Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ತಾರೆಗಳು........

ತಾರೆಗಳು ಸಂಜಾ ವೇಳೆಯಲ್ಲಿ
ಆಡುತ್ತಿದ್ದರು ಉಲ್ಲಾಸದಿಂದ
ಮೇಘರಾಜನ ಮನೆಯ ಅಂಗಳದಲ್ಲಿ
ತಮ್ಮ ಬೆಳದಿಂಗಳ ನಗುವು ಚೆಲ್ಲಿ ಬಾನಿಗೆ......

ಬಂದನು ಶಶಿಯು ತನ್ನ ತಂಪನ್ನು
ಬೀರುತ್ತಾ ತಾರೆಗಳೆಡೆಗೆ........
ಅವನನೋಡಿ ಮನಸೋತ ನಕ್ಷತ್ರಗಳು
ನಿಂತವು ಅವನಲ್ಲಿ ತಮ್ಮ ಚೆಲುವನ್ನು ಚೆಲ್ಲಿ
ಅವನ ಬೆಳಕ ಹೆಚ್ಚಿಸಲು ಇರುಳಿನ ಮಂಕಾದ ಕತ್ತಲು ಕಳೆಯಲು .........

- ಚುಕ್ಕಿ

14 Jun 2017, 05:56 pm

ಕವನ

ಉಸಿರಲ್ಲಿ ಬೆರೆತ ಕವನ
ಮಾತಿಲ್ಲದ ಮಾತಾಯಿತೆ ಪದಗಳಲ್ಲಿ........
ಭಾವನೆಗಳ ಕೈ ಸೇರಿದ ಪದಗಳು
ಓದುಗರ ಮನ ಮುಟ್ಟಿತೇ ಪ್ರೀತಿಯಿಂದ
ನನ್ನ ಮನವ ತಿಳಿಸಿ ಮಮತೆಯಿಂದ

ಕವನವಾಗಿ ನನ್ನ ಪ್ರಾಣವಾಯಿತೆ............

- ಚುಕ್ಕಿ

14 Jun 2017, 05:44 pm

ಕನವರಿಕೆ

ಮುಗಿದು ಹೋದ ಕಾಲವ
ಮುಂಜಾನೆ- ಮುಸ್ಸಂಜೆ
ನೆನೆಯುತ ಮರೆಯುವೆ
ನನ್ನೆಲ್ಲ ದುಗುಡವ,,,,,
ಕರುಣಿಸು ನನ್ನವ್ವ ....

ನಿನ್ನ ಸೇವೆಯೆ ನನ್ನುಸಿರು
ನೀ- ತಾ ಬಾಳಲಿ ಹೊಸ ಚಿಗುರು
ನಿನಗಾಗಿ ಮುಡಿಪಿಡುವೆ ನನ್ನುಸಿರು
ಜಯಶಾಲಿ ಆಗೆಂದು ನೀ ಹರಸು!

ನಿನದೆ ಈ ಜಗವೆಲ್ಲ
ನೀ ಕಣ್ಮುಚ್ಚಿ ಕುಳಿತರೆ ಗತಿಯಿಲ್ಲ
ಸುಸಂಸ್ಕೃತ ಪ್ರಜೆಗಳ
ನಿರ್ಮಾಣದ ಜವಾಬ್ದಾರಿ ನನದು
ಗುರುವಾಗಿ ಸನ್ಮಾರ್ಗ ತೊರುವ
ಹೊಣೆಗಾರಿಕೆ ನನದು
ನೀ ನೀಡು ಸದಾವಕಾಶ,,,,,,
ನಾ ಬೆಳಗುವೆ ಪ್ರಕಾಶ,,,,,,,,

ಕಲ್ಮಶವಿಲ್ಲದ ಮಕ್ಕಳ ಹೃದಯದಿ
ಹರಿಸಲು ಪರಿಶುದ್ಧ ಜ್ಞಾನದ ನದಿ
ನಾ ಕನವರಿಸುತಿರುವೆ ಕಾತುರದಿ
ನೀ ಎಡೆಗೊಡು ಈ ಜನುಮದಿ!



ಶಾರಧ

- ಶಕುಂತಲಾ

14 Jun 2017, 04:53 pm

ಸಿರಿಸಂಪತ್ತು

ಕನ್ನಡವು ಚೆನ್ನ ಚೆನ್ನ ಅರ್ಥ ಗಾಂಭೀರ್ಯ
ಇದರ ಬೆಲೆಗೆ ಸರಿಸಮವೋ ವಜ್ರ ವೈಢೂರ್ಯ
ಸಿಗದೆಂದು ಹಲವರಿಗೆ
ಸಿಗವದೊಂದೆ ಕೆಲವರಿಗೆ
ಗುಣವಂತ ಸಿರಿನವಂತ
ಘನವಂತ ಕನ್ನಡಿಗನಿಗೆ
ಸೊಕ್ಕು ರಹಿತ ಸ್ವಾಭಿಮಾನ ತೋರುವ ಚೆನ್ನಿಗನಿಗೆ
- ದೇವ 'ನಾಯಕ' ಕಜ್ಜೇರ

- Dev

14 Jun 2017, 03:26 pm

ನನ್ನವಳು ಮುದ್ದು ಸಖಿ.....!

ನಸು ನಗುವಿನ ಹೂವೊಂದು
ಮಸುಕಿನಲ್ಲಿ ಅರಳಿದಂತೆ
ಜೇನು ಗೂಡ ಮನೆಯ ನೋಡಿ
ಜೀವಿಸುವ ತವಕದಂತೆ

ಪ್ರಣಯವಾಯಿತು ಕಾಡಿ
ಮುದ್ದು ಮುಖವ ನೋಡಿ ನೋಡಿ

ಚೆಲುವ ಹರೆಯ ವಯಸ್ಸೆನ್ನದೆ
ಚೆಲ್ಲಾಟವ ಅರಿಯದಾದೆ
ಕಾಂತಿಯುತಾ ಮುಖ ತೊಟ್ಟ
ರಕ್ಕಸಿಯ ಬಲೆಗೆ ಬಿದ್ದೆ!
ಆದರೆ...
ಚೆಲುವನರಸಿ ಬಂದ ಚೆಲುವೆ
ಮುಖವ ನೋಡಿ ಅಂಜುತಿರೆ
ಸಂಶಯವೋ ಉಕ್ಕಿ ಉಕ್ಕಿ
ಮನದೊಳಗೆ ಬಿಕ್ಕಿ ಬಿಕ್ಕಿ
ತೀರಾ ನೇರ ಅವಳ ನೋಟ
ಚುಚ್ಚಿ ಹೇಳುತಿದೆ ನೀತಿ ಪಾಠ
ಅವಳು ದುಃಖ ಮರೆಮಾಚುತಾ
ನಕ್ಕು ನಕ್ಕು ಸಹಿಸಿಕೊಳ್ಳುತಾ
ಬಂದು ನಿಂತು ಹೇಳಿದಳು

ನಿನ್ನ ನಾನು ಮರೆಯಲಾರೆ
ದ್ರೋಹವೆಂದು ಮಾಡಲಾರೆ
ಕೇಳು ಸಖ ನನ್ನ ಮಾತು
ಮರೆತುಬಿಡು ನನ್ನನಿಂತು.!
ಕಾರಣವ ಕೇಳಬೇಡ
ತಪ್ಪು ದಾರಿ ತುಳಿಯಬೇಡ
ನಿನ್ನ ಒಳಿತಿಗಾಗಿ ಈ ನಿರ್ಧಾರ
ಮರೆತು ಬಿಡು ಭರಪೂರ
ಯಶಸ್ಸು ನಿನ್ನದಾಗಿ...
ಕೀರ್ತಿ ಹೆಸರು ಹೆಚ್ಚಾಗಿ
ಮರೆಯಬೇಡ ನನ್ನನಾಗ
ನೀಡು ಹೃದಯದಲ್ಲಿ ಪುಟ್ಟ ಜಾಗ
ಎಂದು ಹೇಳಿ ಹೊರಟ ಸಖಿ
ನನ್ನ ಮನದ ಜೀವನ್ಮುಖಿ

ಛೇ! ನಾನೆಂಥಾ ದಡ್ಡ ಪ್ರೇಮಿ?
ನನ್ನವಳು ಚಿನ್ನ ಪ್ರೇಮಿ

ಅರಿಯದಾಗಿ ಅವಳ ಮನಸು
ಎಗರಾಡಿದೆ ಇರಿಸು ಮರಿಸು
ಸರಿ...
ಆಯಿತೆನ್ನ ಮುದ್ದು ಚೆಲುವೆ
ಸಾಧನೆಯು ನನ್ನ ಗೆಲುವೆ
ನಿನ್ನ ಅಕ್ಕರೆಯು ಸಾಕು
ನನಗೆ ನಿನ್ನ ಪ್ರೀತಿ ಬೇಕು
- ದೇವ 'ನಾಯಕ' ಕಜ್ಜೇರ

- Dev

14 Jun 2017, 01:32 pm

ಒಂದು ಮಿಡಿತ ಪ್ರಕೃತಿ ಮಾತೆಗಾಗಿ

ವಿಶಾಲವಾಗಿ, ದಟ್ಟವಾಗಿ ಬೆಳೆದು ನಿಂತ ಅರಣ್ಯ,
ಸಮುದ್ರವನ್ನೆ ನುಂಗುವ ಮೌನ,
ಹಕ್ಕಿಯ ಚಿಲಿಪಿಲಿಯು ಪ್ರತಿದ್ವನಿಸುತ್ತಿತ್ತು,
ಮೈ ಮರೆಸುವ ಸುಗಂದ , ಗಾಳಿಯಲಿ ತೇಲಿ ಬರುತ್ತಿತ್ತು,
ಸೂರ್ಯ ಎಷ್ಟೋ ಸೆಣಸುತ್ತಿದ್ದ ,ನೆಲ ಮುಟ್ಟಲಾಗುತ್ತಿರಲಿಲ್ಲ,
ಆ ಮೌನದ ಮದ್ಯೆ ಏನೋ ಶಬ್ದ,
ಪ್ರಕೃತಿ ಮಾತೆಯ ರಕ್ಷಣೆಗೆ ನಿಂತ ಸೈನ್ಯದಂತೆ,
ಹರಿಯುತ್ತಿತ್ತು ಅಲ್ಲೊಂದು ಜರಿ,
ಎತ್ತರವಾದ ಎದೆಯುಬ್ಬಿಸಿ ನಿಂತ ಮರಗಳು,
ಇದೆಲ್ಲ ನಮ್ಮದೆನ್ನುವ ನಂಬಿಕೆಯಿಂದ,
ಅಲೆದಾಡಿಕೊಂಡಿದ್ದವು ಪ್ರಾಣಿ-ಪಕ್ಷಿಗಳು,
ಅರೆ_______________________________
ಇದೆನಾಯಿತು , ಇಷ್ಟು ಹೊತ್ತು ಕಂಡಿದ್ದೆಲ್ಲ ಮಾಯೆಯೆ,
ಏನೀ ಕರ್ಕಶ ಶಬ್ದ ,
ಬರಿಯ ಧೂಳು,
ಹುಡುಕುವೆನೆಂದರು ಕಾಣದ ಪ್ರಾಣಿ-ಪಕ್ಷಿಗಳು.
ಅಳಿದುಳಿದವುಗಳು ಹೊಟ್ಟೆಗೆ ಹೊಲಸು ತಿಂದು ಬದುಕಿವೆ.
ಇಂದು ನೋಡಿದಷ್ಟೂ ದೂರ ಮರಗಳ ಬದಲು
ಎತ್ತರದ ಕಟ್ಟಡಗಳೆ ಕಾಣುತ್ತಿವೆ.
ಛೇ_____________________
ನಮಗೆಲ್ಲವನ್ನು ಕೊಟ್ಟ ಪ್ರಕೃತಿ ಮಾತೆಗೆ
ನಾವೇನು ಕೊಟ್ಟೆವು,
ಆಧುನಿಕರಣವೆಂಬ ಶಾಪವನ್ನು,
ನಗರೀಕರಣವೆಂಬ ನೋವನ್ನು ಕೊಟ್ಟೆವು,
ಅವಳ ಕರುಳ ಕುಡಿಗಳನ್ನೆ ಕಿತ್ತೆಸೆದೆವು,
ಗರ್ಭವನ್ನೆ ಬಗೆದೆವು,
ಇಷ್ಟಾದರು ಅವಳಿನ್ನೂ ಶಾಂತವಾಗಿದ್ದಾಳೆ,
ಏಕೆಂದರೆ, ಅವಳು ‌‌‍ತಾ‌‌‌ಯಿಯಲ್ಲ‌‍‍‌‌‌‌‌‌‍ವೆ,


ಇನ್ನಾದರೂ ಬದಲಾಗೊಣ,
ಅವಳು ನಮಗೆ ಕೊಟ್ಟ ಕೊಡುಗೆಯನ್ನು
ಸ್ಮರಿಸೋಣ,
ಅವಳ ಕಣ್ಣ ನೀರಾಗುವ ಬದಲು,
ನಗುವಿನಲ್ಲಿರಲು ಬಯಸೋಣ...!

ಮನೋಜ್ -

- manoj kumar

14 Jun 2017, 09:22 am

ನೀ ಇಲ್ಲದೆ ನಾನಾ......

ಶಶಿ ಇಲ್ಲದ ಬಾನು
ಸವಿಯಿಲ್ಲದ ಜೇನು
ಕವಿಯಿಲ್ಲದ ನಾನು ಬರೆಯುವುದು ಇನೇನು......

- Acchu love

13 Jun 2017, 10:25 pm

ಸ್ನೇಹ

ಸೂರ್ಯ ಎಷ್ಟು ಉರಿದರು,
ಆ ಉರಿ ಕೆಡುಕನ್ನು ಸುಡುತ್ತದೆ,
ಚಂದ್ರ ಎಷ್ಟೇ,
ಕೇಡು ಬಯಸಬೇಕೆಂದುಕೊಂಡರು,
ಅವನಿಗರಿವಿಲ್ಲದೆ ದುರಾಸೆಯನ್ನು,
ಅಲೆಗಳ ಮೂಲಕ ಮನಸ್ಸಿನಿಂದ ಹೊರಹಾಕುತ್ತಾನೆ,
ಪಿತೂರಿಗೆ ಸ್ನೇಹದಲ್ಲಿ ಜಾಗವಿಲ್ಲ,
ಕೋಪಕ್ಕೆ ಆಯಸ್ಸು ಮೊದಲೆ ಇಲ್ಲ,
ಪ್ರೀತಿ-ಸ್ನೇಹವೆ ತುಂಬಿದೆ ನಮ್ಮೊಳಗೆಲ್ಲ,
ಸೂರ್ಯ-ಚಂದ್ರರಿರುವವರೆಗು ಸ್ನೇಹಕ್ಕೆ ಕೊನೆಯಿಲ್ಲ.

ನಿಮ್ಮ ಸ್ನೇಹ ಪಡೆದ ನಾನು ಧನ್ಯ,
ನಿಮ್ಮಿಂದ ದೂರಾಗಲು ನನಗಿಷ್ಟವಿಲ್ಲ...!

ಇಂತಿ ನಿಮ್ಮ ಗೆಳೆಯ
ಮನೋಜ್

- manoj kumar

13 Jun 2017, 08:18 pm

ನಾ ಕಂಡ ಬೇಂದ್ರೆ.

ದುಃಖವೆನಿದ್ದರೂ ನೋವು ಎಷ್ಟಿದ್ದರೂ
ಸುಕವನಷ್ಟೇ ಉಣಿಸಿದಿರಿ ನೀವೂ
ಒಡಲ ಬಡಬಾಗ್ನಿಯಲಿ ಬೆಂದು
ನೋವನ್ನೇ ಗಾನಕ್ಕೆ ತೆತ್ತು ಬೇಂದ್ರೆಯಾದಿರಿ

ಜೀವನದ ಸಿಹಿಕಹಿಗಳ
ನಾಕುತಂತಿಯಲಿ ಮೀಟಿ
ಯಾಕಾಗಿ ಬೇಕಾಗಿ ಸಾಕಾಗಿ ಕುಣಿಸುತ್ತಾ
ಉಯ್ಯಾಲೆಯಾಡಿಸಿ ನಗಿಸಿದಿರಿ

ಸಾದಕರೆಲ್ಲರ ಸಾದನಕೇರಿಗೆ
ಕೈಬೀಸಿ ಬಾ ಹತ್ತಿರ ಎಂದಿರಿ
ಕನ್ನಡಾಂಬೆಯ ಚೈತನ್ಯ ಪೂಜೆಯನ್ನು
ಜಗ ಹೋಗಳುವಂತೆ ಮಾಡಿದಿರಿ

ಜ್ಞಾನ ಪೀಠ ದ ಗರಿಯನ್ನು
ಸಾರಸ್ವತ ಲೋಕಕ್ಕೆ ಮುಡಿಸಿದಿರಿ
ಸಹಸ್ತ್ರ ಪದ್ಯಗಳ ಸರದಾರರಾಗಿ
ವರಕವಿಯಾಗಿ ಮಾನಸದಲ್ಲಿ ಉಳಿದಿರಿ

ನಕ್ಕು ನಗಿಸಿ ರಮಿಸುವ ರಸಿಕರಿಗೆ
ಕೊಟ್ಟಿರಿ ನೀವೂ ಸಖೀಗೀತ,ಕಾಮಕಸ್ತೂರಿ
ಶ್ರಾವಣ ಬಂತು ಶ್ರಾವಣ ನಾದಲೀಲೆಯಾಡಿ
ಮುಗಿಲಮಲ್ಲಿಗೆ ಅರಳಿಸಿದಿರಿ

ಪಾತರಾಗಿತ್ತಿ ಪಕ್ಕದಲಿ ಕೂತು
ಇಳಿದುಬಾ ತಾಯಿ ಎಂದು ಗಂಗೆಯ ಕರೆದು
ಹಿಂದ ನೋಡದ ಗೆಳತಿ ಎಂದು ಬರೆದು
ಕಾವ್ಯ ಪ್ರಭೆಯ ಬೆಳಗಿಸಿದಿರಿ
ಗೆಳೆಯರ ಗುಂಪಿನ ನಾಯಕರಾದ
ನಿಮಗೆ ನಮ್ಮ ನಮನ

ಶಾಸ್ತ್ರವಾಗಿ,ಧರ್ಮವಾಗಿ ಯೋಗಜ್ಞಾನವಾಗಿ
ಅರಳು ಮರಳಿನ ಸತ್ಯದರ್ಶನ ಮಾಡಸಿ
ಗಿಡ ಗಂಟೆಯ ಕೊರಳೊಳಗಿಂದ
ದ್ವನಿಯಾಗಿ ಹೋಮ್ಮಿದಿರಿ
ರಾಶಿ ರಾಶಿ ಮುತ್ತುಗಳ ಬಿಟ್ಟು
ಜೀವನ ಯಾತ್ರೆ ಮುಗಿಸಿದ
ನಿಮಗೆಇದೋನಮನ, ನಿಮಗೆಇದೋನಮನ

- ಅನಿಲಕುಮಾರ್.ಜಿ.

13 Jun 2017, 07:59 pm

ನೊಂದ ಮನಸ್ಸು

ಮನಸ್ಸಲ್ಲಿ ಬಚಿಟ್ಟೆ ನಿನನ್ನು
ಕನಸಲ್ಲಿ ತೆರೆದಿಟ್ಟೆ ನೋವನ್ನು
ನಿ ಬಂದು ಸೆರು ಮನಸ್ಸನ್ನು
ದುರಮಾಡು ನನ್ನ ನೋವನ್ನು

- Rajeshkiccha4

13 Jun 2017, 07:05 pm