Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮುಖ-ಮುಖವಾಡ

ಪ್ರತಿಜ್ಞೆ ಮಾಡಿದೆ ಈಗ
ನಾನೆ ಹಾಕಿಕೊಂಡ
ನನ್ನ ಮಖಕ್ಕಂಟಿಕೊಂಡ ಮುಕವಾಡಗಳ
ಕಿತ್ತೊಗೆದು
ನಿಜದ ನೆಲೆಯಲ್ಲಿ ನಿಲ್ಲಲು

ಒಂದೊಂದಾಗಿ ಕಿತ್ತು
ಬೆಂಕಿಗೆಸೆಯುತ್ತಾ
ಮುಖಯಾದೆವು ಮುಖವಾಡ
ಯಾವುದು ಎಂಬುದು ತಿಳಿಯದೆ
ನನ್ನ ನಿಜ ಮಖವನ್ನು ಎಸೆದಿದ್ದು
ತಿಳಿಯಲೇ ಇಲ್ಲ
ನನಗೀಗ ಮುಖವೇ ಇಲ್ಲ

ಈಗ ನನ್ನದೆ ಮಖ ಬೇಕಾಗಿದೆ
ಹೇಗೆ ಪಡೆಯಲಿ ಹೇಳಿ

- ಹೇಮಚಂದ್ರ

17 Jun 2017, 12:48 pm

ಹೆತ್ತ ತಾಯಿಯ ಎಂಜಲ ತುತ್ತು

ಹೆತ್ತ ತಾಯಿಯ ಎಂಜಲ ತುತ್ತು
ಬಾಯಿಗಿಡುವಳು ತಾನು ಸವಿದು
ತನ್ನ ಕಂದನಿಗೆ ರುಚಿಸುವುದೇ ಎಂದು
ಅರಿತು.............

ಉಪ್ಪು ,ಹುಳಿ ,ಖಾರ ನೋಡಿ
ತನ್ನೊಡಲ ಮಮಕಾರ ತುಂಬಿ
ನಾಳಿಗೆಯಲ್ಲಿನ ಗ್ರಂಥಿಗಳಿಗೆ ಹೇಳುವಳು........

ನೋಡೇ ರುಚಿಯ ನಾಲಿಗೆ ನನ್ನ ಮಗುವಿಗೆ
ತುತ್ತು ಕೊಡಬೇಕು ಹಸಿವಿನಿಂದ ಅಳುತ್ತಿದೆ
ನಾಕೊಡುವ ಮುತ್ತಿನಷ್ಟು ಸ್ವಾದವಿದೆಯಾ
ನಾ ಮಾಡಿದ ಅಡಿಗೆ ಎಂದೂ............

ಹಬೆಯಾಡುವ ಈ ಊಟ ಬಿಸಿಯಾಗಿದೆ ಕೈಯಲ್ಲಿ
ಬಾಯಿಗಿಟ್ಟರೆ ನನ್ನ ಮಗುವಿಗೆ
ತೊಂದರೆಯಾಗುತ್ತದೆಯೇ ಎಂದು ಕೇಳುವಳು
ತನ್ನ ಮಾತೃ ಹೃದಯವ ಮತ್ತೆ ಮತ್ತೆ............

ತನ್ನುಸಿರೆ ಮಗುವಾದೊಡೆ ತಣ್ಣಗಾಗಿಸಿ
ತಿಂಡಿಯನ್ನು ಬಾಯಿಗಿಡುವಳು ಮುದ್ದು ಮಗುವಿಗೆ..................

ತಿಂದು ತನ್ನ ಮಡಿಲಲ್ಲಿ ಮಗುವಾಡುವ ಆಟವ
ನೋಡಿ ತಾನು ನಗುವಳು ಮನತುಂಬಿ ಮೈಮರೆತು
ಮಗುವ ನೋಡಿ..................

ತನ್ನ ಹೊಟ್ಟೆ ತುಂಬದಿದ್ದರು ಮಗುವಿನ
ಹೊಟ್ಟೆ ತುಂಬಿಸಿ ನೀರು ಕುಡಿದು ಬದುಕುವಳು
ಆ ಕ್ಷಣದ ಹಸಿವು ಮರೆತು ಮುಂದೆ ತನ್ನ ಮಗುವಿನ ಭವಿಷ್ಯ ನೆನೆದು ನೂರು ಕನಸೊತ್ತು.....

- ಚುಕ್ಕಿ

17 Jun 2017, 11:48 am

ಮುದ್ದು ಕಂದಮ್ಮ

ಮುದ್ದು- ಮುದ್ದು ಕಂದಮ್ಮ
ನಿನ್ನ ಮೊಗವೇ ಮನದ
ನೋವಿಗೆ ಮದ್ದಮ್ಮ!!

ಹೊಸಿಲ ದಾಟುವ ಚಲವು
ನಿನ್ನ ಚೈತನ್ಯ ದ ಚಿಲುಮೆಯು
ನೀನಿಡುವ ಒಂದೊಂದು ಅಡಿಯು
ಭೂ- ತಾಯಿ ಒಡಲಿಗೆ ಪುಲಕವು!!

ದುಡಿದು-ದಣಿದು ಬಂದಾಗ
ತೊದಲುತ್ತ ನೀ ಕರೆವಾಗ
ನೋವೆಲ್ಲ ಮಾಯವಾಗಿ
ಚೈತನ್ಯ ಚಿಮ್ಮುವುದಾಗ!!

ಪೆದ್ದು- ಪೆದ್ದು ಮಾತನಾಡುತ್ತಾ
ನೀ ನಲಿವೆ ಮನ-ಮನೆಯ ಬೆಳಗುತ್ತಾ......ನಲಿವವು
ನನ್ನೀ ಕಂಗಳು ಅದ ನೋಡುತ್ತ!!

ಹರಸುವೆ ನಾ ನಿನ್ನ ಮಗುವೆ
ನೀನಾಗು ದೇಶಕೆ ಬೆಲೆಬಾಳುವ ಒಡವೆ
ಎಂದೆಂದಿಗೂ ಅಜರಾಮರವಾಗಲಿ
ನಿನ್ನೆಸರು, ಸಾಧನೆ ಯ ಆಧಿಯಲಿ
ಜಯಶಾಲಿಯಾಗುತ ನೀ ಸಾಗು
ಇಂದು,ಮುಂದು,ಎಂದೆಂದೂ........!!


ಶಾರಧ

- ಶಕುಂತಲಾ

17 Jun 2017, 11:15 am

ಸಾಕು ಈ ಜನ್ಮಕ್ಕೆ

ಪ್ರೀತಿಮಾಡಿದ ಹುಡುಗಿ ಜೊತೇಲಿ ಇಲ್ಲ ಅನ್ನೋ ನೋವು ತುಂಬಾ ಕಾಡುತ್ತೆ...
ಆದ್ರೆ ಒಂದು ಹುಡ್ಗಿನ ಪ್ರಾಮಾಣಿಕವಾಗಿ
ಪ್ರೀತಿ ಮಾಡ್ದೆ ಅನ್ನೋ ಆ ಖುಷಿ ಕೊನೆವರೆಗೂ ಮನಸಲ್ಲೇ ಇರುತ್ತೆ....

- Prabhas

17 Jun 2017, 09:31 am

ಸ್ನೇಹ ಬೆಳೆ

ನಾ ಇದ್ದೆ ಶಿಲೆಯಂತೆ ನೀ ಬಂದೆ ಅಲೆಯಂತೆ ಬೆಳೆಯಿತು ಇಬ್ಬರ ಸ್ನೇಹ ಬೆಳೆಯಂತೆ ನೀ ಹೋದೆ ಅಂದಿನಂತೆ ನನಾಗಾಯಿತು ನ್ನಿನ್ನದೆ ಚಿಂತೆ

ಹೇಮ

- Hema

17 Jun 2017, 07:43 am

ತುಂತುರು / ತಲ್ಲಣ

ನೆನಪಿನ ಮಿಂಚುಹುಳುಗಳು
ಸಂಭ್ರಮಿಸುತಿದೆ ..ಈ ಕಡುಗಪ್ಪು
ನಿಶೆಯಲಿ .

ಕಡಲ ತೊರೆದು
ದಡವ ಮುತ್ತಿಟ್ಟು ಮರಳುವ ಅಲೆಯಂತೆ
ಮರಳಿ ಬಾ ನೀ ಅಲೆಯಾಗಿ
ನನ್ ಒಡಲಿಗೆ...ನನ್ ಒಲವಿಗೆ .

ಆಡದ ಮಾತು ತುಟಿಯಂಚಲಿ
ಮೌನವೆ ಮಾತಾಡಿದೆ.
ನೀ ಇರಲಾರೆ...ನಾ ತಡೆಯಲಾರೆ
ಕಾಯುವ ಹೃದಯಕ್ಕೆ ನೆನಪಿನ ಕಾವೇ ಸಾಕು.

ಕಣ್ಣಂಚಲಿ ಪುಟ್ಟ ಹನಿಗಳಿಗೆ ಕರೆ
ಆಧರಗಳಲ್ಲಿ ನಗುವಿಗೂ ಇಂದು ಸೆರೆ
ತುಡಿತ ಒಂದೇ ಯಾಚನೆ ಒಂದೇ
ಮರಳಿ ಬಾ ನನಗೆ ನಿನ್ನದೇ ಆಸರೆ .

ಒದ್ದೆಯಾಗಿದೆ ಭಾವಗಳು
ಮುದ್ದೆಯಾಗಿದೆ ಮನಸು
ಕದ್ದು ನನ್ನ ನಗು ...ಕದಲಿಸಿ ನನ್ನ ಮನ
ಏಕೆ ಕಾಡುವೆ ನೀ ಪ್ರತಿಕ್ಷಣ .

- Chandni

16 Jun 2017, 11:21 pm

ಪ್ರೀತಿಯ ಗೋರಿ

ಕತ್ತಲ ಸೀಳಿ ಬಂದ ಈಟಿ
ಹಾದಿತ್ತು ಪ್ರೀತಿ ಕೋಟೆ ದಾಟಿ
ಎಸೆದ ಕೈ ಕಾಣದಾಯ್ತು
ಎಲ್ಲೋ ಕೇಳಿದಂಗಾಯ್ತು ಬಳೆ ಸದ್ದು.

ಹೃದಯಕ್ಕೆ ಕಟ್ಟಿದ ಗೋರಿಗೆ
ಗುರುತು ಬೇಕಿಲ್ಲ,
ಒಳಗೆ ಬಿದ್ದಿರುವ ಹೆಣ
ಪ್ರೀತಿಯದೂ ಇದ್ದೀತು.

ಚಳಿಯ ಪಯಣ ಹೊರಟವಗೆ
ಕಂಬಳಿ ಬಳಿ ಇರಬೇಕು,
ಕನಸ ಮಾರ ಹೊರಟವಗೆ
ಕಂಬನಿ ಬೆಲೆ ತಿಳಿದಿರಬೇಕು.

ಶಕುನದ ಹಕ್ಕಿ ಹಾರಿತ್ತು ನೋಡ
ಗಿಡುಗ ಹಿಡಿದಿತ್ತು
ಹಕ್ಕಿ ಗೂಡಿನ ಜಾಡ.
ಪ್ರೇಮ ಪಕ್ಷಿಗೆ ಗುರಿಯಿಟ್ಟ ಬೇಡ
ಕಾಡ ಕವಿದಿತ್ತು ಬೇಸಿಗೆಯಲ್ಲಿ ಕಾರ್ಮೋಡ.

- ಶ್ರೀಗೋ.

16 Jun 2017, 09:54 pm

*ಕಟ್ಟಿದ್ದಲ್ಲ ಅಲ್ಲೆ ಹುಟ್ಟಿದ್ದು*!

ಅದನ್ನು ಕಟ್ಟಿದ್ದಲ್ಲ ಹುಟ್ಟಿದ್ದು
ಸೊಗೆ,ಬಾಗೆ ,ಗರಿಕೆ ಹುಲ್ಲುಗಳು
ಆಕಾಶ ಆಕಾರದಂತೆ ಸುತ್ತಿದೆ
ಮೇಲೊಂದು ಚಿನ್ನದ ಗೊಪುರದ
ಕೆಲಸ ಮಾಡಿದೆ "ಮರದ ದಿಮ್ಮೆ "
ಅಂಗಳದ ಬಯಲಲ್ಲಿ ಮೂಗುನತ್ತಿನಂತೆ
ಮೆತ್ತಿತ್ತು"ಮಂಜು"
ತೂಗುದೀಪ ತೂಗಡಿಸುವ ಹೊತ್ತಿಗೆ
ತಂಗಳೊಂದಿಗೆ ತಂಗಾಳಿ ಬೀಸಿ
ಕೊಳಿ ಕೂಗಿಗೆ ಎತ್ತು ಸದ್ದು ಕೇಳಿ
"ಹಿಟ್ಟಿಗೆ ಬುಟ್ಟಿ ಕಟ್ಟಿದ ಅವ್ವನ "
ಸೆರಗಿಡಿದು ಹೊಲಕ್ಕಿಡಿದದ್ದು
"ಕಟ್ಟಿದ್ದಲ್ಲ ಅಲ್ಲೆ ಹುಟ್ಟಿದ್ದು"

- ಹೇಮಚಂದ್ರ

16 Jun 2017, 08:28 pm

ಮೂಗುತಿ ಬೊಟ್ಟು

ಅವಳ ಮೊಗದಲಿ ಕಂಡ
ಹೊಳೆವ ಮೂಗುತಿ ಬೊಟ್ಟು
ಕಳೆದು ಹೋಯಿತು ಏಲ್ಲೋ
ಅವಳ ನಗುವಿನೊಡನೆ!!

ಮದದಿ ಬೀಗುತಲಿತ್ತು
ತಾನೆಂದೂ ಅವಳ ಸೊತ್ತು
ಹೇಳದೇ ಉದುರಿತು
ಎಲ್ಲೋ ಕಾಣದಂತೆ!!

ಹುಡುಕಿ ಹೊರಟಿಹೆ ನಾನು
ಕಳೆದ ಮೂಗುತಿ ಬೊಟ್ಟ
ಮತ್ತೆ ಮರಳದೇ ಹೊಳಪು
ಅವಳ ನಗುವಿನೊಡನೆ!!

- ಪಿ.ಜಿ.ಜ್ಯೋತಿ

16 Jun 2017, 07:59 pm

ತಿಂಗಳ ಬೆಳಕು

ತಿಂಗಳ ಬೆಳಕಲಿ
ಕಂಗಳ ಕಾಂತಿಯು
ಸೋರಿಕೆ ಆದವು
ನಿನ್ನಯ ಎದುರಲಿ!!

ಮನದಲ್ಲಿ ನೂರು
ಪದಗಳ ಸಾಲು ಗೀಚಿ
ಮೌನಿಯಾದೆ ನಾನು
ನಿನ್ನ ಉಸಿರು ಸೋಕಿ!!

ತಿರುಗೋ ಭೂಮಿ ತಾನು
ಬುಗುರಿಯಂತೆ ಸುತ್ತಿ
ತಂದು ನನ್ನನ್ನು ಇಲ್ಲಿ
ಸ್ತಿರವಾಯಿತು ಒಮ್ಮೆ ನಕ್ಕು!!

ತಂಪು ಗಾಳಿಯೀಗ
ಮಂದಹಾಸ ಬೀರಿ
ತನುವ ಸೋಕಿದಾಗ
ನಾ ನನ್ನ ತನವ ಮರೆತೆ!!

- ಪಿ.ಜಿ.ಜ್ಯೋತಿ

16 Jun 2017, 07:45 pm