಲ್ಲಿ ಬೆಚ್ಚಿಬಿದ್ದಾರೆ ಮತ್ತೆ ಬಚ್ಚಿಟ್ಟುಕೊಳ್ಳಲು........
ನಿನ್ನ ಹೃದಯದಲ್ಲಿ ಭಯವಿಲ್ಲದೆ ನೀನಿರುವ ಧೈರ್ಯದಲ್ಲಿ ಅಮ್ಮ ಬಿಡಲಾಗುತ್ತಿಲ್ಲ ನಿನ್ನನು.......