Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮುಂ ಬೆಳಗು ಕಣ್ಣಲ್ಲಿ ಮಲ್ಲಿಗೆ ಆರಳಲು. ಕಡಲ ಮುತ್ತುಗಳ ಮಾಲೆ ಕಟ್ಟಿ ಹಾಕುವೆನು ಕೊರಳಿಗೆ.
ನಿನ್ನಂದದ ಮೊಗದ ತುಂಬು ಕೆನ್ನೆಯ ಮೇಲಿನ
ಮುಂಗುರುಳ ಉರುಳು ಎದೆಯಲ್ಲಿ ತರಲು ಮರುಳು .
ಹಾರಿತ್ತ ಹಕ್ಕಿ ಚಿಮ್ಮಿ ಮುಗಿಲ್ಲೆತ್ತರಕೆ. ಸೋಕ್ಕಿತ್ತು ಜಿಗಿಯುವಿಕೆಯಲಿ. ಸಿಕ್ಕಿತ್ತು ಮುಕ್ತಿ ಪ್ರೀತಿಗೆ ಅದರಲ್ಲಿ. ಒಮ್ಮೆ ಬರಬಾರದೆ ಪ್ರಿಯಸಖಿ ಆ ತಿರುವಿನಲ್ಲಿ ನಿಂತು ಕಾಯುವೆನು ನಿನಗಾಗಿ.
- ಶಶಿಧರ ಹೆಚ್ ಎನ್
12 May 2017, 12:55 pm
ಮುಂಗಾರಿನ ಮೊದಲ ಹನಿಗೆ
ತೊಯ್ದ ನಿನ್ನ ಮುದ್ದು ಮೊಗವ
ತಾಕಿ ನೇಸರ ಪುಳಕದಿ
ಮೇಘರಾಶಿಯಲಿ ತೇಲಿದ ಮಧ್ಯಾಹ್ನ...
- Indushekar Chinivar
12 May 2017, 11:49 am
ಈ ಎದೆಯೊಳಗಿನ ಹೃದಯ ಬಡಿತ
ನನ್ನುಸೀರಿನ ಏರಿಳಿತ,
ನರನಾಡಿಯೊಳಗಿನ ಬಿಸಿರಕ್ತ
ಇರುವತನಕ
ಕಾಯುವೆ ನಿನ್ನ ಹಿತ.!!
ಎಲ್ಲರೊಡಗುಡಿ ನಿನ್ನೊಡಲೊಳಗಾಡಿ
ತಿಳಿದಿರುವೆ ನಿನ್ನ ಸಂಸ್ಕೃತಿ,
ಹಲವರಿರುವರು ಉತ್ತುಂಘಕ್ಕೇರಿಸಲು ನಿನ್ನ ಕೀರ್ತಿ,
ಹೇ ಜಗಜನನಿ ಭಾರತಿ.
ನಾ ದುಡಿಯುಬಲ್ಲೆ, ನಾ ಮಡಿಯಬಲ್ಲೆ
ನಿನಗಾಗಿ ಜೀವನ ಪೂರ್ತಿ...!!!
... ಜೈ ಹಿಂದ್....
- ಪಿ ಅನಿ...
11 May 2017, 07:27 pm
ಅಂದು,ಇಂದುಗಳ ನಡುವೆ
ಬಂದು ಹೋದವರು ಎಷ್ಟೋ
ಅರ್ಥವಾಗದ ಕೆಲವರ ಸ್ನೇಹದಲಿ
ಉಳಿಯುವುದು ಕೇವಲ
ನೆನಪುಗಳು ಒಂದಿಷ್ಟು......
krishna billadi.....
- krishna Billadi melbailu
11 May 2017, 08:39 am
ಕಂತೆ ಕನಸುಗಳು ಕಣ್ಣಲ್ಲಿ
ಆಸೆಗಳ ಮೂಟೆ ಬೆನ್ನ ಮೇಲೆ
ಪ್ರಿಯತಮೆಯ ನೆನಪುಗಳು ಎದೆಯಲ್ಲಿ
ಇರಲು ನೆಲೆಯಿಲ್ಲದೆ ಗೂಡು ಕಟ್ಟಿಕೊಳ್ಳುವ
ತವಕ ಮನದಲ್ಲಿ
ಭವಿಷ್ಯದ ಬಗ್ಗೆ ಯೋಚಿಸುತ್ತ
ಸ್ವಲ್ಪ ದೂರ ನೆಡೆದು ಹಿಂತಿರುಗಿ ನೋಡಿದೆ
ಸಂಜೆಗತ್ತಲಲ್ಲಿ ಎಲ್ಲೋ ಮರೆಯಾದಂತಿರುವ
ನನ್ನೂರಿನ ಅಸ್ಪಸ್ಟ ಚಿತ್ರಣ ಕಣ್ಣೀರ ಹನಿಯಲ್ಲಿ
ಸ್ತಭ್ದಗೊಂಡಿತ್ತು,
ಹೃದಯ ತುಂಬಿ ಬಂದು
ಭಾರವಾದ ಹೆಜ್ಜೆಯನಿಟ್ಟು ಮುಂದೆ ಸಾಗಿದೆ.
- ಶಶಿಧರ ಹೆಚ್ ಎನ್
11 May 2017, 05:48 am
ಹವಣಿಸುತ್ತಿರುವೆವು ಸಾಧಿಸಲು "ಆರ್ಥಿಕತೆಯಲಿ ಎತ್ತರದ ಸ್ಥಾನ"
ಅದರಿಂದ ಆಗುವುದೇನಿದೆ ಪ್ರಯೋಜನ
ಕೆಲವರ ಮನೆಯಲ್ಲಿಯೇ ಕೊಳೆಯುತ್ತಿದೆ ಕಾಂಚಣ
ಬದುಕುತ್ತಿರುವರು ಕಟ್ಟಿಕೊಂಡು ಅವರದ್ದೆ ಒಂದು ಬಣ
ಅವರಿಗೆ ಅರಿವಾಗಿವುದೆ ಆಗುತಿರುವ ಸಮಸ್ಯೆಗಳ ಉಲ್ಬಣ
ಇನ್ನೂ ಅರ್ಧದಷ್ಟಿದೆ ದೇಶದಲಿ ತೀರ ಬಡತನ
ಆ ಜನರದ್ದು ಹೃದಯ ಶ್ರೀಮಂತಿಕೆಯ ಮನ
ಅವರು ಪ್ರಾಪಂಚಿಕ ಹಕ್ಕುಗಳ ಅರಿವಿಲ್ಲದ ಜನ
ಅವರತ್ತಿರ ಎಲ್ಲಿ ಬರಬೇಕು ಬದುಕಲು ಬೇಕಿರುವಷ್ಟು ಹಣ
ಎಳೆಯಲಾಗದೆ ಜೀವನ ಬಂಡಿಯ ಆಗುತ್ತಿರುವರು ಹೆಣ
ರಾಜಕೀಯದವರು ಹೊತ್ತಿಕೊಂಡಿರುವರು ಅವರ ಋಣ
ಆದರು ತೋರರು ಆಸಕ್ತಿ ಜನ ಹೊಂದಿದರು ಮರಣ
ಅವರೇನಿದ್ದರು ಚುನಾವಣೆ ಸಮಯದಲ್ಲಷ್ಟೆ ಬರುವರು ಹಿಡಿಯಲು ಚರಣ
ಆಮೇಲೆ ಅವರ ಸಿಗುವುದಿಲ್ಲ ಹುಡುಕಿ ಜನರು ಸೇರಿದರು ಮಣ್ಣ
ಇದ ನೋಡಿ ನೋಡಿ ಬಡಜನ ಆಗಿರುವರು ಹೈರಾಣ
ಇದೆಲ್ಲ ಕಂಡರು ಕಾಣದಂತೆ ನೋಡುತ ತೋರುತಿರುವೆವು ಸಣ್ಣತನ
ಪ್ರತಿಭಟಿಸಿ ನೊಂದವರ ಜೊತೆ ನಿಂತು ಯಾವಗ ಸಾರುವುದು ಹಿರಿತನ
ಎಲ್ಲರೂ ಜೊತೆ ಸೇರಿ ಸಮನಾಗಿ ಒಂದೇ ಮನದಿ ಗುರಿಯೆಡೆಗೆ ಸಾಗುವುದಲ್ಲವೆ ಜೀವನ
ಆಗಲೇ ಆಗುವುದು ನಿಜವಾದ "ಆರ್ಥಿಕತೆಯ ಅರ್ಥ" ಸಂಪೂರ್ಣ
ಯಾವಾಗ ಬರುವುದು ಭಾರತ ದೇಶದಲಿ ಅಂಥ ಸುಂದರ ಕ್ಷಣ
- ಶ್ರೀಕಾವ್ಯ
10 May 2017, 11:29 pm
ಪ್ರತಿದಿನವು ಬರೆಯುವೆನು ಅವಳಿಗಾಗಿ
ಕನಸುಗಳು ಸತ್ತ ಜೀವಕ್ಕೆಂದು
ಹೊಸ ಕನಸುಗಳ ಹೊತ್ತು ತಂದ
ಮಂದಾರ ಅವಳು
ನನ್ನ ಬಾಳ ಸಿಂಗಾರ
ಜೀವನವೆಂದರೆನೆಂದು ಅರಿಯದೆ ಅಲೆಯುತ್ತಿದ್ದೆ
ಪ್ರೀತಿಯಂದರೆನೆಂದು ತಿಳಿಯದೆ ಪರಿತಪಿಸುತ್ತಿದ್ದೆ
ಜೀವಕೆ ಜೀವಾಳವಾದಳು
ಪ್ರೀತಿಗೆ ಪ್ರೇಮ ದೇವತೆಯಾದಳು
ಪ್ರತಿದಿನವು ಬರೆಯುವೆ ಅವಳ ಬಗ್ಗೆಯೆ
ಆದರು ಆಗುತ್ತಿಲ್ಲ
ಪ್ರೇಮ ದೇವತೆಯ ಬಣ್ಣಿಸಲು
ಅವಳ ಕಂಗಳಿನ ಬಿಳುಪು
ಮುಗಿಲಾಗಿನ ಹೊಳಪು
✍ಮೌನಿ ೯೭೩೯೬೫೧೧೦೧
- ಮೌನಿ
10 May 2017, 09:43 pm
ಮನದಂಗಳದಲ್ಲಿ ಭಾವನೆಗಳ
ವಿಪರೀತ ಕಾದಾಟ,
ಅರಿಯದೆ ಮೂಡುತಿದೆ
ಮುಗುಳ್ನಗೆಯೊಂದಿಗೆ ಒಡನಾಟ,
ಕೊಡಬೇಡ ಮತ್ತೊಮ್ಮೆ
ಹೀಗೆಲ್ಲ ಕಾಟ,
ಹೇಳಲಾರದೆ ಬಚ್ಚಿಟ್ಟಿರುವೆ
ನನ್ನೊಳಗಿನ ಸಂಕಟ.
- ಅಕ್ಷತ
10 May 2017, 07:50 pm
ಈ ಅವನಿ ಅತಿ ಸುಂದರಿ
ಹಸಿರ ಸೀರೆಯುಟ್ಟ ಅವಳ ನೋಡುವುದೆ ಚೆಂದ ರಿ
ಬರುವನೋ ಆ ಮಳೆರಾಯ ಸೇರಲು ಅವಳ
ಆ ಗಗನವ ತೊರೆದು ಕಾತರದಿ ನೋಡಲು ಇನಿಯಳ
ಆ ರವಿಯು ಕೂಡ ತಗ್ಗಿಸುವ ಕಿರಣ ರಶ್ಮಿಯ
ಕಣ್ತುಂಬಿಕೊಳ್ಳಲು ವಸುಂಧರೆಯ ಸೌಂದರ್ಯ ರಾಶಿಯ
ಆ ಚಂದಮಾಮನು ಕಾಯುವ ಅವಳನು ಮಾಡಲು ಮುದ್ದು
ಆಗಾಗ ಬರುವನು ಅವಳ ನೋಡಲು ಕದ್ದು ಕದ್ದು
ಅತ್ಯಾಚಾರಿಯಾದ ಮಾನವ ಅವಳ ಹಸಿರನ್ನೆಲ್ಲ ಮೆದ್ದು
ಸೊಬಗಿಲ್ಲದ ಇನಿಯಳ ನೋಡಲಾಗದೆ ಮಳೆರಾಯ ಕೊಡುತಿರುವ ಗುದ್ದು
ಬುವಿಗೆ ನೋಯಿಸಿದ ಕಾಯಕಕ್ಕೆಲ್ಲ ಮಾನವನೆ ಮೇಟಿ
ಆ ಸೂರ್ಯದೇವನು ನೋಡಲಾರದೆ ಬೀಸುತ್ತಿರುವ ಬಿಸಿಲ ಚಾಟಿ
ಆ ಶಶಿಯು ಮಂಕಾಗಿ ಸೊಬಗು ಮುಕ್ಕಾಗಿ ಕಳೆಗುಂದಿರುವ
ಸಹಿಸಲಾಗದೆ ಆ ದಿನಕರನ ಕೋಪದ ತಾಪವ
ಸಾಕಲಾಗದೆ ತನ್ನೊಡಲ ಜೀವರಾಶಿಯ ನಿರುತ್ತರಳಾಗಿರುವಳು ಧರಣಿ
ಅರಿತು ಅವಳ ಉಳಿಸು, ಅವಳು ಕೂರುವ ಮೊದಲೆ ಧರಣಿ
ಕೊಂದಿರುವೆ ಅವಳೆದೆಯ ಸೇರುವ ಆಕಾಶಗಂಗೆ
ಕಾಡದಿರು ಇನ್ನೂ ಅವಳ ಬರಿದು ಮಾಡಿ ಪಾತಾಳಗಂಗೆ
ಅರಿಯದೆ ಅವಳ ಆಂತರ್ಯ
ಕೆಡಿಸಿರುವೆ ಅವಳ ಒಡಲ ಸೌಂದರ್ಯ
ಅವಳದೊ ಎಂದೂ ಮುಗಿದಿರದ ಅಂತಃಕರಣ
ಅದ ಮೀರಿ ಆಗುತ್ತಿರುವೆ ನಿನ್ನ ಅವನತಿಗೆ ನೀನೆ ಕಾರಣ
- ಶ್ರೀಕಾವ್ಯ
10 May 2017, 10:55 am
ಹೆಣ್ಣಿಲ್ಲದ ಮನೆ
ಕಾಡಿಲ್ಲದ ಪ್ರಕೃತಿ
ಸ್ನೇಹತ್ವವಿಲ್ಲದ ವಿಲ್ಲದ ವ್ಯಕ್ತಿ
ಗೋರ್ಕಲ್ಲ ಮೇಲೆ
ನೀರು ಸುರಿದಹಾಗೇ ವ್ಯರ್ಥವೇ ಸರಿ...
ಪ್ರತು☕☕☕☕
- Prathap
10 May 2017, 09:07 am